-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫಂಕಿ ಲುಕ್ ನೀಡುವ ಹಿಪ್ಪಿ ಪ್ಯಾಂಟ್‌ಗಳು ಹಾಲಿ ಡೇ ಫ್ಯಾಷನ್‌ಗೆ (Holiday Fashion) ಮರಳಿವೆ. ಹೌದು, ನೋಡಲು ವೆರೈಟಿ ಪ್ರಿಂಟ್ಸ್ ಹಾಗೂ ವಿಂಟೇಜ್ ಪ್ರಿಂಟ್ಸ್‌ನಲ್ಲಿ ದೊರಕುತ್ತಿರುವ ಹಿಪ್ಪಿ ಪ್ಯಾಂಟ್‌ಗಳು )Hippie pants) ಹೊಸ ರೂಪದಲ್ಲಿ ಮರಳಿವೆ. ಬೀಚ್ ಹಾಲಿ ಡೇ ಮಾತ್ರವಲ್ಲ, ವೀಕೆಂಡ್ ಔಟಿಂಗ್‌ನಲ್ಲೂ ಇವು ಹುಡುಗಿಯರನ್ನು ಸವಾರಿ ಮಾಡತೊಡಗಿವೆ.
ವಿದೇಶಿಗರ ಟ್ರಾವೆಲ್ ಪ್ಯಾಂಟ್ಸ್
“ಮೊದಲೆಲ್ಲಾ ಹಿಪ್ಪಿ ಪ್ಯಾಂಟ್‌ಗಳೆಂದಾಕ್ಷಣಾ (Hippie pants) ವಿದೇಶಿಗರು ಪ್ರಯಾಣ ಹಾಗೂ ಟೂರ್ ಮಾಡುವ ಸಂದರ್ಭದಲ್ಲಿ ಧರಿಸುವ ಪ್ಯಾಂಟ್, ದೊಗಲೆ ಪ್ಯಾಂಟ್ ಎಂದೆಲ್ಲಾ ಅಭಿಪ್ರಾಯ ಪಡಲಾಗುತ್ತಿತ್ತು. ಇದೀಗ ಈ ಕಾನ್ಸೆಪ್ಟ್ ಬದಲಾಗಿದೆ. ನಮ್ಮಲ್ಲೂ ಹುಡುಗಿಯರು, ಈ ಸೀಸನ್‌ನ ಸೆಕೆಯಿಂದ ಪಾರಾಗಲು ಈ ಪ್ಯಾಂಟ್‌ಗಳನ್ನು ಆಯ್ಕೆ ಮಾಡತೊಡಗಿದ್ದಾರೆ. ಪರಿಣಾಮ, ಈ ಪ್ಯಾಂಟ್‌ಗಳು ಇದೀಗ ಹಾಲಿ ಡೇ ಹಾಗೂ ಔಟಿಂಗ್‌ಗೆ ಮಾತ್ರವಲ್ಲದೇ, ಇತರೇ ಸಮಯದಲ್ಲೂ ಧರಿಸುವುದು ಹೆಚ್ಚಾಗುತ್ತಿದೆ” ಎನ್ನುವ ಫ್ಯಾಷನಿಸ್ಟ್ ಛಾಯಾ ಪ್ರಕಾರ, ಇದೀಗ ಜೆನ್ ಜಿ ಹುಡುಗಿಯರ ಸೀಸನ್ ಲಿಸ್ಟ್‌ನಲ್ಲಿ ಇವು ಸೇರಿವೆ ಎನ್ನುತ್ತಾರೆ.
ಟ್ರೆಂಡಿ ಹಿಪ್ಪಿ ಪ್ಯಾಂಟ್ಸ್
ಹಿಪ್ಪಿ ಪ್ಯಾಂಟ್‌ಗಳಲ್ಲಿ (Hippie pants) ಯೂನಿಸೆಕ್ಸ್ ಪ್ರಿಂಟ್ಸ್ ಹಾಗೂ ಡಿಸೈನ್‌ನವು ಲಭ್ಯ. ಆದರೆ ಹುಡುಗ-ಹುಡುಗಿಯರ ಸೊಂಟದಳತೆಗೆ ಇವು ಹೊಂದಬೇಕಷ್ಟೇ! ಹಾಗಾಗಿ, ಅವರವರ ಸೊಂಟದ ಫಿಟ್ಟಿಂಗ್‌ಗೆ ತಕ್ಕಂತೆ ಧರಿಸುವುದು ಸೂಕ್ತ ಎನ್ನುತ್ತಾರೆ ಸ್ಟೈಲಿಸ್ಟ್ ಖಾನ್.
ಪಲ್ಹಾಜೋ ಹಿಪ್ಪಿ ಪ್ಯಾಂಟ್ಸ್
ಪಲ್ಹಾಜೋ ಶೈಲಿಯ ಅಗಲವಾದ ಪ್ರಿಂಟೆಡ್ ಹಿಪ್ಪಿ ಪ್ಯಾಂಟ್‌ಗಳು (Hippie pants) ಚಾಲ್ತಿಯಲ್ಲಿವೆ. ಇವುಗಳಲ್ಲಿ ವಿಂಟೇಜ್ ಕಲೆಕ್ಷನ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ.
ವೈಡ್ ಲೆಗ್ ಹಿಪ್ಪಿ ಪ್ಯಾಂಟ್ಸ್
ಅಗಲವಾಗಿರುವ ದೊಗಲೆಯಾಗಿರುವ ಪ್ಯಾಂಟ್‌ಗಳಿವು. ಹಾಗಾಗಿ ಪ್ರಿಂಟ್ಸ್‌ನಲ್ಲಿನ ಚಿತ್ತಾರಗಳು ಕೂಡ ಅಗಲವಾಗಿ ಹರಡಿಕೊಂಡಂತೆ ಇರುತ್ತವೆ. ನೋಡಲು ಫಂಕಿ ಲುಕ್ ನೀಡುತ್ತವೆ. ಪರ್ಫೆಕ್ಟ್ ರಿಲ್ಯಾಕ್ಸಿಂಗ್ ಮೂಡ್ ಸೃಷ್ಟಿಸುತ್ತವೆ.
ಬೆಲ್ ಬಾಟಮ್ ಹಿಪ್ಪಿ ಪ್ಯಾಂಟ್ಸ್
ಹೆಸರೇ ಹೇಳುವಂತೆ, ಒಂದು ಕಾಲದಲ್ಲಿ, ರೆಟ್ರೋ ಸ್ಟೈಲ್‌ನಲ್ಲಿ ಸಖತ್ ಪಾಪುಲರ್ ಆಗಿದ್ದ ಪ್ಯಾಂಟ್‌ಗಳಿವು. ಫ್ಲೇರ್ ಹೊಂದಿದಂತೆ ಕಾಣುವ ಇವು ಧರಿಸಿದಾಗ ಕಂಪ್ಲೀಟ್ ರೆಟ್ರೋ ಲುಕ್ ನೀಡುತ್ತವೆ ಎನ್ನಬಹುದು.
ಇದನ್ನೂ ಓದಿ: Star Fashion: ಪಂಚೆ ಜೊತೆ ಟ್ರೋಫಿ ಜಾಕೆಟ್ ಧರಿಸಿದ ನಟಿ ತಮನ್ನಾಳ ಯೂನಿಕ್ ಫ್ಯಾಷನ್!
ಹಿಪ್ಪಿ ಪ್ಯಾಂಟ್ಸ್ ಸಿಂಪಲ್ 3 ಟಿಪ್ಸ್
- ಕಚೇರಿಗೆ ಧರಿಸಲು ಇವು ಸೂಕ್ತವಲ್ಲ!
- ಸರಿಯಾದ ಟಾಪ್ ಮ್ಯಾಚ್ ಮಾಡಿದಾಗ ಅಂದವಾಗಿ ಕಾಣಬಲ್ಲವು.
- ಮಿಕ್ಸ್-ಮ್ಯಾಚ್ ಮಾಡುವ ಚಾಕಚಕ್ಯತೆ ಇದ್ದಲ್ಲಿ ಇವನ್ನು ಹಾಲಿಡೇ ಹೊರತುಪಡಿಸಿಯೂ ಧರಿಸಬಹುದು. ಆಕರ್ಷಕವಾಗಿ ಕಾಣುತ್ತವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)