-ಶೀಲಾ ಸಿ. ಶೆಟ್ಟಿ, ಬೆಂಗಳೂರು
Kids Denim Fashion: ಮಾನ್ಸೂನ್ ಸೀಸನ್‌ನಲ್ಲಿ ಚಿಣ್ಣರ ಡೆನಿಮ್ ಫ್ಯಾಷನ್‌ವೇರ್‌ಗಳು ಟ್ರೆಂಡಿಯಾಗಿವೆ. ವೆರೈಟಿ ಡಿಸೈನ್‌ನಲ್ಲಿ ಆಗಮಿಸಿರುವ ಈ ಉಡುಗೆಗಳು ಇದೀಗ ಮಕ್ಕಳ ಫ್ಯಾಷನ್ ಲುಕ್‌ಗೆ ಸಾಥ್ ನೀಡುತ್ತಿವೆ.
ಮುದ್ದು ಮುದ್ದಾಗಿ ಬಿಂಬಿಸುವ ಡೆನಿಮ್ವೇರ್ಸ್
“ಸಮ್ಮರ್ ಸೀಸನ್‌ನಲ್ಲಿ ಸೈಡಿಗೆ ಸರಿದಿದ್ದ ಡೆನಿಮ್ ಫ್ಯಾಷನ್‌ವೇಗಳು (Kids Denim Fashion) ಇದೀಗ ಒಂದಿಷ್ಟು ಬದಲಾವಣೆಗಳೊಂದಿಗೆ ಈ ಮಾನ್ಸೂನ್ ಸೀಸನ್ನ ಮಕ್ಕಳ ಫ್ಯಾಷನ್‌ನಲ್ಲಿ ಕಾಲಿಟ್ಟಿವೆ. ಲೆಕ್ಕವಿಲ್ಲದಷ್ಟು ಬಗೆಯ ಡಿಸೈನ್‌ಗಳಲ್ಲಿ ಹಾಗೂ ಫ್ಯಾಬ್ರಿಕ್‌ನಲ್ಲಿ ಕಾಣ ಸಿಗುತ್ತಿರುವ ಇವು ಕಂಫರ್ಟಬಲ್ ವಿನ್ಯಾಸಗಳಲ್ಲಿ ಬಂದಿವೆ. ಅತಿ ಹೆಚ್ಚು ಡಿಸೈನ್‌ನಲ್ಲಿ ಆಗಮಿಸಿರುವ ಇವು ಇದೀಗ ಬ್ಲ್ಯಾಕ್, ಬ್ಲ್ಯೂ ಹಾಗೂ ಲೈಟ್ ಗ್ರೀನ್ ಶೇಡ್‌ಗಳಲ್ಲೂ ದೊರೆಯುತ್ತಿವೆ. ಹಾಗಾಗಿ, ಮಕ್ಕಳ ಡಿಸೈನರ್‌ವೇರ್‌ಗಳಲ್ಲಿ ವೆರೈಟಿ ವಿನ್ಯಾಸಗಳಲ್ಲಿ ಇವು ಲಭ್ಯ” ಎನ್ನುತ್ತಾರೆ ಕಿಡ್ಸ್ ಡಿಸೈನರ್ ರಿಚಾ ಹಾಗೂ ರೀಟಾ. ಅವರ ಪ್ರಕಾರ, ಇದೀಗ ಬಿಡುಗಡೆಗೊಳ್ಳುತ್ತಿರುವ ಚಿಣ್ಣರ ಡೆನಿಮ್ ಫ್ಯಾಷನ್‌ವೇರ್ಸ್ ನೋಡಲು ಆಕರ್ಷಕವಾಗಿರುತ್ತವೆ. ಮಕ್ಕಳನ್ನು ಮುದ್ದು ಮುದ್ದಾಗಿ ಬಿಂಬಿಸುತ್ತವೆ ಎನ್ನುತ್ತಾರೆ.
ಟ್ರೆಂಡ್‌ನಲ್ಲಿರುವ ಕಿಡ್ಸ್ ಡೆನಿಮ್‌ವೇರ್ಸ್
ಪುಟ್ಟ ಹೆಣ್ಣು ಮಕ್ಕಳ ಮಿನಿ, ಮೈಕ್ರೋ ಡೆನಿಮ್ ಶಾರ್ಟ್ ಫ್ರಾಕ್ಸ್, ಡಂಗ್ರೀಸ್, ಟಾಪ್ & ಬಮುರ್ಡಾ ಹುಡುಗರ ಪ್ಯಾಂಟ್-ಶರ್ಟ್, ಇಬ್ಬರೂ ಧರಿಸಬಹುದಾದ ಯೂನಿಸೆಕ್ಸ್ ಡಿಸೈನ್ನ ನಾನಾ ಬಗೆಯ ಜಂಪ್ಸೂಟ್ಸ್, ಹಾಗೂ ಫುಲ್ ಸ್ಲೀವ್ ಹಾಫ್ ಸ್ಲೀವ್ ಮತ್ತು ಸ್ಲಿವ್ಲೆಸ್ ಬಟನ್, ಜಿಪ್ ಜಾಕೆಟ್ಸ್ ಈ ಸೀಸನ್‌ನಲ್ಲಿ ಲಗ್ಗೆ ಇಟ್ಟಿವೆ.
ಚಿಣ್ಣರ ಡೆನಿಮ್ ಕೋ-ಆರ್ಡ್ ಸೆಟ್
ಇವುಗಳೊಂದಿಗೆ ಚಿಣ್ಣರ ಡೆನಿಮ್ ಕೋ-ಆರ್ಡ್ ಸೆಟ್‌ಗಳು ಕೂಡ ಸಾಕಷ್ಟು ಟ್ರೆಂಡಿಯಾಗಿವೆ. ಟು ಪೀಸ್, ತ್ರೀ ಪೀಸ್ ಸೆಟ್‌ಗಳು ಮಕ್ಕಳನ್ನು ಮತ್ತಷ್ಟು ಕ್ಯೂಟ್ ಆಗಿಸುತ್ತಿವೆ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್ ಜೀನತ್. ಅವರು ಹೇಳುವಂತೆ ಮಕ್ಕಳಿಗೆ ಡೆನಿಮ್ ಕೋ- ಆರ್ಡ್ ಸೆಟ್‌ಗಳ ಆಯ್ಕೆ ಮಾಡುವಾಗ ಆದಷ್ಟೂ ವಿನ್ಯಾಸ ಹಾಗೂ ಕ್ಯಾರೆಕ್ಟರ್ ಪ್ರಿಂಟ್ಸ್ ಇರುವಂತಕ್ಕೆ ಮಾನ್ಯತೆ ನೀಡಬೇಕು. ಇಲ್ಲವಾದಲ್ಲಿ, ಸಾದಾ ಕೋ-ಆರ್ಡ್ ಸೆಟ್‌ಗಳು ದೊಡ್ಡವರಂತೆ ಬಿಂಬಿಸುತ್ತವೆ. ಮಕ್ಕಳನ್ನು ಮುದ್ದಾಗಿ ಕಾಣಿಸುವಲ್ಲಿ ವಿಫಲವಾಗುತ್ತವೆ ಎನ್ನುತ್ತಾರೆ.
ಇದನ್ನೂ ಓದಿ: Fashion News: ಉದ್ಯಾನನಗರಿಯಲ್ಲಿ ಮಿನುಗಿದ ಇಂಡಿಯನ್ ಗ್ಲಾಮರ್ ಸ್ಟ್ರೀಟ್ ಫ್ಯಾಷನ್ ಶೋ!
ಮಕ್ಕಳ ಡೆನಿಮ್‌ವೇರ್ ಆಯ್ಕೆ ಹೇಗೆ?
• ಚಿತ್ತಾರ ಹಾಗೂ ಕಾರ್ಟೂನ್ ಪ್ರಿಂಟ್ಸ್ ಇರುವಂತಹ ಡೆನಿಮ್‌ವೇರ್‌ಗಳನ್ನು ಮಾತ್ರ ಚೂಸ್ ಮಾಡಿ.
• ಬ್ಲ್ಯಾಕ್ ಶೇಡ್‌ಗಿಂತ ಬ್ಲ್ಯೂ ಕಲರ್ನ ಡೆನಿಮ್ವೇರ್ಸ್ ಚಾಲ್ತಿಯಲ್ಲಿವೆ.
• ಲೈಟ್ವೇಟ್ ಡೆನಿಮ್ವೇರ್ ಆಯ್ಕೆ ಮಕ್ಕಳಿಗೆ ಆರಾಮ ಎನಿಸಬಹುದು.
• ತೀರಾ ಫಿಟ್ ಆಗಿರುವ ಡೆನಿಮ್ವೇರ್ ಖರೀದಿ ಬೇಡ.
( ಲೇಖಕಿ ಫ್ಯಾಷನ್ ಪತ್ರಕರ್ತೆ )