ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಿಂಗ್‌ನಂತಹ ಹೂಪ್ ಜುಮ್ಕಾಗಳು (Hoop Jumka jewel fashion) ಇದೀಗ ಟ್ರೆಂಡಿಯಾಗಿವೆ. ಧರಿಸಿದಾಗ ನೋಡಲು ಆಕರ್ಷಕವಾಗಿ ಕಾಣಿಸುವ ಈ ಹೂಪ್ ಜುಮ್ಕಾಗಳು, ಎಲ್ಲಾ ಬಗೆಯ ಎಥ್ನಿಕ್ ಉಡುಪುಗಳಿಗೆ ಸಾಥ್ ನೀಡುತ್ತಿವೆ. ಟ್ರೆಡಿಷನಲ್ ಔಟ್‌ಫಿಟ್‌ಗಳಿಗೆ ಪರ್ಫೆಕ್ಟ್ ಲುಕ್ ನೀಡುತ್ತಿವೆ.
ಮೊಗಲರ ಕಾಲದ ಹೂಪ್ ಜುಮ್ಕಾ ಡಿಸೈನ್ಸ್
“ಜುಮ್ಕಾಗಳಲ್ಲಿ ಇದೀಗ ಲೆಕ್ಕವಿಲ್ಲದಷ್ಟು ಬಗೆಯವು ಮಾರುಕಟ್ಟೆಯಲ್ಲಿ ಲಭ್ಯ. ಆದರೆ, ಇದೀಗ ರಿಂಗ್‌ನಂತಹ ಹೂಪ್ ಜುಮ್ಕಾಗಳು ಪ್ರಚಲಿತದಲ್ಲಿವೆ. ಅದರಲ್ಲೂ ದೊಡ್ಡ ರಿಂಗ್ ಜುಮ್ಕಾಗಳು ಮಾನಿನಿಯರ ಕಿವಿಯನ್ನು ಅಲಂಕರಿಸುತ್ತಿವೆ. ಒಂದಕ್ಕಿಂತ ಒಂದು ಆಕರ್ಷಕವಾದ ವಿನ್ಯಾಸದಲ್ಲಿ ಬಂದಿವೆ. ವೆಸ್ಟರ್ನ್‌ವೇರ್ ಹೊರತುಪಡಿಸಿ, ಎಲ್ಲಾ ಬಗೆಯ ಔಟ್‌ಫಿಟ್‌ಗಳಿಗೆ ಇವು ಮ್ಯಾಚ್ ಆಗುತ್ತವೆ” ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಿಯಾ. ಅವರ ಪ್ರಕಾರ, ಅಂದಹಾಗೆ, ಈ ಹೂಪ್ ರಿಂಗ್ ಜುಮ್ಕಾಗಳು ನಿನ್ನೆ ಮೊನ್ನೆ ವಿನ್ಯಾಸದ ಜ್ಯುವೆರಿಗಳಲ್ಲ! ಮೊಗಲರ ಕಾಲದಿಂದಲೂ ಇವು ಜ್ಯುವೆಲರಿ ಲೋಕದಲ್ಲಿವೆ. ನಾನಾ ಡಿಸೈನ್‌ನಲ್ಲಿವೆ. ಅತಿ ಹೆಚ್ಚು ವಿನ್ಯಾಸ ಹಾಗೂ ಬಂಗಾರದವು ಆಗಿನ ಕಾಲದಲ್ಲೆ ವಿನ್ಯಾಸಗೊಂಡಿತ್ತು ಎನ್ನುತ್ತಾರೆ.
ಟ್ರೆಂಡಿಯಾಗಿರುವ ಹೂಪ್ ಜುಮ್ಕಾಗಳ್ಯಾವುವು?
ಬ್ಲ್ಯಾಕ್ ಹಾಗೂ ವೈಟ್ ಮೆಟಲ್‌ನ ಹೂಪ್ ಜುಮ್ಕಾ, ಆಕ್ಸಿಡೈಸ್ಡ್ ಹೂಪ್ ಜುಮ್ಕಾ, ಬೀಡ್ಸ್ ಹೂಪ್ ಜುಮ್ಕಾ, ಸ್ಟೇಟ್‌ಮೆಂಟ್ ಹೂಪ್ ಜುಮ್ಕಾ, ಕುಂದನ್ ಹೂಪ್ ಜುಮ್ಕಾ, ಮಿನಾಕಾರಿ ಪರ್ಲ್ ಹೂಪ್ ಜುಮ್ಕಾ, ಅಮೆರಿಕನ್ ಡೈಮಂಡ್ ಹೂಪ್ ಜುಮ್ಕಾ, ಪಿರಮಿಡ್ ಸ್ಟೈಲ್ ಹೂಪ್ ಜುಮ್ಕಾ ಎನಮೆಲ್ ಜುಮ್ಕಾ ಸೇರಿದಂತೆ ನಾನಾ ಬಗೆಯ ಹೂಪ್ ಜುಮ್ಕಾಗಳು ಈಗಾಗಲೇ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ಟ್ರೆಂಡ್‌ನಲ್ಲಿವೆ. ಚಿಕ್ಕ ಹೂಪ್‌ಗಿಂತ ದೊಡ್ಡ ಸೈಝ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ ಎನ್ನುತ್ತಾರೆ ಮಾರಾಟಗಾರರು. ಅವರು ಹೇಳುವಂತೆ, ಹೂಪ್ ಜುಮ್ಕಾಗಳನ್ನು ಕಾಲೇಜು ಹುಡುಗಿಯರೇ ಅತಿ ಹೆಚ್ಚಾಗಿ ಖರೀದಿಸುತ್ತಾರಂತೆ.
ಹೇರ್‌ಸ್ಟೈಲ್ ನಂತರ ಧರಿಸಿ
ಇನ್ನು ಹೂಪ್ ಜುಮ್ಕಾ ಧರಿಸುವ ಮುನ್ನವೇ ಹೇರ್‌ಸ್ಟೈಲ್ ಮಾಡಿ ನಂತರ ಧರಿಸಬೇಕು. ಇಲ್ಲವಾದಲ್ಲಿ ಸಿಕ್ಕಿ ಹಾಕಿಕೊಳ್ಳಬಹುದು ಎಂದು ಟಿಪ್ಸ್ ನೀಡುತ್ತಾರೆ ಸ್ಟೈಲಿಸ್ಟ್ ರಿಂಕು.
ಹೂಪ್ ಜುಮ್ಕಾ ಡಿಸೈನ್ ಆಯ್ಕೆ ಹೀಗಿರಲಿ
- ಸ್ಟೇಟ್‌ಮೆಂಟ್ ಹೂಪ್ ಜುಮ್ಕಾಗಳು ದೊರೆಯುತ್ತವೆ.
- ನಿಮ್ಮ ಮುಖ ಚಿಕ್ಕದಿದ್ದಲ್ಲಿ, ಆದಷ್ಟೂ ಮಿಡಿಯಂ ಸೈಝ್ನದ್ದನ್ನು ಖರೀದಿಸಿ.
- ಮುಖ ಅಗಲವಾಗಿದ್ದಲ್ಲಿ ಉದ್ದನಾದ ಹೂಪ್ ಜುಮ್ಕಾ ಆಯ್ಕೆ ಮಾಡಿ.
- ಪರ್ಲ್ನ ಹೂಪ್ ಡಿಸೈನ್ನ ಜುಮ್ಕಾ ಗ್ರ್ಯಾಂಡಾಗಿ ಕಾಣಿಸುತ್ತದೆ.
- ಬ್ಲಾಕ್ ಹಾಗೂ ವೈಟ್ ಮೆಟಲ್ ಇಂಡೋ ವೆಸ್ಟರ್ನ್ ಡಿಸೈನರ್ವೇರ್ಗಳಿಗೆ ಮ್ಯಾಚ್ ಮಾಡಬಹುದು.
- ಆನ್ಲೈನ್ಗಳಲ್ಲಿ ಬ್ರಾಂಡೆಡ್ ಹೂಪ್ ಜುಮ್ಕಾಗಳನ್ನು ಕಾಣಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Saree Blouse Design: ಗ್ರ್ಯಾಂಡ್ ಸೀರೆ ಬ್ಲೌಸ್‌ಗೆ ಅತ್ಯಾಕರ್ಷಕ ಬಾಜುಬಂದ್ ಎಂಬ್ರಾಯ್ಡರಿ ಡಿಸೈನ್ ಹೇಗಿದೆ ನೋಡಿ!