Site icon Vistara News

Isha Ambani Fashion: ಒಂದೇ ಲೆಹೆಂಗಾವನ್ನು ಮೂರು ಬಾರಿ ರಿಪೀಟ್‌ ಮಾಡಿ ಧರಿಸಿದ ಇಶಾ ಅಂಬಾನಿ!

Isha Ambani Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಂಬಾನಿ ಕುಟುಂಬದ ಕುಡಿ ಇಶಾ ಅಂಬಾನಿ ಧರಿಸಿದ ಡಿಸೈನರ್‌ ಪಿಂಕ್‌ ಲೆಹೆಂಗಾವನ್ನೇ (Isha Ambani Fashion) ಮೂರು ಬಾರಿ ಧರಿಸಿ, ರಿಪೀಟ್‌ ಮಾಡಿ ಸುದ್ದಿಯಾಗಿದ್ದಾರೆ. ಸಸ್ಟೈನಬಲ್‌ ಫ್ಯಾಷನ್‌ಗೆ ಸೈ ಎಂದಿದ್ದಾರೆ.

ಫ್ಯಾಷನ್‌ ವಿಮರ್ಶಕರ ಅಭಿಪ್ರಾಯ

ಫ್ಯಾಷನ್‌ ವಿಮರ್ಶಕರಾದ ವಿದ್ಯಾ ವಿವೇಕ್‌ ಅವರ ಪ್ರಕಾರ, ಅಂಬಾನಿ ಕುಟುಂಬದವರು ಏನೇ ಧರಿಸಿದರೂ ಅದು ಸುದ್ದಿ. ಪ್ರತಿ ಬಾರಿಯೂ ಸೆಲೆಬ್ರೆಟಿ ಡಿಸೈನರ್‌ಗಳಿಂದ ಸಿದ್ಧಪಡಿಸಲಾದ ಲಕ್ಷಗಟ್ಟಲೇ ಬೆಲೆಬಾಳುವ ಔಟ್‌ಫಿಟ್‌ಗಳಲ್ಲೆ ಕಾಣಿಸಿಕೊಳ್ಳುವ ಇವರು ಪ್ರತಿಬಾರಿಯೂ ಭಿನ್ನ-ವಿಭಿನ್ನವಾಗಿ ಯೂನಿಕ್‌ ಆಗಿ ಕಾಣಿಸಿಕೊಳ್ಳಬೇಕೆಂದು ಬಯಸುತ್ತಾರೆ. ಇದಕ್ಕೆ ನಿತಾ ಅಂಬಾನಿಯವರೂ ಹೊರತಾಗಿಲ್ಲ! ಅಷ್ಟೊಂದು ಫ್ಯಾಷನ್‌ ಕಾನ್ಶಿಯಸ್‌ ಆಗಿದ್ದಾರೆ.

ಅಂಬಾನಿ ಕುಟುಂಬದ ಫ್ಯಾಷನ್‌ ಪ್ರೇಮ

ಇನ್ನು, ಅಂಬಾನಿ ಕುಟುಂಬದ ಸೊಸೆಯಂದಿರು ಅಷ್ಟೇ! ಅವರ ಫ್ಯಾಮಿಲಿಯ ಸಮಾರಂಭಗಳಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಅವರೆಲ್ಲರೂ ಧರಿಸುವ ಡಿಸೈನರ್‌ ಔಟ್‌ಫಿಟ್‌ಗಳಿಂದಲೇ ಅವರ ಫ್ಯಾಷನ್‌ ಅಭಿರುಚಿಯನ್ನು ಅಳೆಯಬಹುದು. ಆದರೆ, ಈ ವಿಷಯದಲ್ಲಿ ನಿಶಾ ಅಂಬಾನಿ ಮಾತ್ರ ಡಿಫರೆಂಟ್‌.

ಇದಕ್ಕೆ ಸಾಕ್ಷಿ ಎಂಬಂತೆ, ಒಂದೇ ಉಡುಪನ್ನು ಈಗಾಗಲೇ 3 ಬಾರಿ ಸಾರ್ವಜನಿಕ ಸಮಾರಂಭಗಳಲ್ಲಿ ಧರಿಸಿ, ರಿಪೀಟ್‌ ಮಾಡಿ ಸಸ್ಟೈನಬಲ್‌ ಫ್ಯಾಷನ್‌ಗೆ ಸೈ ಎಂದಿದ್ದಾರೆ. ಅಷ್ಟು ಮಾತ್ರವಲ್ಲ, ಸೆಲೆಬ್ರೆಟಿಯಾದರೇನು ? ಕೊಟ್ಯಾಧಿಪತಿಗಳ ಮಕ್ಕಳಾದರೇನು? ಧಿರಿಸನ್ನು ಮತ್ತೇ ಮತ್ತೇ ಧರಿಸಬಾರದಾ ಎಂಬ ಪ್ರಶ್ನೆಗೆ ಲೆಹೆಂಗಾವನ್ನು ಮತ್ತೊಮ್ಮೆ ಮಗದೊಮ್ಮೆ ಧರಿಸುವ ಮೂಲಕ ಉತ್ತರಿಸಿದ್ದಾರೆ. ಇವರ ಸಸ್ಟೈನಬಲ್‌ ಫ್ಯಾಷನ್‌ ಬಗ್ಗೆ ಫ್ಯಾಷನ್‌ ಲೋಕ ಕೂಡ ಸಂತಸ ವ್ಯಕ್ತಪಡಿಸಿದೆ. ಇದನ್ನು ಇತರೇ ಸೆಲೆಬ್ರೆಟಿಗಳು ಪಾಲಿಸಿದಾಗ ಸಸ್ಟೈನಬಲ್ ಫ್ಯಾಷನ್‌ಗೆ ಒಂದು ಅರ್ಥ ಬರುತ್ತದೆ. ಜನರೂ ಕೂಡ ಪಾಲಿಸಲು ಆರಂಭಿಸುತ್ತಾರೆ ಎನ್ನುತ್ತಾರೆ ಫ್ಯಾಷನ್‌ ಸ್ಟೈಲಿಸ್ಟ್ ಧೀರಜ್‌ ಹಾಗೂ ಧನ್ಯತಾ.

ಇಶಾ ಅಂಬಾನಿಯವರ ಫೇವರೆಟ್‌ ಪಿಂಕ್‌ ಲೆಹೆಂಗಾ

ಅಂದಹಾಗೆ, ಇದೀಗ ಇಶಾ ಅಂಬಾನಿ ಸುದ್ದಿಯಾಗಿರುವುದು, ಬಾಲಿವುಡ್‌ನ ಸೆಲೆಬ್ರೆಟಿ ಡಿಸೈನರ್‌ ಅಬು ಜಾನಿ ಸಂದೀಪ್‌ ಕೋಸ್ಲಾ ಅವರ ಪಿಂಕ್‌ ಲೆಹೆಂಗಾ ರಿಪಿಟೇಡ್‌ ಆಗಿ ಮೂರು ಬಾರಿ ಧರಿಸಿರುವುದಕ್ಕೆ , 2019, 2020ರಲ್ಲಿ ಫ್ಯಾಮಿಲಿ ಮದುವೆಯೊಂದರಲ್ಲಿ ಧರಿಸಿದ್ದರು. 2024ರಲ್ಲಿ ಉದಯ್‌ಪುರ್‌ನಲ್ಲಿ ನಡೆದ ಹೊಸ ವರ್ಷದ ಸಮಾರಂಭವೊಂದರಲ್ಲಿ ಮತ್ತೊಮ್ಮೆ ಧರಿಸಿದ್ದರು. ಹೀಗೆ ಮೂರು ಬಾರಿ ಒಂದೇ ಲೆಹೆಂಗಾವನ್ನು ರಿಪೀಟ್‌ ಮಾಡಿರುವುದು ಸಸ್ಟೈನಬಲ್‌ ಫ್ಯಾಷನ್‌ ಬಗ್ಗೆ ಅವರಿಗಿರುವ ಪ್ರೇಮವನ್ನು ವ್ಯಕ್ತಪಡಿಸುತ್ತದೆ ಎನ್ನುತ್ತಾರೆ ಫ್ಯಾಷನಿಸ್ಟ್‌ ಯಶ್‌.

ಒಟ್ಟಾರೆ, ಸಾಮಾನ್ಯ ಹುಡುಗಿಯಂತೆ ಅಂಬಾನಿ ಫ್ಯಾಮಿಲಿಯ ಹೆಣ್ಣುಮಗಳು ಕಾರ್ಯಕ್ರಮಗಳಲ್ಲಿ ಔಟ್‌ಫಿಟ್‌ ರಿಪೀಟ್‌ ಮಾಡುತ್ತಾಳಲ್ಲ! ಎಂಬುದು ಫ್ಯಾಷನ್‌ ಲೋಕದಲ್ಲಿ ಹುಬ್ಬೇರಿಸಿದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Winter Fashion: ಚಳಿಗಾಲದ ಸ್ಟೈಲ್‌ಗೆ ಕಲರ್‌ಫುಲ್‌ ಫೇಕ್‌ ಫರ್‌ ಜಾಕೆಟ್ಸ್ ಎಂಟ್ರಿ!

Exit mobile version