Site icon Vistara News

Jeans Fashion: ಜೀನ್ಸ್ ಪ್ಯಾಂಟ್‌ನಲ್ಲಿ ಇಂಡೋ-ವೆಸ್ಟರ್ನ್ ಲುಕ್‌ಗೆ 3 ಸಿಂಪಲ್‌ ಐಡಿಯಾ

Jeans Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜೀನ್ಸ್ ಪ್ಯಾಂಟ್‌ಗೆ (Jeans Fashion) ಇಂಡೋ-ವೆಸ್ಟರ್ನ್ ಲುಕ್‌ ನೀಡುವ ಟ್ರೆಂಡ್‌ ಇದೀಗ ಚಾಲ್ತಿಯಲ್ಲಿದೆ. ನೋಡಲು ಮಾಡರ್ನ್ ಲುಕ್‌ ಜೊತೆಜೊತೆಗೆ ದೇಸಿ ಔಟ್‌ಫಿಟ್‌ ಮಿಕ್ಸ್ ಮಾಡುವ ಕಾನ್ಸೆಪ್ಟ್ ಇದೀಗ ಜೆನ್‌ ಜಿ ಹುಡುಗಿಯರಲ್ಲಿ ಹೆಚ್ಚಾಗಿದೆ. “ಜೀನ್ಸ್ ಪ್ಯಾಂಟ್‌ನಲ್ಲಿ ಇಂಡೋ-ವೆಸ್ಟರ್ನ್ ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ಇಂದಿನ ಫ್ಯಾಷನ್‌ನಲ್ಲ! ದಶಕಗಳಿಂದಲೂ ಇದೆ. ಆದರೆ, ಆಗಾಗ್ಗೆ ಮರೆಯಾಗಿ ಹೊಸ ರೂಪದಲ್ಲಿ ಬಿಡುಗಡೆಗೊಳ್ಳುತ್ತಿರುತ್ತದೆ. ಸಿನಿಮಾ ತಾರೆಯರಿಂದ ಮರು ಹುಟ್ಟು ಪಡೆಯುತ್ತಿರುತ್ತದೆ” ಎನ್ನುತ್ತಾರೆ ಪ್ಯಾಷನಿಸ್ಟ್‌ಗಳು. ಇನ್ನು, ನೀವೂ ಕೂಡ ಜೀನ್ಸ್ ಪ್ಯಾಂಟ್‌ ಧರಿಸಿ ಇಂಡೋ-ವೆಸ್ಟರ್ನ್ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಬಯಸುತ್ತಿದ್ದೀರಾ! ಹಾಗಾದಲ್ಲಿ, ಯೋಚಿಸಬೇಡಿ, ಈ ಸಿಂಪಲ್‌ ಸ್ಟೈಲಿಂಗ್‌ ಐಡಿಯಾಗಳನ್ನು ಟ್ರೈ ಮಾಡಿ. ಸದ್ಯ ಟ್ರೆಂಡಿಯಾಗಿರುವ ಈ ಸ್ಟೈಲಿಂಗ್‌ ನೀವೂ ಕೂಡ ಮಾಡಿ ಎನ್ನುವ ಸ್ಟೈಲಿಸ್ಟ್ ಜಾನ್‌ ಒಂದಿಷ್ಟು ಸಿಂಪಲ್‌ ಮಿಕ್ಸ್ ಮ್ಯಾಚ್‌ ಐಡಿಯಾ ನೀಡಿದ್ದಾರೆ.

ಆಕರ್ಷಕ ಎಥ್ನಿಕ್‌ ಜಾಕೆಟ್‌

ನೀವು ಧರಿಸುವ ಯಾವುದೇ ಜಿನ್ಸ್ ಪ್ಯಾಂಟ್‌ಗೆ ಫಾರ್ಮಲ್‌ ಅಥವಾ ವೈಟ್‌ ಟೀ ಶರ್ಟ್ ಧರಿಸಿ. ಅದರ ಮೇಲೆ ರಾಜಸ್ಥಾನಿ ಶೈಲಿಯ ಎಥ್ನಿಕ್‌ ಟಚ್‌ ನೀಡುವ ವೇಸ್ಟ್ಕೋಟ್‌ ಆಯ್ಕೆ ಮಾಡಿ ಧರಿಸಿ. ಇದು ನೋಡಲು ಕ್ಲಾಸಿ ಲುಕ್‌ ನೀಡುತ್ತದೆ. ಜೊತೆಗೆ ಇಂಡೋ-ವೆಸ್ಟರ್ನ್ ಲುಕ್‌ ಸುಲಭವಾಗಿ ನೀಡುತ್ತದೆ.

ಸ್ಲಿವ್‌ಲೆಸ್‌ ಟ್ರೆಡಿಷನಲ್‌ ಜಾಕೆಟ್‌

ಟ್ರೆಡಿಷನಲ್‌ ಲುಕ್‌ ನೀಡುವ ಯಾವುದೇ ಡಿಸೈನ್‌ನ ಅಥವಾ ಪ್ರಿಂಟ್ಸ್‌ನ ಸ್ಲಿವ್‌ಲೆಸ್‌ ಜಾಕೆಟ್‌ ಚೂಸ್‌ ಮಾಡಿ. ಧರಿಸಿರು ಜೀನ್ಸ್ ಪ್ಯಾಂಟ್‌ ಮೇಲೆ ಧರಿಸಿ. ಆದರೆ, ಈ ಜಾಕೆಟ್‌ ಒಳಗೆ ಧರಿಸುವ ಟೀ ಶರ್ಟ್ ಅಥವಾ ಶರ್ಟ್ ಮಾತ್ರ ಲೈಟ್‌ ಕಲರ್‌ನದ್ದಾಗಬೇಕು. ಕಾಂಟ್ರಾಸ್ಟ್ ಶೇಡ್‌ನದ್ದನ್ನು ಬಳಸಬಹುದು.

ಕ್ವಿಲ್ಟೆಡ್‌ ಜಾಕೆಟ್‌

ಹ್ಯಾಂಡ್‌ಮೇಡ್‌ ಕ್ವಿಲ್ಟೆಡ್‌ ಜಾಕೆಟ್‌ಗಳು ನಾನಾ ಶೈಲಿಯಲ್ಲಿ ಲಭ್ಯ. ಬಟನ್‌ ಹಾಗೂ ಟೈಯಿಂಗ್‌ ಡಿಸೈನ್‌ನಲ್ಲೂ ದೊರೆಯುವ ಈ ಜಾಕೆಟ್‌ಗಳನ್ನು ಜೀನ್ಸ್‌ ಪ್ಯಾಂಟ್‌ ಹಾಗೂ ಡಾರ್ಕ್ ಟಾಪ್‌ ಮೇಲೆ ಧರಿಸಬಹುದು. ಇದು ಪಕ್ಕಾ ಟ್ರೆಡಿಷನಲ್‌ ಪ್ಲಸ್‌ ವೆಸ್ಟರ್ನ್ ಲುಕ್‌ ನೀಡುವಲ್ಲಿ ಸಹಕಾರಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Holiday Fashion: ಪರ್ಫೆಕ್ಟ್ ಸಮ್ಮರ್‌ ಹಾಲಿ ಡೇ ಲುಕ್‌ನಲ್ಲಿ ನಟಿ ಅಮೂಲ್ಯ

Exit mobile version