ಡಾ ಮಂಗೇಶ್ ಪಿ ಕಾಮತ್, ಹೆಚ್ಚುವರಿ ನಿರ್ದೇಶಕರು, ವೈದ್ಯಕೀಯ ಆಂಕೊಲಾಜಿ, ಫೋರ್ಟಿಸ್ ಆಸ್ಪತ್ರೆ, ಕನ್ನಿಂಗ್ಹ್ಯಾಮ್ ರಸ್ತೆ, ಬೆಂಗಳೂರು.
ಪ್ಲಾಸ್ಟಿಕ್ ಬಳಕೆ ಮನುಷ್ಯ ಹಾಗೂ ಪರಿಸರ ಇಬ್ಬರಿಗೂ ಮಾರಕವೆಂದು ತಿಳಿದಿದ್ದರು, ಮನುಷ್ಯನ ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬೆರೆತು ಹೋಗಿದೆ. ಎಷ್ಟೇ ಜಾಗೃತಿ ಮೂಡಿಸುತ್ತಿದ್ದರು ಸಹ ಪ್ಲಾಸ್ಟಿಕ್‌ನ ಬಳಕೆ ಕಡಿಮೆಯಾಗಿಲ್ಲ. ಪ್ಲಾಸ್ಟಿಕ್‌ನ ಬಳಕೆ ಕೇವಲ ಪರಿಸರವಷ್ಟೇ ಅಲ್ಲ, ಮನುಷ್ಯನಿಗೆ ಕ್ಯಾನ್ಸರ್ ಬರುವ ಸಾಧ್ಯತೆಯೂ ಹೆಚ್ಚು ಎಂದು ವೈದ್ಯಕೀಯ ಲೋಕ ಹೇಳುತ್ತಿದೆ. ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯದ ಮೇಲಾಗುವ ಅನಾನುಕೂಲದ ಬಗ್ಗೆ ವೈದ್ಯರು (How does plastic affect cancer) ವಿವರಿಸಿದ್ದಾರೆ.
ಪ್ಲಾಸ್ಟಿಕ್‌ನಿಂದಾಗುವ ಅಪಾಯವೇನು?
ಅನೇಕ ಪ್ಲಾಸ್ಟಿಕ್‌ಗಳು “ಬಿಸ್ಫೆನಾಲ್ ಎ” (BPA) ಮತ್ತು “ಥಾಲೇಟ್” ಎಂಬ ರಾಸಾಯನಿಕಗಳನ್ನು ಹೊಂದಿರುತ್ತವೆ. ಇವು ಅಂತಃಸ್ತ್ರಾವ ಗ್ರಂಥಿಗಳ ಕಾರ್ಯಕ್ಷಮತೆಯ ಅಡಿಯಲ್ಲಿ ಬರುತ್ತವೆ, ಅಂದರೆ ಈ ರಾಸಾಯನಿಕವು ನಮ್ಮ ದೇಹದಲ್ಲಿ ಹಾರ್ಮೋನುಗಳೊಂದಿಗೆ ಸುಲಭವಾಗಿ ಸೇರಲಿದೆ. ಇದರಿಂದ ವಿವಿಧ ಜೈವಿಕ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರಲಿದೆ. ಸಂಶೋಧನೆಯ ಪ್ರಕಾರ ಈ ರಾಸಾಯನಿಕಗಳಿಂದ ಕೆಲವು ಮಾರಕ ಕ್ಯಾನ್ಸರ್‌ಗಳು ಬರುವ ಸಾಧ್ಯತೆ ಇದ್ದು, ವಿಶೇಷವಾಗಿ ಸ್ತನ, ಪ್ರಾಸ್ಟೇಟ್ ಮತ್ತು ಅಂಡಾಶಯದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಅಷ್ಟೇ ಅಲ್ಲ, ಮುಖ್ಯವಾಗಿ ಪುರುಷ ಹಾಗೂ ಮಹಿಳೆಯರಲ್ಲಿ ಬಂಜೆತನ ಹೆಚ್ಚಿಸುತ್ತಿದೆ.
ಪ್ಲಾಸ್ಟಿಕ್ ಹೇಗೆ ಮನುಷ್ಯನ ದೇಹ ಸೇರಲಿದೆ?
BPA ಮತ್ತು ಥಾಲೇಟ್ ರಾಸಾಯನಿಕಗಳು ಬಹುತೇಕ ಕಡಿಮೆ ಕ್ವಾಲಿಟಿ ಇರುವ ಏಕಬಳಕೆಯ ಪ್ಲಾಸ್ಟಿಕ್ ಕಂಟೇನರ್‌ಗಳು, ಪ್ಲಾಸ್ಟಿಕ್ ಕವರ್‌ಗಳಲ್ಲಿ ಇರಲಿದೆ. ಇವುಗಳಲ್ಲಿ ಬಿಸಿ ಆಹಾರವನ್ನು ಪ್ಯಾಕ್ ಮಾಡಿಸಿಕೊಳ್ಳುವುದುರಿಂದ ಈ ರಾಸಾಯನಿಕವು ಸುಲಭವಾಗಿ ಕರಗಿ ಆಹಾರದೊಂದಿಗೆ ಬೆರೆತುಕೊಳ್ಳಲಿದೆ. ಇದನ್ನು ಸೇವಿಸುವುದರಿಂದ ಮನುಷ್ಯನ ಈಸ್ಟ್ರೊಜೆನ್ ಹಾರ್ಮೋನ್‌ಗಳೊಂದಿಗೆ ದೇಹದಲ್ಲಿ ನಿಯಂತ್ರಿತ ಜೀವಕೋಶದ ಬೆಳವಣಿಗೆಗೆ ಕಾರಣವಾಗಬಹುದು, ಇದು ಕ್ಯಾನ್ಸರ್ ಅಪಾಯವನ್ನು ಸುಲಭವಾಗಿ ಹೆಚ್ಚಿಸಲಿದೆ.
ಇದನ್ನೂ ಓದಿ: Health Tips Kannada: ಹೊಟ್ಟೆಯುಬ್ಬರಕ್ಕೆ ಇವೆ ಸರಳ ಮನೆಮದ್ದುಗಳು
ಮುನ್ನೆಚ್ಚರಿಕೆಗಳೇನು?
ಪ್ಲಾಸ್ಲಿಕ್ ಬಳಕೆಯಿಂದ ಕ್ಯಾನ್ಸರ್‌ನ ಆಹ್ವಾನ ಮಾಡಿಕೊಳ್ಳುವ ಬದಲು ಅದರ ಬಳಕೆಯ ಮೇಲೆಯೇ ನಿಷೇಧ ಹೇರುವುದು ಉತ್ತಮ.
- ಪ್ಲಾಸ್ಟಿಕ್ ಬಳಕೆಯನ್ನು ಮಿತಿಗೊಳಿಸಿ: ಆಹಾರ ಶೇಖರಣೆಗಾಗಿ ಗಾಜು, ಸ್ಟೇನ್ಲೆಸ್ ಸ್ಟೀಲ್ ಅಥವಾ ಸೆರಾಮಿಕ್ ಪಾತ್ರೆಗಳನ್ನು ಆರಿಸಿಕೊಳ್ಳಿ.
- ಲೇಬಲ್ಗಳನ್ನು ಪರಿಶೀಲಿಸಿ: ಸಾಧ್ಯವಾದಾಗಲೆಲ್ಲಾ BPA-ಮುಕ್ತ ಮತ್ತು ಥಾಲೇಟ್-ಮುಕ್ತ ಪ್ಲಾಸ್ಟಿಕ್ಗಳನ್ನು ನೋಡಿ ಖರೀದಿಸಿ
- ಬಿಸಿ ಮಾಡುವಾಗ ಎಚ್ಚರಿಕೆ: ಮೈಕ್ರೋವೇವ್ನಲ್ಲಿ ಪ್ಲಾಸ್ಟಿಕ್ ಪಾತ್ರೆಗಳನ್ನು ಬಿಸಿ ಮಾಡುವುದನ್ನು ತಪ್ಪಿಸಿ, ಏಕೆಂದರೆ ಇದು ರಾಸಾಯನಿಕ ಸೋರಿಕೆಯನ್ನು ವೇಗಗೊಳಿಸುತ್ತದೆ.
- ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ಮಾಡಿ: ಸಂಸ್ಕರಿಸಿದ ಆಹಾರಗಳು ಹೆಚ್ಚಾಗಿ ಪ್ಲಾಸ್ಟಿಕ್ ಪ್ಯಾಕೇಜಿಂಗ್ನಲ್ಲಿ ಬರುತ್ತವೆ. ಸಾಧ್ಯವಾದಾಗಲೆಲ್ಲಾ ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ತಿನ್ನಿರಿ.