-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಕ್ಕಳನ್ನು ಕ್ಯೂಟಾಗಿ ಬಿಂಬಿಸುವ ಪಾರ್ಟಿ ಹಾಗೂ ಸೆಲೆಬ್ರೇಷನ್‌ಗೆ ಸಾಥ್ ನೀಡುವಂತಹ ನಾನಾ ಬಗೆಯ ರ‍್ಯಾಬಿಟ್ & ಬನ್ನಿ ಇಯರ್ಸ್ ಹೆಡ್ ಬ್ಯಾಂಡ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. “ಹೆಣ್ಣುಮಕ್ಕಳ ಕೂದಲ ಸೌಂದರ್ಯವನ್ನು ಹೆಚ್ಚಿಸುವಂತಹ ಹೇರ್ ಆಕ್ಸೆಸರೀಸ್‌ನಲ್ಲಿ, ಇದೀಗ ರ‍್ಯಾಬಿಟ್ ಹಾಗೂ ಬನ್ನಿ ಇಯರ್ಸ್ ಹೆಡ್ ಬ್ಯಾಂಡ್‌ಗಳು (kids fashion) ಬಂದಿದ್ದು, ನಾನಾ ಕಲರ್‌ಗಳಲ್ಲಿ ಬಿಡುಗಡೆಗೊಂಡಿವೆ. ತಲೆಯ ಮೇಲೆ ಧರಿಸಿದಾಗ ಮಕ್ಕಳನ್ನು ಮುದ್ದು ಮುದ್ದಾಗಿ ಬಿಂಬಿಸುತ್ತವೆ. ಅಲ್ಲದೇ, ಸೆಲೆಬ್ರೇಷನ್‌ಗೆ ಸಾಥ್ ನೀಡುತ್ತವೆ” ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್ ರಿಂಕು. ಅವರ ಪ್ರಕಾರ, ಬನ್ನಿ ಹಾಗೂ ರ‍್ಯಾಬಿಟ್ ಇಯರ್ಸ್ ಹೆಡ್ ಬ್ಯಾಂಡ್‌ಗಳು ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ಬಂದಿರುವುದು ಬೇಡಿಕೆ ಹೆಚ್ಚಾಗಲು ಕಾರಣ ಎನ್ನುತ್ತಾರೆ.
ಏನಿದು ರ‍್ಯಾಬಿಟ್ & ಬನ್ನಿ ಇಯರ್ಸ್ ಹೆಡ್ ಬ್ಯಾಂಡ್ಸ್
ಮೊಲದ ಉದ್ದನಾದ ಕಿವಿಗಳನ್ನು ಹೋಲುವ ವಿನ್ಯಾಸದ ಹೆಡ್ ಬ್ಯಾಂಡ್‌ಗಳನ್ನು ಹೀಗೆ ಕರೆಯಲಾಗುತ್ತದೆ. ಕೆಲವು ಫರ್‌ನಂತಹ ಮೆಟಿರಿಯಲ್‌ನಲ್ಲಿ ದೊರೆಯುತ್ತವೆ. ಇನ್ನು ಕೆಲವು ಮಕ್ಕಳ ಬರ್ತ್ ಡೇ ಪಾರ್ಟಿಗೆ ಹೊಂದುವಂತಹ ಮಿರಮಿರ ಮಿನುಗುವ ಡಿಸೈನ್‌ನಲ್ಲಿ ಸಿಗುತ್ತವೆ. ಇನ್ನು, ಕೆಲವು ರಬ್ಬರ್‌ಬ್ಯಾಂಡ್‌ನಂತಹ ವಿನ್ಯಾಸದಲ್ಲೂ ಲಭ್ಯ. ಬ್ಲಾಸಂ ಫ್ಲವರ್ಸ್, ಸ್ಯಾಟಿನ್ ಫ್ಯಾಬ್ರಿಕ್‌ನ ಪೋಲ್ಕಾ ಡಾಟ್ಸ್, ಇಯರ್ ಮಫ್ ಶೈಲಿಯವು, ಎಲ್‌ಇಡಿ ಅಥವಾ ಬ್ಯಾಟರಿ ಶೆಲ್‌ನಿಂದ ಮಿರಮಿರ ಮಿನುಗುವ ಲೈಟ್ಸ್‌ನ ಹೆಡ್ ಬ್ಯಾಂಡ್ಸ್, ಕ್ಯಾಂಡಿ ಕಲರ್ಸ್ ಬನ್ನಿ ಹೆಡ್ ಬ್ಯಾಂಡ್ಸ್, ನಾಟ್ ಬನ್ನಿ ಹೆಡ್ ಬ್ಯಾಂಡ್ಸ್, ಮಲ್ಟಿ ಕಲರ್‌ನ ಬನ್ನಿ ಬ್ಯಾಂಡ್ಸ್, ಹಾಲೋಗ್ರಾಫ್‌ನ ಬನ್ನಿ ಇಯರ್ಸ್ ಹೆಡ್ ಬ್ಯಾಂಡ್ಸ್ ಚಾಲ್ತಿಯಲ್ಲಿವೆ.
ಆನ್‌ಲೈನ್‌ನಲ್ಲಿ ಬನ್ನಿಇಯರ್ಸ್ ಹೆಡ್ ಬ್ಯಾಂಡ್ಸ್
ಇನ್ನು, ಆನ್‌ಲೈನ್‌ನಲ್ಲಿ ರ‍್ಯಾಬಿಟ್ ಅಥವಾ ಬನ್ನಿ ಇಯರ್ಸ್ ಹೆಡ್ ಬ್ಯಾಂಡ್‌ಗಳ ವಿನ್ಯಾಸಗಳಿಗೆ ಬರವಿಲ್ಲ. ಮ್ಯಾಚಿಂಗ್ ಹೆಡ್ ಬ್ಯಾಂಡ್‌ನಿಂದಿಡಿದು ಚಿಣ್ಣರ ಪಾರ್ಟಿ ಹೆಡ್ ಬ್ಯಾಂಡ್‌ಗಳು ಲಭ್ಯ. ಆ ಮಟ್ಟಿಗೆ ಸಾಕಷ್ಟು ಆಪ್ಷನ್‌ಗಳಿವೆ ಎನ್ನುತ್ತಾರೆ ಮಾರಾಟಗಾರರು.
ಬನ್ನಿ ಇಯರ್ಸ್ ಹೆಡ್ ಬ್ಯಾಂಡ್ಸ್ ಆಯ್ಕೆಗೆ 5 ಸಿಂಪಲ್ ಟಿಪ್ಸ್
- ಪಾರ್ಟಿಗಾದಲ್ಲಿ ಆದಷ್ಟೂ ಮಿನುಗುವ ಹೆಡ್ ಬ್ಯಾಂಡ್ಸ್ ಆಯ್ಕೆ ಮಾಡಿ.
- ಚಿಕ್ಕ ಮಕ್ಕಳಿಗಾದಲ್ಲಿ ಸಾಫ್ಟ್ ಫ್ಯಾಬ್ರಿಕ್ ಅಥವಾ ಫರ್ನಂತವನ್ನು ಸೆಲೆಕ್ಟ್ ಮಾಡಿ.
- ಪುಟ್ಟ ಕಂದಮ್ಮಗಳಿಗೆ ಎಲ್‌ಇಡಿ ಲೈಟ್ನಂತವು ಬೇಡ. ಅದೇನಿದ್ದರೂ ಫೋಟೋಶೂಟ್ಗೆ ಮಾತ್ರವಿರಲಿ.
- ಸೆಟ್ ಹೆಡ್ ಬ್ಯಾಂಡ್‌ಗಳು ದೊರೆಯುತ್ತವೆ.
- ಕೂದಲಿಗೆ ಸಿಕ್ಕಿ ಹಾಕಿಕೊಳ್ಳದಂತಹ, ಒತ್ತದಂತಹ ಹೆಡ್ ಬ್ಯಾಂಡ್ ಆಯ್ಕೆ ನಿಮ್ಮದಾಗಿರಲಿ.
( ಲೇಖಕಿ ಫ್ಯಾಷನ್ ಪತ್ರಕರ್ತೆ )
ಇದನ್ನೂ ಓದಿ: Monsoon Rain Boots Fashion: ಮಕ್ಕಳ ಮಾನ್ಸೂನ್ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಬಗೆಯ ರೈನ್ ಬೂಟ್ಸ್