ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವದ 3 ದಿನಗಳ ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಗಣ್ಯರು ಹಾಗೂ ಸೆಲೆಬ್ರೆಟಿಗಳಿಗೆ ರಾಯಲ್ ಡ್ರೆಸ್‌ಕೋಟ್ ಪಾಲಿಸುವ ಬಗ್ಗೆ ಈಗಾಗಲೇ ಆಹ್ವಾನ ಪತ್ರಿಕೆಯಲ್ಲಿ ಸೂಚಿಸಲಾಗಿದೆ. ಹೌದು, ಈಗಾಗಲೇ ನೀಡಿರುವ ಆಹ್ವಾನ ಪತ್ರಿಕೆಯಲ್ಲಿ ಮೂರು ದಿನಗಳ ಕಾಲ ಕಾರ್ಯಕ್ರಮಗಳಿಗೆ ತಕ್ಕಂತೆ ಧರಿಸಬೇಕಾದ ಡ್ರೆಸ್‌ಕೋಡ್ ಬಗ್ಗೆ ನಮೂದಿಸಲಾಗಿದೆ. ಯಾವ್ಯಾವ ಬಗೆಯ ಉಡುಗೆ-ತೊಡುಗೆಗಳು ಈ ಲಿಸ್ಟ್‌ನಲ್ಲಿವೆ ಎಂಬುದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್. ಗುಜರಾತ್‌ನ ಜಾಮ್ ನಗರದ ಮೊಟಿಖ್ ವಾಡಿಯಲ್ಲಿನಡೆಯಲಿರುವ ಈ ಗ್ರ್ಯಾಂಡ್ ಕಾರ್ಯಕ್ರಮಗಳಲ್ಲಿ ಒಂದೊಂದು ದಿನವೂ ಒಂದೊಂದು ಬಗೆಯ ಡ್ರೆಸ್‌ಕೋಡ್ ನಿಗಧಿಪಡಿಸಲಾಗಿದೆ. ಪ್ರತಿ ಕಾರ್ಯಕ್ರಮಕ್ಕೂ ಹೊಂದುವಂತೆ ಡ್ರೆಸ್‌ಕೋಡ್ ರೂಪಿಸಲಾಗಿದೆ. ಅಷ್ಟೇಕೆ! ಭಾಗವಹಿಸುವ ಸೆಲೆಬ್ರೆಟಿಗಳಿಗೆ ಸಹಾಯವಾಗುವಂತೆ ಮೇಕಪ್ ಆರ್ಟಿಸ್ಟ್‌ನಿಂದಿಡಿದು ಎಲ್ಲಾ ಸೌಲಭ್ಯಗಳನ್ನು ಅಲ್ಲಿಯೇ ಕಲ್ಪಿಸಲಾಗಿದೆ ಎನ್ನುತ್ತವೆ ಮೂಲಗಳು.
ಮಾರ್ಚ್ 1: ಇವನಿಂಗ್ ಎವರ್‌ಲ್ಯಾಂಡ್ ಕಾಕ್‌ಟೈಲ್ ಡ್ರೆಸ್ ಕೋಡ್
ಇವನಿಂಗ್ ಎವರ್‌ಲ್ಯಾಂಡ್ ಹೆಸರಿನಲ್ಲಿ ನಡೆಯುವ ಮೊದಲ ದಿನದ ಸಂಜೆ ಕಾರ್ಯಕ್ರಮಕ್ಕೆ ಎಲ್ಲರಿಗೂ ಕಾಕ್‌ಟೈಲ್ ಡ್ರೆಸ್‌ಗಳನ್ನು ಧರಿಸುವಂತೆ ಸೂಚಿಸಲಾಗಿದೆ. ಅಂದು ನಡೆಯುವ ಮ್ಯಾಜಿಕಲ್ ಮ್ಯೂಸಿಕ್, ಡ್ಯಾನ್ಸ್‌ಗೆ ಹೊಂದುವಂತೆ ರಸಮಯ ಸಂಜೆಗೆ ಹೊಂದುವಂತಹ ವೆಸ್ಟರ್ನ್ ಗೌನ್ಸ್, ಪ್ಯಾಂಟ್ ಸೂಟ್, ಶಿಮ್ಮರ್ ಫ್ಲೂಯಿಂಗ್‌ಗೌನ್ಸ್, ಮಿನುಗುವ ಆಕ್ಸೆಸರೀಸ್ ಸೇರಿದಂತೆ ನಾನಾ ಕಾಕ್‌ಟೈಲ್ ಉಡುಪುಗಳು ಈ ಲಿಸ್ಟ್‌ನಲ್ಲಿ ಸೇರಿವೆ.
ಮಾರ್ಚ್ 2: ವಾಕ್ ಆನ್ ದಿ ವೈಲ್ಡ್ ಸೈಡ್ – ಜಂಗಲ್ ಥೀಮ್ ಡ್ರೆಸ್‌ಕೋಡ್
ಮಾರ್ಚ್ 2ರಂದು ಅಂಬಾನಿ ರೆಸ್ಕ್ಯೂ ಸೆಂಟರ್‌ನಲ್ಲಿ ನಡೆಯಲಿರುವ ವಾಕ್ ಆನ್ ದಿ ವೈಲ್ಡ್ ಸೈಡ್ ಹೆಸರಿನ ಔಟ್‌ಡೋರ್ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆಲ್ಲರಿಗೂ ಅನಿಮಲ್ ಪ್ರಿಂಟ್ಸ್, ಸಫಾರಿ ಜಂಗಲ್ ಥೀಮ್ ಡ್ರೆಸ್‌ಕೋಡ್ ಫಿಕ್ಸ್ ಮಾಡಲಾಗಿದೆ. ಸುತ್ತಾಡುವ ಕಾರ್ಯಕ್ರಮ ಇದಾಗಿರುವುದರಿಂದ ಕಂಫರ್ಟಬಲ್ ಫುಟ್‌ವೇರ್ ಧರಿಸಲು ಸೂಚಿಸಲಾಗಿದೆ.
ಮೇಲಾ ರುಜ್ (ಜಾತ್ರೆ) – ಡ್ಯಾಜ್ಲಿಂಗ್ ದೇಸಿ ರೊಮಾನ್ಸ್ ಥೀಮ್ ಡ್ರೆಸ್‌ಕೋಡ್
ಇನ್ನು, ಇದೇ ದಿನ ಸಂಜೆ ನಡೆಯಲಿರುವ “ಮೇಲಾ ರುಜ್” ಹೆಸರಿನ ದೇಸಿ ಜಾತ್ರೆಯಲ್ಲಿ ಪಾಲ್ಗೊಳ್ಳುವವರಿಗೆ ಡ್ಯಾಜ್ಲಿಂಗ್ ದೇಸಿ ರೊಮಾನ್ಸ್ ಲುಕ್ ನೀಡುವಂತಹ ಗ್ರ್ಯಾಂಡ್ ಫ್ಯಾಬ್ರಿಕ್ ಹಾಗೂ ಎಂಬ್ರಾಯ್ಡರಿ ವರ್ಕ್ ಇರುವಂತಹ ದೇಸಿ ಉಡುಗೆ-ತೊಡುಗೆ ಧರಿಸುವಂತೆ ಪ್ರಕಟಿಸಲಾಗಿದೆ. ಮಾನಿನಿಯರಿಗೆ ಪಾಸ್ಟೆಲ್ ಬೋಲ್ಡ್ ಶೇಡ್‌ನ ಸಿಕ್ವೀನ್ಸ್ ಸೀರೆ, ಗ್ರ್ಯಾಂಡ್ ಎಂಬ್ರಾಯ್ಡರಿ ಲೆಹೆಂಗಾ, ಮೆನ್ಸ್ ಕೆಟಗರಿಯವರಿಗೆ ಬಂದಗಾಲ, ಶೆರ್ವಾನಿ ಎಂದು ತಿಳಿಸಲಾಗಿದೆ. ಇದೇ ಸಮಯದಲ್ಲಿ ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು, ಡಾನ್ಸ್ ಮಾಡಲು ಸಹಾಯವಾಗುವಂತಹ ಉಡುಗೆಗಳನ್ನು ಧರಿಸಲು ಅವಕಾಶ ಕಲ್ಪಿಸಲಾಗಿದೆ.
ಮಾರ್ಚ್ 3 : ಟಸ್ಕರ್ ಟ್ರಯಲ್ಸ್ – ಹೇರಿಟೇಜ್ ಇಂಡಿಯಾ
ಬೆಳಗ್ಗೆ ಶುರುವಾಗುವ ಟಸ್ಕರ್ ಟ್ರಯಲ್ ಹೆಸರಿನ ಔಟ್‌ಡೋರ್ ಆಕ್ಟಿವಿಟಿಯಲ್ಲಿ, ಅತಿಥಿಗಳು ಕ್ಯಾಶುವಲ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳಬೇಕಿದೆ. ಇನ್ನು, ಅದೇ ದಿನ ಸಂಜೆ ವೇಳೆ ನಡೆಯುವ ಹಸ್ತಾಕ್ಷರ್ ಕಾರ್ಯಕ್ರಮದಲ್ಲಿ ಹೆರಿಟೇಜ್ ಇಂಡಿಯನ್ ಡ್ರೆಸ್‌ಕೋಡ್ ನೀಡಿದ್ದು, ಇಲ್ಲಿ ನಡೆಯುವ ರಾಯಲ್ ಪಾರ್ಟಿಯಲ್ಲಿ ಅತಿಥಿಗಳು, ಭಾರತೀಯ ಸಂಸ್ಕೃತಿ ಬಿಂಬಿಸುವಂತಹ ರಾಯಲ್ ಲುಕ್ ನೀಡುವ ರೇಷ್ಮೆ ಸೀರೆ, ಲೆಹೆಂಗಾ, ಅನಾರ್ಕಲಿ, ಶೆರ್ವಾನಿ, ಟರ್ಬನ್, ಕುರ್ತಾದಂತಹ ದೇಸಿ ಅಟೈರ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತವೆ ಮೂಲಗಳು.
ಒಟ್ಟಾರೆ, ಅಂಬಾನಿ ಫ್ಯಾಮಿಲಿಯ ಈ ಪ್ರಿ-ವೆಡ್ಡಿಂಗ್ ಕಾರ್ಯಕ್ರಮಗಳು ಹೈ ಸೊಸೈಟಿ ಫ್ಯಾಷನ್‌ನ ಅನಾವರಣಕ್ಕೆ ಸಾಕ್ಷಿಯಾಗಲಿದೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Sandalwood Star Fashion: ರೈನ್‌ಸ್ಟೋನ್ ಜಂಪ್‌ಸೂಟ್‌ನಲ್ಲಿ ರಾಕ್‌ಸ್ಟಾರ್‌ನಂತೆ ಮಿಂಚಿದ ಸಾನ್ಯಾ ಅಯ್ಯರ್