-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫ್ಯಾಷನ್ ಡಿಸೈನ್ ಕೌನ್ಸಿಲ್ ಆಫ್ ಇಂಡಿಯಾ ಸಹಯೋಗದೊಂದಿಗೆ (ICW 2024) ನಡೆಯುತ್ತಿರುವ 2024 ರ ಇಂಡಿಯಾ ಕೌಚರ್ ವೀಕ್, ದಿಲ್ಲಿಯಲ್ಲಿ ಆರಂಭವಾಗಿದ್ದು, ಜುಲೈ 31 ರವರೆಗೂ ಮುಂದುವರಿಯಲಿದೆ.
ಖ್ಯಾತ ಸೆಲೆಬ್ರೆಟಿ ಡಿಸೈನರ್ ಅಬು ಜಾನಿ ಸಂದೀಪ್ ಕೋಸ್ಲಾ, ರ‍್ಯಾಂಪ್ ಸೆಲೆಬ್ರೆಟಿ ವಾಕ್ ಮಾಡುವ ಮೂಲಕ ಈ ಫ್ಯಾಷನ್ ವೀಕ್‌ಗೆ ಚಾಲನೆ ನೀಡಿದ್ದಾರೆ. ಮೊದಲ ದಿನವೇ ಖ್ಯಾತ ಡಿಸೈನರ್‌ಗಳು, ತಮ್ಮ ಡಿಸೈನರ್‌ವೇರ್‌ಗಳನ್ನು ಪ್ರದರ್ಶಿಸಿದ್ದಾರೆ. ಈ ಎಲ್ಲದರ ಕುರಿತಂತೆ ಇಲ್ಲಿದೆ ವರದಿ.
ರ‍್ಯಾಂಪ್ ಮೇಲೆ ಅಬುಜಾನಿ ಸಂದೀಪ್ ಕೋಸ್ಲಾ
ಅಂಬಾನಿ ಮದುವೆಯ ಬಹುತೇಕ ದುಬಾರಿ ಡಿಸೈನರ್‌ವೇರ್‌ಗಳನ್ನು ಡಿಸೈನ್ ಮಾಡಿದ ಕ್ರೆಡಿಟ್ ಪಡೆದುಕೊಂಡಿರುವ ಅಬುಜಾನಿ ಸಂದೀಪ್ ಕೋಸ್ಲಾ ಜೋಡಿ, ಈ ಬಾರಿಯ ಇಂಡಿಯಾ ಕೌಚರ್‌ವೀಕ್‌ನ ಮೊದಲ ದಿನವೇ ರ‍್ಯಾಂಪ್ ಮೇಲೆ, ಸೆಲೆಬ್ರೆಟಿ ಶೋ ಸ್ಟಾಪರ್‌ಗಳ ಜೊತೆ ವಾಕ್ ಮಾಡುವ ಮೂಲಕ ಗ್ರೀನ್ ಸಿಗ್ನಲ್ ನೀಡಿತು. ಬ್ಲ್ಯಾಕ್ ಶೇಡ್‌ನ ಸಿಂಪಲ್ ಡಿಸೈನ್‌ನ ಶೆರ್ವಾನಿಯಲ್ಲಿ ಕಾಣಿಸಿಕೊಂಡ, ಈ ಜೋಡಿ, ಭಾಗವಹಿಸುವ ಡಿಸೈನರ್‌ಗಳಿಗೆ ಪ್ರೋತ್ಸಾಹ ತುಂಬಿತು.
ಮೊದಲ ಬಾರಿ ರ‍್ಯಾಂಪ್ ಏರಿದ ಕಾಮಿಡಿಯನ್ ಸುಮುಖಿ ಸುರೇಶ್
ಫ್ಯಾಷನ್ ಶೋಗಳಲ್ಲಿ ಹಾಗೂ ವೀಕ್‌ಗಳಲ್ಲಿ ಇದುವರೆಗೂ ಯಾವ ಕಾಮಿಡಿಯನ್‌ಗೂ ಅವಕಾಶ ನೀಡಿರಲಿಲ್ಲ! ಈದೇ ಮೊತ್ತ ಮೊದಲ ಬಾರಿಗೆ ಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಸುಮುಖಿ ಸುರೇಶ್ ಅವರನ್ನು ವಾಕ್ ಮಾಡಿಸುವ ಮೂಲಕ ಅಬುಜಾನಿ ಸಂದೀಪ್ ಕೋಸ್ಲಾ ಜೋಡಿಯ ಸಮ್ಮುಖದಲ್ಲಿ ಗೌರವ ನೀಡಲಾಯಿತು. ಅಲ್ಲದೇ, ಸೆಲೆಬ್ರೆಟಿಗಳೊಂದಿಗೆ ಸುಮುಖಿಯವರು ರ‍್ಯಾಂಪ್ ವಾಕ್ ಕೂಡ ಮಾಡಿದರು.
ಬ್ಲ್ಯಾಕ್ ಬ್ರಾಲೆಟ್ ಸೀರೆಯಲ್ಲಿ ಸುಮುಖಿ
ಮೊದಲ ಬಾರಿಗೆ ರ‍್ಯಾಂಪ್ ಮೇಲೆ ಕಾಣಿಸಿಕೊಂಡ ಕಾಮಿಡಿಯನ್ ಸುಮುಖಿ, ಬ್ಲ್ಯಾಕ್ ಬ್ರಾಲೆಟ್ ಜಗಮಗಿಸುವ ಸೀರೆಯಲ್ಲಿ ರ‍್ಯಾಂಪ್ ವಾಕ್ ಜೊತೆಗೆ ಕಾಮಿಡಿ ಕೂಡ ಮಾಡಿ, ನೆರೆದಿದ್ದವರನ್ನು ನಗೆಗಡಲಲ್ಲಿ ಮುಳುಗಿಸಿದರು.
ಇದನ್ನೂ ಓದಿ: Sandalwood Star Fashion: ಮಾನ್ಸೂನ್‌ನಲ್ಲಿ ಮಾಲಾಶ್ರೀ ಮಗಳ ಗ್ಲಾಮರಸ್ ಫ್ಯಾಷನ್!
ಸೆಲೆಬ್ರೆಟಿ ಶೋ ಸ್ಟಾಪರ್ಸ್
ರಾಣಿ ಮತ್ತು ರಾಜಕುಮಾರ ಕಾನ್ಸೆಪ್ಟ್‌ಗೆ ಸೆಲೆಬ್ರೆಟಿ ಶೋ ಸ್ಟಾಪರ್ ಆಗಿ ವಾಕ್ ಮಾಡಿದ ವಾಮಿಕಾ ಹಾಗೂ ತಾಹಾ ಶಾ ಗ್ರ್ಯಾಂಡ್ ಎಥ್ನಿಕ್‌ವೇರ್‌ಗಳಲ್ಲಿ ಮಿಂಚಿದರು. ಇನ್ನು, ಒಂದು ವಾರಗಳ ಕಾಲ ನಡೆಯುವ ಈ ಶೋ, ಹೊಸ ಡಿಸೈನರ್‌ಗಳು ಸೇರಿದಂತೆ ಖ್ಯಾತ ಡಿಸೈನರ್‌ಗಳ ಡಿಸೈನರ್‌ವೇರ್‌ಗಳಿಗೆ ಸಾಕ್ಷಿಯಾಗಲಿದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)