Site icon Vistara News

Kids Summer Travel Fashion: ಬೇಸಿಗೆಯಲ್ಲಿ ಹೀಗಿರಲಿ ಚಿಣ್ಣರ ಟ್ರಾವೆಲ್‌ ಫ್ಯಾಷನ್‌

Kids Summer Travel Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್‌ನಲ್ಲಿ ಟ್ರಾವೆಲ್‌ ಮಾಡುವ ಮಕ್ಕಳ ಫ್ಯಾಷನ್‌ (Kids Summer Travel Fashion) ಪರ್ಫೆಕ್ಟಾಗಿರಲಿ ಎನ್ನುತ್ತಾರೆ ಕಿಡ್ಸ್‌ ಸ್ಟೈಲಿಸ್ಟ್. ಹೌದು, ಬೇಸಿಗೆಯಲ್ಲಿ ಮಕ್ಕಳೊಂದಿಗೆ ಪಿಕ್ನಿಕ್‌, ಟೂರ್‌, ಔಟಿಂಗ್‌ ಎಂದೆಲ್ಲಾ ಪ್ರಯಾಣಿಸುವ ಚಿಣ್ಣರ ಡ್ರೆಸ್‌ಕೋಡ್‌ ಬಗ್ಗೆ ಪೋಷಕರು ಗಮನ ನೀಡಬೇಕಾದ್ದು ಅತ್ಯಗತ್ಯ. ಮಕ್ಕಳಿಗೆ ಹಾಕುವ ಒಂದೊಂದು ಉಡುಪು ನೋಡಲು ಸ್ಟೈಲಾಗಿದ್ದರೇ ಸಾಲದು, ಜೊತೆಗೆ ಕಂಫರ್ಟಬಲ್‌ ಆಗಿರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುವ ಕಿಡ್ಸ್‌ ಸ್ಟೈಲಿಸ್ಟ್‌ ಜಾನ್‌ ಒಂದಿಷ್ಟು ಸಿಂಪಲ್‌ ಐಡಿಯಾಗಳನ್ನು ನೀಡಿದ್ದಾರೆ.

ಬೇಸಿಗೆಯ ಸೀಸನ್‌ಗೆ ತಕ್ಕಂತಿರಲಿ

ಸುಡು ಬೇಸಿಗೆಯ ಸೀಸನ್‌ಗೆ ತಕ್ಕಂತೆ ಮಕ್ಕಳ ಔಟ್‌ಫಿಟ್‌ಗಳಿರಬೇಕು. ಧರಿಸಿದಾಗ ಸೆಕೆಯಾಗಬಾರದು. ಅಲ್ಲದೇ, ಆರಾಮ ಎಂದೆನಿಸಬೇಕು. ಹಾಗಾಗಿ ಟ್ರೆಂಡಿಯಾಗಿರುವ ಉಡುಪುಗಳಿಗಿಂತ ಆರಾಮದಾಯಕ ಎಂದೆನಿಸುವ ಔಟ್‌ಫಿಟ್‌ಗಳನ್ನು ಮಕ್ಕಳಿಗೆ ಪ್ರಿಫರ್‌ ಮಾಡಬೇಕು. ಲೈಟ್‌ವೈಟ್‌ನದ್ದಾಗಿರಬೇಕು.

ಯೂನಿಸೆಕ್ಸ್‌ ಡಿಸೈನ್ಸ್‌ ಮಕ್ಕಳಿಗೆ ಬೇಡ

ಟ್ರಾವೆಲಿಂಗ್‌ ಸಮಯದಲ್ಲಿ ಮಕ್ಕಳಿಗೆ ಯಾವುದೇ ಕಾರಣಕ್ಕೂ ಯೂನಿಸೆಕ್ಸ್‌ ಡಿಸೈನ್‌ ಚೂಸ್‌ ಮಾಡಬೇಡಿ. ಧರಿಸಿದಾಗ ಅವರ ಬಾಡಿಗೆ ಸರಿಯಾಗಿ ಕೂರುವುದಿಲ್ಲ. ಇನ್ನು, ಈ ಸೀಸನ್‌ನಲ್ಲಿ, ಹುಡುಗರಿಗೆ ಸ್ಲೀವ್‌ಲೆಸ್‌ ಟೀ ಶರ್ಟ್‌ ಹಾಕಿಸಿದಲ್ಲಿ, ಹುಡುಗಿಯರಿಗೆ ಸ್ಲೀವ್‌ಲೆಸ್‌ ಫ್ರಾಕ್‌ ಹಾಕಿಸಬಹುದು. ಕ್ಯಾಶುವಲ್‌ವೇರ್‌ ಆದಲ್ಲಿ ಮಾತ್ರ ಇಬ್ಬರಿಗೂ ಒಂದೇ ರೀತಿಯದ್ದನ್ನು ಹಾಕಿಸಬಹುದು. ಟೀ ಶರ್ಟ್‌ -ಪ್ಯಾಂಟ್‌, ಬರ್ಮಡಾ, ಶಾರ್ಟ್ಸ್‌ ಹೀಗೆ ಒಂದೇ ರೀತಿಯಲ್ಲಿ ನಾನಾ ಬಗೆಯಲ್ಲಿ ಮ್ಯಾಚ್‌ ಮಾಡಬಹುದು.

ಮಕ್ಕಳಿಗಾದಲ್ಲಿ ಟ್ವಿನ್ನಿಂಗ್‌ ಮಾಡಿ

ಇಬ್ಬರು ಮಕ್ಕಳಿಗಾದಲ್ಲಿ ಟ್ವಿನ್ನಿಂಗ್‌ ಮಾಡಬಹುದು. ಒಂದೇ ರೀತಿಯ ಉಡುಪುಗಳನ್ನು ಹಾಕಬಹುದು. ನೋಡಲು ಆಕರ್ಷಕವಾಗಿ ಕಾಣುವ ಔಟ್‌ಫಿಟ್‌ ಚೂಸ್‌ ಮಾಡಬಹುದು. ಕಾರ್ಟೂನ್‌ ಕ್ಯಾರೆಕ್ಟರ್‌ನಿಂದಿಡಿದು ಟ್ರೆಂಡಿಯಾಗಿರುವ ಫಂಕಿ ಉಡುಪನ್ನು ಹಾಕಬಹುದು. ಸಮ್ಮರ್‌ ಡಿಸೈನ್‌ಗಳಲ್ಲಿ ನಾನಾ ವಿನ್ಯಾಸದವು ಲಭ್ಯ.

ಪಿಕ್ನಿಕ್‌ ಔಟ್‌ಫಿಟ್ಸ್‌

ಒಂದು ದಿನದ ಫಿಕ್ನಿಕ್‌ಗೆ ಹೋಗುವುದಾದಲ್ಲಿ ಆದಷ್ಟೂ ಅಟ್ರಾಕ್ಟಿವ್‌ ಆಗಿರುವಂತಹ, ನೋಡಲು ಚೆನ್ನಾಗಿ ಕಾಣುವಂತಹ ಫಂಕಿ ಸ್ಟೈಲ್‌ ಇರುವಂತಹ ಸ್ಲಿವ್‌ಲೆಸ್‌ , ಕ್ರಾಪ್‌ ಟಾಪ್ಸ್‌, ಸ್ಟ್ರಾಪ್ಸ್‌, ಸ್ಪೆಗೆಟಿ, ನೂಡಲ್ಸ್‌ ಸ್ಟ್ರಾಪ್‌ ಸೇರಿದಂತೆ ನಾನಾ ಬಗೆಯ ಟಾಪ್‌ಗಳಿರುವಂತಹ ಔಟ್‌ಫಿಟ್‌ಗಳನ್ನು ಹೆಣ್ಣುಮಕ್ಕಳಿಗೆ ಹಾಕಿಸಬಹುದು. ಇನ್ನು ಗಂಡು ಮಕ್ಕಳಿಗಾದಲ್ಲಿ ಸಿಂಪಲ್‌ ಟೀ ಶರ್ಟ್ಸ್‌, ಸ್ಲಿವ್‌ಲೆಸ್‌ ಟಾಪ್ಸ್‌, ಪಾಕೆಟ್‌ ಶಾರ್ಟ್ಸ್‌, ಪ್ಯಾಂಟ್ಸ್‌ ಚೂಸ್‌ ಮಾಡಬಹುದು.

ಟೂರ್‌ಗೆ ತೆರಳುವಾಗ

ಮಕ್ಕಳನ್ನು ಕರೆದುಕೊಂಡು ಲಾಂಗ್‌ ಟೂರ್‌ಗಳಿಗೆ ತೆರಳುವುದಾದಲ್ಲಿ, ಆದಷ್ಟೂ ರಫ್‌ ಆಗಿ ಬಳಸಬಹುದಾದ ಫ್ಯಾಬ್ರಿಕ್‌ನ ಡ್ರೆಸ್‌ಗಳನ್ನು ಆಯ್ಕೆ ಮಾಡಿ. ಸೆಕೆ ಕಾಲವಾದ್ದರಿಂದ ಬ್ರಿಥೆಬಲ್‌ ಔಟ್‌ಫಿಟ್ಸ್‌ ಮಕ್ಕಳಿಗೆ ಹಾಕಿಸಿ. ಅವರು ಧರಿಸುವ ಉಡುಪು ಉಸಿರುಗಟ್ಟಿಸುವಂತಿರಬಾರದು. ನೋಡಲು ಬಣ್ಣಬಣ್ಣದ ಉಡುಪುಗಳನ್ನು ಸೆಲೆಕ್ಟ್‌ ಮಾಡಿ. ಮುದ್ದು ಮುದ್ದಾಗಿ ಕಾಣಿಸುತ್ತವೆ.

ಮಕ್ಕಳ ಬಾಡಿ ಮಾಸ್‌ ಇಂಡೆಕ್ಸ್‌ಗೆ ತಕ್ಕಂತಿರಲಿ

ಮಕ್ಕಳ ಬಾಡಿ ಮಾಸ್‌ ಇಂಡೆಕ್ಸ್‌ಗೆ ತಕ್ಕಂತೆ ಔಟ್‌ಫಿಟ್‌ ಆಯ್ಕೆ ಉತ್ತಮ. ತೀರಾ ದೊಗಲೆಯಾದರೂ ಚೆನ್ನಾಗಿ ಕಾಣದು. ತೀರಾ ಟೈಟಾದರೂ ಉಸಿರುಗಟ್ಟಿಸುವುದು. ಹಾಗಾಗಿ ಮಕ್ಕಳ ಆರಾಮಕ್ಕೆ ಸೂಕ್ತವೆನಿಸುವುದನ್ನು ಚೂಸ್‌ ಮಾಡಿ ಎನ್ನುತ್ತಾರೆ ಕಿಡ್ಸ್‌ ಸ್ಟೈಲಿಸ್ಟ್‌ಗಳು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Horseshoe Septum Ring Fashion: ಅಲ್ಟ್ರಾ ಮಾಡರ್ನ್‌ ಸ್ಟೈಲಿಂಗ್‌ ಪ್ರಿಯರ ಮನಗೆದ್ದ ಹಾರ್ಸ್‌ ಶೂ ಸೆಪ್ಟಮ್‌ ರಿಂಗ್‌

Exit mobile version