Site icon Vistara News

Makeup Awareness: ಫೆಸ್ಟಿವ್‌ ಸೀಸನ್‌ ಮೇಕಪ್‌ಗೆ ಬ್ರೇಕ್‌ ನೀಡಿ! ತ್ವಚೆ ರಿಲ್ಯಾಕ್ಸ್‌ ಆಗಲು ಬಿಡಿ

Makeup Awareness

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಫೆಸ್ಟಿವ್‌ ಸೀಸನ್‌ ಮುಗಿದಿದೆ. ಇದೀಗ ನಿಮ್ಮ ಮುಖಕ್ಕೆ ಕೊಂಚ ರಿಲ್ಯಾಕ್ಸ್‌ ಮಾಡಲು ಅವಕಾಶ ನೀಡಿ, ತ್ವಚೆ ಉಸಿರಾಡಲು ಅನುವು ಮಾಡಿ ಕೊಡಿ. ಮತ್ತೊಮ್ಮೆ ಕಾಂತಿಯುಕ್ತಗೊಳ್ಳಲು ಅವಕಾಶ ನೀಡಿ ಎನ್ನುತ್ತಾರೆ ಸೌಂದರ್ಯ ತಜ್ಞರು. ಅವರು ಹೇಳುವಂತೆ, ಸಾಲು ಸಾಲು ಹಬ್ಬಗಳಿಂದ ತುಂಬಿದ ಫೆಸ್ಟಿವ್‌ ಸೀಸನ್‌ನಲ್ಲಿ, ಪ್ರತಿನಿತ್ಯ ಒಂದಲ್ಲ ಒಂದು ಕಾರ್ಯಕ್ರಮಗಳಿಂದಾಗಿ ಮೇಕಪ್‌ ಮಾಡುವ ಮಾನಿನಿಯರ ಸಂಖ್ಯೆ ಹೆಚ್ಚಿತ್ತು. ಇದೀಗ ಹಬ್ಬದ ಸೀಸನ್‌ ಮುಗಿದಿದೆ. ಮುಖವನ್ನು ಕೆಲಕಾಲದ ಮೇಕಪ್‌ನಿಂದ ದೂರವಿಡಿ. ತ್ವಚೆ ರಿಲ್ಯಾಕ್ಸ್‌ ಆಗಲು ಸಮಯ ನೀಡಿ, ಒಂದಿಷ್ಟು ಆರೈಕೆ ಮಾಡಿ ಎನ್ನುತ್ತಾರೆ ಸೌಂದರ್ಯ ತಜ್ಞರು. ಮುಖವನ್ನು ರಿಲ್ಯಾಕ್ಸ್‌ ಮಾಡಲು ಏನೆಲ್ಲಾ ಮಾಡಬಹುದು ಎಂಬುದರ ಬಗ್ಗೆ ಸಿಂಪಲ್‌ ಟಿಪ್ಸ್‌ ಕೂಡ ನೀಡಿದ್ದಾರೆ. ಟ್ರೈ ಮಾಡಿ ನೋಡಿ. ನಿಮ್ಮ ತ್ವಚೆಯ ಅಂದವನ್ನು ಕಾಪಾಡಿಕೊಳ್ಳಿ ಎನ್ನುತ್ತಾರೆ.

ಮೇಕಪ್‌ನಿಂದ ಮುಖಕ್ಕೆ ತಾತ್ಕಲಿಕವಾಗಿ ಮುಕ್ತಿ ನೀಡಿ

ಪ್ರತಿದಿನ ಹಬ್ಬದ ಹೆಸರಲ್ಲಿ ಫೌಂಡೇಷನ್‌, ಕನ್ಸಿಲರ್‌, ಐ ಶ್ಯಾಡೋ, ಲಿಪ್ಸ್ಟಿಕ್‌ ಎಂದೆಲ್ಲಾ ಮುಖದ ಮೇಲೆ ಸಾಕಷ್ಟು ಲೇಯರ್‌ನ ಮೇಕಪ್‌ ಮಾಡಿರುವುದರಿಂದ ಮುಖದ ತ್ವಚೆಗೆ ಉಸಿರಾಡಲು ಆಗುವುದಿಲ್ಲ. ರಂಧ್ರಗಳು ಮುಚ್ಚಿಕೊಂಡಿರುತ್ತವೆ. ಪರಿಣಾಮ, ಮೊಡವೆಗಳು ಮೂಡಬಹುದು. ಹಾಗಾಗಿ, ಮೇಕಪ್‌ ತೆಗೆದು ಮಲಗುವುದು ಮಾತ್ರವಲ್ಲ, ಒಂದಿಷ್ಟು ದಿನ ಏನೂ ಹಚ್ಚದೇ ಮುಖವನ್ನು ಹಾಗೆಯೇ ರಿಲ್ಯಾಕ್ಸ್ ಆಗಲು ಬಿಡಿ.

ಮುಖಕ್ಕೆ ಸ್ಟೀಮ್‌ ತೆಗೆದುಕೊಳ್ಳಿ

ಮುಖಕ್ಕೆ ಆವಿ ತೆಗೆದುಕೊಳ್ಳಿ. ಇದು ಮುಖದ ಮೇಲಿನ ಕೊಳೆಯನ್ನು ನಿವಾರಿಸುವುದಲ್ಲದೇ, ಕ್ಲಿಯರ್‌ ಮಾಡುವಲ್ಲಿ ಸಹಕರಿಸುತ್ತದೆ. ದಿನ ಬಿಟ್ಟು ದಿನ ಆವಿಯನ್ನು ತೆಗೆದುಕೊಳ್ಳಿ. ಇದು ಹೆಚ್ಚಾದಲ್ಲಿ ತ್ವಚೆ ಒಣಗಿದಂತಾಗಬಹುದು.

ಹರ್ಬಲ್‌ ಫೇಸ್‌ ಪ್ಯಾಕ್‌ ಹಚ್ಚಿ

ಆದಷ್ಟೂ ಕೆಮಿಕಲ್‌ ಫೇಸ್‌ ಪ್ಯಾಕ್‌ಗಳಿಂದ ದೂರವಿರಿ. ನಿಮ್ಮ ಸ್ಕಿನ್‌ ಟೋನ್‌ಗೆ ಮ್ಯಾಚ್‌ ಆಗುವಂತಹ ಹರ್ಬಲ್‌ ಫೇಸ್‌ ಪ್ಯಾಕ್‌, ಫೇಸ್‌ ಮಾಸ್ಕ್‌ ಹಾಕಿ. ಇದು ಚರ್ಮದ ಆರೋಗ್ಯ ಸುಧಾರಿಸಲು ಸಹಕಾರಿ.

ಸ್ಕಿನ್‌ ಟೋನ್‌ಗೆ ತಕ್ಕಂತೆ ಆರೈಕೆ ಮಾಡಿ

ಜಿಡ್ಡಿನಂಶ, ಒಣಗಿದ ಹಾಗೂ ಮಿಕ್ಸ್‌ ತ್ವಚೆ ಹೊಂದಿರುವವರು ಅವರವರ ಸ್ಕಿನ್‌ ಟೋನ್‌ಗೆ ತಕ್ಕಂತೆ ಮಾಯಿಶ್ಚರೈಸರ್‌ ಆಯ್ಕೆ ಮಾಡಿ ಹಚ್ಚಿ, ಆರೈಕೆ ಮಾಡಿ. ಆದಷ್ಟೂ ಕೆಮಿಕಲ್‌ ಕ್ರೀಮ್‌ಗಳಿಂದ ದೂರವಿರಿ.

ಮುಖದ ವ್ಯಾಯಾಮ ರೂಢಿಸಿಕೊಳ್ಳಿ

ಮುಖದ ಭಾಗಗಳಿಗೂ ವ್ಯಾಯಾಮ ಅಗತ್ಯವಿರುತ್ತದೆ. ಅಂತರ್ಜಾಲದಲ್ಲಿ ಈ ಕುರಿತ ಸಾಕಷ್ಟು ಮಾಹಿತಿ ದೊರಕುತ್ತದೆ. ಇದನ್ನು ನೋಡಿ ಕಲಿತು ಮುಂದುವರಿಸಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Saree Fashion: ಸ್ಟ್ರೀಟ್‌ ಫ್ಯಾಷನ್‌ಗೂ ಎಂಟ್ರಿ ಕೊಟ್ಟಿದೆ ಇಂಡೊ-ವೆಸ್ಟರ್ನ್ ಸೀರೆ!

Exit mobile version