ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜುಮಕಿಗಳು ಇದೀಗ ಜುಮ್ಕಾ ಸರಗಳಾಗಿವೆ (Jhumka neck chain Fashion). ಹೌದು. ನಾನಾ ಬಗೆಯ ನೆಕ್ಚೈನ್ ಹಾಗೂ ಸರಗಳೊಂದಿಗೆ ವಿಭಿನ್ನವಾಗಿ ನಾನಾ ವಿನ್ಯಾಸದಲ್ಲಿ ಕಾಣಿಸಿಕೊಂಡಿವೆ. ಅದರಲ್ಲೂ ಬ್ಲಾಕ್ ಮೆಟಲ್ ಹಾಗೂ ವೈಟ್ ಮೆಟಲ್ ಆಕ್ಸೆಸರೀಸ್ ಕೆಟಗರಿಯಲ್ಲಿ ಸದ್ಯ ಇವು ಬೇಡಿಕೆ ಹೆಚ್ಚಿಸಿಕೊಂಡಿವೆ.
ವೆರೈಟಿ ಜುಮ್ಕಾ ಸರಗಳು
“ಹುಡುಗಿಯರ ಕಿವಿಯಲ್ಲಿ ನೇತಾಡುತ್ತಿದ್ದ ನಾನಾ ಬಗೆಯ ಜುಮಕಿಗಳು ಇದೀಗ ವೆರೈಟಿ ಸರ ಹಾಗೂ ಹಾರದ ರೂಪವನ್ನು ತಾಳಿವೆ. ಯುವತಿಯರ ಕುತ್ತಿಗೆಯನ್ನು ಅಲಂಕರಿಸುತ್ತಿವೆ. ವಿಭಿನ್ನ ಲುಕ್ನಲ್ಲಿ ನೆಕ್ ಚೈನ್ ಹಾಗೂ ಬಗೆಬಗೆಯ ಉದ್ದುದ್ದದ ಸರಗಳಾಗಿ ಬದಲಾಗಿವೆ. ಎಥ್ನಿಕ್ ಉಡುಪುಗಳಿಗೆ ಮಾತ್ರವಲ್ಲ, ಇಂಡೋ –ವೆಸ್ಟರ್ನ್ ಔಟ್ಫಿಟ್ಗಳಿಗೂ ಸಾಥ್ ನೀಡುತ್ತಿವೆ. ಫ್ಯೂಷನ್ ಜ್ಯುವೆಲರಿ ಲಿಸ್ಟ್ನಲ್ಲಿ ಜಂಕ್ ಆಭರಣಗಳೆಂದು ಹೆಸರು ಪಡೆದಿವೆ “ ಎನ್ನುತ್ತಾರೆ ಜಂಕ್ ಜ್ಯುವೆಲ್ ಮಾರಾಟಗಾರರು. ಅವರ ಪ್ರಕಾರ, ಜಂಕ್ ಜ್ಯುವೆಲರಿ ಹಾಗೂ ಫ್ಯೂಷನ್ ಜ್ಯುವೆಲರಿ ಎರಡಲ್ಲೂ ಇವು ಕಾಣಿಸಿಕೊಳ್ಳತೊಡಗಿವೆ ಎನ್ನುತ್ತಾರೆ.
ಟ್ರೆಂಡ್ನಲ್ಲಿರುವ ಜುಮ್ಕಾ ಸರಗಳು
ಕೆಲವು ಲೇಯರ್ ಲುಕ್ನಂತೆ ಕಾಣುವ ಡಿಸೈನ್ನಲ್ಲಿದ್ದರೇ, ಇನ್ನು ಕೆಲವು ಚೈನ್ಗೆ ಹೊಂದಿಕೊಂಡಂತಿರುತ್ತವೆ. ಮತ್ತೆ ಕೆಲವು ಜುಮ್ಕಾಗಳ ಸರಮಾಲೆಯಂತೆ ನೆಕ್ಚೈನ್ನಂತಹ ಡಿಸೈನ್ನಲ್ಲಿ ಬಂದಿವೆ. ಒಂದಕ್ಕೊಂದು ಒಂದು ವಿಭಿನ್ನವಾಗಿರುವಂತೆ ಕಾಣುವ ಈ ಜುಮ್ಕಾ ಸರಗಳು ಫ್ಯೂಷನ್ ಡಿಸೈನ್ನಲ್ಲಿ ಇದೀಗ ಪ್ರಚಲಿತದಲ್ಲಿರುವ ಆಭರಣಗಳೆಂದರೇ ಅತಿಶಯೋಕ್ತಿಯಾಗದು. ಇನ್ನು ಸಿಂಗಲ್ ಎಳೆಯ ಜುಮ್ಕಾ ನೆಕ್ಚೈನ್ ಕಾಲೇಜು ಹುಡುಗಿಯರನ್ನು ಸೆಳೆದರೇ, ಒಂದಕ್ಕಿಂತ ಹೆಚ್ಚು ಎಳೆಯಿರುವ ಮಲ್ಟಿ ಲೇಯರ್ ಜುಮ್ಕಾ ಹಾರಗಳು ದೇಸಿ ಪ್ರೇಮಿ ಯುವತಿಯರನ್ನು ಆಕರ್ಷಿಸಿವೆ. ದೇಸಿ ಉಡುಪಿನೊಂದಿಗೆ ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್ ರಾಘವ್.
ಮಿಕ್ಸ್ ಮ್ಯಾಚ್ ಮಾಡಬಹುದಾದ ಪ್ಯೂಷನ್ ಶೈಲಿ
ಯಾವುದೇ ಉಡುಪಿನೊಂದಿಗೂ ಮಿಕ್ಸ್ ಮ್ಯಾಚ್ ಮಾಡಬಹುದಾದ ಫ್ಯೂಷನ್ ಜ್ಯುವೆಲರಿಗಳಿವು. ಆಯಾ ಯುವತಿಯ ಅಭಿರುಚಿಗೆ ತಕ್ಕಂತೆ ಮೆಟಲ್ ಕಲರ್ ಬದಲಾಗುತ್ತದಷ್ಟೇ ಎನ್ನುತ್ತಾರೆ ಮಾರಾಟಗಾರರು.
ಎಲ್ಲೆಲ್ಲಿ ದೊರೆಯುತ್ತವೆ?
ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ನ ಅಕ್ಕಪಕ್ಕದ ಬೀದಿಗಳಲ್ಲಿ ಸ್ಟ್ರೀಟ್ ಜ್ಯುವೆಲ್ ಮಾರಾಟಗಾರರ ಬಳಿ ಇವು ದೊರೆಯುತ್ತವೆ. ಜಯನಗರ 4ನೇ ಬ್ಲಾಕ್, ಮಲ್ಲೇಶ್ವರಂ 8ನೇ ಕ್ರಾಸ್ ಬಳಿ, ಗಾಂಧಿಬಜಾರ್ನ ಡಿ.ವಿ.ಜಿ ರೋಡ್ ಸುತ್ತಮುತ್ತಾ ಸೇರಿದಂತೆ ನಾನಾ ಕಡೆ ಸ್ಟ್ರೀಟ್ ಶಾಪಿಂಗ್ನಲ್ಲಿಕೊಳ್ಳಬಹುದು. ಬೆಲೆಯೂ ಕೂಡ 100 ರೂ.ಗಳಿಂದ ಆರಂಭವಾಗಿ ಐನೂರು ರೂ.ಗಳವರೆಗಿದೆ. ಚೌಕಾಸಿ ಮಾಡಿಯೂ ಖರೀದಿಸಬಹುದು ಎನ್ನುತ್ತಾರೆ ಜುಮ್ಕಾ ಚೈನ್ ಪ್ರೇಮಿಗಳು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Isha Ambani Fashion: ಒಂದೇ ಲೆಹೆಂಗಾವನ್ನು ಮೂರು ಬಾರಿ ರಿಪೀಟ್ ಮಾಡಿ ಧರಿಸಿದ ಇಶಾ ಅಂಬಾನಿ!