ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಂಬಾನಿ ಕುಟುಂಬದ ಹೆಣ್ಣುಮಕ್ಕಳಿಗೆಲ್ಲಾ ಸೀರೆ ಉಡಿಸಿದ್ದಾರೆ. ಅಷ್ಟೇಕೆ! ದೀಪಿಕಾ ಪಡುಕೋಣೆ, ಸೋನಂ ಕಪೂರ್, ಅಲಿಯಾ ಭಟ್, ಕಿಯಾರಾ ಅಡ್ವಾನಿ ಸೇರಿದಂತೆ ಸಾಕಷ್ಟು ನಟಿಯರು ಇವರ ಬಳಿ ಸೀರೆ ಉಡಿಸಿಕೊಂಡಿದ್ದಾರೆ.
ಮೂರು ದಿನಗಳ ಕಾಲ ನಡೆದ ಅನಂತ್ ಅಂಬಾನಿ ಪ್ರಿ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಕೇವಲ ಅಂಬಾನಿ ಫ್ಯಾಮಿಲಿಯವರಿಗೆ ಮಾತ್ರವಲ್ಲ, ಆಗಮಿಸಿದ ನಟಿಯರಿಗೂ ಇವರೇ ಅತ್ಯಾಕರ್ಷಕವಾಗಿ ಸೀರೆ ಉಡಿಸಿದರೆನ್ನಲಾಗಿದೆ. ಸ್ಟಾರ್ ಸೀರೆ ಡ್ರೇಪರ್ ಎಂದು ಕರೆಸಿಕೊಳ್ಳುವ ಇವರ ಸಂಭಾವನೆ ಕೂಡ ಕಡಿಮೆಯೇನಲ್ಲ! ಮೂಲಗಳ ಪ್ರಕಾರ, ಇವರು 35,000 ರೂ.ಗಳಿಂದ ದಿಂದ 2 ಲಕ್ಷ ರೂ.ಗಳವರೆಗೂ ಶುಲ್ಕ ವಿಧಿಸುತ್ತಾರಂತೆ. ಅಚ್ಚರಿಯಾದರೂ (Expensive Celebrity Saree Draper) ಇದು ಸತ್ಯ ಎನ್ನುತ್ತಾರೆ ಕೆಲವರು.
ಯಾರಿದು ಡಾಲಿ ಜೈನ್?
ಸೋಷಿಯಲ್ ಮೀಡಿಯಾದಲ್ಲಿ, ಈಗಾಗಲೇ ಸೀರೆ ಡ್ರೇಪಿಂಗ್ ಕುರಿತಂತೆ ಸಾಕಷ್ಟು ಫೇಮಸ್ ಆಗಿರುವ ಇವರು, ಆಗಾಗ್ಗೆ ಸೀರೆ ಡ್ರೇಪಿಂಗ್ ಕುರಿತಂತೆ ನಾನಾ ವಿಡಿಯೋ ಅಪ್‌ಲೋಡ್ ಮಾಡುತ್ತಿರುತ್ತಾರೆ. ಲೈವ್ ಟ್ರೇನಿಂಗ್ ಕೂಡ ನೀಡುವ ಇವರು ಸದ್ಯಕ್ಕೆ ಸಖತ್ ಫೇಮಸ್! ಮಹಿಳೆಯರು, ಯುವತಿಯರು ಹೇಗೆಲ್ಲಾ ಸೀರೆ ಉಡಬಹುದು? ಎಂಬುದನ್ನು ಮಾತ್ರವಲ್ಲ, ಸೀರೆಯನ್ನು ಡ್ರೇಪಿಂಗ್ ಮೂಲಕ ಲೆಹೆಂಗಾದಂತೆ ಧರಿಸುವುದು ಹೇಗೆ? ಸ್ಕರ್ಟ್‌ನಂತೆ ಮಾರ್ಪಡಿಸುವುದು ಹೇಗೆ? ಗಾಗ್ರದಂತೆ ಮಾರ್ಪಡಿಸುವುದು ಹೇಗೆ?ಸೇರಿದಂತೆ ಹೀಗೆ ನಾನಾ ಬಗೆಯಲ್ಲಿ ಸೀರೆ ಡ್ರೇಪಿಂಗ್ ಮಾಡುವುದನ್ನು ಹೇಳಿಕೊಡುತ್ತಾರೆ. ಅಷ್ಟೇಕೆ! ಸಾಮಾನ್ಯ ಮಹಿಳೆಗೂ ಟಿಪ್ಸ್ ಕೂಡ ನೀಡುತ್ತಾರೆ.
ಸ್ಟಾರ್ ಸೀರೆ ಡ್ರೇಪರ್
ಮೂಲತಃ ಬೆಂಗಳೂರಿನವರಾದ ಇವರು ಸದ್ಯ ಕೋಲ್ಕತ್ತಾ ವಾಸಿ. ಅತಿ ಸುಲಭವಾಗಿ ಯಾರ ಕೈಗಳಿಗೂ ಸಿಗದ ಇವರು ಸದ್ಯಕ್ಕೆ ಸ್ಟಾರ್ ಡ್ರೇಪರ್ ಎನ್ನಬಹುದು. ಕೇವಲ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಟ್ಯಾಲೆಂಟ್, ಅದರಲ್ಲೂ ಕೇವಲ ಸೀರೆಯನ್ನು ಆಕರ್ಷಕವಾಗಿ ಉಡಿಸಿ ಹೇಗೆಲ್ಲಾ ದುಡಿಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದ ಸದುಪಯೋಗ
ಸಾಮಾನ್ಯ ಬ್ಯೂಟಿ ಪಾರ್ಲರ್ ಹಾಗೂ ಸೀರೆ ಉಡಿಸುವವರಾದಲ್ಲಿ ಒಂದು ಸೀರೆಗೆ ಕನಿಷ್ಠ ಎಂದರೂ ಮುನ್ನೂರು ರೂ.ಗಳಿಂದ 2 ಸಾವಿರ ರೂ.ಗಳವರೆಗೂ ಚಾರ್ಚ್ ಮಾಡುತ್ತಾರೆ. ಅದು ಯಾವ ಶೈಲಿಯ ಸೀರೆ ಎಂಬುದರ ಮೇಲೆ ಡಿಪೆಂಡ್ ಆಗುತ್ತದೆ. ಆದರೆ, ಡಾಲಿ ಜೈನ್ ಕೇವಲ ಒಂದು ಸೀರೆ ಡ್ರೇಪಿಂಗ್ ಹಾಗೂ ಮೇಕೋವರ್‌ಗೆ ಲಕ್ಷಗಟ್ಟಲೆ ಚಾರ್ಚ್ ಮಾಡುತ್ತಾರೆ. ಇದು ಹೆಣ್ಣುಮಕ್ಕಳು ಸ್ಫೂರ್ತಿಯಾಗುವಂತಹ ವಿಚಾರ. ಯಾವುದೆ ಖರ್ಚು-ವೆಚ್ಚವಿಲ್ಲದೆ ದುಡಿಯಬಹುದಾದ ಟ್ಯಾಲೆಂಟ್ ಇದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಬೆಂಗಳೂರಿನ ಸೀರೆ ಡ್ರೇಪರ್ ನಿಶಾ. ಅವರ ಪ್ರಕಾರ, ಇಂದು ಸೋಷಿಯಲ್ ಮೀಡಿಯಾದಲ್ಲಿ ಸರಿಯಾದ ವೇದಿಕೆ ಸೃಷ್ಟಿಸಿಕೊಂಡಲ್ಲಿ ಹೀಗೆಲ್ಲಾ ಖ್ಯಾತಿ ಗಳಿಸುತ್ತಾ ಹಣವನ್ನು ಗಳಿಸಬಹುದು ಎನ್ನುತ್ತಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Dhruthi Utsava Fashion Show: ಧೃತಿ ಉತ್ಸವದಲ್ಲಿ ಯಶಸ್ವಿಯಾದ ಮಹಿಳೆಯರ ಫ್ಯಾಷನ್ ಶೋ