ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರತಿಷ್ಠಿತ ಲ್ಯಾಕ್ಮೆ ಫ್ಯಾಷನ್ ವೀಕ್ (lakme fashion week) ಅತ್ಯಾಕರ್ಷಕವಾಗಿ ಆರಂಭಗೊಂಡಿದೆ. ಎಫ್‌ಡಿಸಿಐ ಸಹಯೋಗದೊಂದಿಗೆ ದಿಲ್ಲಿಯಲ್ಲಿ ಆರಂಭವಾಗಿರುವ ಲ್ಯಾಕ್ಮೆ ಫ್ಯಾಷನ್ ವೀಕ್ ಮುಂಬರುವ ಅಕ್ಟೋಬರ್ 15ರವರೆಗೂ ಮುಂದುವರಿಯಲಿದೆ. ಭಾವಿ ಡಿಸೈನರ್‌ಗಳು ಹಾಗೂ ರಾಷ್ಟ್ರದ ಟ್ಯಾಲೆಂಟೆಡ್ ಡಿಸೈನರ್‌ಗಳ ಡಿಸೈನರ್‌ವೇರ್‌ಗಳಿಗೆ ಬಾಲಿವುಡ್ ಸೆಲೆಬ್ರೆಟಿಗಳು ಕೂಡ ನಿರಂತರವಾಗಿ ಸೆಲೆಬ್ರೆಟಿ ಶೋ ಸ್ಟಾಪರ್‌ಗಳಾಗಿ ರ‍್ಯಾಂಪ್ ವಾಕ್ ಮಾಡುತ್ತಿದ್ದು, ಫ್ಯಾಷನ್ ಪ್ರಿಯರನ್ನು ಸೆಳೆಯುತ್ತಿದೆ.
ಓಪನಿಂಗ್ ಶೋ
ಡಿಸೈನರ್ ಸಂಜಯ್ ಗರ್ಗ್ ಅವರ ಬ್ರಾಂಡ್ ರಾ ಮ್ಯಾಂಗೋ ಡಿಸೈನರ್‌ವೇರ್‌ಗಳ ಅನಾವರಣ ರ‍್ಯಾಂಪ್ ಮೇಲೆ ಪ್ರದರ್ಶಿಸುವ ಮೂಲಕ ಲ್ಯಾಕ್ಮೆ ಫ್ಯಾಷನ್ ವೀಕ್ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಯಿತು. ಓಪನಿಂಗ್ ಡಿಸೈನರ್ ಸಂಜಯ್ ಕಲೆಕ್ಷನ್‌ನಲ್ಲಿ ಗೋಲ್ಡ್, ಗ್ರೀನ್ ಹಾಗೂ ಮೆಟಾಲಿಕ್ ಶೇಡ್ ಇರುವಂತಹ ಡಿಸೈನರ್‌ವೇರ್‌ಗಳನ್ನು ಧರಿಸಿ ಮಾಡೆಲ್‌ಗಳು ವಾಕ್ ಮಾಡಿದರು.
ಆರಂಭದಲ್ಲೆ ಸೆಲೆಬ್ರೆಟಿಗಳ ವಾಕ್
ಬಾಲಿವುಡ್ ಸೆಲೆಬ್ರೆಟಿಗಳಾದ ಕರೀಷ್ಮಾ ಕಪೂರ್, ಕಲ್ಕಿ ಸೆಲೆಬ್ರೆಟಿ ಶೋ ಸ್ಟಾಪರ್‌ಗಳಾಗಿ ವಾಕ್ ಮಾಡಿದರು. ಇನ್ನು ಹೃತಿಕ್ ರೋಷನ್ ಗರ್ಲ್ ಫ್ರೆಂಡ್ ಎಂದೇ ಖ್ಯಾತಿ ಗಳಿಸಿರುವ ಸಬಾ ತಮ್ಮ ಗಾಯನ ಮೂಲಕ ರ‍್ಯಾಂಪ್ ಮೇಲೆ ಬಿರುಗಾಳಿ ಎಬ್ಬಿಸುತ್ತಾ ಡಿಫರೆಂಟ್ ಆಗಿ ಕಾಣಿಸಿಕೊಂಡರು. ನಟ ಜಿಮ್ ಸರ್ಬಾ, ಡಿಸೈನರ್ ಸಮಂತ್ ಅವರ ಐಸ್ ವಾಚ್ ಕಲೆಕ್ಷನ್‌ನಲ್ಲಿ ಕಾಣಿಸಿಕೊಂಡರು.
ಐಎನ್‌ಐಎಫ್‌ಡಿ ವಿದ್ಯಾರ್ಥಿಗಳ ಡಿಸೈನರ್‌ವೇರ್ಸ್ ಅನಾವರಣ
ಮೊದಲ ದಿನವೇ ಐನ್ಎಫ್‌ಐಎಫ್‌ಡಿಯ ವಿದ್ಯಾರ್ಥಿಗಳು ತಂತಮ್ಮ ಕ್ರಿಯೇಟಿವ್ ಡಿಸೈನರ್‌ವೇರ್‌ಗಳನ್ನು ಪ್ರದರ್ಶಿಸಿದರು. ಕಲಾಂಕಾರಿ ಚಿತ್ತಾರಗಳಿಗೆ ಡಿಸೈನರ್ ಲೀಸಾ ಶಾ ಡಿಸೈನ್‌ನಲ್ಲಿ ಹೊಸ ರೂಪ ದೊರಕಿತ್ತು. ಭೂಮಿಕಾ ಹಾಗೂ ಕೆಟಕಿಯ ಬ್ಲಾಕ್ ಪ್ರಿಂಟಿಂಗ್, ಪ್ರೇಕ್ಷಾ ಹಾಗೂ ಸೌಮ್ಯರ ಐಜ್ನಿಕ್ ಪ್ರಿಂಟ್ಸ್ ಜುಬಿಯಾ ಮತ್ತು ಪ್ರಾಚಿಯ ಇಕ್ಕಟ್ ಒಡಿಸ್ಸಿ, ರಾಜ್‌ವೀರ್ ಮತ್ತು ಅನುಷಾರ ಮೊಗಲ್ ಡಿಸೈನ್ಸ್ ಡಿಸೈನರ್‌ವೇರ್‌ಗಳಲ್ಲಿ ಕಂಡು ಬಂದಿತು.
ಜೆನ್ ನೆಕ್ಸ್ಟ್ ಅಭಿರುಚಿಗೆ ಆದ್ಯತೆ
ಈ ಬಾರಿಯ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಜೆನ್ ನೆಕ್ಸ್ಟ್ ಕಾನ್ಸೆಪ್ಟ್‌ಗೆ ಹೊಂದುವಂತೆ ಡಿಸೈನರ್‌ಗಳು ತಮ್ಮ ಡಿಸೈನರ್‌ವೇರ್‌ಗಳನ್ನು ಸಿದ್ಧಪಡಿಸಿದ್ದು, ಮುಂಬರುವ ಸೀಸನ್ ಹಾಗೂ ಫ್ಯಾಷನ್ ಗಮನದಲ್ಲಿಟ್ಟುಕೊಂಡು ಇಡೀ ಶೋಗೆ ಡಿಸೈನರ್‌ವೇರ್‌ಗಳನ್ನು ರೂಪಿಸಿದ್ದಾರೆ ಎಂದು ಫ್ಯಾಷನ್ ವಿಮರ್ಶಕರು ತಿಳಿಸಿದ್ದಾರೆ. ಐದು ದಿನಗಳ ಕಾಲ ನಡೆಯಲಿರುವ ಈ ರನ್‌ವೇ ಶೋನಲ್ಲಿ ಖ್ಯಾತನಾಮ ಡಿಸೈನರ್‌ಗಳು ತಮ್ಮ ಬ್ರಾಂಡ್‌ಗಳನ್ನು ಅನಾವರಣ ಮಾಡಲಿದ್ದಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Saree Fashion: ಶ್ವೇತ ವರ್ಣದ ಸೀರೆಯಲ್ಲಿ ಮಲಯಾಳಿ ಕುಟ್ಟಿಯಂತೆ ಕಂಡ ನಟಿ ಮೋಕ್ಷಿತಾ ಪೈ