-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೀರಾಮಂಡಿ ಲುಕ್ (Heera Mandi Fashion) ಇದೀಗ ಎಲ್ಲೆಡೆ ರೀ ಕ್ರಿಯೇಟ್ ಆಗಲಾರಂಭಿಸಿದೆ. ಅದರಲ್ಲೂ, ಎಥ್ನಿಕ್ ಫ್ಯಾಷನ್ ಕೆಟಗರಿಯಲ್ಲಿ ಹೀರಾಮಂಡಿ ಲುಕ್ ಟಾಪ್ ಲಿಸ್ಟ್ ಸ್ಥಾನ ಗಳಿಸಿದೆ.
ವೆಬ್ ಸೀರಿಸ್ ಪ್ರಭಾವ
ಅಂದಹಾಗೆ, ಸಂಜಯ್ ಲೀಲಾ ಬನ್ಸಾಲಿ ನಿರ್ದೆಶನದಲ್ಲಿ ಓಟಿಟಿಯಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಹೀರಾಮಂಡಿ ವೆಬ್ ಸೀರಿಸ್‌ನಲ್ಲಿ ನಟಿಯರು ಧರಿಸಿದ, ಒಂದೊಂದು ಡಿಸೈನರ್‌ವೇರ್ಸ್, ಆಭರಣಗಳು ಈಗಾಗಲೇ ಮಾರುಕಟ್ಟೆಯಲ್ಲಿ ಟ್ರೆಂಡಿಯಾಗಿವೆ. ಇದರೊಂದಿಗೆ ಹೀರಾಮಂಡಿ ನಟಿಯರ ಲುಕ್‌ಗೆ ಸಾಥ್ ನೀಡಿದ್ದ ಮೇಕಪ್ ಹಾಗೂ ಸ್ಟೈಲಿಂಗ್ ಕೂಡ ಇದರೊಂದಿಗೆ ಹಿಟ್ ಆಗಿದೆ. ಈ ಲುಕ್‌ಗೆ ಮನಸೋತ ಫ್ಯಾಷನಿಸ್ಟಾಗಳು ಹಾಗೂ ಮೇಕಪ್ ಆರ್ಟಿಸ್ಟ್‌ಗಳು ಹೀರಾಮಂಡಿ ಲುಕ್ಕ್ ಅನ್ನು ರೀ ಕ್ರಿಯೇಟ್ ಮಾಡಲಾರಂಭಿಸಿದ್ದಾರೆ. ಪರಿಣಾಮ, ಈ ಲುಕ್‌ಗೆ ಸಾಥ್ ನೀಡಿದ ಎಥ್ನಿಕ್‌ವೇರ್ಸ್ ಹಾಗೂ ಜ್ಯುವೆಲರಿ ಡಿಸೈನ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರೊಂದಿಗೆ ಕ್ಲಾಸಿ ಲುಕ್ ನೀಡುವ ಮೇಕಪ್‌ಗೂ ಪ್ರಾಮುಖ್ಯತೆ ನೀಡುವುದು ಹೆಚ್ಚಾಗಿದೆ ಎನ್ನುತ್ತಾರೆ ಮಾಡೆಲ್ ಕಮ್ ಸೆಲೆಬ್ರೆಟಿ ಮೇಕಪ್ ಆರ್ಟಿಸ್ಟ್ ರಾಶಿ ಮೇಘನಾ.
ಏನಿದು ಹೀರಾಮಂಡಿ ಲುಕ್
ಸ್ವಾತಂತ್ರ್ಯ ದೊರಕುವ ಮುನ್ನ, ಲಾಹೋರ್‌ನ ಹೀರಾ ಮಂಡಿಯಲ್ಲಿ ನಡೆಯುವ ಕಥಾ ಹಂದರವನ್ನು ಹೊಂದಿರುವ ಈ ವೆಬ್‌ಸೀರಿಸ್‌ನಲ್ಲಿ ನಟಿ ಮೊನಿಷಾ ಕೊಯಿರಾಲ, ಸೋನಾಕ್ಷಿ ಸಿನ್ಹಾ, ರಿಚಾ ಚಡ್ಡಾ, ಆದಿತಿ ರಾವ್ ಹೈದರಿ ಸೇರಿದಂತೆ ನಾನಾ ನಟಿಯರು ರೆಟ್ರೊ ಡಿಸೈನರ್‌ವೇರ್ಸ್ ಹಾಗೂ ಜ್ಯುವೆಲರಿಗಳಲ್ಲಿ ಶೃಂಗಾರಗೊಂಡು ಕಾಣಿಸಿಕೊಂಡಿದ್ದ ಗ್ರ್ಯಾಂಡ್ ಲುಕ್ ಇದು. ಇದೀಗ ಈ ಫ್ಯಾಷನ್ ಅನ್ನು ಹೀರಾಮಂಡಿ ಲುಕ್ ಎಂದು ಕರೆಯಲಾಗುತ್ತಿದೆ.
ಹೀರಾಮಂಡಿ ಲುಕ್ ರೀ ಕ್ರಿಯೇಟ್ ಮಾಡಿದ ರಾಶಿ ಮೇಘನಾ
ಬಾಲಿವುಡ್ ಹಾಗೂ ಬ್ಯೂಟಿಲೋಕದಲ್ಲಿ ಮಾತ್ರವಲ್ಲ, ನಮ್ಮ ಕನ್ನಡಿಗರಾದ ಸೆಲೆಬ್ರೆಟಿ ಮೇಕಪ್ ಆರ್ಟಿಸ್ಟ್ ರಾಶಿ ಮೇಘನಾ ಕೂಡ ಈ ಲುಕ್ಕನ್ನು ರೀ ಕ್ರಿಯೇಟ್ ಮಾಡಿದ್ದಾರೆ. ಅವರು ಈ ಲುಕ್ ರೀ ಕ್ರಿಯೇಟ್‌ಗಾಗಿ ರಿಸರ್ಚ್ ಕೂಡ ಮಾಡಿದರಂತೆ. ಒಂದೊಂದು ವಿಷಯವನ್ನು ಗಮನದಲ್ಲಿಟ್ಟುಕೊಂಡು ಮರುಸೃಷ್ಟಿ ಮಾಡಿದರಂತೆ.
ಟ್ರೆಂಡಿಯಾದ ಹೀರಾಮಂಡಿ ಡಿಸೈನರ್‌ವೇರ್ಸ್ & ಜ್ಯುವೆಲರಿಗಳು
- ಅದಿತಿ ಹೈದರ್ ಧರಿಸಿದ್ದ ಗ್ರ್ಯಾಂಡ್ ಎಂಬ್ರಾಯ್ಡರಿ ಅನಾರ್ಕಲಿ ಡಿಸೈನರ್‌ವೇರ್ಸ್.
- ನಟಿ ಮೊನಿಷಾ ಕೊಯಿರಾಲ ಧರಿಸಿದ್ದ ಐವರಿ ಪ್ರಿಂಟೆಡ್ ಲೆಹೆಂಗಾ ಜೊತೆಗಿನ ಡಿಸೈನರ್ ಕುರ್ತಾ.
- ಬನಾರಸಿ ದುಪಟ್ಟ & ಫ್ಲೇರ್ ಇರುವ ಶರಾರ.
- ಬನಾರಸ್ ಫ್ಯಾಬ್ರಿಕ್ನ ಫ್ಲೋರಲ್ ಲೆಹೆಂಗಾ-ಗೋಲ್ಡನ್ ದುಪಟ್ಟಾ.
- ಪ್ರಿಶಿಯಸ್ ಸ್ಟೋನ್ನಿಂದ ಸಿದ್ಧಪಡಿಸಿದ ಬಾರಿ ಗಾತ್ರದ ಸ್ಟೇಟ್ಮೆಂಟ್ ನೆಕ್ಲೇಸ್, ಕಂಗನ್, ಕಡ, ಸೈಡ್ ಮಾಂಗ್ ಟೀಕಾ, ಲೇಯರ್ ಹಾರ, ಮಾಟಿ, ಬಾಂದ್ಬಾಲಿ, ಹಾತ್ ಚೈನ್ ಇದೀಗ ಜ್ಯುವೆಲರಿ ಲೋಕದಲ್ಲಿ ಟ್ರೆಂಡ್ ಸೃಷ್ಟಿಸಿವೆ.
( ಲೇಖಕಿ ಫ್ಯಾಷನ್ ಪತ್ರಕರ್ತೆ )