ICW 2024: ರ‍್ಯಾಂಪ್‌ ಮೇಲೆ ಮಾಡೆಲ್‌ಗಳು ಧರಿಸಿರುವುದು ಗೌನಾ ಅಥವಾ ಪಂಜರ?! - Vistara News

ಫ್ಯಾಷನ್

ICW 2024: ರ‍್ಯಾಂಪ್‌ ಮೇಲೆ ಮಾಡೆಲ್‌ಗಳು ಧರಿಸಿರುವುದು ಗೌನಾ ಅಥವಾ ಪಂಜರ?!

ICW 2024: ಇಂಡಿಯನ್‌ ಕೌಚರ್‌ ವೀಕ್‌ನ ಐದನೆ ದಿನದಂದು ಎಕ್ಸ್‌ಕ್ಲೂಸೀವ್‌ ಡಿಸೈನರ್‌ವೇರ್‌ಗಳ ನಡುವೆ ಚಿತ್ರ-ವಿಚಿತ್ರವಾದ ಧರಿಸಲಾಗದಂತಹ ಡಿಸೈನರ್‌ವೇರ್‌ಗಳು ಅನಾವರಣಗೊಂಡು ಎಲ್ಲರಲ್ಲೂ ಕುತೂಹಲ ಮೂಡಿಸಿದವು. ಹಾಗಾದಲ್ಲಿ, ಹೇಗಿತ್ತು ಈ ಡಿಸೈನರ್‌ವೇರ್‌ಗಳ ಡಿಸೈನ್ಸ್? ಇದರ ಸೃಷ್ಟಿಕರ್ತರು ಯಾರು? ಎಂಬುದರ ಬಗ್ಗೆ ಇಲ್ಲಿದೆ ವರದಿ.

VISTARANEWS.COM


on

ICW 2024
ಚಿತ್ರಗಳು: ಇಂಡಿಯಾ ಕೌಚರ್‌ ವೀಕ್‌ 2024, ಚಿತ್ರಕೃಪೆ: FDCI Official
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಊಹೆಗೂ ಮೀರಿದ ಡಿಸೈನ್ಸ್ (ICW 2024) ಹೊಂದಿದ ನಾನ್‌ – ವೇರಬಲ್‌ ಫ್ಯಾಷನ್‌ವೇರ್ಸ್‌ಗಳು ಇಂಡಿಯಾ ಕೌಚರ್‌ ವೀಕ್‌ನ ಐದನೇ ದಿನದಂದು ಪ್ರದರ್ಶನಗೊಂಡು ಎಲ್ಲರಲ್ಲೂ ಕುತೂಹಲ ಮೂಡಿಸಿದವು. ಹೌದು, ರ‍್ಯಾಂಪ್‌ ಮೇಲೆ ಮಾಡೆಲ್‌ಗಳು ಧರಿಸಿರುವುದು ಗೌನಾ ಅಥವಾ ಪಂಜರನಾ? ತ್ರಿಡಿ ಡ್ರೆಸ್ಸಾ ಅಥವಾ ವೈರ್‌ನಿಂದ ಸುತ್ತುವರಿದ ಉಡುಪಾ? ಆಕ್ಸೆಸರಿಸಿನ ಮುಂದುವರಿದ ಭಾಗವೇ ಇಲ್ಲವೇ ಇದೂ ಒಂದು ಡಿಸೈನರ್‌ವೇರ್‌! ಎಂದು ರ‍್ಯಾಂಪ್‌ ಮೇಲೆ ವಾಕ್‌ ಮಾಡಿದ ಮಾಡೆಲ್‌ಗಳು ಧರಿಸಿದ ಒಂದೊಂದು ಡಿಸೈನರ್‌ವೇರ್‌ಗಳು, ನೆರೆದಿದ್ದವರಲ್ಲಿ ಪ್ರಶ್ನೆ ಮೂಡಿಸಿದವು.
ಅಂದಹಾಗೆ, ಕಳೆದ ವಾರದಿಂದಲೂ ನಡೆಯುತ್ತಿರುವ ಈ ಇಂಡಿಯನ್‌ ಕೌಚರ್‌ ವೀಕ್‌ನಲ್ಲಿ, ಈ ಬಾರಿ ನಾನ್‌- ವೇರಬಲ್‌ ಫ್ಯಾಷನ್‌ವೇರ್‌ಗಳು ಹೆಚ್ಚು ಹೈಲೈಟಾದವು. ಇದೇ ದಿನ ಇವುಗಳೊಂದಿಗೆ ಇನ್ನಿತರೇ ಡಿಸೈನರ್‌ವೇರ್‌ಗಳು ಪ್ರದರ್ಶನಗೊಂಡವಾದರೂ ಅಷ್ಟಾಗಿ ಯಾರನ್ನೂ ಸೆಳೆಯಲಿಲ್ಲ!

ಚಿತ್ರ-ವಿಚಿತ್ರ ನಾನ್‌-ವೆರಬಲ್‌ ಡಿಸೈನರ್‌ವೇರ್ಸ್

ಸಮಯ ಹಾಗೂ ಯೂನಿವರ್ಸ್‌ಗೆ ಕನೆಕ್ಷನ್‌ ನೀಡುವಂತಹ ಥೀಮ್‌ ಡಿಸೈನ್‌ ಮಾಡಿದ ಡಿಸೈನರ್‌ ಅಮಿತ್‌ ಅಗರ್‌ವಾಲ್‌ ಅವರ ಕ್ರಿಯೆಟಿವಿಟಿಗೆ ಬಗೆಬಗೆಯ ಅವರ ನಾನ್‌ -ವೇರಬಲ್‌ ಡಿಸೈನರ್‌ವೇರ್‌ಗಳು ಸಾಕ್ಷಿಯಾದವು. ಕೆಲವಂತೂ ಮಂತ್ರಮುಗ್ಧವಾಗಿಸುವಂತಹ ಡಿಸೈನ್ಸ್ ಹೊಂದಿದ್ದವು. ಅವುಗಳಲ್ಲಿ, ಥ್ರೆಡ್‌ನಿಂದಲೇ ಇಡೀ ಕಾನ್ಸೆಪ್ಟ್‌ಗೆ ಪೂರಕವಾಗುವಂತಹ ಕಾಸ್ಮಿಕ್‌ ಡಾನ್ಸ್‌ನಂಥ ಚಿತ್ರ-ವಿಚಿತ್ರ ಡಿಸೈನ್‌ಗಳು ಎಲ್ಲರನ್ನೂ ಕೆಲಕಾಲ ಮೋಡಿ ಮಾಡಿದವು.

ನಾನ್‌ ವೇರಬಲ್‌ ಫ್ಯಾಷನ್‌ಗೆ ಭಾರತದಲ್ಲಿ ಬೆಲೆಯಿಲ್ಲ!

ಭಾರತದಲ್ಲಿ ನಾನ್‌-ವೇರಬಲ್‌ ಡಿಸೈನರ್‌ವೇರ್‌ಗಳು ಪ್ರದರ್ಶನಗೊಳ್ಳುವುದು ತೀರಾ ಕಡಿಮೆ. ಕಾರಣ, ಅವನ್ನು ಸಾಮಾನ್ಯ ಜೀವನದಲ್ಲಿ ಧರಿಸಲು ಸಾಧ್ಯವಿಲ್ಲ! ಎಂಬುದು ಒಂದೆಡೆಯಾದರೇ, ಮಾರ್ಕೆಟಿಂಗ್‌ ಕ್ಷೇತ್ರಕ್ಕೂ ಲಾಭವಿಲ್ಲ! ಡಿಸೈನರ್‌ಗಳು ಸುಖಾಸುಮ್ಮನೆ ಖರ್ಚುಮಾಡುವ ಡಿಸೈನರ್‌ವೇರ್‌ಗಳಿವು ಎಂಬುದು ಸಾಕಷ್ಟು ಫ್ಯಾಷನ್‌ ಪ್ರಿಯರ ಅಭಿಪ್ರಾಯವಾಗಿದೆ. ಆದರೆ, ಇವು ಕೂಡ ಡಿಸೈನರ್‌ಗಳ ಕ್ರಿಯೇಟಿವಿಟಿಯನ್ನು ಪ್ರದರ್ಶಿಸಲು ಸಹಕರಿಸುತ್ತವೆ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರು.

ಇದನ್ನೂ ಓದಿ: ICW 2024: ಮುಂಬರುವ ವೆಡ್ಡಿಂಗ್‌ ಸೀಸನ್‌ ಮೆನ್ಸ್ ವೇರ್‌ ಅನಾವರಣಗೊಳಿಸಿದ ಇಂಡಿಯಾ ಕೌಚರ್‌ ವೀಕ್‌ 2024

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Star Shirt Saree Fashion: ಏನಿದು ಶರ್ಟ್‌ ಸೀರೆ? ಹೊಸ ಟ್ರೆಂಡ್‌ ಬಗ್ಗೆ ನಟಿ ತಾರಾ ಏನಂತಾರೆ?

Star Shirt Saree Fashion: ಮಾನ್ಸೂನ್‌ ಸೀಸನ್‌ ಇಂಡೋ-ವೆಸ್ಟರ್ನ್‌ ಸೀರೆ ಲುಕ್‌ ಟ್ರೆಂಡ್‌ನಲ್ಲಿರುವ ಡಿಸೈನರ್‌ ಶರ್ಟ್ ಸೀರೆಯಲ್ಲಿ ಹಿರಿಯ ನಟಿ ತಾರಾ, ಮಾಡೆಲ್‌ನಂತೆ ಕಾಣಿಸಿಕೊಂಡಿದ್ದಾರೆ. ಹಾಗಾದಲ್ಲಿ, ಏನಿದು ಶರ್ಟ್ ಸೀರೆ? ಇದನ್ನು ಸೃಷ್ಟಿಸಿದ ಡಿಸೈನರ್‌ ಯಾರು? ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್ .

VISTARANEWS.COM


on

Star Shirt Saree Fashion
ಚಿತ್ರಗಳು: ತಾರಾ ಅನುರಾಧ, ಹಿರಿಯ ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹಸಿರು ಡಿಸೈನರ್‌ ಶರ್ಟ್ ಸೀರೆಯಲ್ಲಿ (Star Shirt Saree Fashion) ಹಿರಿಯ ನಟಿ ತಾರಾ ಅವರು ಮಾಡೆಲ್‌ನಂತೆ ಕಾಣಿಸಿಕೊಂಡಿದ್ದಾರೆ. ಇದೀಗ ಪ್ರಸಾರವಾಗುತ್ತಿರುವ ಕನ್ನಡದ ರಿಯಾಲಿಟಿ ಶೋವೊಂದರಲ್ಲಿ ಸದಾ ಒಂದಲ್ಲ ಒಂದು ಔಟ್‌ಫಿಟ್‌ನಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಿರುವ ನಟಿ ತಾರಾ, ಇದೀಗ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ ಅವರ ಡಿಸೈನರ್‌ ಹಸಿರು ಶಿಫಾನ್‌ ಎಂಬ್ರಾಯ್ಡರಿ ಶರ್ಟ್ ಸೀರೆಯಲ್ಲಿ ಮಾಡೆಲ್‌ನಂತೆ ಕಾಣಿಸಿಕೊಂಡಿದ್ದಾರೆ. ಇವರ ಈ ಸೀರೆಯ ಲುಕ್‌ ಫ್ಯಾಷನ್‌ ಪ್ರಿಯರಿಗೆ ಇಷ್ಟವಾಗಿದೆ. ಅಲ್ಲದೇ, ಮಾನ್ಸೂನ್‌ಗೆ ಹೇಳಿಮಾಡಿಸಿದಂತಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Star Shirt Saree Fashion

ಏನಿದು ಶರ್ಟ್ ಸೀರೆ

ಶರ್ಟ್ ಸೀರೆಗಳು ಅತಿ ಹೆಚ್ಚಾಗಿ ಸಮ್ಮರ್‌ ಸೀಸನ್‌ ಹೊರತುಪಡಿಸಿ ಮಳೆಗಾಲ ಅಥವಾ ಚಳಿಗಾಲದಲ್ಲಿ ಟ್ರೆಂಡ್‌ಗೆ ಎಂಟ್ರಿ ನೀಡುತ್ತವೆ. ಇವು ಸೀರೆಗೆ ಲೇಯರ್‌ ಲುಕ್‌ ನೀಡುತ್ತವೆ. ಕೆಲವು ವರ್ಷಗಳ ಹಿಂದೆ ಜಾಕ್ವೆಲೀನ್‌ ಉಟ್ಟಿದ್ದ ಜಾಕೆಟ್‌ ಸೀರೆ ಯಾವ ಮಟ್ಟಿಗೆ ಫೇಮಸ್‌ ಆಗಿತ್ತು ಎಂದರೇ, ಇಂದಿಗೂ ಆ ಸೀರೆಗಳು ಹೊಸ ಹೊಸ ರೂಪದಲ್ಲಿ ಇಣುಕುತ್ತಲೇ ಇವೆ. ಇದೀಗ ಈ ಲಿಸ್ಟ್‌ಗೆ ಈ ಶರ್ಟ್ ಸೀರೆಗಳು ಸೇರಿವೆ. ನೋಡಲು ಶರ್ಟ್‌ನಂತಹ ಬ್ಲೌಸ್‌ಗಳು, ಈ ಸೀರೆಗೆ ಕಂಪ್ಲೀಟ್‌ ಇಂಡೋ-ವೆಸ್ಟರ್ನ್‌ ಲುಕ್‌ ಕಲ್ಪಿಸುತ್ತವೆ. ಇನ್ನು, ಈ ಕಾಲರ್ ಶರ್ಟ್ ಬ್ಲೌಸ್‌ಗೆ ಮಾಡಿದ ಎಂಬ್ರಾಯ್ಡರಿ ಸಿಂಗಾರ ಎಥ್ನಿಕ್‌ ಟಚ್‌ ನೀಡಿದೆ. ಆಯಾ ಸೀರೆಯ ಫ್ಯಾಬ್ರಿಕ್‌ ಹಾಗೂ ಡಿಸೈನ್‌ಗೆ ತಕ್ಕಂತೆ ಶರ್ಟ್ ಸೀರೆಗಳ ಔಟ್‌ಲುಕ್‌ ಬದಲಾಗುತ್ತವೆ. ಡಿಸೈನ್‌ ಮಾತ್ರ ಹೀಗೆಯೇ ಇರುತ್ತದೆ ಎನ್ನುತ್ತಾರೆ ಸೆಲೆಬ್ರೆಟಿ ಫ್ಯಾಷನ್‌ ಡಿಸೈನರ್‌ ಲಕ್ಷ್ಮಿ ಕೃಷ್ಣ.

ಡಿಸೈನರ್‌ ಲಕ್ಷ್ಮಿ ಕೃಷ್ಣ ಡಿಸೈನರ್‌ ಸೀರೆಯಿದು

ಬಾಲಿವುಡ್‌ನ ಸನ್ನಿ ಲಿಯೋನ್‌ರಿಂದ ಹಿಡಿದು ಸ್ಯಾಂಡಲ್‌ವುಡ್‌ ನಟ-ನಟಿಯರಿಗೂ ಡಿಸೈನ್‌ ಮಾಡಿರುವ ಡಿಸೈನರ್‌ ಲಕ್ಷ್ಮಿ ಕೃಷ್ಣ ಅವರು ಈ ಶರ್ಟ್ ಸೀರೆ ಡಿಸೈನ್ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ಯೂರ್‌ ಶಿಫಾನ್‌ನ ಈ ಡೈಯ್ಡ್ ಸೀರೆಗೆ ಶರ್ಟ್ ಬ್ಲೌಸ್‌ ಮ್ಯಾಚ್‌ ಮಾಡಿ, ಆಕರ್ಷಕ ಲುಕ್‌ ನೀಡಿದ್ದಾರೆ.

Designer laxmi krishna & actress Tara

ಹಿರಿಯ ನಟಿ ತಾರಾ ಸೀರೆ ಲವ್‌

ಸೀರೆಗಳೆಂದರೆ ನನಗೆ ಮೊದಲಿನಿಂದಲೂ ಇಷ್ಟ ಎನ್ನುವ ತಾರಾ ಅವರಿಗೂ ಈ ಹೊಸ ಶೈಲಿಯ ಈ ಶರ್ಟ್ ಸೀರೆ ಸಖತ್‌ ಇಷ್ಟವಾಗಿದೆ. ಲಕ್ಷ್ಮಿ ಕೃಷ್ಣ ಅವರ ಈ ಸ್ಟೈಲಿಶ್‌ ಸೀರೆಯು ನನ್ನನ್ನು ಮತ್ತಷ್ಟು ಅಂದವಾಗಿಸಿದೆ ಎಂದು ನಟಿ ತಾರಾ ಅನುರಾಧ ಪ್ರತಿಕ್ರಿಯಿಸಿದ್ದಾರೆ.
( ಲೇಖಕಿ ಫ್ಯಾಷನ್‌ ಪತ್ರಕರ್ತೆ )
ಇದನ್ನೂ ಓದಿ: ICW 2024: ರ‍್ಯಾಂಪ್‌ ಮೇಲೆ ಮಾಡೆಲ್‌ಗಳು ಧರಿಸಿರುವುದು ಗೌನಾ ಅಥವಾ ಪಂಜರ?!

Continue Reading

ಫ್ಯಾಷನ್

ICW 2024: ಮುಂಬರುವ ವೆಡ್ಡಿಂಗ್‌ ಸೀಸನ್‌ ಮೆನ್ಸ್ ವೇರ್‌ ಅನಾವರಣಗೊಳಿಸಿದ ಇಂಡಿಯಾ ಕೌಚರ್‌ ವೀಕ್‌ 2024

ICW 2024: ದಿಲ್ಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಕೌಚರ್‌ ವೀಕ್‌ನ 3ನೇ ದಿನದಂದು ಮುಂಬರುವ ವೆಡ್ಡಿಂಗ್‌ ಸೀಸನ್‌ಗೆ ಪೂರಕವಾಗುವಂತಹ ನಾನಾ ವೆರೈಟಿ ಮೆನ್ಸ್ ವೇರ್‌ಗಳು ಅನಾವರಣಗೊಂಡವು. ನಟ ಆದಿತ್ಯಾ ರಾಯ್‌ ಕಪೂರ್‌ ಹಾಗೂ ರಾಹುಲ್‌ ಖನ್ನಾ ಶೋ ಸ್ಟಾಪರ್‌ಗಳಾಗಿ ಕಾಣಿಸಿಕೊಂಡರು. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

ICW 2024
ಚಿತ್ರಗಳು: ಇಂಡಿಯಾ ಕೌಚರ್‌ 2024 ಯ 3 ನೇ ದಿನ ಹೈಲೈಟಾದ ಮೆನ್ಸ್ ವೆಡ್ಡಿಂಗ್‌ ವೇರ್ಸ್, ಚಿತ್ರಕೃಪೆ: FDCI official
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಇಂಡಿಯಾ ಕೌಚರ್‌ ವೀಕ್‌ನ 3 ನೇ ದಿನದಂದು ಯುವತಿಯರ ಲಕ್ಷುರಿ ಡಿಸೈನರ್‌ವೇರ್‌ಗಳ ನಡುವೆಯೇ ಗ್ರ್ಯಾಂಡ್‌ ಮೆನ್ಸ್ ವೇರ್‌ಗಳು ಫ್ಯಾಷನ್‌ ಪ್ರಿಯರ ಮನಗೆದ್ದವು.
ಇದುವರೆಗೂ ಕೇವಲ ಯುವತಿಯರ ಹಾಗೂ ಬ್ರೈಡಲ್‌ ಲುಕ್‌ ನೀಡುವಂತಹ ಹೆವಿ ಹಾಗೂ ಜಗಮಗಿಸುವ ಡಿಸೈನರ್‌ವೇರ್‌ಗಳು ಎಲ್ಲರ ಮನಸೂರೆಗೊಂಡಿದ್ದವು. ಆದರೆ, ಮೂರನೇ ದಿನದಂದು ನಡೆದ ಶೋನಲ್ಲಿ ಇವೆಲ್ಲಕ್ಕಿಂತ ಹೆಚ್ಚಾಗಿ, ಮುಂಬರುವ ವೆಡ್ಡಿಂಗ್‌ ಸೀಸನ್‌ಗೆ ಪೂರಕವಾಗುವಂತಹ ನಾನಾ ವೆರೈಟಿ ಮೆನ್ಸ್ ವೇರ್‌ ಡಿಸೈನರ್‌ವೇರ್‌ಗಳು ಅನಾವರಣಗೊಂಡವು. ಪುರುಷರೂ ಹೀಗೆಲ್ಲಾ ಕಾಣಿಸಿಕೊಳ್ಳಬಹುದೇ ! ಎಂಬ ಇಮ್ಯಾಜೀನೇಷನ್‌ಗೆ ಪೂರಕವಾಗವಂತಹ ಡಿಸೈನರ್‌ವೇರ್‌ಗಳೂ ಕೂಡ ಈ ಫ್ಯಾಷನ್‌ ಶೋನಲ್ಲಿ (ICW 2024) ಪ್ರದರ್ಶನಗೊಂಡವು.

ICW 2024

ಮಿರ ಮಿರ ಮಿನುಗಿದ ಆದಿತ್ಯಾ ರಾಯ್‌ ಕಪೂರ್‌

ಸೆಲೆಬ್ರೆಟಿ ಡಿಸೈನರ್‌ ಕುನಾಲ್‌ ರಾವಲ್‌ ಅವರ ಮೆನ್ಸ್ ಕಲೆಕ್ಷನ್‌ನ ನೆವ್ವಿ ಬ್ಲ್ಯೂ ಎಂಬಾಲಿಶ್ಡ್ ಸಿಕ್ವೀನ್ಸ್‌ನಿಂದ ಮಿರ ಮಿರ ಮಿನುಗುತ್ತಿದ್ದ ಶೆರ್ವಾನಿ ಹಾಗೂ ದೊಗಲೆ ಧೋತಿಯಲ್ಲಿ ಬಾಲಿವುಡ್‌ ನಟ ಆದಿತ್ಯಾ ರಾಯ್‌ ಕಪೂರ್‌ ಆಕರ್ಷಕವಾಗಿ ಕಾಣಿಸಿಕೊಂಡರು.

ICW 2024

ಮಲೈಕಾಗಿಂತ ಹೆಚ್ಚು ಹೈಲೈಟಾದ ನಟ ರಾಹುಲ್‌ ಖನ್ನಾ

ಡಿಸೈನರ್‌ ಸಿದ್ಧಾರ್ಥ್‌ ಟೈಟ್ಲರ್‌ ಅವರ ಬ್ಲ್ಯಾಕ್‌ ಕಟೌಟ್‌ ಡಿಸೈನರ್‌ ಬ್ಲೌಸ್‌ –ಲೆಹೆಂಗಾ ಧರಿಸಿ ನಟಿ ಮಲೈಕಾ ಅರೋರಾ ಕಾಣಿಸಿಕೊಂಡರು. ಇದೇ ಡಿಸೈನರ್‌ನ ವಿಶೇಷ ಮೆನ್ಸ್‌ವೇರ್‌ ಕಲೆಕ್ಷನ್‌ ಭಾಗವಾಗಿದ್ದ ಬ್ಲ್ಯಾಕ್‌ ಸಾಲಿಡ್‌ ಶೇಡ್‌ನ ಜಿಪ್‌ ಇರುವಂತಹ ಬಾಟಮ್‌ ಗೋಲ್ಡ್ ಎಂಬ್ರಾಯ್ಡರಿ ಶೆರ್ವಾನಿಯಲ್ಲಿ ನಟ ರಾಹುಲ್‌ ಖನ್ನಾ ರ್ಯಾಂಪ್‌ ವಾಕ್‌ ಮಾಡಿದರು.

ICW 2024

ಪುರುಷರ ಮನ ಗೆದ್ದ ಜಿಪ್‌ ಶೆರ್ವಾನಿ

ಬಟನ್‌ ಇಲ್ಲದೆಯೂ ಶೆರ್ವಾನಿ ಡಿಸೈನ್‌ ಅತ್ಯಾಕರ್ಷಕವಾಗಿ ಕಾಣಿಸುತ್ತದೆ ಎಂಬುದು ರಾಹುಲ್‌ ಖನ್ನಾ ಅವರು ಧರಿಸಿದ ವಿನೂತನ ಕಾನ್ಸೆಪ್ಟ್‌ನ ಶೆರ್ವಾನಿ ವಿನ್ಯಾಸ ಪ್ರೂವ್‌ ಮಾಡಿತು. ಸಿಂಪಲ್‌ ಹಾಗೂ ಎಲಿಗೆಂಟ್‌ ಲುಕ್‌ ಬಯಸುವ ಪುರುಷರು ಇವುಗಳನ್ನು ಧರಿಸಿ ಸ್ಮಾರ್ಟಾಗಿ ಕಾಣಿಸಬಹುದು ಎಂಬುದನ್ನು ತೋರಿಸಿಕೊಟ್ಟಿತು.

ಇದನ್ನೂ ಓದಿ: Paris Olympics 2024: ಭಾರತೀಯ ಅಥ್ಲೀಟ್‌ಗಳ ಡ್ರೆಸ್‌ ಕೋಡ್‌ ವಿನ್ಯಾಸಕ್ಕೆ ಜನರ ಮಿಶ್ರ ಪ್ರತಿಕ್ರಿಯೆ

ಲೇಡಿ ಮಾಡೆಲ್‌ಗಳ ಮೆನ್ಸ್ ವೇರ್‌

ಇನ್ನು, ಈ ದಿನದ ಫ್ಯಾಷನ್‌ ಇವೆಂಟ್‌ನಲ್ಲಿ ಕೇವಲ ಮೆನ್ಸ್ ಮಾಡೆಲ್‌ಗಳು ಮಾತ್ರವಲ್ಲ, ಕೆಲವು ಹುಡುಗಿಯರು ಕೂಡ ಮೆನ್ಸ್ವೇರ್‌ ಧರಿಸಿ, ವಾಕ್‌ ಮಾಡಿದ್ದು, ಹೊಸತನ ಮೂಡಿಸಿತು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Paris Olympics 2024: ಭಾರತೀಯ ಅಥ್ಲೀಟ್‌ಗಳ ಡ್ರೆಸ್‌ ಕೋಡ್‌ ವಿನ್ಯಾಸಕ್ಕೆ ಜನರ ಮಿಶ್ರ ಪ್ರತಿಕ್ರಿಯೆ

Paris Olympics 2024: ಪ್ಯಾರಿಸ್‌ ಒಲಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಭಾರತೀಯ ಅಥ್ಲೀಟ್‌ಗಳ ಡ್ರೆಸ್‌ಕೋಡ್‌ ಸಿದ್ಧಪಡಿಸಿದ್ದ ಡಿಸೈನರ್‌ ತರುಣ್‌ ತಹಿಲಿಯಾನಿಯವರ ವಿನ್ಯಾಸಕ್ಕೆ ಒಂದೆಡೆ ಮೆಚ್ಚುಗೆ ದೊರೆತರೆ, ಮತ್ತೊಂದೆಡೆ ಮಹಿಳೆಯೊಬ್ಬರು ಕಮೆಂಟ್‌ ಮೂಲಕ ತೀವ್ರವಾಗಿ ಟೀಕಿಸಿದ್ದಾರೆ. ಯಾಕಾಗಿ ಈ ಟೀಕೆ? ಡ್ರೆಸ್‌ಕೋಡ್‌ ಕಾನ್ಸೆಪ್ಟ್ ಏನಿತ್ತು? ಎಂಬುದರ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Paris Olympics 2024
ಚಿತ್ರಗಳು: ವೀ ಆರ್‌ ಟೀಮ್‌ ಇಂಡಿಯಾ ಇನ್‌ಸ್ಟಾ ಖಾತೆ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ಯಾರಿಸ್‌ ಒಲಿಂಪಿಕ್ಸ್ ಕ್ರೀಡಾಪಟುಗಳ (Paris Olympics 2024) ಡ್ರೆಸ್‌ಕೋಡ್‌ ಡಿಸೈನ್‌ ಮಾಡಿದ ಬಾಲಿವುಡ್‌ ಡಿಸೈನರ್‌ ತರುಣ್‌ ತಹಿಲಿಯಾನಿಗೆ ಪ್ರಶಂಸೆಯ ಜೊತೆಜೊತೆಗೆ ತೀವ್ರ ಟೀಕೆಯ ಸುರಿಮಳೆಯೂ ಆಗಿದೆ. ಹೌದು, ಕೆಲವರು ಕ್ರೀಡಾಪಟುಗಳ ತಿರಂಗಾ ಕಾನ್ಸೆಪ್ಟ್ ಹೊಂದಿದ ಡ್ರೆಸ್‌ಕೋಡ್‌ ಆಕರ್ಷಕವಾಗಿದೆ. ರಾಷ್ಟ್ರದ ಸಂಸ್ಕೃತಿ ಬಿಂಬಿಸಿದೆ ಎಂದರೇ, ಇನ್ನು ಕೆಲವರು, ಕಳಪೆ ಡಿಸೈನ್‌ ಹೊಂದಿದೆ ಎಂದೆಲ್ಲಾ ತೀವ್ರವಾಗಿ ಟೀಕಿಸಿದ್ದಾರೆ.

paris olympics 20Paris Olympics 2024
paris olympics 20Paris Olympics 2024

ಡಿಸೈನರ್‌ ತರುಣ್‌ ತಹಿಲಿಯಾನಿ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡ ಅಥ್ಲಿಟ್ಸ್

ಅಂದಹಾಗೆ, ಪ್ಯಾರಿಸ್‌ ಒಲಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ, ಅಥ್ಲೀಟ್ಸ್ ಡ್ರೆಸ್‌ ಕೋಡ್‌ಗಳನ್ನು ಬಾಲಿವುಡ್‌ನ ಖ್ಯಾತ ಡಿಸೈನರ್‌ ತರುಣ್‌ ತಹಿಲಿಯಾನಿ ಡಿಸೈನ್‌ ಮಾಡಿದ್ದು, ಈಗಾಗಲೇ ಈ ಉಡುಪಿನಲ್ಲಿ ಕಾಣಿಸಿಕೊಂಡ ಅಥ್ಲಿಟ್‌ ಫೋಟೋಗಳು ಕೂಡ ಜಗಜ್ಹಾಹಿರಾಗಿವೆ. ಕ್ರೀಡಾಪಟುಗಳು ಕೂಡ ಈ ತಿರಂಗಾ ಕಾನ್ಸೆಪ್ಟ್‌ನ ಔಟ್‌ಫಿಟ್ಸ್ ಧರಿಸಿ ಖುಷಿಖುಷಿಯಾಗಿ ಪೋಸ್‌ ಕೂಡ ನೀಡಿ, ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ, ಇವನ್ನು ನೋಡಿದ ಕೆಲವರು ಮಾತ್ರ, ಈ ಡ್ರೆಸ್‌ಕೋಡ್‌ ಕಾನ್ಸೆಪ್ಟ್ ಚೆನ್ನಾಗಿದೆ ಎಂದಿದ್ದಾರೆ, ಮತ್ತೆ ಕೆಲವರು ಕಳಪೆ ಡಿಸೈನ್‌ ಎಂದೆಲ್ಲಾ ಖಾರವಾಗಿ ಕಾಮೆಟ್‌ ಮಾಡಿದ್ದಾರೆ.

ತೀವ್ರವಾಗಿ ಟೀಕೆ ಮಾಡಿದ ಮಹಿಳೆ

ಅದರಲ್ಲೂ ಮಹಿಳೆಯೊಬ್ಬರು, ಹಲೋ ತರುಣ್‌ ತಹಿಲಿಯಾನಿಯವರೇ., ನೀವು ಡಿಸೈನ್‌ ಮಾಡಿರುವ ಸೀರೆ ಮುಂಬಯಿಯ ಸ್ಟ್ರೀಟ್‌ಗಳಲ್ಲಿ, ಕಡಿಮೆ ಬೆಲೆಯ 200 ರೂ.ಗಳ ಸೀರೆಗಳಂತಿವೆ. ಪಾಲಿಸ್ಟರ್‌ ಹಾಗೂ ಇಕ್ಕಟ್‌ ಡಿಸೈನ್‌ಗಳು ತೀರಾ ಸಾಮಾನ್ಯವಾಗಿದೆ. ಇಂತಹ ಡಿಸೈನ್‌ಗಳನ್ನೇನಾದರೂ ನೀವು ಇಂಟರ್ನ್‌ಗಳಿಂದ ಮಾಡಿಸಿದ್ದೀರಾ ಹೇಗೆ? ನಮ್ಮ ರಾಷ್ಟ್ರದ ಸಂಸ್ಕೃತಿ ಬಿಂಬಿಸಲು ಇವು ಸೂಕ್ತವಾಗಿಲ್ಲ! ಎಂಬುದಾಗಿ ಟ್ವೀಟ್‌ ( X ) ಮಾಡುವ ಮೂಲಕ ತೀವ್ರವಾಗಿ ಟೀಕಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಸಾಕಷ್ಟು ಮಂದಿ ಶೇರ್‌ ಮಾಡುವ ಮೂಲಕ ಹಾಗೂ ಇನ್ನೊಂದಿಷ್ಟು ತೆಗಳುವ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ, ಡಿಸೈನರ್‌ ತರುಣ್‌ ತಹಿಲಿಯಾನಿ ಅವರು ಮಾತ್ರ, ಈ ಡಿಸೈನ್ಸ್ ನಮ್ಮ ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲು ಪೂರಕವಾಗುವಂತೆ ವಿನ್ಯಾಸ ಮಾಡಲಾಗಿದೆ ಎಂದು ಮಾಧ್ಯಮವೊಂದಕ್ಕೆ ಕೂಲಾಗಿ ಪ್ರತಿಕ್ರಿಯಿಸಿದ್ದಾರೆ.

ಕ್ರೀಡಾಪಟುಗಳ ಸೀರೆ & ಕುರ್ತಾ ಡಿಸೈನ್ಸ್

ಮಹಿಳಾ ಅಥ್ಲಿಟ್‌ಗಳಿಗೆ ಇಕ್ಕಟ್‌ ಪ್ರಿಂಟ್ಸ್‌ನಿಂದ ಸ್ಪೂರ್ತಿಗೊಂಡ ತಿರಂಗಾ ಶೇಡ್‌ನಲ್ಲಿ ಬಾರ್ಡರ್‌ ವಿನ್ಯಾಸಗೊಳಿಸಲಾಗಿತ್ತು. ನ್ಯಾಚುರಲ್‌ ಫ್ಯಾಬ್ರಿಕ್‌ನಿಂದ ಸಿದ್ಧಪಡಿಸಿದ ಶ್ವೇತ ವರ್ಣದ ಕುರ್ತಾಗೆ ಹೊಂದುವಂತಹ ಬಂಡಿ ಜಾಕೆಟ್‌ನಲ್ಲಿ ಮೆನ್ಸ್ ಟೀಮ್‌ ಕಾಣಿಸಿಕೊಂಡಿತ್ತು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

FDCI & ICW 2024: ಇಂಡಿಯಾ ಕೌಚರ್‌ ವೀಕ್‌ನ 2ನೇ ದಿನ ಹೆಜ್ಜೆ ಹಾಕಿದ ಜಾಕ್ವೆಲೀನ್‌ ಫರ್ನಾಂಡಿಸ್‌

FDCI & ICW 2024: ಎಫ್‌ಡಿಸಿಐ ಸಹಯೋಗದಲ್ಲಿ ನಡೆಯುತ್ತಿರುವ ಇಂಡಿಯಾ ಕೌಚರ್‌ ವೀಕ್‌ನ ಎರಡನೇ ದಿನ ಬಾಲಿವುಡ್‌ ನಟಿ ಜಾಕ್ವೆಲೀನ್‌ ಫರ್ನಾಂಡಿಸ್‌ ಹೆಜ್ಜೆ ಹಾಕಿದರೇ, ಡಿಸೈನರ್‌ ಸುನೀತ್‌ ವರ್ಮಾ ಅವರ ಜಗಮಗಿಸುವ ಡಿಸೈನರ್‌ವೇರ್‌ಗಳು ಹೈಲೈಟಾದವು. ಈ ಕುರಿತಂತೆ ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್.

VISTARANEWS.COM


on

FDCI & ICW 2024
ಚಿತ್ರಗಳು: ಇಂಡಿಯಾ ಕೌಚರ್‌ ವೀಕ್‌ನ 2 ನೇ ದಿನದ ಹೈಲೈಟ್ಸ್, ಚಿತ್ರಕೃಪೆ: FDCI official
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇಂಡಿಯನ್ ಕೌಚರ್‌ ವೀಕ್‌ನ (FDCI & ICW 2024) ಮೊದಲನೇ ದಿನಕ್ಕೆ ಹೊಲಿಸಿದಲ್ಲಿ, ಎರಡನೇ ದಿನದ ಫ್ಯಾಷನ್‌ ಶೋ, ಮತ್ತಷ್ಟು ಜಗಮಗಿಸಿತ್ತು! ಅತ್ಯಾಕರ್ಷಕ ಡಿಸೈನರ್‌ವೇರ್‌ಗಳನ್ನು ಧರಿಸಿದ ಪ್ರೊಫೆಷನಲ್‌ ಮಾಡೆಲ್‌ಗಳು ರ‍್ಯಾಂಪ್‌ ಮೇಲೆ ನಡೆದು ಬರುತ್ತಿದ್ದಲ್ಲಿ, ಸ್ವರ್ಗ ಲೋಕವೇ ಭೂಮಿಗೆ ಇಳಿದು ಬಂದಂತೆ ಭಾಸವಾಗುತ್ತಿತ್ತು. ಈ ಮಧ್ಯೆ, ಡಿಸೈನರ್‌ ಇಶಾ ಅವರ ಡಿಸೈನರ್‌ವೇರ್‌ನಲ್ಲಿ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದ ನಟಿ ಜಾಕ್ವೆಲೀನ್‌ ಮನಮೋಹಕವಾಗಿ ಕಂಡರು.ಅಂದಹಾಗೆ, ಈಗಾಗಲೇ ಎಫ್‌ಡಿಸಿಐ ಸಹಯೋಗದಲ್ಲಿ, ಆರಂಭಗೊಂಡಿರುವ ಇಂಡಿಯಾ ಕೌಚರ್‌ ವೀಕ್‌ನ ಎರಡನೇ ದಿನದ ಹೈಲೈಟ್‌ಗಳಿವು.

ರ‍್ಯಾಂಪ್‌ ಮೇಲೆ ಡಿಸೈನರ್‌ ಸುನೀತ್‌ ವರ್ಮಾ ಡಾನ್ಸ್

ಇಂಡಿಯಾ ಕೌಚರ್‌ ವೀಕ್‌ನ ಎರಡನೇ ದಿನ ನಡೆದ ಅತ್ಯಾಕರ್ಷಕ ರ‍್ಯಾಂಪ್‌ ಶೋನಲ್ಲಿ, ಡಿಸೈನರ್‌ ಸುನೀತ್‌ ವರ್ಮಾ ಡಿಸೈನರ್‌ವೇರ್ಸ್‌ಗಳು ಹೈಲೈಟಾದವು. ಎಲ್ಲದಕ್ಕಿಂತ ಹೆಚ್ಚಾಗಿ ಡಿಸೈನರ್‌ವೇರ್‌ಗಳೆಲ್ಲವೂ ಜಗಮಗಿಸುತ್ತಿದ್ದವು.
ಇವರು ಡಿಸೈನ್‌ ಮಾಡಿದ್ದ ಶಿಮ್ಮರ್‌ನಿಂದ ಡಿಸೈನ್‌ಗೊಂಡ ವಾಟರ್‌ಫಾಲ್‌ ಸ್ಲೀವ್ಸ್ ಹೊಂದಿದ 2 ಪೀಸ್‌ ಇಂಡೋ ವೆಸ್ಟರ್ನ್‌ ಡಿಸೈನರ್‌ವೇರ್‌ಗಳು ಎಲ್ಲರ ಮನಗೆದ್ದವು. ಮಾಡೆಲ್‌ಗಳು ಧರಿಸಿದ್ದ, ಶೀರ್‌ ಸಾಫ್ಟ್ ಫ್ಯಾಬ್ರಿಕ್‌ನ ಡಿಸೈನ್‌ಗೊಂಡ ಸೀರೆಯಿಂದಿಡಿದು ಇಂಡೋ-ವೆಸ್ಟರ್ನ್‌ ಲೆಹೆಂಗಾಗಳು ಕೂಡ ಸಿಕ್ವೀನ್ಸ್ ಡಿಸೈನ್‌ನಿಂದ ಮಿರಮಿರ ಮಿನುಗುತ್ತಿದ್ದವು. ಕೊನೆಯಲ್ಲಿ, ಮಾಡೆಲ್‌ಗಳೊಂದಿಗೆ ಡಿಸೈನರ್‌ ಸುನೀತ್‌ ವರ್ಮಾ, ಡಾನ್ಸ್ ಮಾಡುತ್ತಾ ವಾಕ್ ಮಾಡಿದ್ದು, ಎಲ್ಲರ ಉತ್ಸಾಹ ಹೆಚ್ಚಿಸಿತ್ತು.

ಬ್ಲ್ಯಾಕ್‌ ಮೆರ್ಮೈಡ್‌ ಗೌನ್‌ನಲ್ಲಿ ಜಾಕ್ವೆಲೀನ್‌ ವಾಕ್‌

ರೋಸ್‌ರೂಮ್‌ ಬ್ರಾಂಡ್‌ನ ಇಶಾ ಅವರ ಸಿಕ್ವೀನ್ಸ್ ಕೇಪ್‌ ವಾಟರ್‌ ಫಾಲ್‌ ಸ್ಲೀವ್‌ಹೊಂದಿದ ಬ್ಲ್ಯಾಕ್‌ ಮೆರ್ಮೈಡ್‌ ಗೌನ್‌ನಲ್ಲಿ ಬಾಲಿವುಡ್‌ ನಟಿ ಜಾಕ್ವೇಲಿನ್‌ ರ‍್ಯಾಂಪ್‌ ವಾಕ್‌ ಮಾಡಿದ್ದು, ಫ್ಯಾಷನ್‌ ಪ್ರಿಯರಿಗೆ ಪ್ರಿಯವಾಯಿತು.

ಇದನ್ನೂ ಓದಿ: Jennifer Lopez: ಮನೀಶ್‌ ಮಲ್ಹೋತ್ರಾ ಗೌನ್‌ ನಲ್ಲಿ ಬರ್ತ್‌ ಡೇ ಪಾರ್ಟಿ ಸೆಲೆಬ್ರೇಟ್‌ ಮಾಡಿದ ಹಾಲಿವುಡ್‌ ಪಾಪ್‌ ಸ್ಟಾರ್‌ ಜೆನ್ನಿಫರ್‌ ಲೋಪೆಜ್‌!

ರಿದ್ದಿಮಾ ರ‍್ಯಾಂಪ್‌ ವಾಕ್‌

ರಣವೀರ್‌ ಕಪೂರ್‌ ಸಹೋದರಿ ರಿದ್ದಿಮಾ ಕೂಡ ಇಶಾ ಜಜೊಡಿಯಾ ಅವರ ವೆಡ್ಡಿಂಗ್‌ ಸೀಸನ್‌ ಟ್ರೆಂಡ್‌ನಲ್ಲಿರುವ ಐವರಿ ಲೆಹೆಂಗಾದಲ್ಲಿ ಕಾಣಿಸಿಕೊಂಡು ಶೋ ಆರಂಭಿಸಿದರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
Parisl Olympics 2024
ಪ್ರಮುಖ ಸುದ್ದಿ5 mins ago

Paris Olympics 2024 : ಮತ್ತೊಂದು ಗೆಲವು ಕಂಡ ಷಟ್ಲರ್ ಲಕ್ಷ್ಯ ಸೇನ್​

Bollywood Divorce Case
Latest11 mins ago

Bollywood Divorce Case: ವಿಚ್ಛೇದನದ ಬಳಿಕ ಪತ್ನಿಗೆ ದುಬಾರಿ ʼಜೀವನಾಂಶʼ ನೀಡಿದ ಬಾಲಿವುಡ್ ಸ್ಟಾರ್‌ಗಳಿವರು!

Rahul Gandhi
ದೇಶ17 mins ago

Rahul Gandhi: ರಾಹುಲ್‌ ಮಾತಿಗೆ ಹಣೆ ಚಚ್ಚಿಕೊಂಡು, ಮುಖ ಮುಚ್ಚಿಕೊಂಡ ಸಚಿವೆ ನಿರ್ಮಲಾ: ಭಾರೀ ವೈರಲಾಗ್ತಿದೆ ಈ ವಿಡಿಯೋ

Star Shirt Saree Fashion
ಫ್ಯಾಷನ್23 mins ago

Star Shirt Saree Fashion: ಏನಿದು ಶರ್ಟ್‌ ಸೀರೆ? ಹೊಸ ಟ್ರೆಂಡ್‌ ಬಗ್ಗೆ ನಟಿ ತಾರಾ ಏನಂತಾರೆ?

Shravan 2024
Latest27 mins ago

Shravan 2024: ಶ್ರಾವಣ ಮಾಸದಲ್ಲಿ ಯಾವ ಹಬ್ಬ, ಯಾವ ದಿನ? ಈ ತಿಂಗಳ ಮಹತ್ವ ಏನು?

Fraud Case
Latest49 mins ago

Fraud Case: 20ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಚಿನ್ನಾಭರಣ ಎಗರಿಸಿದ್ದ ವಂಚಕ ಪೊಲೀಸ್‌ ಬಲೆಗೆ ಬಿದ್ದಿದ್ದು ಹೇಗೆ?

Paris Olympics 2024
ಕ್ರೀಡೆ1 hour ago

Paris Olympics 2024 : ಭಾರತಕ್ಕೆ ಶೂಟಿಂಗ್​ನಲ್ಲಿ ಕಂಚಿನ ಪದಕ ಜಸ್ಟ್​ ಮಿಸ್​!

Rajendra Nagara tragedy
ದೇಶ2 hours ago

Rajendra Nagar Tragedy: ನೆಲಮಾಳಿಗೆ ಗೇಟ್‌ಗೆ SUV ಕಾರು ಡಿಕ್ಕಿ ಹೊಡೆದಿದ್ದ ಚಾಲಕ ಅರೆಸ್ಟ್‌- ವಿಡಿಯೋ ವೈರಲ್‌

Mosquito Repellents
ಆರೋಗ್ಯ2 hours ago

Natural Mosquito Repellents: ಸೊಳ್ಳೆಗಳು ನಿಮ್ಮ ಹತ್ತಿರ ಸುಳಿಯದಂತೆ ಮಾಡಲು ಇಲ್ಲಿವೆ ನೈಸರ್ಗಿಕ ಉಪಾಯಗಳು!

DK Shivakumar
ಕರ್ನಾಟಕ2 hours ago

DK Shivakumar: ಕನ್ನಂಬಾಡಿ ಕಟ್ಟೆ, ನಮ್ಮೆಲ್ಲರ ಅನ್ನದ ತಟ್ಟೆ; ಮಳೆ ಬರಲ್ಲ ಎಂದವರಿಗೆ ತಕ್ಕ ಉತ್ತರ ಸಿಕ್ಕಿದೆ ಎಂದ ಡಿಕೆಶಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ3 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 hours ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ7 hours ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ1 day ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ1 day ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ1 day ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ1 day ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

ಟ್ರೆಂಡಿಂಗ್‌