ಶೀಲಾ ಸಿ. ಶೆಟ್ಟಿ, ಬೆಂಗಳೂರು
ಉದ್ಯಾನನಗರಿಯ ಬ್ರೀಗೇಡ್ ರಸ್ತೆಯಲ್ಲಿನ ಟೊಕಾದಲ್ಲಿ ನಡೆದ ಮಿಸ್ಟರ್ ಮತ್ತು ಮಿಸ್ ಐಕಾನ್ ಇಂಡಿಯಾ ಆಡಿಷನ್ ರೌಂಡ್‌ನ ಫ್ಯಾಷನ್ ವಾಕ್‌ನಲ್ಲಿ ಜೆನ್ ಜಿ ಹುಡುಗ-ಹುಡುಗಿಯರು ಸೇರಿದಂತೆ ಸಾಕಷ್ಟು ಫ್ಯಾಷನ್ (Mr & Ms Icon season 4 fashion walk) ಒಲವಿರುವ ಯುವಕ-ಯುವತಿಯರು ಉತ್ಸಾಹದಿಂದ (Fashion Walk) ಪಾಲ್ಗೊಂಡರು.
ಫ್ಯಾಷನ್ ಕ್ಷೇತ್ರದ ಒಲವು
ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರುವ ಪ್ರತಿಷ್ಠಿತ ಮಿಸ್ಟರ್ & ಮಿಸ್ ಐಕಾನ್ ಇಂಡಿಯಾ ಫ್ಯಾಷನ್ ಪೇಜೆಂಟ್‌ನ ಫಿನಾಲೆಗೂ ಮುನ್ನ ಪ್ರತಿ ಬಾರಿಯಂತೆ ಈ ಬಾರಿಯೂ ನಡೆದ ಆಡಿಷನ್ ಪ್ಲಸ್ ಫ್ಯಾಷನ್ ವಾಕ್‌ನಲ್ಲಿ ನಾನಾ ಕಡೆಯಿಂದ ಆಗಮಿಸಿದ್ದ ಸ್ಪರ್ಧಾಳುಗಳು ರ್ಯಾಂಪ್ ವಾಕ್ ಮಾಡಿದರಲ್ಲದೇ, ಜ್ಯೂರಿ ಪ್ಯಾನೆಲ್‌ನ ನಾನಾ ಪ್ರಶ್ನೆಗಳಿಗೆ ಉತ್ತರಿಸಿದರು. ಫ್ಯಾಷನ್ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವುದರೊಂದಿಗೆ ಈ ಕ್ಷೇತ್ರದ ಬಗ್ಗೆ ಅವರಿಗಿರುವ ಒಲವನ್ನು ವಿವರಿಸಿದರು. ಈ ಆಯ್ಕೆ ಪ್ರಕ್ರಿಯೆಗಾಗಿ ನಡೆದ ರೌಂಡ್‌ಗಳಲ್ಲಿನ ವಿವರ ಇಲ್ಲಿದೆ. ಫ್ಯಾಷನ್ ವಾಕ್, ಲುಕ್ಸ್, ಸ್ಟೇಜ್ ಅಪಿಯರೆನ್ಸ್ ಸೇರಿದಂತೆ ಜ್ಯೂರಿ ಪ್ಯಾನೆಲ್‌ನ ಪ್ರಶ್ನೋತ್ತರ ರೌಂಡ್‌ನಲ್ಲೂ ಭಾಗವಹಿಸಿದ್ದ ಸ್ಪರ್ಧಿಗಳು ಈ ಕ್ಷೇತ್ರದ ಬಗ್ಗೆ ತಮಗಿರುವ ಒಲವನ್ನು ತೋರ್ಪಡಿಸಿದರು.
ನ್ಯಾಷನಲ್ ಡೈರೆಕ್ಟರ್ ರಂಜಿನಿ ಫ್ಯಾಷನ್ ಟಾಕ್
“ಪ್ರತಿ ವರ್ಷದಂತೆ ಈ ವರ್ಷವೂ ಮಿಸ್ಟರ್ ಹಾಗೂ ಮಿಸ್ ಐಕಾನ್ ಇಂಡಿಯಾ ನಡೆಯಲಿದ್ದು, ಇದಕ್ಕಾಗಿ ರಾಷ್ಟ್ರದ ನಾನಾ ಕಡೆಯಿಂದ ಬಂದಿರುವ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ವಿಶೇಷವೆಂದರೇ, ಉದ್ಯಾನನಗರಿಯಲ್ಲಿ ನಡೆಯುವ ಈ ಪೇಜೆಂಟ್‌ನಲ್ಲಿ ಕನ್ನಡಕ್ಕೂ ಮಾನ್ಯತೆ ನೀಡಿದ್ದೇವೆ. ಸ್ಪರ್ಧಾಳುಗಳು ಬೇರೆ ಕಡೆಯವರಾಗಿದ್ದರೂ ಅವರನ್ನು ಇಲ್ಲಿನ ಭಾಷೆ ಕಲಿಯುವಂತೆ ಪ್ರೋತ್ಸಾಹಿಸಿದ್ದೇವೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ದೊರೆತಿದೆ. ಇದು ನಮ್ಮ ಫ್ಯಾಷನ್ ಪೇಜೆಂಟ್‌ನ ಹೈಲೈಟ್” ಎಂದಿದ್ದಾರೆ ಪೇಜೆಂಟ್‌ನ ನ್ಯಾಷನಲ್ ಡೈರೆಕ್ಟರ್ ರಂಜಿನಿ. ಜ್ಯೂರಿ ಪ್ಯಾನೆಲ್‌ನಲ್ಲಿ ಪಾಲ್ಗೊಳ್ಳುವುದರೊಂದಿಗೆ, ಫ್ಯಾಷನ್ ವಾಕ್‌ನ ನೇತೃತ್ವವನ್ನು ವಹಿಸಿದ್ದರು. ಇವರೊಂದಿಗೆ ಮಾಡೆಲ್ ಹಾಗೂ ನಟಿ ಐಶ್ವರ್ಯಾ, ಫ್ಯಾಷನ್ ಪತ್ರಕರ್ತೆ, ಲೇಖಕಿ ಹಾಗೂ ಪೇಜೆಂಟ್‌ಗಳ ಜ್ಯೂರಿ ಸಲಹೆಗಾರರಾದ ಶೀಲಾ ಸಿ. ಶೆಟ್ಟಿ ಕೂಡ ಭಾಗವಹಿಸಿದ್ದರು.
ಪೇಜೆಂಟ್ ನಿರ್ದೇಶಕ ಶಂಕರ್ ಮಾತು
ಉದ್ಯಾನನಗರಿಗೆ ಎಲ್ಲೆಡೆಯಿಂದ ಆಗಮಿಸುವ ಯುವಕ-ಯುವತಿಯರಿಗೆ ತಮ್ಮ ಪೇಜೆಂಟ್ ಮೂಲಕ ಫ್ಯಾಷನ್ ಐಡೆಂಟಿಟಿ ಪಡೆದುಕೊಳ್ಳಲು, ಪಾಲ್ಗೊಂಡು ಸದಾವಕಾಶ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಗ್ರೂಮಿಂಗ್‌ನಿಂದಿಡಿದು, ರ‍್ಯಾಂಪ್ ವಾಕ್‌ವರೆಗೂ ಎಲ್ಲವನ್ನೂ ಕಲಿಸಲಾಗುವುದು ಎಂದು ಪೇಜೆಂಟ್‌ನ ಪ್ರಾದೇಶಿಕ ನಿರ್ದೇಶಕ ಶಂಕರ್ ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡರು. ಹಾಸನ, ಹಾವೇರಿಯಂತಹ ಕಡೆಗಳಿಂದಲೂ ಆಗಮಿಸಿದ್ದ ಸ್ಪರ್ಧಾಳುಗಳೊಂದಿಗೆ ದಿಲ್ಲಿ, ಕೊಲ್ಕೊತಾ ಸೇರಿದಂತೆ ಉತ್ತರ ಭಾರತದಿಂದ ಬಂದವರು ಉತ್ಸಾಹದಿಂದ ಭಾಗವಹಿಸಿದರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Lakme Fashion Week 2024: ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಸಂಚಲನ ಮೂಡಿಸಿದ ಸಸ್ಟೈನಬಲ್ ಫ್ಯಾಷನ್