-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೃಷ್ಣ ಜನ್ಮಾಷ್ಟಮಿ (Krishna Janmashtami Fancy Dress Tips) ಹಿನ್ನೆಲೆಯಲ್ಲಿ, ರಾಜ್ಯದೆಲ್ಲೆಡೆ ಮಕ್ಕಳ ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್ ಶುರುವಾಗಿದೆ. ಗೋಕುಲಾಷ್ಟಮಿಯ ದಿನ ಹಾಗೂ ಹಬ್ಬದ ಹಿಂದೆ-ಮುಂದೆ ನಡೆಯುವ ಈ ಸ್ಪರ್ಧೆಗಳಲ್ಲಿ, ಹಾಲುಗಲ್ಲದ ಕಂದಮ್ಮಗಳಿಂದ ಹಿಡಿದು ಟೀನೇಜ್ ಮಕ್ಕಳವರೆಗೂ ಲೆಕ್ಕವಿಲ್ಲದಷ್ಟು ಮಕ್ಕಳು ಭಾಗವಹಿಸುತ್ತಾರೆ. ಇವರನ್ನು ಅಲಂಕರಿಸುವ ಜವಾಬ್ದಾರಿ ಹೊತ್ತ ಪ್ರತಿ ಪೋಷಕರು ತಮ್ಮ ಮಕ್ಕಳು ಮುದ್ದು ಕೃಷ್ಣನಂತೆ ಕಾಣಿಸಲು ಬಯಸುತ್ತಾರೆ. ಅಂತಹವರಿಗೆಂದೇ ಕಿಡ್ಸ್ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಲಹೆ ನೀಡಿದ್ದಾರೆ.
ಮೊದಲಿಗೆ ಪ್ಲಾನಿಂಗ್ ಮಾಡಿ
ಮೊದಲಿಗೆ ನಿಮ್ಮ ಮಗ/ಮಗಳಿಗೆ ಯಾವ ಬಗೆಯ ಕೃಷ್ಣನ ಡ್ರೆಸ್ ಹಾಕಲು ಬಯಸುವಿರಿ! ಎಂಬುದನ್ನು ನಿರ್ಧರಿಸಿ. ಕೃಷ್ಣನ ಉಡುಪು, ಆಕ್ಸೆಸರೀಸ್ ಯಾವುದು ನಿಮ್ಮ ಮಗುವಿಗೆ ಬೆಸ್ಟ್ ಎಂಬುದನ್ನು ಮೊದಲೇ ಡಿಸೈಡ್ ಮಾಡಿ.
ಥೀಮ್‌ಗೆ ತಕ್ಕಂತೆ ಕೃಷ್ಣನಂತೆ ಸಿಂಗರಿಸಿ
ಕೆಲವೊಂದು ಫ್ಯಾನ್ಸಿ ಡ್ರೆಸ್ ಕಾನ್ಸೆಪ್ಟ್ಗಳಲ್ಲಿ ಥೀಮ್ ಅಥವಾ ಕಾನ್ಸೆಪ್ಟ್ ನೀಡಿರುತ್ತಾರೆ. ಅಲ್ಲದೇ ಮಕ್ಕಳಿಗೆ ವಯಸ್ಸಿನ ಮಿತಿಯೂ ಇರುತ್ತದೆ. ಮೊದಲೇ ಆ ಬಗ್ಗೆ ತಿಳಿದುಕೊಂಡು ಅಲಂಕರಿಸಿ.
ಮಕ್ಕಳ ವಯಸ್ಸಿಗೆ ಅನುಗುಣವಾಗಿ ಡ್ರೆಸ್ ಮಾಡಿ
ಮಕ್ಕಳ ವಯಸ್ಸಿಗೆ ಅನುಗುಣವಾಗಿ ಯಾವ ಬಗೆಯ ಕೃಷ್ಣನ ಡ್ರೆಸ್ ಹಾಕಬಹುದು ಎಂಬುದನ್ನು ಯೋಚಿಸಿ. ನಿಮ್ಮ ಮಗು ಮುದ್ದು ಮುದ್ದಾಗಿದ್ದಲ್ಲಿ, ಬೆಣ್ಣೆ ಕೃಷ್ಣ, ತರ್ಲೆಯಾಗಿದ್ದಲ್ಲಿ ತುಂಟ ಕೃಷ್ಣ, ಎತ್ತರವಾಗಿದ್ದಲ್ಲಿ ಬೆಣ್ಣೆ ಮಡಕೆ ಹೊಡೆಯುವ ಕೃಷ್ಣ ಹೀಗೆ ಮಕ್ಕಳ ಬಾಡಿ ಟೈಪ್ ನೋಡಿಕೊಂಡು ನಿರ್ಧರಿಸಿ.
ಕೃಷ್ಣನ ಆಕ್ಸೆಸರೀಸ್ ಮುಖ್ಯ
ಕೃಷ್ಣನ ಫ್ಯಾನ್ಸಿ ಡ್ರೆಸ್ ಮಾಡುವಾಗ ಅತಿ ಮುಖ್ಯವಾದುದು ಗೋಪಾಲಕನ ನವಿಲುಗರಿ, ಕೊಳಲು, ಮುತ್ತಿನ ಹಾರಗಳು, ಕೀರೀಟ ಹಾಗೂ ಶಲ್ಯ ಹೊಂದಿದ ಸಿಲ್ಕ್‌ನ ಧೋತಿ. ಇವುಗಳನ್ನು ಧರಿಸಲೇಬೇಕು. ಆಗಿದ್ದಾಗ ಮಾತ್ರ ಘನಶ್ಯಾಮನಂತೆ ಕಾಣಲು ಸಾಧ್ಯ.
ಕೃಷ್ಣನ ಔಟ್‌ಫಿಟ್ಸ್ ಬಾಡಿಗೆಗೆ ಲಭ್ಯ
ಸಾಕಷ್ಟು ಫ್ಯಾನ್ಸಿ ಡ್ರೆಸ್ ದೊರೆಯುವ ಸ್ಥಳದಲ್ಲಿ ಆಯಾ ವಯಸ್ಸಿಗೆ ತಕ್ಕಂತೆ ನಾನಾ ಬಗೆಯ ಕೃಷ್ಣನ ಫ್ಯಾನ್ಸಿ ಡ್ರೆಸ್‌ಗಳು ದಿನದ ಲೆಕ್ಕದಲ್ಲಿ ಬಾಡಿಗೆಗೆ ದೊರೆಯುತ್ತವೆ. ಕಂಪ್ಲೀಟ್ ಪ್ಯಾಕೇಜ್ ರೂಪದಲ್ಲಿ ಉಡುಪಿನಿಂದಿಡಿದು ಆಕ್ಸೆಸರೀಸ್‌ಗಳು ಲಭ್ಯ. ಇವುಗಳ ಸದುಪಯೋಗಪಡಿಸಿಕೊಳ್ಳಿ.
( ಲೇಖಕಿ ಫ್ಯಾಷನ್ ಪತ್ರಕರ್ತೆ )