ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮೂಗಿನ ಸೌಂದರ್ಯ ಹೆಚ್ಚಿಸುವ ಹಾರ್ಸ್ ಶೂ ಸೆಪ್ಟಮ್ ನೋಸ್ ರಿಂಗ್‌ಗಳು (Horseshoe Septum Ring Fashion) ಇದೀಗ ಟೀನೇಜ್ ಹುಡುಗಿಯರನ್ನು ಆವರಿಸಿಕೊಂಡಿವೆ. ಅಲ್ಟ್ರಾ ಮಾಡರ್ನ್ ಲುಕ್ ನೀಡುತ್ತಿರುವ ಇವು ಸದ್ಯ ಜಂಕ್ ಆಕ್ಸೆಸರೀಸ್ ಲಿಸ್ಟ್‌ನ ಟಾಪ್‌ನಲ್ಲಿವೆ. ಅದರಲ್ಲೂ ಮೂಗಿನ ಮಧ್ಯ ಭಾಗವನ್ನು ಇವು ವ್ಯಾಪಿಸಿಕೊಂಡಿದ್ದು, ನೋಡಲು ಡಿಫರೆಂಟ್ ಲುಕ್ ನೀಡುವುದರೊಂದಿಗೆ ಹೈ ಫ್ಯಾಷನ್ ಲುಕ್‌ಗೆ ಸಾಥ್ ನೀಡುತ್ತಿವೆ.
ಏನಿದು ಹಾರ್ಸ್ ಶೂ ಸೆಪ್ಟಮ್ ರಿಂಗ್ ಫ್ಯಾಷನ್
ಮೂಗಿನ ಹೊಳ್ಳೆಗೆ ಚುಚ್ಚಲಾದ ಸೆಪ್ಟಮ್ ನೋಸ್ ರಿಂಗ್‌ಗಳಿವು. ಈ ಮೊದಲು ಸೆಪ್ಟಮ್ ರಿಂಗ್ ಚುಚ್ಚುವುದು ಹೈ ಫ್ಯಾಷನ್‌ನಲ್ಲಿ ಬಂದಿತ್ತು. ಇದೀಗ ಈ ಸೆಪ್ಟಮ್ ನೋಸ್ ರಿಂಗ್‌ಗಳಲ್ಲಿ ಹಾರ್ಸ್ ಶೂ ರಿಂಗ್‌ಗಳು ಎಂಟ್ರಿ ನೀಡಿವೆ. ಇವು ನೋಡಲು ವಿಭಿನ್ನ ಲುಕ್ ನೀಡುವುದರೊಂದಿಗೆ ಜೆನ್ ಜಿ ಹುಡುಗಿಯರ ಆಕ್ಸೆಸರೀಸ್ ಅದರಲ್ಲೂ ಪಿಯರ್ಸಿಂಗ್ ಆಕ್ಸೆಸರೀಸ್ ಲಿಸ್ಟ್‌ಗೆ ಸೇರಿಕೊಂಡಿವೆ.
ಪ್ರಯೋಗಾತ್ಮಕ ಪಿಯರ್ಸಿಂಗ್ ಆಕ್ಸೆಸರೀಸ್‌ಗಳಿವು
“ಅಂಗೈ ಅಗಲದ ಹಾರ್ಸ್ ಶೂ ಸಿಂಬಲ್ ಇರುವಂತಹ ಮೆಟಲ್ ಪ್ರಾಡಕ್ಟನ್ನು ಮನೆಯ ಬಾಗಿಲಿಗೆ ನೇತುಹಾಕುವುದನ್ನು ಬಹಳಷ್ಟು ಕಡೆ ನೋಡಬಹುದು. ಇದು ಬಹಳಷ್ಟು ಕಡೆಯ ಟ್ರೆಡಿಷನಲ್ ರಿವಾಜಿನಲ್ಲಿ ಕಾಣಬಹುದು. ಇದೀಗ ಹುಡುಗಿಯರ ಮೂಗಿನ ಹೊಳ್ಳೆಗೆ ಸಿಕ್ಕಿಸುವಂತಹ ಫ್ಯಾಷನ್‌ನಲ್ಲಿ ಈ ಡಿಸೈನ್‌ನ ಮಿನಿ ಮೆಟಲ್ ನೋಸ್ ರಿಂಗ್ ಸೇರಿರುವುದು ಅಚ್ಚರಿ ಮೂಡಿಸುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಇದು ಟ್ರೆಡಿಷನಲ್ ಆಕ್ಸೆಸರೀಸ್ ಅಲ್ಲವೇ ಅಲ್ಲ, ನಮ್ಮ ರಾಷ್ಟ್ರದಲ್ಲಿ ಮೊದಲಿನಿಂದಲೂ ಮೂಗಿಗೆ ರಿಂಗ್ ಹಾಗೂ ಮೂಗಿನ ಬೊಟ್ಟು ಧರಿಸುವುದು ಟ್ರೆಡಿಷನಲ್ ಆಕ್ಸೆಸರೀಸ್‌ನಲ್ಲಿವೆ. ಹೆಚ್ಚೆಂದರೇ ಅಗಲವಾದ ಹಾಗೂ ಬಂಗಾರೇತರ ಮೆಟಲ್‌ಗಳನ್ನು ಧರಿಸುವ ಫ್ಯಾಷನ್ ಇದೀಗ ಇಂಡೋ-ವೆಸ್ಟರ್ನ್ ಫ್ಯಾಷನ್‌ನಲ್ಲಿ ಎಂಟ್ರಿ ನೀಡಿವೆ. ಇದಕ್ಕೆಲ್ಲಾ ತದ್ವಿರುದ್ಧವೆಂಬಂತೆ, ನಮ್ಮ ರಿವಾಜಿನಲ್ಲಿ ಇಲ್ಲದ, ಹಾರ್ಸ್ ಶೂ ಸೆಪ್ಟಮ್ ರಿಂಗ್‌ಗಳು ಪ್ರಯೋಗಾತ್ಮಕ ನೋಸ್ ರಿಂಗ್ ಫ್ಯಾಷನ್‌ಗೆ ಲಗ್ಗೆ ಇಟ್ಟಿವೆ. ಜೆನ್ ಜಿ ಹುಡುಗಿಯರು ಅದರಲ್ಲೂ ಕೊಂಚ ಹೈ ಸ್ಟ್ರೀಟ್ ಫ್ಯಾಷನ್ ಆಕ್ಸೆಸರೀಸ್ ಇಷ್ಟಪಡುವಂತಹ ಹುಡುಗಿಯರನ್ನು ಸೆಳೆದಿವೆ” ಎಂದು ಈ ಫ್ಯಾಷನ್ ಬಗ್ಗೆ ತಿಳಿಸುವ ಸ್ಟೈಲಿಸ್ಟ್ ಧನ್ಯಾ ಅವರ ಪ್ರಕಾರ, ಇವು ಸದ್ಯ ಪಿಯರ್ಸಿಂಗ್ ಪ್ರಿಯರ ಆಕ್ಸೆಸರೀಸ್‌ಗಳಾಗಿವೆ ಎನ್ನುತ್ತಾರೆ.
ಟ್ರೆಂಡಿಯಾಗಿರುವ ಹಾರ್ಸ್ ಶೂ ಸೆಪ್ಟಮ್ ರಿಂಗ್
ಇದೀಗ ಹಾರ್ಸ್ ಶೂ ಸೆಪ್ಟಮ್ ರಿಂಗ್‌ಗಳಲ್ಲಿ ಮ್ಯಾಗ್ನೆಟಿಕ್ ರಿಂಗ್‌ಗಳು ಹೆಚ್ಚು ಟ್ರೆಂಡ್‌ನಲ್ಲಿವೆ. ಖುಷಿಯ ವಿಚಾರವೆಂದರೇ, ಇವನ್ನು ಮೂಗಿನ ಹೊಳ್ಳೆ ಚುಚ್ಚದೆಯೇ ಧರಿಸಬಹುದು. ಇವು ಪ್ಲಾಟಿನಂ ಕೋಟೆಡ್‌ನಲ್ಲಿ ದೊರೆಯುತ್ತವೆ. ಇನ್ನು ನಾರ್ಮಲ್ ಡಿಸೈನ್‌ನವನ್ನು ಚುಚ್ಚಿಸಿ ಧರಿಸಬೇಕಾಗುತ್ತದೆ. ಕೆಲವರು ಇವನ್ನು ಗೋಲ್ಡ್ ಹಾಗೂ ಸಿಲ್ವರ್‌ನಲ್ಲೂ ಧರಿಸುತ್ತಾರೆ. ಡೈಮಂಡ್‌ನವು ಕೂಡ ದೊರೆಯುತ್ತವೆ. ಇನ್ನು ಬ್ಲ್ಯಾಕ್ ಮೆಟಲ್ ಹಾಗೂ ವೈಟ್ ಮೆಟಲ್‌ನವು ಹೆಚ್ಚು ಚಾಲ್ತಿಯಲ್ಲಿವೆ.
ಎಲ್ಲೆಲ್ಲಿ ಲಭ್ಯ ? ಯಾವುದೆಲ್ಲಾ ಬೆಸ್ಟ್ ?
- ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಆಕ್ಸೆಸರೀಸ್ ಶಾಪ್ಗಳಲ್ಲಿ ನಾನಾ ಡಿಸೈನ್ನವು ಲಭ್ಯ.
- ಆನ್ಲೈನ್ ಶಾಪ್ಗಳಲ್ಲಿ ಬೇಕಾದ ಡಿಸೈನ್‌ನವನ್ನು ಖರೀದಿಸಬಹುದು.
- ಆದಷ್ಟೂ ಫಿನಿಶಿಂಗ್ ಇರುವಂತದ್ದನ್ನು ಕೊಳ್ಳಬೇಕು.
- ಗುಣಮಟ್ಟದ ಬ್ರಾಂಡೆಡ್ ಪ್ರಾಡಕ್ಟ್ ಖರೀದಿಸಿ.
- ನೋಸ್ ಪಿಯರ್ಸಿಂಗ್ ಮಾಡಿಸುವವರ ಬಳಿಯೂ ದೊರೆಯುತ್ತವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಬದಲಾಯ್ತು ಜೆನ್ ಜಿ ಹುಡುಗರ ಸಮ್ಮರ್ ಫ್ಯಾಷನ್ ಸ್ಟೇಟ್‌ಮೆಂಟ್ಸ್