Site icon Vistara News

Joggers Co-Ord Set Fashion: ಜಾಗರ್ಸ್‌ಗಳಿಗೂ ಬಂತು ಮಾನೋಕ್ರೋಮ್‌ ಕೋ-ಆರ್ಡ್ ಸೆಟ್ಸ್

Joggers Co-Ord Set Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಜಾಗರ್ಸ್ ಫ್ಯಾಷನ್‌ನಲ್ಲಿ (Joggers Co-Ord Set Fashion) ಇದೀಗ ಮಾನೋಕ್ರೋಮ್‌ ಶೇಡ್ಸ್‌ನ ಕೋ -ಆರ್ಡ್ ಸೆಟ್‌ಗಳು ಲಗ್ಗೆ ಇಟ್ಟಿವೆ. ಹೌದು. ಈ ಮಾನ್ಸೂನ್‌ ಫ್ಯಾಷನ್‌ನಲ್ಲಿ ಜಾಗರ್ಸ್‌ಗಳು ಧರಿಸುವ ನಾನಾ ಔಟ್‌ಫಿಟ್‌ಗಳಲ್ಲಿ ಮಾನೋಕ್ರೋಮ್‌ ಕೋ -ಆರ್ಡ್ ಸೆಟ್‌ಗಳು ಟ್ರೆಂಡಿಯಾಗಿದ್ದು, ಎಲ್ಲಾ ವಯಸ್ಸಿನವರನ್ನು ಸೆಳೆದಿವೆ.

“ಹೈ ಫ್ಯಾಷನ್‌ನಿಂದಿಡಿದು ಸಾಮಾನ್ಯ ಸ್ಟೈಲಿಂಗ್‌ನಲ್ಲೂ ಕೋ ಆರ್ಡ್ ಸೆಟ್‌ಗಳ ಛಾಯೆ ಎದ್ದು ಕಾಣುತ್ತಿದೆ. ಇನ್ನು ಫಿಟ್ನೆಸ್‌ ಫ್ರೀಕ್‌ಗಳ ಔಟ್‌ಫಿಟ್‌ಗಳಿಗೂ ಇವು ಕಾಲಿಟ್ಟಿವೆ. ಟೈಟ್‌ ಫಿಟ್ಟಿಂಗ್‌ನಿಂದಿಡಿದು ದೊಗಲೆ ಜಾಗರ್ಸ್ ಸೂಟ್‌ಗಳು ಕೂಡ ಟೂ ಪೀಸ್‌ ಹಾಗೂ ತ್ರೀ ಪೀಸ್‌ ಕೋ-ಆರ್ಡ್ ಸೆಟ್‌ಗಳಲ್ಲಿ ಆಗಮಿಸಿವೆ” ಎನ್ನುತ್ತಾರೆ ಡಿಸೈನರ್‌ ರೋಜಾ. ಅವರ ಪ್ರಕಾರ, ಮೊದಲೆಲ್ಲಾ ಯಾವುದೋ ಕಂಫರ್ಟಬಲ್‌ ಆಗಿರುವ ಜಾಗರ್ಸ್ ವೇರ್‌ಗಳನ್ನು ಧರಿಸುವುದು ಸಾಮಾನ್ಯವಾಗಿತ್ತು. ಆದರೆ, ಈಗ ಹಾಗಿಲ್ಲ, ಜಾಗರ್ಸ್‌ಗಳು ಸೆಟ್‌ಗಳು ಫ್ಯಾಷೆನಬಲ್‌ ಆಗಿವೆ. ಉತ್ಸಾಹ ತುಂಬುವಂತಹ ಫ್ಯಾಷನ್‌ವೇರ್‌ ಧರಿಸುವುದು ಫ್ಯಾಷನ್‌ ಆಗಿದೆ. ಇದಕ್ಕೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ನಾನಾ ಬಗೆಯ ಟ್ರೆಂಡಿ ಜಾಗರ್ಸ್ ಕೋ- ಆರ್ಡ್ ಸೆಟ್‌ಗಳು ಕಾಲಿಟ್ಟಿವೆ” ಎನ್ನುತ್ತಾರೆ ಸ್ಟೈಲಿಸ್ಟ್‌ ರಂಜಿತಾ.

ಟ್ರೆಂಡಿಯಾಗಿರುವ ಮಾನೋಕ್ರೋಮ್‌ ಕೋ ಆರ್ಡ್ ಜಾಗರ್ಸ್ ಸೆಟ್‌

ಲೈಟ್‌ ಹಾಗೂ ಡಾರ್ಕ್ ಶೇಡ್‌ಗಳ ಮೋನೋಕ್ರೋಮ್‌ ಕೋ -ಆರ್ಡ್ ಜಾಗರ್ಸ್ ಸೆಟ್‌ಗಳಲ್ಲಿ ಇದೀಗ ನ್ಯೂಡ್‌ ಶೇಡ್ಸ್‌, ಪೀಚ್‌, ಪಿಂಕ್‌, ಲ್ಯಾವೆಂಡರ್‌, ಬೂದು ಬಣ್ಣದ ಹಾಗೂ ಕ್ರೀಮಿಶ್‌ ವರ್ಣದವು ಹೆಚ್ಚು ಚಾಲ್ತಿಯಲ್ಲಿವೆ. ಇನ್ನು ಯುವತಿಯರು ಎಂದಿನಂತೆ, ಲೈಟ್‌ ಪಾಸ್ಟೆಲ್‌ ಶೇಡ್‌ವನ್ನು ಹೆಚ್ಚು ಇಷ್ಟಪಟ್ಟರೇ, ಹುಡುಗರು ಲೈಟ್‌ ಬ್ಲಾಕ್‌, ಗ್ರೇನಂತಹ ಮಾನೋಕ್ರೋಮ್‌ ಶೇಡ್‌ನ ಜಾಗರ್ಸ್ ಕೋ ಆರ್ಡ್ ಸೆಟ್‌ಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಇನ್ನು ವಿವಾಹಿತರು ಹಾಗೂ ಮಧ್ಯ ವಯಸ್ಕರು ಆದಷ್ಟೂ ಡಾರ್ಕ್ ಶೇಡ್‌ ಬ್ರೌನ್‌, ಆರೆಂಜ್‌, ರೆಡ್‌, ವೈನ್‌ ರೆಡ್‌, ಕೋಬಾಲ್ಟ್‌ ಬ್ಲ್ಯೂ ಶೇಡ್‌ನವನ್ನು ಖರೀದಿಸುತ್ತಾರೆ ಎನ್ನುತ್ತಾರೆ ಮಾರಾಟಗಾರರು.

ಜಾಗರ್ಸ್ ಕೋ- ಆರ್ಡ್ ಸೆಟ್‌ ಪ್ರಿಯರಿಗೆ ತಿಳಿದಿರಲಿ

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Kaftan set Fashion: ಮಳೆಗಾಲದಲ್ಲೂ ಮರೆಯಾಗದ ಫ್ಲೋರಲ್‌ ಕಫ್ತಾನ್‌ ಸೆಟ್‌ ಫ್ಯಾಷನ್‌

Exit mobile version