Site icon Vistara News

Stars Lehenga Trending: ಲ್ಯಾಕ್ಮೆ ಫ್ಯಾಷನ್‌ ವೀಕ್‌ನಲ್ಲಿ ಕುತೂಹಲ ಮೂಡಿಸಿದ ಲೆಹೆಂಗಾ!

Stars Lehenga Trending

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅತ್ಯಾಕರ್ಷಕ ಲೆಹೆಂಗಾಗಳು (Stars Lehenga Trending) ಈ ಬಾರಿಯ ಬಹುತೇಕ ತಾರೆಯರನ್ನು ಅಲಂಕರಿಸಿದ್ದವು, ಮಾತ್ರವಲ್ಲ, ಮುಂಬರುವ ದಿನಗಳಲ್ಲಿ ಟ್ರೆಂಡಿಯಾಗುವ ಮುನ್ಸೂಚನೆಯನ್ನು ನೀಡಿದವು. ಹೌದು. ಈ ಸಾಲಿನ ಇದುವರೆಗೂ ನಡೆದ ಲ್ಯಾಕ್ಮೆ ಫ್ಯಾಷನ್‌ ವೀಕ್‌ನಲ್ಲಿ ವೈವಿಧ್ಯಮಯ ಲೆಹೆಂಗಾಗಳು ಫ್ಯಾಷನ್‌ವೀಕ್‌ನ ಕಳೆ ಹೆಚ್ಚಿಸಿದವು. ಟ್ರೆಡಿಷನಲ್‌ ಲುಕ್‌ನಿಂದ ಬಡ್ತಿ ಪಡೆದ ಇಂಡೋ-ವೆಸ್ಟರ್ನ್ ಶೈಲಿಯ ಲೆಹೆಂಗಾಗಳಿಂದಿಡಿದು ಶಿಮ್ಮರ್‌ ಲೆಹೆಂಗಾಗಳು ಫ್ಯಾಷನ್‌ಪ್ರಿಯರ ಮನಸೆಳೆದವು. ಒಂದಕ್ಕಿಂತ ಒಂದು ವಿಭಿನ್ನ ಡಿಸೈನ್‌ನಲ್ಲಿ ಕಾಣಿಸಿಕೊಂಡು ಡಿಸೈನರ್‌ಗಳ ಕ್ರಿಯಾಶೀಲ ಕುಸುರಿ ಕಾರ್ಯಕ್ಕೆ ಸಾಕ್ಷಿಯಾದವು. ತಾರೆಯರನ್ನು ಏಂಜೆಲ್‌ನಂತೆ ಬಿಂಬಿಸುವುದರೊಂದಿಗೆ ನಯಾ ಡಿಸೈನ್‌ಗಳ ಟ್ರೆಂಡ್‌ಗೆ ನಾಂದಿ ಹಾಡಿದವು.

ಸ್ಟಾರ್‌ಗಳ ಇಂಡೋ-ವೆಸ್ಟರ್ನ್ ಶೈಲಿಯ ಲೆಹೆಂಗಾ

ಅಂದಹಾಗೆ, ಈ ಬಾರಿ ಲ್ಯಾಕ್ಮೆ ಫ್ಯಾಷನ್‌ ವೀಕ್‌ನಲ್ಲಿ ತಾರೆಯರು ಆರಂಭದಲ್ಲಿ ಸಸ್ಟೈನಬಲ್‌ ಫ್ಯಾಷನ್‌ಗೆ ಸೈ ಎಂದರಾದರೂ, ಎರಡನೇ ದಿನದ ನಂತರ ವೀಕೆಂಡ್‌ನಲ್ಲಿ ನಡೆದ ರನ್‌ ವೇ ಫ್ಯಾಷನ್‌ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಡಿಸೈನರ್‌ವೇರ್‌ಗಳು ಅನಾವರಣಗೊಂಡವು. ಅವುಗಳಲ್ಲಿ ಬಾಲಿವುಡ್‌ ಸೆಲೆಬ್ರೆಟಿಗಳು ಧರಿಸಿದ ಲೆಹೆಂಗಾಗಳು ಮಾತ್ರ ಒಂದಕ್ಕಿಂತ ಒಂದು ಆಕರ್ಷಕವಾಗಿತ್ತು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ವಿದ್ಯಾ. ಅವರ ಪ್ರಕಾರ, ಇಂಡೋ-ವೆಸ್ಟರ್ನ್ ಶೈಲಿಯವು ಅತಿ ಹೆಚ್ಚು ಕಾಣಿಸಿಕೊಂಡವು ಎನ್ನುತ್ತಾರೆ.

ತಾರೆಯರ ಲೆಹೆಂಗಾ ಲವ್‌

ಲೆಹೆಂಗಾದಲ್ಲೂ ಅತ್ಯಾಕರ್ಷಕವಾಗಿ ಕಾಣಿಸಬಹುದು ಎಂಬುದನ್ನುತಾರೆಯರು ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಪ್ರೂವ್‌ ಮಾಡಿದರು. ನಟಿ ಮಲೈಕಾ ಅರೋರಾ ಖಾನ್‌ ಪಾಸ್ಟೆಲ್‌ ಶೇಡ್‌ನ ಫ್ಲೋರಲ್‌ ಪ್ರಿಂಟ್‌ನ ಅಸ್ಸೆಮ್ಮಿಟ್ರಿಕಲ್‌ ಲೆಹೆಂಗಾದಲ್ಲಿ ಕಾಣಿಸಿಕೊಂಡರೇ, ಡಿಸೈನರ್‌ ಅರವಿಂದ್‌ ಅಮಪುಲ್‌ ಲೆಬೆಲ್‌ನಲ್ಲಿ ನಟಿ ಸಾರಾ ಅಲಿ ಖಾನ್‌ ಸಿಲ್ವರ್‌ ಫ್ಲೇರ್ಡ್ ಲೆಹೆಂಗಾದಲ್ಲಿ ವಾಕ್‌ ಮಾಡಿದರು. ಇನ್ನು ನಟಿ ಶ್ರುತಿ ಹಾಸನ್‌ ಕೂಡ ಅದೇ ಲೆಬೆಲ್‌ನ ಶೈನಿಂಗ್‌ ಬೂದು ಬಣ್ಣದ ಫ್ಲೋರಲ್‌ ಲೆಹೆಂಗಾದಲ್ಲಿ ಪೋಸ್‌ ನೀಡಿದರು. ನಟಿ ಫಾತಿಮಾ ಅನಾ ಖಾನ್‌ ಎದ್ದು ಕಾಣುವಂತಹ ಹಾಲ್ಟರ್‌ ನೆಕ್‌ ಬ್ಲೌಸ್‌ ಹಾಗೂ ಪರ್ಪಲ್‌ ಲೆಹೆಂಗಾದಲ್ಲಿ ಹೈ ಲೈಟ್‌ ಆದರು. ಬ್ಲಾಕ್‌ ಮತ್ತು ಗೋಲ್ಡ್‌ ಎಂಬಾಲಿಶ್ಡ್ ಡಿಸೈನ್‌ ಗ್ರ್ಯಾಂಡ್‌ ಲೆಹೆಂಗಾದಲ್ಲಿ ದುಪಟ್ಟಾ ಹಿಡಿದು ನಟಿ ದಿವ್ಯಾಕೋಸ್ಲಾ ಕುಮಾರ್‌ ವಾಕ್‌ ಮಾಡಿದರು. ಕಲ್ಕಿ ಲೆಬೆಲ್‌ನ ವೈನ್‌ ಶೇಡ್‌ನ ಇಂಡೋ-ವೆಸ್ಟರ್ನ್ ಶೈಲಿಯ ಮೆರ್ಮೈಯ್ಡ್ ಲೆಹೆಂಗಾದಲ್ಲಿ ಕ್ಯಾಟ್‌ ವಾಕ್‌ ಮಾಡಿದರು. ನಟಿ ಡಯಾನಾ ಪೆಂಟಿ ಅತ್ಯಾಕರ್ಷಕ ಕ್ರಿಸ್ಟಲ್‌ ಡಿಸೈನ್‌ನ ಲೆಹೆಂಗಾದಲ್ಲಿ ಎಲ್ಲರ ಮನ ಸೆಳೆದರು. ಒಟ್ಟಾರೆ, ಈ ಬಾರಿಯ ಲ್ಯಾಕ್ಮೆ ಫ್ಯಾಷನ್‌ ವೀಕ್‌ನಲ್ಲಿ ಇಂಡೋ-ವೆಸ್ಟರ್ನ್ ಶೈಲಿ ಲೆಹೆಂಗಾಗಳು ಹಂಗಾಮ ಎಬ್ಬಿಸಿದವು. ಮುಂಬರುವ ಸೀಸನ್‌ನಲ್ಲಿ ಟ್ರೆಂಡಿಯಾಗುವ ಎಲ್ಲಾ ಮುನ್ಸೂಚನೆಯನ್ನು ನೀಡಿದವು ಎನ್ನಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Lakme Fashion Week 2024: ಲ್ಯಾಕ್ಮೆ ಫ್ಯಾಷನ್‌ ವೀಕ್‌ನಲ್ಲಿ ಸಂಚಲನ ಮೂಡಿಸಿದ ಸಸ್ಟೈನಬಲ್‌ ಫ್ಯಾಷನ್‌

Exit mobile version