-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಊಹೆಗೂ ಮೀರಿದ ಡಿಸೈನ್ಸ್ (ICW 2024) ಹೊಂದಿದ ನಾನ್ – ವೇರಬಲ್ ಫ್ಯಾಷನ್‌ವೇರ್ಸ್‌ಗಳು ಇಂಡಿಯಾ ಕೌಚರ್ ವೀಕ್‌ನ ಐದನೇ ದಿನದಂದು ಪ್ರದರ್ಶನಗೊಂಡು ಎಲ್ಲರಲ್ಲೂ ಕುತೂಹಲ ಮೂಡಿಸಿದವು. ಹೌದು, ರ‍್ಯಾಂಪ್ ಮೇಲೆ ಮಾಡೆಲ್‌ಗಳು ಧರಿಸಿರುವುದು ಗೌನಾ ಅಥವಾ ಪಂಜರನಾ? ತ್ರಿಡಿ ಡ್ರೆಸ್ಸಾ ಅಥವಾ ವೈರ್‌ನಿಂದ ಸುತ್ತುವರಿದ ಉಡುಪಾ? ಆಕ್ಸೆಸರಿಸಿನ ಮುಂದುವರಿದ ಭಾಗವೇ ಇಲ್ಲವೇ ಇದೂ ಒಂದು ಡಿಸೈನರ್‌ವೇರ್! ಎಂದು ರ‍್ಯಾಂಪ್ ಮೇಲೆ ವಾಕ್ ಮಾಡಿದ ಮಾಡೆಲ್‌ಗಳು ಧರಿಸಿದ ಒಂದೊಂದು ಡಿಸೈನರ್‌ವೇರ್‌ಗಳು, ನೆರೆದಿದ್ದವರಲ್ಲಿ ಪ್ರಶ್ನೆ ಮೂಡಿಸಿದವು.
ಅಂದಹಾಗೆ, ಕಳೆದ ವಾರದಿಂದಲೂ ನಡೆಯುತ್ತಿರುವ ಈ ಇಂಡಿಯನ್ ಕೌಚರ್ ವೀಕ್‌ನಲ್ಲಿ, ಈ ಬಾರಿ ನಾನ್- ವೇರಬಲ್ ಫ್ಯಾಷನ್‌ವೇರ್‌ಗಳು ಹೆಚ್ಚು ಹೈಲೈಟಾದವು. ಇದೇ ದಿನ ಇವುಗಳೊಂದಿಗೆ ಇನ್ನಿತರೇ ಡಿಸೈನರ್‌ವೇರ್‌ಗಳು ಪ್ರದರ್ಶನಗೊಂಡವಾದರೂ ಅಷ್ಟಾಗಿ ಯಾರನ್ನೂ ಸೆಳೆಯಲಿಲ್ಲ!
ಚಿತ್ರ-ವಿಚಿತ್ರ ನಾನ್-ವೆರಬಲ್ ಡಿಸೈನರ್‌ವೇರ್ಸ್
ಸಮಯ ಹಾಗೂ ಯೂನಿವರ್ಸ್‌ಗೆ ಕನೆಕ್ಷನ್ ನೀಡುವಂತಹ ಥೀಮ್ ಡಿಸೈನ್ ಮಾಡಿದ ಡಿಸೈನರ್ ಅಮಿತ್ ಅಗರ್‌ವಾಲ್ ಅವರ ಕ್ರಿಯೆಟಿವಿಟಿಗೆ ಬಗೆಬಗೆಯ ಅವರ ನಾನ್ -ವೇರಬಲ್ ಡಿಸೈನರ್‌ವೇರ್‌ಗಳು ಸಾಕ್ಷಿಯಾದವು. ಕೆಲವಂತೂ ಮಂತ್ರಮುಗ್ಧವಾಗಿಸುವಂತಹ ಡಿಸೈನ್ಸ್ ಹೊಂದಿದ್ದವು. ಅವುಗಳಲ್ಲಿ, ಥ್ರೆಡ್‌ನಿಂದಲೇ ಇಡೀ ಕಾನ್ಸೆಪ್ಟ್‌ಗೆ ಪೂರಕವಾಗುವಂತಹ ಕಾಸ್ಮಿಕ್ ಡಾನ್ಸ್‌ನಂಥ ಚಿತ್ರ-ವಿಚಿತ್ರ ಡಿಸೈನ್‌ಗಳು ಎಲ್ಲರನ್ನೂ ಕೆಲಕಾಲ ಮೋಡಿ ಮಾಡಿದವು.
ನಾನ್ ವೇರಬಲ್ ಫ್ಯಾಷನ್‌ಗೆ ಭಾರತದಲ್ಲಿ ಬೆಲೆಯಿಲ್ಲ!
ಭಾರತದಲ್ಲಿ ನಾನ್-ವೇರಬಲ್ ಡಿಸೈನರ್‌ವೇರ್‌ಗಳು ಪ್ರದರ್ಶನಗೊಳ್ಳುವುದು ತೀರಾ ಕಡಿಮೆ. ಕಾರಣ, ಅವನ್ನು ಸಾಮಾನ್ಯ ಜೀವನದಲ್ಲಿ ಧರಿಸಲು ಸಾಧ್ಯವಿಲ್ಲ! ಎಂಬುದು ಒಂದೆಡೆಯಾದರೇ, ಮಾರ್ಕೆಟಿಂಗ್ ಕ್ಷೇತ್ರಕ್ಕೂ ಲಾಭವಿಲ್ಲ! ಡಿಸೈನರ್‌ಗಳು ಸುಖಾಸುಮ್ಮನೆ ಖರ್ಚುಮಾಡುವ ಡಿಸೈನರ್‌ವೇರ್‌ಗಳಿವು ಎಂಬುದು ಸಾಕಷ್ಟು ಫ್ಯಾಷನ್ ಪ್ರಿಯರ ಅಭಿಪ್ರಾಯವಾಗಿದೆ. ಆದರೆ, ಇವು ಕೂಡ ಡಿಸೈನರ್‌ಗಳ ಕ್ರಿಯೇಟಿವಿಟಿಯನ್ನು ಪ್ರದರ್ಶಿಸಲು ಸಹಕರಿಸುತ್ತವೆ ಎನ್ನುತ್ತಾರೆ ಫ್ಯಾಷನ್ ವಿಶ್ಲೇಷಕರು.
ಇದನ್ನೂ ಓದಿ: ICW 2024: ಮುಂಬರುವ ವೆಡ್ಡಿಂಗ್ ಸೀಸನ್ ಮೆನ್ಸ್ ವೇರ್ ಅನಾವರಣಗೊಳಿಸಿದ ಇಂಡಿಯಾ ಕೌಚರ್ ವೀಕ್ 2024
(ಲೇಖಕಿ ಫ್ಯಾಷನ್ ಪತ್ರಕರ್ತೆ)