Site icon Vistara News

Kids Raincoats: ಮಾನ್ಸೂನ್‌‌‌ಗೆ ಲಗ್ಗೆ ಇಟ್ಟಿದೆ ಚಿಣ್ಣರ ಕಲರ್‌ ಫುಲ್‌ ರೈನ್‌ ಕೋಟ್ಸ್

Kids Raincoats

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ ಫ್ಯಾಷನ್‌ನಲ್ಲಿ ಆಕರ್ಷಕವಾದ ಕಿಡ್ಸ್ ರೈನ್‌ಕೋಟ್‌ಗಳು (Kids Raincoats) ಲಗ್ಗೆ ಇಟ್ಟಿವೆ. ಹೌದು, ಮಾನ್ಸೂನ್‌ ಸೀಸನ್‌ನಲ್ಲಿ ಎಲ್ಲಾ ವಯಸ್ಸಿನ ಮಕ್ಕಳಿಗೆ ಇಷ್ಟವಾಗುವಂತಹ ಬಗೆಬಗೆಯ ಕಾರ್ಟೂನ್‌ ಚಿತ್ತಾರವಿರುವಂತಹ ನಾನಾ ಬಗೆಯ ಆಕರ್ಷಕ ಬಣ್ಣ ಬಣ್ಣದ ರೈನ್‌ಕೋಟ್‌ಗಳು ಬಿಡುಗಡೆಗೊಂಡಿವೆ.

ಮಕ್ಕಳನ್ನು ಉಲ್ಲಾಸಿತಗೊಳಿಸುವ ರೈನ್‌ಕೋಟ್ಸ್

“ ಪ್ರತಿ ಬಾರಿಯೂ ಮಾನ್ಸೂನ್‌ನಲ್ಲಿ ಮಕ್ಕಳಿಗೆ ನಾನಾ ವೆರೈಟಿ ವಿನ್ಯಾಸದ ರೈನ್‌ಕೋಟ್‌ಗಳು ಬಿಡುಗಡೆಗೊಳ್ಳುತ್ತಿರುತ್ತವೆ. ಮಕ್ಕಳು ಇಷ್ಟಪಟ್ಟು ಧರಿಸುವಂತಹ ಕಲರ್‌ ಹಾಗೂ ಚಿತ್ತಾರಗಳಿರುವಂತವು ಹೆಚ್ಚಾಗಿ ಬಿಕರಿಯಾಗುತ್ತವೆ. ಇದಕ್ಕೆ ಪೂರಕ ಎಂಬಂತೆ, ಮಳೆಗಾಲದಲ್ಲಿ ಔಟಿಂಗ್‌ ಅಥವಾ ಹೊರಗಡೆ ಹೋದಾಗ ಆಕರ್ಷಕವಾಗಿ ಕಾಣಿಸುವಂತಹ ಕಲರ್‌ಫುಲ್‌ ಡಿಸೈನ್‌ನ ರೈನ್‌ಕೋಟ್‌ಗಳು ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಆಗಮಿಸಿವೆ. ಉತ್ತಮ ಗುಣ ಮಟ್ಟದ ಬ್ರಾಂಡ್‌ಗಳಿಂದಿಡಿದು, ರಸ್ತೆ ಬದಿ ಮಾರುವಂತಹ ಲೋಕಲ್‌ ಡಿಸೈನ್‌ನಲ್ಲೂ ದೊರೆಯುತ್ತಿವೆ. ಆದರೆ, ಇವನ್ನು ಕೊಳ್ಳುವಾಗ ಮೆಟಿರಿಯಲ್‌ ಪರಿಶೀಲಿಸಿ ಕೊಳ್ಳುವುದು ಮುಖ್ಯ “ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್‌‌ಗಳು.

ಟ್ರೆಂಡ್‌ನಲ್ಲಿರುವ ಚಿಣ್ಣರ ರೈನ್‌ಕೋಟ್ಸ್

ವಾಟರ್‌ ಪ್ರೂಫ್‌ನ ಹೂಡಿ ರೈನ್‌ಕೋಟ್ಸ್, ಯೂನಿಸೆಕ್ಸ್ ರೈನ್‌ಕೋಟ್ಸ್, ಅನಿಮಲ್‌ ಪ್ರಿಂಟ್‌, ಕಾರ್ಟೂನ್‌ ಪ್ರಿಂಟ್, ಗ್ರಾಫಿಕ್ ಪ್ರಿಂಟ್‌, ಪಾಲಿಸ್ಟರ್‌, ತ್ರಿ ಡಿ ಕಲರ್‌, ಹೆಣ್ಣುಮಕ್ಕಳ ಬಾರ್ಬಿ ಪ್ರಿಂಟ್ಸ್, ಕೊರಿಯನ್‌ ಸ್ಟೈಲ್‌, ಕೇಪ್‌ ಸ್ಟೈಲ್‌, ಟ್ರೆಂಚ್‌ ಕೋಟ್‌ ಸ್ಟೈಲ್‌, ಬ್ಯಾಕ್‌ಪ್ಯಾಕ್‌ ಕವರ್‌ ರೈನ್‌ಕೋಟ್‌ಗಳು ಈ ಸೀಸನ್‌ನಲ್ಲಿ ಸಾಕಷ್ಟು ಟ್ರೆಂಡಿಯಾಗಿವೆ. ಎಲ್ಲರೂ ಅವರವರ ಮಕ್ಕಳಿಗೆ ಮ್ಯಾಚ್‌ ಆಗುವಂತಹ ರೈನ್‌ಕೋಟ್‌ಗಳನ್ನು ಪೋಷಕರು ಖರೀದಿಸುವುದು ಕೂಡ ಇಂದು ಹೆಚ್ಚಾಗಿದೆ ಎನ್ನುತ್ತಾರೆ ರೈನ್‌ಕೋಟ್‌ ವ್ಯಾಪಾರಿಗಳು.

ಆನ್‌ಲೈನ್‌ನಲ್ಲಿ ರೈನ್‌ಕೋಟ್‌ ಅಬ್ಬರ

ಆನ್‌ಲೈನ್‌ ಶಾಪಿಂಗ್‌ ಪ್ರಿಯರಿಗೆಂದೇ ಈಗಾಗಲೇ ಕಿಡ್ಸ್ ಕೆಟಗರಿಯಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ರೈನ್‌ಕೋಟ್‌ಗಳು ಲಗ್ಗೆ ಇಟ್ಟಿವೆ. ಕೆಲವು ಆನ್‌ಲೈನ್‌ ಶಾಪ್‌ಗಳು ಮಾನ್ಸೂನ್‌ ಆಫರ್‌ನಲ್ಲಿ ಕಡಿಮೆ ಬೆಲೆ ನಿಗಧಿಪಡಿಸಿದ್ದರೇ, ಇನ್ನು ಕೆಲವು ನ್ಯೂ ಅರೈವಲ್‌ ಕೆಟಗರಿಯಲ್ಲಿ ದರ ಹೆಚ್ಚಿಸಿವೆ ಎನ್ನುತ್ತಾರೆ ಕಿಡ್ಸ್ ಸ್ಟೈಲಿಸ್ಟ್‌ಗಳು.

ಇದನ್ನೂ ಓದಿ: Blazer Saree Fashion: ಮಾನ್ಸೂನ್‌ ಸೀಸನ್‌ ಬ್ಲೇಜರ್‌ ಸೀರೆಯಲ್ಲಿ ಶ್ವೇತಾ ಚಂಗಪ್ಪ ಕಮಾಲ್‌

ಹೀಗಿರಲಿ ಮಕ್ಕಳ ರೈನ್‌ಕೋಟ್‌ ಆಯ್ಕೆ

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Exit mobile version