-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮೆನ್ಸ್ ಯೋಗ ಔಟ್‌ಫಿಟ್ಸ್‌ನಲ್ಲಿ (International Yoga Day 2024) ಸಿಂಪಲ್ ಹಾಗೂ ಆರಾಮದಾಯಕ ಎಂದೆನಿಸುವ ಔಟ್‌ಫಿಟ್ಸ್‌ಗಳು ಮಾತ್ರ ಈ ಸೀಸನ್‌ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿವೆ. ಹೌದು. ಪುರುಷರು ಧರಿಸುವ ಯೋಗಾಭ್ಯಾಸದ ಔಟ್‌ಫಿಟ್ಸ್‌ಗಳು ಯುವತಿಯರ ಯೋಗ ಸೆಟ್ ಫ್ಯಾಷನ್‌ವೇರ್‌ಗಳಂತೆ ಟ್ರೆಂಡಿಯೂ ಆಗಿಲ್ಲ! ಫ್ಯಾಷೆನಬಲ್ ಕೂಡ ಇಲ್ಲ! ಬದಲಿಗೆ ನಾನಾ ಸಂದರ್ಭಗಳಿಗೆ ಧರಿಸಬಹುದಾಗಿದೆ.
ಆರಾಮದಾಯಕ ಉಡುಪುಗಳಿಗೆ ಪ್ರಾಮುಖ್ಯತೆ
“ಸಿಂಪಲ್ ಶಾರ್ಟ್ಸ್ ಕುರ್ತಾ-ಕಾಟನ್ ಪ್ಯಾಂಟ್ ಹೊರತುಪಡಿಸಿದಲ್ಲಿ, ಪುರುಷರಿಗೆ ನೋಡಲು ಸಿಂಪಲ್ ಲುಕ್ ನೀಡುವುದರೊಂದಿಗೆ ಕಂಫರ್ಟಬಲ್ ಫೀಲ್ ನೀಡುವಂತಹ ಕೆಲವು ವೆಸ್ಟರ್ನ್ ಔಟ್‌ಫಿಟ್‌ಗಳು ಯೋಗಾಭ್ಯಾಸದ ಪ್ರಾಕ್ಟೀಸ್‌ಗೆ ಸಾಥ್ ನೀಡುತ್ತಿವೆ. ಪುರುಷರು ಮೊದಲು ಪ್ರಾಮುಖ್ಯತೆ ನೀಡುವುದು ಆರಾಮದಾಯಕ ಉಡುಗೆಗಳಿಗೆ ಮಾತ್ರ. ಅದು ಯಾವುದೇ ದೊಡ್ಡ ಬ್ರಾಂಡ್‌ನದ್ದಾದರೂ ಸರಿಯೇ ಸಿಂಪಲ್ & ಕಂಫರ್ಟಬಲ್ ಎಂದೆನಿಸುವಂತಹ ಔಟ್‌ಫಿಟ್‌ಗಳು ಆಯ್ಕೆ ಅವರದ್ದಾಗಿರುತ್ತದೆ” ಎನ್ನುತ್ತಾರೆ ಮೆನ್ಸ್ ಸ್ಟೈಲಿಸ್ಟ್‌ಗಳು.
ಜಾಗರ್ಸ್ ಆಯ್ಕೆ
ಬಹುತೇಕ ಪುರುಷರು ತಮ್ಮ ಯೋಗಾಭ್ಯಾಸಕ್ಕೆ ಅತಿ ಸಾಮಾನ್ಯವಾಗಿ ಧರಿಸುವ ಜಾಗರ್ಸ್ ಸೆಟ್‌ಗಳನ್ನು ಧರಿಸುವುದು ಸಾಮಾನ್ಯವಾಗಿದೆ. ಇದಕ್ಕೆ ಪ್ರಮುಖ ಕಾರಣ, ಧರಿಸಿದಾಗ ಇವು ಆರಾಮದಾಯಕ ಎನಿಸುತ್ತವೆ. ಜೊತೆಗೆ ಬ್ರಿಥಬಲ್ ಫ್ಯಾಬ್ರಿಕ್‌ನಿಂದ ಇವು ಸಿದ್ಧಗೊಂಡಿರುವುದರಿಂದ ದೇಹವನ್ನು ಉಸಿರುಗಟ್ಟಿಸುವುದಿಲ್ಲ. ಹಾಗಾಗಿ ಅತಿ ಹೆಚ್ಚು ಪುರುಷರು ಇವನ್ನೇ ಚೂಸ್ ಮಾಡತೊಡಗಿದ್ದಾರೆ.
ಹುಡುಗರ ಆಯ್ಕೆಯಲ್ಲಿ ಬರ್ಮುಡಾ ಶಾರ್ಟ್ಸ್
ಇನ್ನು, ಕಾಲೇಜು ಯುವಕರು ಹಾಗೂ ಈ ಜನರೇಷನ್‌ನವರು ಯೋಗಾಭ್ಯಾಸಕ್ಕಾಗಿ ಆಯ್ಕೆ ಮಾಡಿಕೊಂಡಿರುವ ಔಟ್‌ಫಿಟ್‌ಗಳಲ್ಲಿ ಬರ್ಮುಡಾ ಶಾರ್ಟ್ಸ್ ಪ್ರಥಮ ಸ್ಥಾನ ಪಡೆದಿದೆ. ಇವು ಕಂಫರ್ಟಬಲ್ ಫೀಲ್ ನೀಡುವುದರೊಂದಿಗೆ ತಮ್ಮ ಜನರೇಷನ್‌ಗೆ ಮ್ಯಾಚ್ ಆಗುತ್ತವೆ ಎಂಬುದು ಅವರ ಯೋಚನೆಯಾಗಿದೆ ಎನ್ನುತ್ತಾರೆ ಯೋಗ ಎಕ್ಸ್‌ಫರ್ಟ್ ರಾಜ್ ವಿರಾಜ್. ಅವರ ಪ್ರಕಾರ, ಅವರವರ ವಯಸ್ಸಿಗೆ ತಕ್ಕಂತೆ ಇವುಗಳ ಆಯ್ಕೆಯಲ್ಲಿ ಬದಲಾವಣೆ ಕಾಣಬಹುದಂತೆ.
ಸ್ವೆಟ್ ಪ್ಯಾಂಟ್ಸ್–ಟೀ ಶರ್ಟ್ಸ್
ಸ್ವೆಟ್ ಪ್ಯಾಂಟ್ಸ್ ಹಾಗೂ ಕೊಂಚ ಲೂಸಾಗಿರುವ ಕಾಲರ್ ಇಲ್ಲದ ಟೀ ಶರ್ಟ್‌ಗಳನ್ನು ಕೂಡ ಅತಿ ಹೆಚ್ಚು ಪುರುಷರು ಯೋಗಾಭ್ಯಾಸಕ್ಕಾಗಿ ಧರಿಸುತ್ತಾರಂತೆ. ಇದಕ್ಕೆ ಕಾರಣವೂ ಇದೆ. ಈ ಔಟ್‌ಫಿಟ್ ಯೋಗ ಮಾತ್ರವಲ್ಲದೇ, ಇತರೇ ಸಮಯದಲ್ಲೂ ಧರಿಸಬಹುದು. ಟು ಇನ್ ವನ್ ಔಟ್‌ಫಿಟ್‌ಗಳಂತೆ ಬಳಬಹುದು ಹಾಗೂ ಮಿಕ್ಸ್ ಮ್ಯಾಚ್ ಕೂಡ ಮಾಡಬಹುದು. ಹಾಗಾಗಿ ಇವುಗಳ ಬಳಕೆ ಕೂಡ ಹೆಚ್ಚು ಎನ್ನುತ್ತಾರೆ ಸ್ಟೈಲಿಸ್ಟ್ ಧವನ್.
ಇದನ್ನೂ ಓದಿ: Yoga Fashion: ಯೋಗ ಕೋ-ಆರ್ಡ್ ಸೆಟ್‌ಗೆ ಸಿಕ್ತು ಗ್ಲಾಮರ್ ಟಚ್!
ಮೆನ್ಸ್ ಯೋಗ ಔಟ್‌ಫಿಟ್ಸ್ ಟಿಪ್ಸ್
- ಟೈಟ್ ಫಿಟ್ ಔಟ್‌ಫಿಟ್ಸ್ ಧರಿಸುವುದು ನಾಟ್ ಓಕೆ.
- ಫ್ಯಾಷನ್ಗಿಂತ ಕಂಫರ್ಟಬಲ್ ಆಗಿರುವುದು ಮುಖ್ಯ.
- ಈ ಔಟ್‌ಫಿಟ್ ಜೊತೆ ಆಕ್ಸೆಸರೀಸ್ ಧರಿಸಕೂಡದು.
( ಲೇಖಕಿ ಫ್ಯಾಷನ್ ಪತ್ರಕರ್ತೆ )