Site icon Vistara News

Miss india World Sini Shetty: ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಕಣಕ್ಕಿಳಿಯುತ್ತಿರುವ ಕನ್ನಡತಿ ಸಿನಿ ಶೆಟ್ಟಿ ಸಿದ್ಧತೆ ಹೀಗಿದೆ!

Miss india World Sini Shetty

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕನ್ನಡತಿ ಸಿನಿ ಶೆಟ್ಟಿ (Miss india World Sini Shetty) ಮಾರ್ಚ್ 9ರಂದು ಮುಂಬಯಿಯಲ್ಲಿ ನಡೆಯಲಿರುವ 71 ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದು, ಆತ್ಮವಿಶ್ವಾಸದಿಂದ ಮುನ್ನಡೆದಿದ್ದಾರೆ. ಇದಕ್ಕಾಗಿ ಅವರು ವರ್ಷದಿಂದಲೇ ಸಾಕಷ್ಟು ತಯಾರಿ ಕೂಡ ನಡೆಸಿದ್ದಾರೆ.

ಐಶ್ವರ್ಯಾ ರೈ ಹಾಡಿಗೆ ಹೆಜ್ಜೆ

ಈಗಾಗಲೇ ದೆಹಲಿಯಲ್ಲಿ ನಡೆಯುತ್ತಿರುವ ಸ್ಪರ್ಧಾ ಮುನ್ನ ಕಾರ್ಯಕ್ರಮಗಳಲ್ಲಿ, ಸಿನಿ ಶೆಟ್ಟಿ ಬಾಲಿವುಡ್‌ ನಟಿ ಐಶ್ವರ್ಯಾ ರೈ ಹಾಡುಗಳಿಗೆ ಹೆಜ್ಜೆ ಹಾಕಿ ತಮ್ಮ ಟ್ಯಾಲೆಂಟ್‌ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.

ಯಾರಿದು ಸಿನಿ ಶೆಟ್ಟಿ?

ಮೂಲತಃ ಕರ್ನಾಟಕದವರಾದ 5 ಅಡಿ 9 ಇಂಚು ಎತ್ತರದ 23ರ ಪ್ರಾಯದ ಸಿನಿ ಶೆಟ್ಟಿ ಹುಟ್ಟಿದ್ದು ಬೆಳೆದದ್ದು ಎಲ್ಲವೂ ಮುಂಬಯಿಯಲ್ಲೆ. ಅಕೌಂಟಿಂಗ್‌ ಮತ್ತು ಫೈನಾನ್ಸ್‌ ವಿಷಯದಲ್ಲಿ ಡಿಗ್ರಿ ಪಡೆದಿರುವ ಸಿನಿ ಶೆಟ್ಟಿ ಸಿಎಫ್‌ಎ ಪ್ರೊಫೆಷನಲ್ ಕೋರ್ಸ್ ಮಾಡುತ್ತಿದ್ದರು. ಇದರೊಂದಿಗೆ ಭರತನಾಟ್ಯ ಕಲಾವಿದೆ ಕೂಡ. ಸಾಕಷ್ಟು ರೌಂಡ್‌ಗಳಲ್ಲಿ ಭಾಗವಹಿಸಿ, ಜ್ಯೂರಿ ಪ್ಯಾನೆಲ್‌ನವರ ಮನ ಗೆದ್ದು ಬ್ಯೂಟಿ ವಿತ್‌ ಬ್ರೈನ್‌ ಹುಡುಗಿ ಎಂದೆನಿಸಿಕೊಂಡಿರುವ ಬುದ್ಧಿವಂತೆ.

ಸಿನಿ ಶೆಟ್ಟಿ ಆತ್ಮವಿಶ್ವಾಸ

2017ರ ನಂತರ ಭಾರತಕ್ಕೆ ಮಿಸ್‌ ವರ್ಲ್ಡ್‌ ಕೀರಿಟ ದೊರಕಿಲ್ಲ. ಈ ಬಾರಿ ಪ್ರಯತ್ನ ಪಟ್ಟು ತರುವ ಕನಸನ್ನು ಹೊಂದಿದ್ದೇನೆ. ಈ ಕನಸನ್ನು ನನಸಾಗಿಸಿಕೊಳ್ಳುವ ಉತ್ಸಾಹದಲ್ಲಿದ್ದೇನೆ. ಇದಕ್ಕಾಗಿ ಭಾರಿ ತಯಾರಿ ಮಾಡಿಕೊಂಡಿದ್ದೇನೆ. ಎಲ್ಲಾ ಸುತ್ತುಗಳಲ್ಲೂ ಆತ್ಮವಿಶ್ವಾಸದಿಂದ ಪಾಲ್ಗೊಳ್ಳುವ ದಿಟ್ಟ ಮನಸ್ಸನ್ನು ಹೊಂದಿದ್ದೇನೆ. ಇದರೊಂದಿಗೆ ಮಾಡೆಲ್‌ಗೆ ಅಗತ್ಯವಿರುವ ಫಿಟ್ನೆಸ್, ಟ್ಯಾಲೆಂಟ್‌ ಹಾಗೂ ಎಲ್ಲಾ ಬಗೆಯ ಚಟುವಟಿಕೆಗಳಲ್ಲೂ ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ. ಭಾರತೀಯರ ಆಶೀರ್ವಾದ ಹಾಗೂ ಪ್ರಾರ್ಥನೆ ನನಗಿರಲಿ ಎಂದು ಮಾಧ್ಯಮದವರಿಗೆ ಹೇಳಿಕೊಂಡಿದ್ದಾರೆ ಸಿನಿ ಶೆಟ್ಟಿ.

ಆಲ್‌ ದಿ ಬೆಸ್ಟ್ ಸಿನಿ ಶೆಟ್ಟಿ

ಇನ್ನು, ಸಿನಿ ಶೆಟ್ಟಿ, ಸೋಷಿಯಲ್‌ ಮೀಡಿಯಾದಲ್ಲೂ ಸಖತ್‌ ಆಕ್ಟಿವ್‌ ಆಗಿರುವ ಅವರು, ಆಗಾಗ ಸಾಲು ಸಾಲು ವಾಕ್ಯಗಳನ್ನು ಬರೆದು ಕೃತಜ್ಞತಾ ಭಾವ ಪ್ರದರ್ಶಿಸುತ್ತಾರೆ. ತಮ್ಮದೇ ಆದ ಸ್ಪಷ್ಟ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ವಿಶ್ವ ಸುಂದರಿ ಸ್ಪರ್ಧೆಗೆ ಸಜ್ಜಾಗಿರುವ ಕನ್ನಡತಿ ಸಿನಿ ಶೆಟ್ಟಿ ಅವರಿಗೆ ಆಲ್‌ ದಿ ಬೆಸ್ಟ್ ಹೇಳೋಣವೇ!

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Expensive Celebrity Saree Draper: ಸ್ಟಾರ್‌ಗಳಿಗೆ ಸೀರೆ ಉಡಿಸಿದರೆ ಇವರ ಚಾರ್ಜ್ 2 ಲಕ್ಷ ರೂ.! ಯಾರಿವರು ಡಾಲಿ ಜೈನ್‌?

Exit mobile version