ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಂಜಾನ್ ಫೆಸ್ಟಿವ್ ಸೀಸನ್‌ನಲ್ಲಿ (ramadan fashion) ವೈವಿಧ್ಯಮಯ ಎಥ್ನಿಕ್ ಕಫ್ತಾನ್ ವೇರ್ಸ್ ಕಾಲಿಟ್ಟಿವೆ. ಮಾನೋಕ್ರೋಮ್, ಎಂಬ್ರಾಯ್ಡರಿ ಡಿಸೈನ್ ಹಾಗೂ ಪ್ರಿಂಟೆಡ್ ಸಿಲ್ಕ್ಸ್‌ನ 3 ಶೈಲಿಯ ಕಫ್ತಾನ್‌ಗಳು ಟ್ರೆಂಡಿಯಾಗಿವೆ.
ಎಥ್ನಿಕ್ ಲುಕ್ ನೀಡುವ ಡಿಸೈನರ್ ಕಫ್ತಾನ್
“ಕಫ್ತಾನ್‌ಗಳಲ್ಲೂ ಎಥ್ನಿಕ್ ಲುಕ್ ನೀಡುವಂತಹ ಕಫ್ತಾನ್ ಸೆಟ್, ಓವರ್‌ಸಯಜ್ ಕಫ್ತಾನ್, ಟೀ ಲೆಂಥ್, ವೈಬ್ರೆಂಟ್ ವರ್ಣದ ಸಿಲ್ಕ್, ಸ್ಯಾಟೀನ್ ಕಫ್ತಾನ್, ವಿಂಟೇಜ್ ಸ್ಟೈಲ್ ಕಫ್ತಾನ್ ಡ್ರೆಸ್ ಹಾಗೂ ಸೆಟ್‌ಗಳು ಈ ರಂಜಾನ್ ಫೆಸ್ಟೀವ್ ಸೀಸನ್‌ನ ಫ್ಯಾಷನ್‌ನಲ್ಲಿ ಆಗಮಿಸಿವೆ. ಈ ಸೀಸನ್‌ನಲ್ಲಿ ಲೆಕ್ಕವಿಲ್ಲದಷ್ಟು ಶೈಲಿಯವು ಮಾರುಕಟ್ಟೆಗೆ ಕಾಲಿಡುತ್ತವೆ. ನೋಡಲು ಒಂದೇ ಶೈಲಿಯಂತೆ ಕಂಡರೂ ಇವುಗಳ ವಿನ್ಯಾಸ ಹಾಗೂ ಹ್ಯಾಂಡ್ ವರ್ಕ್ ಡಿಫರೆಂಟ್ ಆಗಿರುತ್ತವೆ ಎನ್ನುತ್ತಾರೆ ಡಿಸೈನರ್ ಮುಮ್ತಾಜ್. ಅವರ ಪ್ರಕಾರ, ಕಫ್ತಾನ್ ಪ್ರಿಯರು ಈ ಸೀಸನ್‌ನಲ್ಲಿ ಇವುಗಳ ಖರೀದಿ ಮಾಡುವುದು ಉತ್ತಮ. ಆಕರ್ಷಕವಾಗಿರುವುದನ್ನು ಖರೀದಿಸಬಹುದು ಎನ್ನುತ್ತಾರೆ.
ಲಾಂಗ್ ಮಾನೋಕ್ರೋಮ್ ಕಫ್ತಾನ್
ಒಂದೇ ವರ್ಣದ ಈ ಕಫ್ತಾನ್‌ಗಳು ಮೊದಲಿನಿಂದಲೂ ಇವೆ. ಇವು ಎವರ್‌ಗ್ರೀನ್ ಕಫ್ತಾನ್ ಟ್ರೆಂಡ್ ಎಂದರೂ ತಪ್ಪಲ್ಲ! ಯಾಕೆಂದರೆ, ಮಾರುಕಟ್ಟೆಯಲ್ಲಿ ಈ ಬಗೆಯಲ್ಲಿ ಲೆಕ್ಕವಿಲ್ಲದಷ್ಟು ವಿನ್ಯಾಸದವು ದೊರೆಯುತ್ತವೆ. ನೆಕ್ಲೈನ್, ಸ್ಟಿಚ್ಚಿಂಗ್ ಮಾತ್ರ ಬೇರೆಬೇರೆಯಾಗಿರುತ್ತವೆ.
ಎಂಬ್ರಾಯ್ಡರಿ ಕಫ್ತಾನ್
ಕಫ್ತಾನ್‌ನ ನೆಕ್ಲೈನ್, ಹ್ಯಾಂಡ್ ಸೈಡ್ ಹಾಗೂ ಬಟನ್‌ಲೆಸ್ ಇರುವಂತಹ ಎಥ್ನಿಕ್ ಡಿಸೈನ್‌ನಲ್ಲಿ ಎಂಬ್ರಾಯ್ಡರಿ ಇರುತ್ತವೆ. ನಾನಾ ಬಗೆಯ ಹ್ಯಾಂಡ್ ಎಂಬ್ರಾಯ್ಡರಿ ಡಿಸೈನ್‌ನವು ಬೇಡಿಕೆ ಹೆಚ್ಚಿಸಿಕೊಂಡಿವೆ. ಸಿಲ್ವರ್ ಹಾಗೂ ಗೋಲ್ಡ್‌ನೊಂದಿಗೆ ಕಲರ್‌ಫುಲ್ ಥ್ರೆಡ್ ಬಳಸಿ ಡಿಸೈನ್ ಮಾಡಿರುವಂತವು ಹೆಚ್ಚು ಪ್ರಚಲಿತದಲ್ಲಿವೆ.
ಪ್ರಿಂಟೆಡ್ ಸಿಲ್ಕ್ ಕಫ್ತಾನ್
ಫ್ಲೋರಲ್, ಟ್ರಾಪಿಕಲ್ ಅಥವಾ ಯಾವುದೋ ಒಂದು ಥೀಮ್‌ಗೆ ತಕ್ಕಂತೆ ಸಿದ್ಧಪಡಿಸಲಾದ ಪ್ರಿಂಟೆಡ್ ಸ್ಯಾಟೀನ್ ಅಥವಾ ಸಿಲ್ಕ್ ಕಫ್ತಾನ್‌ಗಳು ಇಂದು ಯುವತಿಯರಿಗೆ ಪ್ರಿಯವಾಗುತ್ತಿವೆ. ಇವು ಇಡೀ ಡಿಸೈನರ್‌ವೇರ್‌ನ ಹೈಲೈಟ್. ಧರಿಸಿದಾಗ ಉಡುಪಿನ ಮೇಲೆ ಗಮನ ಸೆಳೆಯುತ್ತವೆ.
ಕಫ್ತಾನ್ ಮೇಕ್ಓವರ್
- • ಪ್ರಿಂಟ್ಸ್ ಹಾಗೂ ಡಿಸೈನ್ಸ್ಗೆ ಹೆಚ್ಚು ಆಕ್ಸೆಸರೀಸ್ ಧರಿಸುವ ಅಗತ್ಯವಿಲ್ಲ.
- • ಕಫ್ತಾನ್ಗೆ ಲೇಯರ್ಡ್ ಲುಕ್ ಹೊಂದದು. ನೆನಪಿನಲ್ಲಿರಲಿ.
- • ಕಫ್ತಾನ್ ದೇಹವನ್ನು ಕಂಪ್ಲೀಟ್ ಕವರ್ ಮಾಡುತ್ತದೆ.
- • ಎಥ್ನಿಕ್ ಶೈಲಿಯವು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Eco Friendly Holi: ಇಕೋ ಫ್ರೆಂಡ್ಲಿ ಸೆಲೆಬ್ರೇಷನ್‌ಗೆ ಸಾಥ್ ನೀಡುವ ಹೂ ಸುರಿಮಳೆಯ ಫ್ಲವರ್ ಹೋಳಿ