Site icon Vistara News

Jumka Bangles Fashion: ಡಿಸೈನರ್‌ ಬಳೆಗಳಿಗೆ ಜುಮ್ಕಾ ಅಲಂಕಾರ!

Jumka Bangles Fashion

-ಶೀಲಾ ಸಿ, ಶೆಟ್ಟಿ, ಬೆಂಗಳೂರು
ಡಿಸೈನರ್‌ ಜುಮ್ಕಾ ಬಳೆಗಳು (Jumka Bangles Fashion) ಟ್ರೆಂಡಿಯಾಗಿವೆ. ಬಳೆ ಪ್ರಿಯ ಮಹಿಳೆಯರ ಕೈಗಳನ್ನು ಅಲಂಕರಿಸುತ್ತಿವೆ. ಜುಮ್ಕಾ ಬಳೆಗಳು ಸದಾ ವೆಡ್ಡಿಂಗ್‌ ಸೀಸನ್‌ನಲ್ಲಿ ಹೆಚ್ಚು ಚಾಲ್ತಿಗೆ ಬರುತ್ತವೆ. ಇದೀಗ ಟ್ರೆಡಿಷನಲ್‌ ಮದುವೆ ಸಮಾರಂಭಗಳು ಹಾಗೂ ಕುಟುಂಬದ ಕಾರ್ಯಕ್ರಮಗಳಲ್ಲಿ ಇವನ್ನು ಧರಿಸುವ ಮಹಿಳೆಯರು ಹೆಚ್ಚಾದಂತೆ, ನಾನಾ ಡಿಸೈನ್‌ಗಳು ಬಿಡುಗಡೆಗೊಳ್ಳುತ್ತಿವೆ.

ಏನಿದು ಜುಮ್ಕಾ /ಜುಮಕಿ ಬಳೆಗಳು

ಅಂದಹಾಗೆ, ಕಿವಿಗೆ ಧರಿಸುವ ವೆರೈಟಿ ಡಿಸೈನ್‌ನ ಜುಮ್ಕಾಗಳು ಇದೀಗ ಬಳೆಗಳಲ್ಲಿ ನೇತಾಡುತ್ತಿವೆ. ಬಳೆಗಳಿಗೆ ಅಟ್ಯಾಚ್‌ ಆದಂತೆ ಅವನ್ನು ಡಿಸೈನ್‌ ಮಾಡಲಾಗಿರುತ್ತದೆ. ಕಡಗ, ಬಳೆಗಳ ಸೈಝಿಗೆ ತಕ್ಕಂತೆ ಜುಮ್ಕಾಗಳನ್ನು ಚೈನ್‌ ಮುಖಾಂತರ ಅಥವಾ ನೇರವಾಗಿ ಅಟ್ಯಾಚ್‌ ಮಾಡಲಾಗಿರುತ್ತದೆ. ಅವನ್ನೇ ಜುಮ್ಕಾ ಬಳೆಗಳೆನ್ನಲಾಗುತ್ತದೆ.

ಟ್ರೆಂಡಿಯಾಗಿರುವ ಜುಮ್ಕಾ ಬಳೆಗಳು

ಈ ಸೀಸನ್‌ನಲ್ಲಿ ಜುಮ್ಕಾ ಬಳೆಗಳು, ಕೇವಲ ಗೋಲ್ಡ್ ಪ್ಲೇಟೆಡ್‌ನಲ್ಲಿ ಮಾತ್ರವಲ್ಲ, ವೈಟ್‌ ಹಾಗೂ ಬ್ಲ್ಯಾಕ್‌ ಮೆಟಲ್‌ನಲ್ಲೂ ದೊರೆಯುತ್ತಿವೆ. ಇನ್ನು ಹೆಚ್ಚು ಬೆಲೆಯಾದರೂ ಪರವಾಗಿಲ್ಲ, ನೋಡಲು ಮಾತ್ರ ಚೆನ್ನಾಗಿ ಕಾಣಿಸಬೇಕು ಎನ್ನುವವರು ಸಿಲ್ವರ್‌ ಜ್ಯುವೆಲರಿ ಹಾಗೂ ಆಕ್ಸಿಡೈಸ್ಡ್ ಜ್ಯುವೆಲರಿಗಳಲ್ಲಿ ಲಭ್ಯವಿರುವ ಜುಮ್ಕಾ ಬಳೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕೈಗೆಟುಕುವ ಬೆಲೆಯಿಂದಿಡಿದು ಸಾವಿರಾರು ರೂ.ಗಳಲ್ಲೂ ಈ ಜುಮ್ಕಾ ಬಳೆಗಳು ದೊರೆಯುತ್ತಿವೆ.

ಗೋಲ್ಡ್ ಪ್ಲೇಟೆಡ್ ಜುಮ್ಕಾಗಳಿಗೆ ಬೇಡಿಕೆ

ಸೆಟ್‌ ಬ್ಯಾಂಗಲ್ಸ್, ಸಿಂಗಲ್‌ ಕಡ ಅಥವಾ ಕಡಗ, ಸೈಡ್‌ ಬ್ಯಾಂಗಲ್ಸ್, ಸೆಂಟರ್‌ ಬ್ಯಾಂಗಲ್‌ಗಳಲ್ಲೂ ಜುಮ್ಕಾ ಡಿಸೈನರ್‌ ಬಳೆಗಳು ಬಂದಿವೆ. ಫ್ಯಾನ್ಸಿ ಶಾಪ್‌ಗಳಲ್ಲಿ ನಾನಾ ಡಿಸೈನ್‌ನಲ್ಲಿ ದೊರೆಯುತ್ತಿರುವ ಇವು, ಇದೀಗ ಆನ್‌ಲೈನ್‌ನಲ್ಲೂ ದೊರೆಯುತ್ತಿವೆ. ಹಾಗಾಗಿ ಸಾಕಷ್ಟು ಡಿಸೈನ್‌ನವನ್ನು ಕಾಣಬಹುದು ಎನ್ನುತ್ತಾರೆ ಮಾರಾಟಗಾರರಾದ ಶೇಖರ್‌. ಅವರ ಪ್ರಕಾರ, ಜುಮ್ಕಾ ಬಳೆಗಳು ಟ್ರೆಡಿಷನಲ್‌ ಲುಕ್‌ಗೆ ಆಕರ್ಷಕವಾಗಿ ಕಾಣುವುದರಿಂದ ಅತಿ ಹೆಚ್ಚಾಗಿ ಗೋಲ್ಡ್ ಪ್ಲೇಟೆಡ್‌ ಜುಮ್ಕಾ ಬಳೆಗಳನ್ನು ಖರೀದಿಸುವುದು ಹೆಚ್ಚಂತೆ.

ಇದನ್ನೂ ಓದಿ: Dress Fashion: ಲೇಸರ್‌ ಕಟ್‌ವರ್ಕ್ ಡ್ರೆಸ್‌ಗಳಿಗೂ ಸಿಕ್ತು ಗ್ಲಾಮರಸ್ ಟಚ್‌!

ಜುಮ್ಕಾ ಬಳೆ ಪ್ರಿಯರಿಗೆ ಒಂದಿಷ್ಟು ಸಲಹೆ

(ಲೇಖಕಿ ಫ್ಯಾಷನ್‌ ಪತ್ರಕರ್ತೆ )

Exit mobile version