Site icon Vistara News

Online Saree Shopping: ಆನ್‌ಲೈನ್‌ನಲ್ಲಿ ಸೀರೆ ಖರೀದಿಸುವಾಗ ಗಮನದಲ್ಲಿ ಇಟ್ಟುಕೊಳ್ಳಬೇಕಾದ 5 ಸಂಗತಿಗಳಿವು

Online Saree Shopping

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಆನ್‌ಲೈನ್‌ನಲ್ಲಿ ಸೀರೆಗಳನ್ನು ಖರೀದಿ ಮಾಡುವಾಗ (Online Saree Shopping) ಎಚ್ಚರ ವಹಿಸಿ ಎನ್ನುತ್ತಾರೆ ಶಾಪಿಂಗ್‌ ಪರಿಣತರು. ಹೌದು, ಜಾಹೀರಾತಿನಲ್ಲಿ ತೋರಿಸಿದ ಸೀರೆಯನ್ನು ಕೊಳ್ಳುವ ಆವೇಶದಲ್ಲಿ ನೀವು ಹಣ ಕಳೆದುಕೊಳ್ಳಬಹುದು ಅಥವಾ ಆರ್ಡರ್‌ ಮಾಡಿದ ಸೀರೆಯ ಬದಲು ಬೇರೇಯದ್ದೇ ಮನೆಗೆ ಬಂದು ತಲುಪಬಹುದು. ಹಾಗಾಗಿ ಮುಂಜಾಗ್ರತೆ ವಹಿಸಿ ಎನ್ನುತ್ತಾರೆ ಅವರು. ಹಾಗೆಂದು ಆನ್‌ಲೈನ್‌ನಲ್ಲಿ ಕೊಳ್ಳಬಾರದೆಂದೆನೆಲ್ಲ. ಇದಕ್ಕಾಗಿ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕು ಎನ್ನುತ್ತಾರವರು. ಈ ಕುರಿತಂತೆ ಅವರಿಲ್ಲಿ ಒಂದೈದು ಟಿಪ್ಸ್ ನೀಡಿದ್ದಾರೆ.

ಕಂಡಕಂಡದ್ದನ್ನು ಕೊಳ್ಳುವ ಮೋಹಕ್ಕೆ ಕಡಿವಾಣ ಹಾಕಿ

ಸೋಷಿಯಲ್‌ ಮೀಡಿಯಾದಲ್ಲಿ ಇತ್ತೀಚೆಗೆ ಸೀರೆಗಳ ಜಾಹೀರಾತುಗಳು ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಯುವತಿಯರು, ಮಹಿಳೆಯರು ಮಾರುಹೋಗುವುದು, ಮಾತ್ರವಲ್ಲ, ಕುಳಿತ ಕಡೆಯಿಂದಲೇ ಸೀರೆಗಳನ್ನು ಬುಕ್‌ ಮಾಡಿ ತರಿಸುತ್ತಾರೆ. ಇದು ಮುಂದೊಮ್ಮೆ ಕೊಳ್ಳುಬಾಕ ಸಂಸ್ಕೃತಿಗೆ ನಾಂದಿ ಹಾಡಬಹುದು. ಹಾಗಾಗಿ, ಇಂತಹ ಸೀರೆ ಮಾರಾಟದ ಪೇಜ್‌ಗಳನ್ನು ಆದಷ್ಟೂ ಫಾಲೋ ಮಾಡುವುದನ್ನು ಕಡಿಮೆ ಮಾಡಿ. ಕೊಳ್ಳುವ ಮೋಹ ಕಡಿಮೆಯಾಗಬಹುದು.

ಕೈಗೆ ಸಿಕ್ಕಿದ್ದು ಬೇರೆ ಸೀರೆ

ಆನ್‌ಲೈನ್‌ನಲ್ಲಿ ನೋಡಿದ ಸೀರೆ ಬೇರೇ! ಆದರೆ, ಆರ್ಡರ್‌ ನಂತರ ಮನೆಗೆ ಬಂದ ಸೀರೆಯೇ ಬೇರೆಯಾಗಿದೆ ಎಂಬುದು ಹಲವು ಸೀರೆ ಪ್ರಿಯ ಮಹಿಳೆಯರ ಅಪವಾದ ಮಾಡುವುದನ್ನು ಕಾಣಬಹುದು. ಇದು ನಿಜ ಕೂಡ. ಚಿತ್ರದಲ್ಲಿ ಹಾಗೂ ವಿಡಿಯೋದಲ್ಲಿ ನೋಡಿದಾಗ ಮಿನುಗುವ ಹಾಗೂ ಸಿಲ್ಕ್‌ನಂತೆ ಕಾಣುವ ಸೀರೆ ತರಿಸಿದಾಗ ಒರಟಾಗಿರಬಹುದು. ಬೇರೆ ಬಣ್ಣದ್ದಾಗಿರಬಹುದು. ಹಾಗಾಗಿ ಕೊಳ್ಳುವ ಮುನ್ನ ಪರಿಶೀಲಿಸಿ, ಬುಕ್‌ ಮಾಡಿ.

ದುಬಾರಿ ಸೀರೆಗಳನ್ನು ಅಂಗಡಿಯಲ್ಲಿ ಕೊಳ್ಳಿ

ಮದುವೆ ಹಾಗೂ ಭಾರಿ ಸಮಾರಂಭಗಳ ದುಬಾರಿ ಸೀರೆಯನ್ನು ಆದಷ್ಟೂ ಅಂಗಡಿಗಳಿಗೆ ತೆರಳಿ ಖರೀದಿಸಿ. ಇದರಿಂದ ನೀವು ಶುದ್ಧ ರೇಷ್ಮೆಯ ಸೀರೆಗಳನ್ನು ಪರಿಶೀಲಿಸಿಕೊಳ್ಳಬಹುದು. ಟ್ರಯಲ್‌ ನೋಡಬಹುದು. ಮೋಸ ಹೋಗುವ ಭಯವಿರುವುದಿಲ್ಲ!

ಎಕ್ಸ್‌ಚೇಂಜ್‌ ಇರುವುದಿಲ್ಲ

ಬಹಳಷ್ಟು ಆನ್‌ಲೈನ್‌ ಶಾಪ್‌ಗಳಲ್ಲಿ ಎಕ್ಸ್‌ಚೇಂಜ್‌ ಸೌಲಭ್ಯ ಇರುವುದಿಲ್ಲ. ಹಾಗಾಗಿ ಸೀರೆ ಖರೀದಿಸುವಾಗ ನೋಡಿ ಖರೀದಿಸಿ. ಡ್ಯಾಮೇಜ್‌ ಆದಲ್ಲಿ ಬದಲಿಸುವ ಸೌಲಭ್ಯ ನೀಡುವವರ ಬಳಿಯೇ ಕೊಳ್ಳಿ.

ಅಧಿಕೃತವಾಗಿದ್ದನ್ನೇ ಕೊಂಡುಕೊಳ್ಳಿ

ಯಾವುದೇ ಆನ್‌ಲೈನ್‌ನಲ್ಲಿ ಸೀರೆ ಖರೀದಿಸುವ ಮುನ್ನ ಆ ಶಾಪ್‌ ಅಧಿಕೃತವಾಗಿದೆಯೇ! ಫೀಡ್‌ಬ್ಯಾಕ್‌ ಹೇಗಿದೆ ಎಂಬುದನ್ನು ಗಮನಿಸಿ. ನಂತರ ಖರೀದಿಸಲು ಮುಂದಾಗಿ. ಬುಕ್ ಮಾಡಿದ ನಂತರ ಹಣ ನೀಡಿರುವುದನ್ನು ಸೇವ್‌ ಮಾಡಿ ಇರಿಸಿಕೊಳ್ಳಿ. ಅಡ್ರೆಸ್‌ ಎಲ್ಲವನ್ನೂ ನೋಡಿ ಪರಿಶೀಲಿಸಿ ಮುಂದುವರೆಯಿರಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Tie Up Crop Top Fashion: ವೀಕೆಂಡ್‌ ಹಾಲಿಡೇ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಟೈ-ಅಪ್‌ ಕ್ರಾಪ್‌ ಟಾಪ್‌

Exit mobile version