Site icon Vistara News

Mysore Fashion Week 2024: ಮೈಸೂರು ಫ್ಯಾಷನ್‌ ವೀಕ್‌ನಲ್ಲಿ ಜಯಂತಿ ಬಲ್ಲಾಳ್‌ ಎಥ್ನಿಕ್‌ ಡಿಸೈನರ್‌ವೇರ್ಸ್ ಅನಾವರಣ

Mysore Fashion Week 2024

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೌತ್‌ ಇಂಡಿಯಾದ ಅತಿ ದೊಡ್ಡ ಫ್ಯಾಷನ್‌ ವೀಕ್‌ ಎಂದೇ ಹೆಸರಾದ ಮೈಸೂರು ಫ್ಯಾಷನ್‌ ವೀಕ್ 2024 (Mysore Fashion Week 2024) ಯಶಸ್ವಿಯಾಗಿ ಜರುಗಿತು. ಸುಮಾರು 17ಕ್ಕೂ ಹೆಚ್ಚು ಡಿಸೈನರ್‌ಗಳು ಭಾಗವಹಿಸಿ, ತಂತಮ್ಮ ಎಕ್ಸ್‌ಕ್ಲೂಸೀವ್‌ ಡಿಸೈನರ್‌ವೇರ್‌ಗಳನ್ನು ಪ್ರದರ್ಶಿಸಿದರು. ಈ ಮಧ್ಯೆ, ಪ್ರತಿ ವರ್ಷದಂತೆ ಈ ವರ್ಷವೂ ಸೆಲೆಬ್ರೆಟಿ ಡಿಸೈನರ್‌ ಜಯಂತಿ ಬಲ್ಲಾಳ್‌, ತಮ್ಮ ಲೆಬೆಲ್‌ನಲ್ಲಿ ಸಿದ್ಧಗೊಂಡ ನಾನಾ ಎಥ್ನಿಕ್‌ ಡಿಸೈನರ್‌ವೇರ್‌ಗಳು, ಸೀರೆ ಹಾಗೂ ಬ್ಲೌಸ್‌ಗಳನ್ನು ರ‍್ಯಾಂಪ್‌ ಮೇಲೆ ಅನಾವರಣಗೊಳಿಸಿದರು.

ಜಯಂತಿ ಬಲ್ಲಾಳ್‌ ರ‍್ಯಾಂಪ್‌ ಶೋ

ರೇಷ್ಮೆ ಫ್ಯಾಬ್ರಿಕ್‌ನಲ್ಲಿ ಸಿದ್ಧಗೊಂಡ ಡಿಸೈನರ್‌ವೇರ್‌ಗಳು, ಮೆನ್ಸ್ ಡಿಸೈನರ್‌ವೇರ್ಸ್ ಹಾಗೂ ಡಿಸೈನರ್‌ ಬ್ಲೌಸ್‌- ಸೀರೆಗಳನ್ನು ಧರಿಸಿದ ಸರಿ ಸುಮಾರು 54 ಮಾಡೆಲ್‌ಗಳು ರ‍್ಯಾಂಪ್‌ ಮೇಲೆ ಯಶಸ್ವಿಯಾಗಿ ಹೆಜ್ಜೆ ಹಾಕಿದರು.

ಸೆಲೆಬ್ರೆಟಿ ಶೋ ಸ್ಟಾಪರ್‌ ನಿಮ್ರಿತ್‌ ಕೌರ್‌

ಏರ್‌ಲಿಫ್ಟ್ ಸಿನಿಮಾ ಖ್ಯಾತಿಯ ಬಾಲಿವುಡ್‌ ತಾರೆ ನಿಮ್ರಿತ್‌ ಕೌರ್ ಮೈಸೂರ್‌ ಫ್ಯಾಷನ್‌ ವೀಕ್‌ನಲ್ಲಿ ಜಯಂತಿ ಬಲ್ಲಾಳ್‌ ಅವರ ಡಿಸೈನ್‌ನ ಡಿಸೈನರ್‌ ಬ್ಲೌಸ್‌ ಹಾಗೂ ಸೀರೆ ಉಟ್ಟು ಸೆಲೆಬ್ರೆಟಿ ಶೋ ಸ್ಟಾಪರ್‌ ವಾಕ್‌ ಮಾಡಿದರು. ಆಕರ್ಷಕ ಬ್ರೈಟ್‌ ಶೇಡ್‌ನ ಬಾರ್ಡರ್‌ ರೇಷ್ಮೆ ಸೀರೆಯಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡ ನಿಮ್ರಿತ್‌ ನೆರೆದಿದ್ದ ಫ್ಯಾಷನ್‌ ಪ್ರಿಯರ ಗಮನಸೆಳೆದರು. ಮೈಸೂರು ಫ್ಯಾಷನ್‌ ವೀಕ್‌ನಲ್ಲಿ ನಾನು ರ‍್ಯಾಂಪ್‌ ವಾಕ್‌ ಮಾಡಿದ್ದು, ಸಂತಸ ತಂದಿದೆ. ಅದರಲ್ಲೂ ಸೆಲೆಬ್ರೆಟಿ ಡಿಸೈನರ್‌ ಜಯಂತಿ ಬಲ್ಲಾಳ್‌ ಅವರ ಡಿಸೈನ್‌ನ ಬ್ಲೌಸ್‌ ಹಾಗೂ ಸೀರೆ ಧರಿಸಿ ಹೆಜ್ಜೆ ಹಾಕಿದ್ದು, ಫ್ಯಾಷನ್‌ ದಿಗ್ಗಜರ ಗಮನ ಸೆಳೆದಿದೆ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಜಯಂತಿ ಬಲ್ಲಾಳ್‌ ಫ್ಯಾಷನ್‌ ಮಾತು

ಮೈಸೂರು ಫ್ಯಾಷನ್‌ ವೀಕ್‌ನಲ್ಲಿ ಡಿಸೈನರ್‌ವೇರ್‌ಗಳ ಅನಾವರಣ ಮಾಡುವುದಷ್ಟೇ ಅಲ್ಲ, ರ‍್ಯಾಂಪ್‌ನಲ್ಲಿ ಟೀಮ್‌ನೊಂದಿಗೆ ಹೆಜ್ಜೆ ಹಾಕುವುದು ಖುಷಿಯೆನಿಸುತ್ತದೆ. ಪ್ರತಿಬಾರಿಯೂ ಹೊಸತನ್ನು ಪ್ರದರ್ಶಿಸುವ ಉದ್ದೇಶವನ್ನಿರಿಸಿಕೊಂಡು ಬರುತ್ತೇವೆ. ನಾನಾ ಡಿಸೈನರ್‌ಗಳನ್ನು ಹಾಗೂ ಮಾಡೆಲ್‌ಗಳನ್ನು ಭೇಟಿ ಮಾಡುತ್ತೇವೆ. ಇದು ಸಂತಸ ತರುತ್ತದೆ” ಎಂದು ಜಯಂತಿ ಬಲ್ಲಾಳ್‌ ಸಂತಸ ವ್ಯಕ್ತಪಡಿಸಿದರು. ನಾನಾ ಕಡೆಯಿಂದ ಆಗಮಿಸಿದ್ದ ಸುಮಾರು 17 ಡಿಸೈನರ್‌ಗಳು ಹಾಗೂ 54 ಮಾಡೆಲ್‌ಗಳು ಅತ್ಯುತ್ಸಾಹದಿಂದ ಭಾಗವಹಿಸಿದರು. ಸ್ಯಾಂಡಲ್‌ವುಡ್‌ ನಟ ದಿಗಂತ್‌ ಹಾಗೂ ಬಾಲಿವುಡ್‌ ನಟಿ ಮಾಧುರಿ ಕೂಡ ಇತರೇ ಡಿಸೈನರ್‌ಗಳ ಶೋ ಸ್ಟಾಪರ್‌ ಆಗಿ ಭಾಗವಹಿಸಿದ್ದರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Fashion Pageant News: ಮಿಸ್‌, ಮಿಸೆಸ್‌ ಇಂಡಿಯಾ ರೋಲ್‌ ಮಾಡೆಲ್‌ 2024 ಬ್ಯೂಟಿ ಪೇಜೆಂಟ್‌ ವಿಜೇತರಿವರು!

Exit mobile version