-ಶೀಲಾ ಸಿ. ಶೆಟ್ಟಿ, ಬೆಂಗಳೂರು
ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಇಂಡಿಯಾ ಕೌಚರ್ ವೀಕ್‌ನ 3 ನೇ ದಿನದಂದು ಯುವತಿಯರ ಲಕ್ಷುರಿ ಡಿಸೈನರ್‌ವೇರ್‌ಗಳ ನಡುವೆಯೇ ಗ್ರ್ಯಾಂಡ್ ಮೆನ್ಸ್ ವೇರ್‌ಗಳು ಫ್ಯಾಷನ್ ಪ್ರಿಯರ ಮನಗೆದ್ದವು.
ಇದುವರೆಗೂ ಕೇವಲ ಯುವತಿಯರ ಹಾಗೂ ಬ್ರೈಡಲ್ ಲುಕ್ ನೀಡುವಂತಹ ಹೆವಿ ಹಾಗೂ ಜಗಮಗಿಸುವ ಡಿಸೈನರ್‌ವೇರ್‌ಗಳು ಎಲ್ಲರ ಮನಸೂರೆಗೊಂಡಿದ್ದವು. ಆದರೆ, ಮೂರನೇ ದಿನದಂದು ನಡೆದ ಶೋನಲ್ಲಿ ಇವೆಲ್ಲಕ್ಕಿಂತ ಹೆಚ್ಚಾಗಿ, ಮುಂಬರುವ ವೆಡ್ಡಿಂಗ್ ಸೀಸನ್‌ಗೆ ಪೂರಕವಾಗುವಂತಹ ನಾನಾ ವೆರೈಟಿ ಮೆನ್ಸ್ ವೇರ್ ಡಿಸೈನರ್‌ವೇರ್‌ಗಳು ಅನಾವರಣಗೊಂಡವು. ಪುರುಷರೂ ಹೀಗೆಲ್ಲಾ ಕಾಣಿಸಿಕೊಳ್ಳಬಹುದೇ ! ಎಂಬ ಇಮ್ಯಾಜೀನೇಷನ್‌ಗೆ ಪೂರಕವಾಗವಂತಹ ಡಿಸೈನರ್‌ವೇರ್‌ಗಳೂ ಕೂಡ ಈ ಫ್ಯಾಷನ್ ಶೋನಲ್ಲಿ (ICW 2024) ಪ್ರದರ್ಶನಗೊಂಡವು.
ಮಿರ ಮಿರ ಮಿನುಗಿದ ಆದಿತ್ಯಾ ರಾಯ್ ಕಪೂರ್
ಸೆಲೆಬ್ರೆಟಿ ಡಿಸೈನರ್ ಕುನಾಲ್ ರಾವಲ್ ಅವರ ಮೆನ್ಸ್ ಕಲೆಕ್ಷನ್‌ನ ನೆವ್ವಿ ಬ್ಲ್ಯೂ ಎಂಬಾಲಿಶ್ಡ್ ಸಿಕ್ವೀನ್ಸ್‌ನಿಂದ ಮಿರ ಮಿರ ಮಿನುಗುತ್ತಿದ್ದ ಶೆರ್ವಾನಿ ಹಾಗೂ ದೊಗಲೆ ಧೋತಿಯಲ್ಲಿ ಬಾಲಿವುಡ್ ನಟ ಆದಿತ್ಯಾ ರಾಯ್ ಕಪೂರ್ ಆಕರ್ಷಕವಾಗಿ ಕಾಣಿಸಿಕೊಂಡರು.
ಮಲೈಕಾಗಿಂತ ಹೆಚ್ಚು ಹೈಲೈಟಾದ ನಟ ರಾಹುಲ್ ಖನ್ನಾ
ಡಿಸೈನರ್ ಸಿದ್ಧಾರ್ಥ್ ಟೈಟ್ಲರ್ ಅವರ ಬ್ಲ್ಯಾಕ್ ಕಟೌಟ್ ಡಿಸೈನರ್ ಬ್ಲೌಸ್ –ಲೆಹೆಂಗಾ ಧರಿಸಿ ನಟಿ ಮಲೈಕಾ ಅರೋರಾ ಕಾಣಿಸಿಕೊಂಡರು. ಇದೇ ಡಿಸೈನರ್‌ನ ವಿಶೇಷ ಮೆನ್ಸ್‌ವೇರ್ ಕಲೆಕ್ಷನ್ ಭಾಗವಾಗಿದ್ದ ಬ್ಲ್ಯಾಕ್ ಸಾಲಿಡ್ ಶೇಡ್‌ನ ಜಿಪ್ ಇರುವಂತಹ ಬಾಟಮ್ ಗೋಲ್ಡ್ ಎಂಬ್ರಾಯ್ಡರಿ ಶೆರ್ವಾನಿಯಲ್ಲಿ ನಟ ರಾಹುಲ್ ಖನ್ನಾ ರ್ಯಾಂಪ್ ವಾಕ್ ಮಾಡಿದರು.
ಪುರುಷರ ಮನ ಗೆದ್ದ ಜಿಪ್ ಶೆರ್ವಾನಿ
ಬಟನ್ ಇಲ್ಲದೆಯೂ ಶೆರ್ವಾನಿ ಡಿಸೈನ್ ಅತ್ಯಾಕರ್ಷಕವಾಗಿ ಕಾಣಿಸುತ್ತದೆ ಎಂಬುದು ರಾಹುಲ್ ಖನ್ನಾ ಅವರು ಧರಿಸಿದ ವಿನೂತನ ಕಾನ್ಸೆಪ್ಟ್‌ನ ಶೆರ್ವಾನಿ ವಿನ್ಯಾಸ ಪ್ರೂವ್ ಮಾಡಿತು. ಸಿಂಪಲ್ ಹಾಗೂ ಎಲಿಗೆಂಟ್ ಲುಕ್ ಬಯಸುವ ಪುರುಷರು ಇವುಗಳನ್ನು ಧರಿಸಿ ಸ್ಮಾರ್ಟಾಗಿ ಕಾಣಿಸಬಹುದು ಎಂಬುದನ್ನು ತೋರಿಸಿಕೊಟ್ಟಿತು.
ಇದನ್ನೂ ಓದಿ: Paris Olympics 2024: ಭಾರತೀಯ ಅಥ್ಲೀಟ್‌ಗಳ ಡ್ರೆಸ್ ಕೋಡ್ ವಿನ್ಯಾಸಕ್ಕೆ ಜನರ ಮಿಶ್ರ ಪ್ರತಿಕ್ರಿಯೆ
ಲೇಡಿ ಮಾಡೆಲ್‌ಗಳ ಮೆನ್ಸ್ ವೇರ್
ಇನ್ನು, ಈ ದಿನದ ಫ್ಯಾಷನ್ ಇವೆಂಟ್‌ನಲ್ಲಿ ಕೇವಲ ಮೆನ್ಸ್ ಮಾಡೆಲ್‌ಗಳು ಮಾತ್ರವಲ್ಲ, ಕೆಲವು ಹುಡುಗಿಯರು ಕೂಡ ಮೆನ್ಸ್ವೇರ್ ಧರಿಸಿ, ವಾಕ್ ಮಾಡಿದ್ದು, ಹೊಸತನ ಮೂಡಿಸಿತು.
(ಲೇಖಕಿ ಫ್ಯಾಷನ್ ಪತ್ರಕರ್ತೆ)