Online Saree Shopping: ಆನ್‌ಲೈನ್‌ನಲ್ಲಿ ಸೀರೆ ಖರೀದಿಸುವಾಗ ಗಮನದಲ್ಲಿ ಇಟ್ಟುಕೊಳ್ಳಬೇಕಾದ 5 ಸಂಗತಿಗಳಿವು - Vistara News

ಫ್ಯಾಷನ್

Online Saree Shopping: ಆನ್‌ಲೈನ್‌ನಲ್ಲಿ ಸೀರೆ ಖರೀದಿಸುವಾಗ ಗಮನದಲ್ಲಿ ಇಟ್ಟುಕೊಳ್ಳಬೇಕಾದ 5 ಸಂಗತಿಗಳಿವು

ಆನ್‌ಲೈನ್‌ನಲ್ಲಿ ಸೀರೆಗಳನ್ನು ಖರೀದಿಸುವಾಗ (Online Saree Shopping) ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ನಾವು ಮೋಸ ಹೋಗಬಹುದು ಅಥವಾ ಕಳಪೆ ಗುಣಮಟ್ಟದ್ದನ್ನು ಖರೀದಿಸಬೇಕಾಗಬಹುದು ಎಚ್ಚರ ಎನ್ನುತ್ತಾರೆ ಶಾಪಿಂಗ್‌ ಪರಿಣತರು. ಈ ಕುರಿತ ಒಂದೈದು ಸಿಂಪಲ್‌ ಟಿಪ್ಸ್ ಇಲ್ಲಿದೆ.

VISTARANEWS.COM


on

Online Saree Shopping
ಸಾಂದರ್ಭಿಕ ಚಿತ್ರಗಳು
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಆನ್‌ಲೈನ್‌ನಲ್ಲಿ ಸೀರೆಗಳನ್ನು ಖರೀದಿ ಮಾಡುವಾಗ (Online Saree Shopping) ಎಚ್ಚರ ವಹಿಸಿ ಎನ್ನುತ್ತಾರೆ ಶಾಪಿಂಗ್‌ ಪರಿಣತರು. ಹೌದು, ಜಾಹೀರಾತಿನಲ್ಲಿ ತೋರಿಸಿದ ಸೀರೆಯನ್ನು ಕೊಳ್ಳುವ ಆವೇಶದಲ್ಲಿ ನೀವು ಹಣ ಕಳೆದುಕೊಳ್ಳಬಹುದು ಅಥವಾ ಆರ್ಡರ್‌ ಮಾಡಿದ ಸೀರೆಯ ಬದಲು ಬೇರೇಯದ್ದೇ ಮನೆಗೆ ಬಂದು ತಲುಪಬಹುದು. ಹಾಗಾಗಿ ಮುಂಜಾಗ್ರತೆ ವಹಿಸಿ ಎನ್ನುತ್ತಾರೆ ಅವರು. ಹಾಗೆಂದು ಆನ್‌ಲೈನ್‌ನಲ್ಲಿ ಕೊಳ್ಳಬಾರದೆಂದೆನೆಲ್ಲ. ಇದಕ್ಕಾಗಿ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯಬೇಕು ಎನ್ನುತ್ತಾರವರು. ಈ ಕುರಿತಂತೆ ಅವರಿಲ್ಲಿ ಒಂದೈದು ಟಿಪ್ಸ್ ನೀಡಿದ್ದಾರೆ.

Curb the temptation to buy what you see

ಕಂಡಕಂಡದ್ದನ್ನು ಕೊಳ್ಳುವ ಮೋಹಕ್ಕೆ ಕಡಿವಾಣ ಹಾಕಿ

ಸೋಷಿಯಲ್‌ ಮೀಡಿಯಾದಲ್ಲಿ ಇತ್ತೀಚೆಗೆ ಸೀರೆಗಳ ಜಾಹೀರಾತುಗಳು ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಯುವತಿಯರು, ಮಹಿಳೆಯರು ಮಾರುಹೋಗುವುದು, ಮಾತ್ರವಲ್ಲ, ಕುಳಿತ ಕಡೆಯಿಂದಲೇ ಸೀರೆಗಳನ್ನು ಬುಕ್‌ ಮಾಡಿ ತರಿಸುತ್ತಾರೆ. ಇದು ಮುಂದೊಮ್ಮೆ ಕೊಳ್ಳುಬಾಕ ಸಂಸ್ಕೃತಿಗೆ ನಾಂದಿ ಹಾಡಬಹುದು. ಹಾಗಾಗಿ, ಇಂತಹ ಸೀರೆ ಮಾರಾಟದ ಪೇಜ್‌ಗಳನ್ನು ಆದಷ್ಟೂ ಫಾಲೋ ಮಾಡುವುದನ್ನು ಕಡಿಮೆ ಮಾಡಿ. ಕೊಳ್ಳುವ ಮೋಹ ಕಡಿಮೆಯಾಗಬಹುದು.

ಕೈಗೆ ಸಿಕ್ಕಿದ್ದು ಬೇರೆ ಸೀರೆ

ಆನ್‌ಲೈನ್‌ನಲ್ಲಿ ನೋಡಿದ ಸೀರೆ ಬೇರೇ! ಆದರೆ, ಆರ್ಡರ್‌ ನಂತರ ಮನೆಗೆ ಬಂದ ಸೀರೆಯೇ ಬೇರೆಯಾಗಿದೆ ಎಂಬುದು ಹಲವು ಸೀರೆ ಪ್ರಿಯ ಮಹಿಳೆಯರ ಅಪವಾದ ಮಾಡುವುದನ್ನು ಕಾಣಬಹುದು. ಇದು ನಿಜ ಕೂಡ. ಚಿತ್ರದಲ್ಲಿ ಹಾಗೂ ವಿಡಿಯೋದಲ್ಲಿ ನೋಡಿದಾಗ ಮಿನುಗುವ ಹಾಗೂ ಸಿಲ್ಕ್‌ನಂತೆ ಕಾಣುವ ಸೀರೆ ತರಿಸಿದಾಗ ಒರಟಾಗಿರಬಹುದು. ಬೇರೆ ಬಣ್ಣದ್ದಾಗಿರಬಹುದು. ಹಾಗಾಗಿ ಕೊಳ್ಳುವ ಮುನ್ನ ಪರಿಶೀಲಿಸಿ, ಬುಕ್‌ ಮಾಡಿ.

Shop expensive sarees

ದುಬಾರಿ ಸೀರೆಗಳನ್ನು ಅಂಗಡಿಯಲ್ಲಿ ಕೊಳ್ಳಿ

ಮದುವೆ ಹಾಗೂ ಭಾರಿ ಸಮಾರಂಭಗಳ ದುಬಾರಿ ಸೀರೆಯನ್ನು ಆದಷ್ಟೂ ಅಂಗಡಿಗಳಿಗೆ ತೆರಳಿ ಖರೀದಿಸಿ. ಇದರಿಂದ ನೀವು ಶುದ್ಧ ರೇಷ್ಮೆಯ ಸೀರೆಗಳನ್ನು ಪರಿಶೀಲಿಸಿಕೊಳ್ಳಬಹುದು. ಟ್ರಯಲ್‌ ನೋಡಬಹುದು. ಮೋಸ ಹೋಗುವ ಭಯವಿರುವುದಿಲ್ಲ!

ಎಕ್ಸ್‌ಚೇಂಜ್‌ ಇರುವುದಿಲ್ಲ

ಬಹಳಷ್ಟು ಆನ್‌ಲೈನ್‌ ಶಾಪ್‌ಗಳಲ್ಲಿ ಎಕ್ಸ್‌ಚೇಂಜ್‌ ಸೌಲಭ್ಯ ಇರುವುದಿಲ್ಲ. ಹಾಗಾಗಿ ಸೀರೆ ಖರೀದಿಸುವಾಗ ನೋಡಿ ಖರೀದಿಸಿ. ಡ್ಯಾಮೇಜ್‌ ಆದಲ್ಲಿ ಬದಲಿಸುವ ಸೌಲಭ್ಯ ನೀಡುವವರ ಬಳಿಯೇ ಕೊಳ್ಳಿ.

Buy the official one

ಅಧಿಕೃತವಾಗಿದ್ದನ್ನೇ ಕೊಂಡುಕೊಳ್ಳಿ

ಯಾವುದೇ ಆನ್‌ಲೈನ್‌ನಲ್ಲಿ ಸೀರೆ ಖರೀದಿಸುವ ಮುನ್ನ ಆ ಶಾಪ್‌ ಅಧಿಕೃತವಾಗಿದೆಯೇ! ಫೀಡ್‌ಬ್ಯಾಕ್‌ ಹೇಗಿದೆ ಎಂಬುದನ್ನು ಗಮನಿಸಿ. ನಂತರ ಖರೀದಿಸಲು ಮುಂದಾಗಿ. ಬುಕ್ ಮಾಡಿದ ನಂತರ ಹಣ ನೀಡಿರುವುದನ್ನು ಸೇವ್‌ ಮಾಡಿ ಇರಿಸಿಕೊಳ್ಳಿ. ಅಡ್ರೆಸ್‌ ಎಲ್ಲವನ್ನೂ ನೋಡಿ ಪರಿಶೀಲಿಸಿ ಮುಂದುವರೆಯಿರಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Tie Up Crop Top Fashion: ವೀಕೆಂಡ್‌ ಹಾಲಿಡೇ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಟೈ-ಅಪ್‌ ಕ್ರಾಪ್‌ ಟಾಪ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Summer Dress Fashion: ಸೀಸನ್‌ ಎಂಡ್‌ ಫ್ಯಾಷನ್‌ಗೆ ಕಾಲಿಟ್ಟ ಸಮುದ್ರದ ಅಲೆ ಬಿಂಬಿಸುವ ವೆವಿ ಡ್ರೆಸ್‌!

ಸಮ್ಮರ್‌ ಸೀಸನ್‌ ಎಂಡ್‌ನಲ್ಲಿ (Summer dress fashion) ಇದೀಗ ಸಮುದ್ರದ ಅಲೆಗಳಂತೆ ಕಾಣಿಸುವ ಪ್ರಿಂಟ್ಸ್ ಇರುವಂತಹ ವೆವಿ ಡ್ರೆಸ್‌ಗಳು ಕಾಲಿಟ್ಟಿವೆ. ಇದಕ್ಕೆ ಪೂರಕ ಎಂಬಂತೆ, ನಟಿ ಶಾರ್ವರಿ ಧರಿಸಿದಂತಹ ವೆವಿ ಡ್ರೆಸ್‌ಗಳು ಟ್ರೆಂಡ್‌ ಸೆಟ್‌ ಮಾಡಿವೆ. ಏನಿದು ವೆವಿ ಡ್ರೆಸ್‌? ಇಲ್ಲಿದೆ ಡಿಟೇಲ್ಸ್ .

VISTARANEWS.COM


on

Summer Dress Fashion
ಚಿತ್ರಗಳು : ಶಾರ್ವರಿ, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇನ್ನೇನೂ ಸಮ್ಮರ್‌ ಸೀಸನ್‌ (Summer dress fashion) ಮುಗಿಯುವ ಹಂತದಲ್ಲಿದೆ. ಆಗಲೇ ವೆವಿ ಡ್ರೆಸ್‌ಗಳು ಎಂಟ್ರಿ ನೀಡಿವೆ. ಹೌದು. ನೋಡಿದಾಕ್ಷಣ ಮನೋಲ್ಲಾಸ ತುಂಬುವಂತಹ ಉತ್ಸಾಹ ಮೂಡಿಸುವ ಡಿಫರೆಂಟ್‌ ಲುಕ್‌ ನೀಡುವ ನಾನಾ ಶೇಡ್‌ನ ವೆವಿ ಡ್ರೆಸ್‌ಗಳು ಫ್ಯಾಷನ್‌ ಲೋಕಕ್ಕೆ ಕಾಲಿಟ್ಟಿವೆ.

Summer Dress Fashion

ಏನಿದು ವೆವಿ ಡ್ರೆಸ್‌?

ಅರರೆ, ಏನಿದು ವೆವಿ ಡ್ರೆಸ್‌ ಎಂದು ಯೋಚಿಸುತ್ತಿದ್ದೀರಾ! ಹೆಸರೇ ಹೇಳುವಂತೆ, ಇವು ಬೀಚ್‌ನಲ್ಲಿ ಸಮುದ್ರದ ಅಲೆಗಳನ್ನು ಬಿಂಬಿಸುವಂತಹ ಪ್ರಿಂಟ್ಸ್ ಇರುವಂತಹ ಸಮ್ಮರ್‌ ಡ್ರೆಸ್‌ಗಳಿವು. ನೋಡಲು ಬೀಚ್‌ ಲುಕ್‌ ಪ್ಲಸ್‌ ಹಾಲಿ ಡೇ ಪಾರ್ಟಿ ಲುಕ್‌ ನೀಡುವಂತಹ ಉಡುಗೆಗಳಿವು. ಅಷ್ಟೇಕೆ! ಲಂಚ್‌-ಬ್ರಂಚ್‌ ಪಾರ್ಟಿಗಳಲ್ಲೂ ಕಾಣಬಹುದಾದ ಹೈ ಫ್ಯಾಷನ್‌ ಉಡುಪುಗಳಿವು. ಇವುಗಳ ಪ್ರಿಂಟ್ಸ್ ಅಲೆಗಳಂತೆ ಇರುವುದರಿಂದ ಇವನ್ನು ವೆವಿ ಡ್ರೆಸ್‌ಗಳೆಂದು ಕರೆಯಲಾಗುತ್ತದೆ. ನಾನಾ ಹೈ ಫ್ಯಾಷನ್‌ ಬ್ರಾಂಡ್‌ಗಳಲ್ಲಿ ಇವು ಬಿಡುಗಡೆಗೊಂಡಿವೆ. ಸೆಲೆಬ್ರೆಟಿಗಳು ಮಾತ್ರವಲ್ಲ, ಸ್ಟೈಲಿಶ್‌ ಹುಡುಗಿಯರನ್ನು ಸವಾರಿ ಮಾಡತೊಡಗಿವೆ ಎಂದು ವಿವರಿಸುತ್ತಾರೆ ಸ್ಟೈಲಿಸ್ಟ್‌ಗಳು.

Summer Dress Fashion

ಶಾರ್ವರಿ ವೆವಿ ಡ್ರೆಸ್‌

ಬಾಲಿವುಡ್‌ನಲ್ಲಿ ಇನ್ನೂ ಅತಿ ಹೆಚ್ಚಾಗಿ ಕಂಡು ಬರದ ಉಡುಪುಗಳಲ್ಲಿ ಈ ವೆವಿ ಡ್ರೆಸ್‌ ಕೂಡ ಸೇರಿದೆ. ಯಾಕೆಂದರೇ, ಈ ಉಡುಪು ಈ ಜನರೇಷನ್‌ ನಟಿಯರ ಲಿಸ್ಟ್ನಲ್ಲಿದೆ. ಇದಕ್ಕೆ ಪೂರಕ ಎಂಬಂತೆ, ಬಾಲಿವುಡ್‌ ನಟಿ ಶಾರ್ವರಿ ಸಮುದ್ರದ ಅಲೆಗಳನ್ನು ನೆನಪಿಸುವ ಪಿಸ್ತಾ ಮಿಂಟ್‌ ಗ್ರೀನ್‌ ಶೇಡ್ ಮಿಕ್ಸ್ ಇರುವಂತಹ ವೆವಿ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಫ್ಯಾಷನ್‌ ಲೋಕದಲ್ಲಿ ಟ್ರೆಂಡ್‌ ಸೆಟ್‌ ಮಾಡಿದ್ದಾರೆ. ಸದ್ಯ, ಇತರೇ ಯಾವುದೇ ನಟಿಯರು ಪ್ರಯೋಗಿಸದ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡಿರುವ ಹೆಗ್ಗಳಿಕೆ ಇವರದು. ವೆವಿ ಡ್ರೆಸ್‌ನಂತಹ ಸಮ್ಮರ್‌ ಡ್ರೆಸ್‌ ಇದೆಯಾ! ಒಮ್ಮೆ ನಾವು ಕೂಡ ಧರಿಸೋಣಾ! ಎಂಬ ಟೀನೇಜ್‌ ಹುಡುಗಿಯರ ಫ್ಯಾಷನ್‌ ಚಾಯ್ಸ್‌ಗೆ ಹೊಸ ಶೇಡ್‌ಗಳು ಆಕರ್ಷಿಸುತ್ತಿವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕಿ ಜಿಯಾ. ಅವರ ಪ್ರಕಾರ, ವೆವಿ ಡ್ರೆಸ್‌ಗಳು ಯಂಗ್‌ ಲುಕ್‌ ನೀಡುತ್ತವಂತೆ. ಹಾಗಾಗಿ ಆನ್‌ಲೈನ್‌ನಲ್ಲಿ ಇದೀಗ ಇವುಗಳ ಖರೀದಿ ಹೆಚ್ಚಾಗಿದೆ ಎನ್ನುತ್ತಾರೆ.

Summer Dress Fashion

ವೆವಿ ಡ್ರೆಸ್‌ಗಳ ಟ್ರೆಂಡ್‌

ಸಾಗರ ಹಾಗೂ ಸಮುದ್ರ ಅಲೆಗಳ ನ್ಯಾಚುರಲ್‌ ಶೇಡ್ಸ್, ಪೀಚ್‌ ಹಾಗೂ ಕೇಸರಿ ಶೇಡ್‌ಗಳ ನೈಜವೆನಿಸದ ಪ್ರಿಂಟ್ಸ್‌ನ ವೆವಿ ಡ್ರೆಸ್‌ಗಳು, ಅಸ್ಸೆಮ್ಮಿಟ್ರಿಕಲ್‌ ವೆವಿ ಡ್ರೆಸ್‌ಗಳು ಅದರಲ್ಲೂ, ವೈಟ್‌ & ಸೀ ಬ್ಲ್ಯೂ , ರಾಯಲ್‌ ಬ್ಲ್ಯೂ ವೆವಿ ಡ್ರೆಸ್‌ಗಳು ಅತಿ ಹೆಚ್ಚಾಗಿ ಬೇಡಿಕೆ ಪಡೆದುಕೊಂಡಿವೆ.

  • ಸಮ್ಮರ್‌ ಪಾರ್ಟಿಗೆ ಹಾಗೂ ಔಟಿಂಗ್‌ಗೆ ಮ್ಯಾಚ್‌ ಆಗುತ್ತವೆ.
  • ಹೆಚ್ಚು ಆಕ್ಸೆಸರೀಸ್‌ ಧರಿಸುವ ಅಗತ್ಯವಿಲ್ಲ.
  • ಮಿನಿಮಲ್‌ ಮೇಕಪ್‌ ಆಕರ್ಷಕವಾಗಿ ಕಾಣಿಸುತ್ತದೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Mango Nail Art: ಸಮ್ಮರ್‌ ಸೀಸನ್‌ನಲ್ಲಿ ಬಂತು ಮ್ಯಾಂಗೋ ನೇಲ್‌ ಆರ್ಟ್!

Continue Reading

ಫ್ಯಾಷನ್

Anant Ambani Radhika Merchant Pre Wedding: ಹೀಗಿದೆ ಅಂಬಾನಿ ಫ್ಯಾಮಿಲಿಯ ಲಕ್ಷುರಿ ಕ್ರ್ಯೂಸ್‌ ಪ್ರಿ-ವೆಡ್ಡಿಂಗ್‌ ಸೆಲೆಬ್ರೇಷನ್‌ನ ಡ್ರೆಸ್‌ ಕೋಡ್ಸ್!

ಲಕ್ಷುರಿ ಕ್ರ್ಯೂಸ್‌ನಲ್ಲಿ ನಡೆಯಲಿರುವ ಅಂಬಾನಿ ಫ್ಯಾಮಿಲಿಯ 2ನೇ ಪ್ರಿ –ವೆಡ್ಡಿಂಗ್‌ನ (Anant Ambani Radhika Merchant Pre Wedding) ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸೆಲೆಬ್ರೆಟಿಗಳು ಧರಿಸಬೇಕಾದ ಡ್ರೆಸ್‌ಕೋಡ್‌ ಬಗ್ಗೆ ಈಗಾಗಲೇ ಆಹ್ವಾನ ಪತ್ರಿಕೆಯಲ್ಲಿ ನಮೂದಿಸಲಾಗಿದೆ. ಈ ಬಾರಿ ಯಾವ್ಯಾವ ಕಾರ್ಯಕ್ರಮಕ್ಕೆ ಯಾವ ಥೀಮ್‌ನ ಔಟ್‌ಫಿಟ್ಸ್ ಧರಿಸಲಿದ್ದಾರೆ ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Anant Ambani Radhika Merchant Pre Wedding
ಸಾಂದರ್ಭಿಕ ಚಿತ್ರಗಳು: ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ ಚಿತ್ರಗಳು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮೂರು ದಿನಗಳ ಕಾಲ ಇಟಲಿಯಿಂದ ದಕ್ಷಿಣ ಫ್ರಾನ್ಸ್‌ ತನಕ ನೀರಿನ ಮೇಲೆ ಲಕ್ಷುರಿ ಕ್ರ್ಯೂಸ್‌ನಲ್ಲಿ ನಡೆಯಲಿರುವ ಅಂಬಾನಿ ಫ್ಯಾಮಿಲಿಯ ರಾಧಿಕಾ ಮರ್ಚೆಂಟ್‌-ಆನಂತ್‌ ಅಂಬಾನಿಯ ಪ್ರಿ –ವೆಡ್ಡಿಂಗ್‌ನ (Anant Ambani Radhika Merchant Pre Wedding) ನಾನಾ ಕಾರ್ಯಕ್ರಮಗಳಲ್ಲಿ ಸೆಲೆಬ್ರೆಟಿಗಳು ಧರಿಸುವ ಡ್ರೆಸ್‌ಕೋಡ್‌ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಈಗಾಗಲೇ ಆಹ್ವಾನ ಪತ್ರಿಕೆಯಲ್ಲಿ ಧರಿಸಬೇಕಾದ ಡ್ರೆಸ್‌ಕೋಡ್ಸ್ ಮೊದಲೇ ನಮೂದಿಸಲಾಗಿದೆ. ಅಂದಹಾಗೆ, ಸೆಲೆಬ್ರೆಟಿಗಳು ಯಾವ್ಯಾವ ಕಾರ್ಯಕ್ರಮಕ್ಕೆ ಯಾವ ಬಗೆಯ ಡ್ರೆಸ್‌ಕೋಡ್‌ ಧರಿಸಬೇಕು? ಎಂಬುದರ ಬಗ್ಗೆ ಆಹ್ವಾನಪ್ರತಿಕೆಯಲ್ಲಿ ನೀಡಲಾಗಿರುವ ಡಿಟೇಲ್ಸ್ ಕುರಿತಂತೆ ಫ್ಯಾಷನಿಸ್ಟಾಗಳು ವಿವರಿಸಿರುವುದು ಹೀಗೆ…

Anant Ambani Radhika Merchant Pre Wedding

ಮೇ 29 ಸ್ಟಾರಿ ನೈಟ್‌ಗೆ ಫಾರ್ಮರ್ಲ್ಸ್

ಕ್ರ್ಯೂಸ್‌ ಬೋರ್ಡಿಂಗ್‌ ಆದ ದಿನದಂದು ಆಗಮಿಸುವ ಸ್ಟಾರ್ಗಳು, ಸೆಲೆಬ್ರೆಟಿಗಳು ಎಲ್ಲರೂ “ವೆಲ್ಕಮ್‌ ಲಂಚ್‌ “ ಹೆಸರಿನ ಥೀಮ್‌ಗೆ ತಕ್ಕಂತೆ ಕ್ಲಾಸಿಕ್‌ ಕ್ರೂಸ್‌ ಆಧಾರಿತ ಉಡುಪುಗಳನ್ನು ಧರಿಸಲಿದ್ದಾರೆ. ಅದೇ ದಿನ ರಾತ್ರಿ “ ಸ್ಟಾರಿ ನೈಟ್‌” ಥೀಮ್‌ಗೆ ತಕ್ಕಂತೆ ಎಲ್ಲರೂ ವೆಸ್ಟರ್ನ್ ಫಾರ್ಮಲ್ಸ್ “ ಡ್ರೆಸ್‌ಕೋಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಲಿಸ್ಟ್ಗೆ ವೆಸ್ಟರ್ನ್ ಶಿಮ್ಮರ್‌ , ಬಾಡಿಕಾನ್‌, ಮೆರ್ಮೈಡ್‌ ಗೌನ್‌ಗಳು ಸೇರಲಿವೆ. ಇನ್ನು ಪುರುಷರಿಗೆ ಎಂದಿನಂತೆ ಸೂಟ್‌, ಟುಕ್ಸಡೋ, ಫಾರ್ಮಲ್ಸ್ ಔಟ್‌ಫಿಟ್‌ಗಳು ಎಂದು ಹೇಳಲಾಗಿದೆ.

Anant Ambani Radhika Merchant Pre Wedding

ಮೇ 30: ರೋಮ್‌ ಹಾಲಿ ಡೇ –ಟೋಗಾ ಪಾರ್ಟಿ

ರೋಮ್‌ನಲ್ಲಿ ಕ್ರ್ಯೂಸ್‌ ಲ್ಯಾಂಡಿಂಗ್‌ ಆದಾಗ ಅಲ್ಲಿಗೆ ಹೊಂದುವಂತಹ ಥೀಮ್‌ ಪ್ಲಾನ್‌ ಮಾಡಲಾಗಿದೆ. ಟೂರಿಸ್ಟ್ ಚಿಕ್‌ ಅಟೈರ್ಸ್ ಅಂದರೇ, ಟೂರ್‌ ಮಾಡುವಾಗ ಧರಿಸುವಂತಹ ಆಕರ್ಷಕ ಫಂಕಿ ಆಕ್ಸೆಸರೀಸ್‌ ಹಾಗೂ ಔಟ್‌ಫಿಟ್‌ಗಳು ಈ ದಿನಕ್ಕೆ ಫಿಕ್ಸ್ ಮಾಡಲಾಗಿದೆ. ಇನ್ನು ಅದೇ ದಿನ ಮತ್ತೊಮ್ಮೆ ಕ್ರ್ಯೂಸ್‌ ಒಳಗೆ ನಡೆಯುವ ಕ್ರಾರ್ಯಕ್ರಮದಲ್ಲಿ “ ಲಾ ಡೊಲ್ಸಿ ಫಾರ್‌ ನೈಂಟೆ” ಥೀಮ್‌ ಗೆ ತಕ್ಕಂತೆ ರೆಟ್ರೋ ಫ್ಯಾಷನ್‌ಗೆ ಮಣೆ ಹಾಕಲಾಗಿದೆ. ಇದೇ ಕಾಸ್ಟ್ಯೂಮ್ಸ್ನಲ್ಲಿ ರಾತ್ರಿ ಟೋಗಾ ಪಾರ್ಟಿ ಕೂಡ ನಡೆಯಲಿದೆ.

Anant Ambani Radhika Merchant Pre Wedding

ಮೇ 31ಕ್ಕೆ ಆಫ್ಟರ್‌ ಪಾರ್ಟಿ ಗ್ಲಾಮರಸ್‌ ಔಟ್‌ಫಿಟ್ಸ್

ಕ್ರ್ಯೂಸ್‌ನಲ್ಲಿ ಬೆಳಗ್ಗೆ ವೇಳೆ “ ವೀ ಅಂಡರ್‌ ದಿ ಸನ್‌” ಹೆಸರಿನ ಥೀಮ್‌ಗೆ ತಕ್ಕಂತೆ ಫ್ಲೇಫುಲ್‌ ಅಂದರೇ, ಉಲ್ಲಾಸ ನೀಡುವಂತಹ ಉಡುಗೆಗಳಿಗೆ ಗ್ರೀನ್‌ ಸಿಗ್ನಲ್‌ ನೀಡಲಾಗಿದೆ. ಕಾನ್‌ನಲ್ಲಿ ಲ್ಯಾಂಡ್‌ ಮಾಡಿದ ನಂತರ, ಡ್ರೆಸ್‌ಕೋಡ್‌ ಬದಲಾಗಲಿದೆ. “ ಲೇ ಮಾಸ್ಕ್ಯೂರೆಡ್‌” ಥೀಮ್‌ಗೆ ತಕ್ಕಂತೆ ಬ್ಲಾಕ್‌ ಮಾಸ್ಕ್‌ ಧರಿಸಿದ ಬ್ಲಾಕ್‌ ಔಟ್‌ಫಿಟ್‌ಗಳು ಎಲ್ಲರನ್ನು ಆವರಿಸಲಿವೆ. ಕ್ರ್ಯೂಸ್‌ ಮರಳಿದ ನಂತರ “ ಪಾರ್ಡನ್‌ ಮೈ ಫ್ರೆಂಚ್‌” ಥೀಮ್‌ಗೆ ತಕ್ಕಂತೆ ಆಫ್ಟರ್‌ ಪಾರ್ಟಿ ಗೆ ಮ್ಯಾಚ್‌ ಆಗುವಂತಹ ಗ್ಲಾಮರಸ್‌ ಔಟ್‌ಫಿಟ್‌ಗಳು ಎಲ್ಲರನ್ನೂ ಸವಾರಿ ಮಾಡಲಿವೆ.

Anant Ambani Radhika Merchant Pre Wedding

ಜೂನ್‌ 1 ಇಟಾಲಿಯನ್‌ ಸಮ್ಮರ್‌

ಇನ್ನು ಕೊನೆಯ ದಿನ ಕ್ರ್ಯೂಸ್‌ನಿಂದ ಬಂದರಿಗೆ ಇಳಿದಾಗ ಸೆಲೆಬ್ರೆಟಿಗಳು “ ಲಾ ಡೊಲ್ಚೆ ವಿಟಾ” ಥೀಮ್‌ಗೆ ತಕ್ಕಂತೆ ಇಟಾಲಿಯನ್‌ ಸಮ್ಮರ್‌ ಡ್ರೆಸ್‌ಕೋಡ್‌ನಲ್ಲಿ ಕಾಣಿಸಿಕೊಂಡು, ಲಕ್ಷುರಿ ಕ್ರ್ಯೂಸ್‌ ಪ್ರಿ-ವೆಡ್ಡಿಂಗ್‌ ಸೆಲೆಬ್ರೇ‍ಷನ್‌ಗೆ ಬೈ ಬೈ ಹೇಳಲಿದ್ದಾರೆ. ನಿಮಗೆ ಗೊತ್ತೇ! ಈ ಬಾರಿ ಭಾಗವಹಿಸುವ ಯಾವ ಸೆಲೆಬ್ರೆಟಿಯೂ ಕೂಡ ಮೊಬೈಲ್‌ ಬಳಸಿ ಫೋಟೋ ಕ್ಲಿಕ್ಕಿಸಿ ಶೇರ್‌ ಮಾಡುವಂತಿಲ್ಲವಂತೆ!

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Anant Ambani Radhika: ಅಂಬಾನಿ ಮಗನ ಮತ್ತೊಂದು ಪ್ರಿ ವೆಡ್ಡಿಂಗ್‌: ಇಟಲಿಗೆ ಹೊರಟ ಆಲಿಯಾ ಭಟ್ ದಂಪತಿ!

Continue Reading

ಫ್ಯಾಷನ್

Hairstyle Craze: ಸೋಷಿಯಲ್‌ ಮೀಡಿಯಾದಲ್ಲಿ ರಂಗೇರಿದ ಹೇರ್‌ ಸ್ಟೈಲ್ಸ್

ಚಿತ್ರ-ವಿಚಿತ್ರ ವಿನ್ಯಾಸದ ಹೇರ್‌ ಸ್ಟೈಲ್ಸ್‌, (Hairstyle Craze) ಕಲಾತ್ಮಕವಾಗಿ ಮಾಡಿದ ಹೇರ್‌ ಡಿಸೈನಿಂಗ್‌ ಫೋಟೋಗಳು ಇಂದು ಸೋಷಿಯಲ್‌ ಮೀಡಿಯಾದಲ್ಲಿ ಹಂಗಾಮ ಎಬ್ಬಿಸಿವೆ.

VISTARANEWS.COM


on

HairStyle Craze
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಿತ್ರ-ವಿಚಿತ್ರ ವಿನ್ಯಾಸದಲ್ಲಿ ಕಲಾತ್ಮಕವಾಗಿ ಮಾಡಿದ ಹೇರ್‌ಸ್ಟೈಲ್‌ (Hairstyle Craze) ಫೋಟೋಗಳು ಸೋಷಿಯಲ್‌ ಮೀಡಿಯಾದ ಬ್ಯೂಟಿ ಬ್ಲಾಗ್‌-ವ್ಲಾಗ್‌ಗಳಲ್ಲಿ ಆನ್‌ಲೈನ್‌ ಪ್ರೇಮಿಗಳನ್ನು ಆಕರ್ಷಿಸಿವೆ. ಪ್ರಯೋಗಾತ್ಮಕವಾಗಿ ಮಾಡಿದ ನಾನಾ ಶೈಲಿಯ ಈ ಕೂದಲಿನ ವಿನ್ಯಾಸಗಳಿಗೆ ಸೋಷಿಯಲ್‌ ಮೀಡಿಯಾ ವೇದಿಕೆ ಕಲ್ಪಿಸಿದ್ದು, ಹೇರ್‌ ಸ್ಟೈಲಿಂಗ್‌ ಪ್ರಿಯರಲ್ಲಿ ಈ ಕ್ರೇಜ್ ಹುಟ್ಟು ಹಾಕಿದೆ.

Online Craze

ಚಿತ್ರ-ವಿಚಿತ್ರ ಹೇರ್‌ ಸ್ಟೈಲಿಂಗ್‌

ಹೇರ್‌ ಸ್ಟೈಲಿಸ್ಟ್‌ ರಿಚರ್ಡ್ ಹೇಳುವಂತೆ, ತಲೆಗೂದಲನ್ನು ವಿಭಿನ್ನ ಕಾನ್ಸೆಪ್ಟ್‌ಗಳಲ್ಲಿ ಬಾಚುವುದು, ಕೂದಲನ್ನು ಪ್ರಯೋಗಾತ್ಮಕವಾಗಿ ಸಿಂಗರಿಸಿ ಇಲ್ಲವೇ ಅಲಂಕರಿಸುವುದು. ಅವರವರ ಆಯ್ಕೆಗೆ ತಕ್ಕಂತೆ ಥೀಮ್‌ಗೆ ತಕ್ಕಂತೆ ಕೂದಲನ್ನು ಆರ್ಟ್‌ನ ಒಂದು ಭಾಗವಾಗಿಸುವುದು. ಇವೆಲ್ಲಾ ಇಂದು ಸೋಷಿಯಲ್ ಮೀಡಿಯಾದ ಬ್ಯೂಟಿ ಪ್ರಿಯರ ಬ್ಲಾಗ್‌ ಹಾಗೂ ವ್ಲಾಗ್‌ಗಲ್ಲಿ ಕಂಡು ಬರುತ್ತಿವೆ. ಇನ್ನು ಬ್ಯೂಟಿ ಎಕ್ಸ್‌ಪರ್ಟ್ ತನ್ಯಾ ಪ್ರಕಾರ, ವಿಭಿನ್ನ, ವೈವಿದ್ಯಮಯ ಊಹೆಗೂ ಮೀರಿದ ಕೂದಲಿನ ವಿನ್ಯಾಸದಲ್ಲಿ ಕೆಲವು ಆಕರ್ಷಕ ಹೇರ್‌ ಸ್ಟೈಲಿಂಗ್‌ ಲಿಸ್ಟ್‌ಗೆ ಸೇರಿದರೇ ಇನ್ನು ಕೆಲವು ವಿಯರ್ಡ್‌ ಬ್ಯೂಟಿ ಹೇರ್‌ ಸ್ಟೈಲಿಂಗ್‌ ವಿಭಾಗಕ್ಕೆ ಸೇರುತ್ತವಂತೆ.

Online Craze

ಇನ್ನು ಹೇರ್‌ ಡಿಸೈನಿಂಗ್‌ ಅಥವಾ ಆರ್ಟಿಸ್ಟಿಕ್‌ ಹೇರ್‌ಸ್ಟೈಲ್‌ ಮಾಡಲು ಬಯಸುವವರು ಮೊದಲು ಒಂದಿಷ್ಟು ಬ್ಯೂಟಿ ಬ್ಲಾಗ್‌ಗಳಲ್ಲಿ ಈ ಕುರಿತಂತೆ ಸಮೀಕ್ಷೆ ಮಾಡಿ ನಂತರ ತಮ್ಮ ಕೂದಲಿನ ಟೆಕ್ಷ್ಚರ್‌ಗೆ ಹೊಂದುವಂತೆ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಬೇಕು. ಎಲ್ಲದಕ್ಕಿಂತ ಮೊದಲು ಕೂದಲು ಆರೋಗ್ಯವಾಗಿರಬೇಕು. ವಾಲ್ಯೂಮ್‌ ಹೊಂದಿರಬೇಕು ಎನ್ನುತ್ತಾರೆ ಹೇರ್ ಸ್ಟೈಲಿಸ್ಟ್‌ ಸ್ವಪ್ನಾ ಭವ್ನಾನಿ.

Online Craze

ಹೇರ್‌ ಸ್ಟೈಲಿಂಗ್‌ ಮಾಡುವ ಮುನ್ನ

ಸೋಷಿಯಲ್‌ ಮೀಡಿಯಾದಲ್ಲಿನ ಹೇರ್‌ ಸ್ಟೈಲಿಂಗ್‌ ಕ್ರೇಜ್‌ಗೆ ನೀವು ಸಾಥ್‌ ನೀಡುವುದಾದಲ್ಲಿ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

  • ಹೇರ್‌ ಎಕ್ಸ್‌ಪರ್ಟ್ ಬಳಿ ನಿಮ್ಮ ಥೀಮ್‌ ಬಗ್ಗೆ ಮೊದಲು ಚರ್ಚಿಸಿ.
  • ಹೇರ್‌ ಡಿಸೈನಿಂಗ್‌ಗೆ ಬೇಕಾಗುವ ಪರಿಕರ ಹಾಗೂ ವಸ್ತುಗಳನ್ನು ತೆಗೆದಿರಿಸಿ.
  • ಮೇಕಪ್‌ ಮುಗಿದ ನಂತರ ಹೇರ್ ಡಿಸೈನಿಂಗ್‌ ಮಾಡುವುದು/ಮಾಡಿಸುವುದು ಒಳಿತು.
  • ಸೋಷಿಯಲ್‌ ಮೀಡಿಯಾಗೆ ಅಪ್‌ಲೋಡ್‌ ಮಾಡುವಾಗ ಹ್ಯಾಶ್‌ಟ್ಯಾಗ್‌ ಬಳಸಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Mango Nail Art: ಸಮ್ಮರ್‌ ಸೀಸನ್‌ನಲ್ಲಿ ಬಂತು ಮ್ಯಾಂಗೋ ನೇಲ್‌ ಆರ್ಟ್!

Continue Reading

ಫ್ಯಾಷನ್

Mango Nail Art: ಸಮ್ಮರ್‌ ಸೀಸನ್‌ನಲ್ಲಿ ಬಂತು ಮ್ಯಾಂಗೋ ನೇಲ್‌ ಆರ್ಟ್!

ಸಮ್ಮರ್‌ ಸೀಸನ್‌ನಲ್ಲಿ ಅದರಲ್ಲೂ ಮಾವಿನ ಹಣ್ಣಿನ ಸೀಸನ್‌ನಲ್ಲಿ ಮ್ಯಾಂಗೋ ನೇಲ್‌ ಆರ್ಟ್ (Mango Nail Art) ಟ್ರೆಂಡಿಯಾಗಿದೆ. ಬ್ಯೂಟಿ ಬ್ಲಾಗ್‌-ವ್ಲಾಗ್‌ಗಳಲ್ಲಿ ಇವುಗಳ ನಾನಾ ರೂಪ ದರ್ಶನವಾಗುತ್ತಿದೆ ಎನ್ನುವ ನೇಲ್‌ ಆರ್ಟ್ ಡಿಸೈನರ್‌ ರಿಂಕಿ ಒಂದಿಷ್ಟು ಮಾಹಿತಿ ನೀಡಿದ್ದಾರೆ.

VISTARANEWS.COM


on

Mango Nail Art
ಚಿತ್ರಕೃಪೆ: ಇನ್ಸ್‌ಟಾಗ್ರಾಮ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮ್ಯಾಂಗೋ ನೇಲ್‌ ಆರ್ಟ್ ಸದ್ಯ ನೇಲ್‌ ಆರ್ಟ್ (Mango Nail Art) ಲೋಕದಲ್ಲಿ ಟ್ರೆಂಡಿಯಾಗಿದೆ. ಈ ಬಾರಿಯ ಬೇಸಿಗೆಯಲ್ಲಿ ನಾನಾ ಬಗೆಯ ಮಾವಿನ ಹಣ್ಣಿನ ಚಿತ್ತಾರಗಳು ನೇಲ್‌ ಆರ್ಟ್ ಡಿಸೈನ್‌ನಲ್ಲಿ ಮೂಡಿ ಬಂದಿದ್ದು, ಬ್ಯೂಟಿ ಪ್ರಿಯರು ತಮ್ಮ ಊಹೆಗೆ ತಕ್ಕಂತೆ ಬಗೆಬಗೆಯ ಡಿಸೈನ್‌ನಲ್ಲಿ ಇವುಗಳ ಚಿತ್ತಾರವನ್ನು ಬೆರಳುಗಳ ಉಗುರುಗಳ ಮೇಲೆ ಮೂಡಿಸತೊಡಗಿದ್ದಾರೆ.

Mango Nail Art

ಸೀಸನ್‌ಗೆ ಬಂತು ಮಾವಿನ ಚಿತ್ತಾರ

“ನೇಲ್‌ ಆರ್ಟ್ ಸೀಸನ್‌ಗೆ ತಕ್ಕಂತೆ ಬದಲಾಗುತ್ತಿರುತ್ತದೆ. ಆಯಾ ಸೀಸನ್‌ನಲ್ಲಿ ಪ್ರಚಲಿತದಲ್ಲಿರುವ ಟಾಪಿಕ್‌ ಆಗಬಹುದು, ಕಲರ್‌ ಆಗಬಹುದು, ಹಬ್ಬ ಆಗಬಹುದು ಅಥವಾ ಹಣ್ಣು-ತರಕಾರಿಯೂ ಆಗಬಹುದು. ಇನ್ನು ಈ ಸೀಸನ್‌ನಲ್ಲಿ ಎಲ್ಲರಿಗೂ ತಿಳಿದಿರುವಂತೆ ಮಾವಿನ ಹಣ್ಣುಗಳ ಅಬ್ಬರ. ಇದಕ್ಕೆ ಪೂರಕ ಎಂಬಂತೆ, ನಾನಾ ಜಾತಿಯ ಅಂದರೇ, ವೆರೈಟಿ ಮಾವಿನ ಹಣ್ಣಿನ ರೂಪಗಳು ಮಿನಿಯೇಚರ್‌ ರೂಪದಲ್ಲಿ ಉಗುರುಗಳ ಮೇಲೆ ಸಿಂಗಾರಗೊಳ್ಳುತ್ತಿವೆ. ಕೆಲವರು, ನೇಲ್‌ ಪಾರ್ಲರ್‌ಗೆ ಹೋಗಿ ಡಿಸೈನ್‌ ಮಾಡಿಸಿಕೊಂಡರೇ, ಇನ್ನು ಕೆಲವರು ಖುದ್ದು ತಾವೇ ವಿನ್ಯಾಸ ಮಾಡಿಕೊಳ್ಳುತ್ತಾರೆ. ಇಲ್ಲವೇ ತಮ್ಮ ಆಪ್ತರಿಗೆ ಸಹೋದರಿಯರಿಗೆ ತಾವೇ ಬಿಡಿಸುತ್ತಾರೆ ಎನ್ನುವ ನೇಲ್‌ ಆರ್ಟ್ ಡಿಸೈನರ್‌ ರಿಂಕಿ ಪ್ರಕಾರ, ಯಾವುದೇ ಡಿಸೈನ್‌ ಮೂಡಿಸಲು ಕಲಾವಿದರ ಮನಸ್ಸು ಅಗತ್ಯ ಎನ್ನುತ್ತಾರೆ.

Mango Nail Art

ಬ್ಯೂಟಿ ಬ್ಲಾಗ್‌-ವ್ಲಾಗ್‌ಗಳಲ್ಲಿ ಆರಂಭವಾದ ಟ್ರೆಂಡ್‌

ಈ ಸಮ್ಮರ್‌ ಸೀಸನ್‌ನಲ್ಲಿ ಅದರಲ್ಲೂ ಮಾವಿನ ಹಣ್ಣಿನ ಸೀಸನ್‌ನಲ್ಲಿ ಇದೀಗ ನೇಲ್‌ ಆರ್ಟ್ ಪ್ರಿಯರು ಮ್ಯಾಂಗೋ ನೇಲ್‌ ಆರ್ಟ್ ಚಿತ್ತಾರಗಳಿಗೆ ಮನ ಸೋತಿದ್ದಾರೆ. ಬ್ಯೂಟಿ ಬ್ಲಾಗ್‌-ವ್ಲಾಗ್‌ಗಳಲ್ಲಿ ಇವುಗಳ ನಾನಾ ರೂಪ ದರ್ಶನವಾಗುತ್ತಿದೆ. ಬ್ಯೂಟಿ ಹಾಗೂ ಫ್ಯಾಷನ್‌ ಇನ್ಫೂಯೆನ್ಸರ್ಸ್ ತಮ್ಮ ನೇಲ್‌ ಆರ್ಟ್‌ಗಳನ್ನು ಪ್ರದರ್ಶಿಸುತ್ತಿರುವುದು ಟ್ರೆಂಡ್‌ಗೆ ಕಾರಣವಾಗಿದೆ ಎನ್ನುತ್ತಾರೆ ಎಕ್ಸ್‌ಫರ್ಟ್ಸ್.

Mango Nail Art

ಪ್ರಯೋಗಾತ್ಮಕ ವಿನ್ಯಾಸ

ಇನ್ನು, ಪ್ರಯೋಗಾತ್ಮಕ ಶೇಡ್‌ ಚಿತ್ತಾರ ಮೂಡಿಸಿರುವ ಕೆಲವು ನೇಲ್‌ ಆರ್ಟ್‌ ಪ್ರೇಮಿಗಳು ಸೋಷಿಯಲ್‌ ಮೀಡಿಯಾದ ತಮ್ಮ ಬ್ಯೂಟಿ ಪೇಜ್‌ಗಳಲ್ಲಿ, ಬೆರಳ ಚಿತ್ರಗಳನ್ನು ಪ್ರಕಟಿಸುತ್ತಿದ್ದಾರೆ. ಹಾಗಾಗಿ ಈ ಬಾರಿ ಫ್ರೂಟ್ಸ್‌ ನೇಲ್‌ ಆರ್ಟ್‌ ಡಿಸೈನ್‌ನಲ್ಲಿ ಮಾವಿನ ಹಣ್ಣಿನ ಡಿಸೈನ್‌ ಟ್ರೆಂಡಿಯಾಗಿದೆ. ಹಾಗೆಂದು ಇಂಟರ್‌ನ್ಯಾಷನಲ್‌ ಫ್ಯಾಷನ್‌ನಲ್ಲಿ ಸದ್ಯಕ್ಕೆ ಇದು ಇಲ್ಲ. ಈ ಡಿಸೈನ್‌ ಏನಿದ್ದರೂ ನಮ್ಮ ರಾಷ್ಟ್ರದಲ್ಲಿ ಮಾತ್ರ. ಅದರಲ್ಲೂ ಸೌತ್‌ ಇಂಡಿಯಾದಲ್ಲಿ ಎಂಬುದು ಗೊತ್ತಿರಲಿ ಎನ್ನುತ್ತಾರೆ ಡಿಸೈನರ್ಸ್‌.

ಇದನ್ನೂ ಓದಿ: Saree Fashion: ಮಹಿಳೆಯರ ಮನಗೆದ್ದ ಕಟ್‌ ವರ್ಕ್ ಬಾರ್ಡರ್‌ ಪಾರ್ಟಿ ಸೀರೆ

ಮ್ಯಾಂಗೋ ನೇಲ್‌ ಆರ್ಟ್ ಟಿಪ್ಸ್

  • ಸನ್‌ ಕಲರ್‌ ಹಾಗೂ ಗ್ರೀನ್‌ ನೇಲ್‌ ಕಲರ್‌ ಬಳಸಿ.
  • ಒಂದು ಉಗುರಿಗೆ ಮಾತ್ರ ಡಿಸೈನ್‌ ಮಾಡುವ ಟ್ರೆಂಡ್‌ ಕೂಡ ಇದೆ.
  • ಮ್ಯಾಂಗೋ ಡಿಸೈನ್‌ ಮಾಡುವುದಿದ್ದಲ್ಲಿ ಮೊದಲೇ ಯಾವ ಬಗೆಯದ್ದನ್ನು ಚಿತ್ರಿಸಬೇಕು ಎಂಬುದನ್ನು ಮೊದಲೇ ಡಿಸೈಡ್‌ ಮಾಡಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading
Advertisement
Karnataka Weather
ಮಳೆ14 mins ago

Karnataka Weather: ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಇಂದು ಸಂಜೆ ಭಾರಿ ಮಳೆ ಸಾಧ್ಯತೆ!

Viral News
ವೈರಲ್ ನ್ಯೂಸ್30 mins ago

Viral News: 10 ಅಡಿಯ ದೈತ್ಯ ಮೊಸಳೆಯಿಂದ ಕಬ್ಬಿಣದ ಗೇಟು ಹಾರಲು ಯತ್ನ; ಮೈ ಜುಮ್ಮೆನ್ನಿಸುವ ವಿಡಿಯೊ ಇಲ್ಲಿದೆ

Rashmika Mandanna shares why she doesn’t speak English
ಸಿನಿಮಾ34 mins ago

Rashmika Mandanna: ಸಮಾರಂಭಗಳಲ್ಲಿ ರಶ್ಮಿಕಾ ಇಂಗ್ಲೀಷ್‌ ಏಕೆ ಮಾತನಾಡಲ್ಲ? ನಟಿ ಕೊಟ್ಟ ಸ್ಪಷ್ಟನೆ ಏನು?

Bhavani Revanna
ಕರ್ನಾಟಕ40 mins ago

Bhavani Revanna: ಭವಾನಿ ರೇವಣ್ಣ ‘ಜಾಮೀನು’ ತೀರ್ಪು ಕಾಯ್ದಿರಿಸಿದ ಕೋರ್ಟ್;‌ ಮೇ 31 ಅಮ್ಮ-ಮಗನಿಗೆ ಬಿಗ್‌ ಡೇ!

Team India's T20 WC Jersey
ಕ್ರೀಡೆ41 mins ago

Team India’s T20 WC Jersey: ನೂತನ ಜೆರ್ಸಿಯಲ್ಲಿ ಕಂಗೊಳಿಸಿದ ರಿಷಭ್​ ಪಂತ್​; ಅಭಿಮಾನಿಗಳಿಂದಲೂ ಬೆಂಬಲ

Missing Case
ಕರ್ನಾಟಕ56 mins ago

Missing Case: ಚಿಕ್ಕಬಳ್ಳಾಪುರದಲ್ಲಿ ಯುವತಿಯರ ನಾಪತ್ತೆ ಕೇಸ್‌ಗಳು ಹೆಚ್ಚಳ; ಒಂದೇ ವಾರದಲ್ಲಿ ಇಬ್ಬರು ಮಿಸ್ಸಿಂಗ್‌!

Prajwal Revanna Case
ಕರ್ನಾಟಕ1 hour ago

Prajwal Revanna Case: ಭಾರತಕ್ಕೆ ಬರುವ ಮೊದಲೇ ಜಾಮೀನಿಗಾಗಿ ಪ್ರಜ್ವಲ್‌ ಅರ್ಜಿ ಸಲ್ಲಿಕೆ; ಮುಂದೇನಾಗತ್ತೆ?

Virat Kohli
ಕ್ರೀಡೆ1 hour ago

Virat Kohli: ನ್ಯೂಯಾರ್ಕ್‌ನಲ್ಲಿ ಭಾರತ ತಂಡದ ಕಠಿಣ ಅಭ್ಯಾಸ; ಮುಂಬೈನಲ್ಲಿ ಪಾರ್ಟಿ ಮಾಡುತ್ತಾ ಎಂಜಾಯ್​ ಮಾಡುತ್ತಿರುವ ಕೊಹ್ಲಿ

PM Narendra Modi
ದೇಶ2 hours ago

PM Narendra Modi: ಒಡಿಶಾ ಸಿಎಂ ಆರೋಗ್ಯ ಹದಗೆಟ್ಟಿರುವ ಹಿಂದೆ ಇದ್ಯಾ ಭಾರೀ ಸಂಚು? ಏನಂದ್ರು ಪ್ರಧಾನಿ ಮೋದಿ?-ವಿಡಿಯೋ ಇದೆ

Arvind Kejriwal
ದೇಶ2 hours ago

Arvind Kejriwal: ಕಾಂಗ್ರೆಸ್‌ ಜತೆ ನಮ್ಮ ‘ಮದುವೆ’ ಶಾಶ್ವತ ಅಲ್ಲ ಎಂದ ಕೇಜ್ರಿವಾಲ್;‌ ‘ಡಿವೋರ್ಸ್‌’ ಯಾವಾಗ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ22 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌