ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕ್ಲಾಸಿ ಲುಕ್ ನೀಡುತ್ತಿದ್ದ ಮೆನ್ಸ್ ಫಾರ್ಮಲ್ ಪ್ಯಾಂಟ್ ಸೂಟ್ (Funky Pant Suit Fashion) ಇದೀಗ ಫ್ಯಾನ್ಸಿ ಫಂಕಿ ಲುಕ್ ಪಡೆದಿದೆ. ಡೀಸೆಂಟ್, ಎಲಿಗೆಂಟ್ ಲುಕ್‌ನಿಂದಾಚೆ ಹೊರಬಂದಿದೆ. ಪ್ಯಾಂಟ್‌ಸೂಟ್ ಡಿಸೈನರ್‌ಗಳ ಕೈಗೆ ಸಿಲುಕಿ, ಹೀಗೂ ಬದಲಾಗಬಹುದಾ? ಎನ್ನುವಷ್ಟರ ಮಟ್ಟಿಗೆ ಈ ಔಟ್‌ಫಿಟ್ ಬದಲಾಗಿದೆ.
ಫ್ಯಾಷನ್ ವಿಮರ್ಶಕರ ಅಭಿಪ್ರಾಯ
ಹೌದು. ಇದಕ್ಕೆ ಪೂರಕ ಎಂಬಂತೆ, ಬಾಲಿವುಡ್ ಪೇಜ್3 ಸ್ಟಾರ್, ಸೋಷಿಯಲ್ ಮೀಡಿಯಾ ಸ್ಟಾರ್, ಹಿಂದಿ ಬಿಗ್ ಬಾಸ್ ಅತಿಥಿ ಆರ್ರಿ, ಈ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡು ಮೆನ್ಸ್ ಫ್ಯಾಷನ್ ಲೋಕದಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ. ಕ್ಲಾಸಿ ಲುಕ್‌ಗೆ ಹುಬ್ಬೇರಿಸುವಂತಹ ಫಂಕಿ ಸ್ಟೈಲ್ ಸ್ಟೇಟ್‌ಮೆಂಟ್ ನೀಡುವಂತಹ ಮೈಸನ್ ನಿಕಿಲ್ ಕೊಹ್ಲೆ ಲೆಬೆಲ್‌ನ ಫ್ಯಾನ್ಸಿ ಗೋಲ್ಡನ್ ಪ್ಯಾಚ್ ವರ್ಕ್ ಪ್ಯಾಂಟ್ ಸೂಟ್ ಧರಿಸಿದ್ದಾರೆ. ಹೊಸ ಫ್ಯಾಷನ್ ಸ್ಟೇಟ್‌ಮೆಂಟ್‌ಗೆ ಗ್ರೀನ್ ಸಿಗ್ನಲ್ ತೋರಿಸಿದ್ದಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ಸೋನಾ. ಅವರ ಪ್ರಕಾರ, ಆರ್ರಿ ಅವರು ಮೊದಲಿನಿಂದಲೂ ಒಂದಲ್ಲೊಂದು ಚಿತ್ರ-ವಿಚಿತ್ರ ಸ್ಟೈಲ್ ಸ್ಟೇಟ್‌ಮೆಂಟ್‌ನಿಂದಲೇ ಗುರುತಿಸಿಕೊಂಡಿದ್ದಾರೆ. ಈ ಬಾರಿ ಇದೊಂದು ಅವರ ಹೊಸ ಪ್ರಯೋಗ ಅಷ್ಟೇ! ಎಂದಿದ್ದಾರೆ.
ಆಕರ್ಷಣೆಯ ಕೇಂದ್ರಬಿಂದುವಾದ ಆರ್ರಿ ಫ್ಯಾನ್ಸಿ ಪ್ಯಾಂಟ್ ಸೂಟ್
ಬಾಲಿವುಡ್‌ಗರ ಆಪ್ತನಾಗಿರುವ ಆರ್ರಿ, ಸದಾ ಒಂದಲ್ಲ ಒಂದು ಪಾರ್ಟಿಗಳಲ್ಲಿ ಸೆಲೆಬ್ರೆಟಿಗಳೊಂದಿಗೆ ಪೋಸ್ ನೀಡುತ್ತಲೇ ಕಾಣಿಸಿಕೊಳ್ಳುತ್ತಿರುತ್ತಾರೆ. ತಾನು ಧರಿಸುವ ಔಟ್‌ಫಿಟ್‌ನಿಂದಿಡಿದು, ಕೈಯಲ್ಲಿಡಿದ ಮೊಬೈಲ್ ಕವರ್ ಕೂಡ ವಿಭಿನ್ನವಾಗಿ ಬಿಂಬಿಸುವುದು ಈತನ ಸ್ಪೆಷಾಲಿಟಿ. ಇನ್ನು, ಸಿನಿಮಾ ಸಮಾರಂಭವೊಂದರಲ್ಲಿ ಧರಿಸಿದ ಗೋಲ್ಡನ್ ಶೇಡ್‌ನ ಕಿಡ್ಸ್ ಕಾರ್ಟೂನ್‌ಗಳ ಪ್ಯಾಚ್ ವರ್ಕ್ ಇದ್ದಂತಹ ಫನ್ನಿ ಫ್ಯಾನ್ಸಿ ಪ್ಯಾಂಟ್ ಸೂಟ್ ಎಲ್ಲರನ್ನು ಸೆಳೆದಿತ್ತು. ಇದ್ಯಾವ ಬಗೆಯ ಡಿಸೈನ್ ಎಂಬಂತಿತ್ತು. ಇದೇ ಈ ಆರ್ರಿ ಸೂಟ್‌ನ ವಿಶೇಷತೆಯಾಗಿತ್ತು ಎನ್ನುತ್ತಾರೆ ಫ್ಯಾಷನ್ ವಿಶ್ಲೇಷಕರು.
ಪಾರ್ಟಿಗೆ ಫಂಕಿ ಪ್ಯಾಂಟ್ ಸೂಟ್
ಅಂದಹಾಗೆ, ಅದರಲ್ಲೂ ಮೆನ್ಸ್ ಫ್ಯಾಷನ್‌ನ ಪ್ಯಾಂಟ್‌ಸೂಟ್ ಎಂದಾಕ್ಷಣ ಕ್ಲಾಸಿ ಲುಕ್ ನೀಡುವ ಔಟ್‌ಫಿಟ್ ಎಂಬ ಮನೋಭಾವ ಎಲ್ಲರಲ್ಲೂ ಮನೆ ಮಾಡಿರುತ್ತದೆ. ಆದರೆ, ಈ ಪ್ಯಾಂಟ್ ಸೂಟನ್ನೇ ಫಂಕಿಯಾಗಿಸಿ, ಬದಲಾವಣೆಯ ಅಲೆ ಎಬ್ಬಿಸಿರುವುದು ಡಿಸೈನರ್‌ಗೆ ಮಾತ್ರವಲ್ಲ, ಆರ್ರಿಗೂ ಕ್ರೆಡಿಟ್ ಸಲ್ಲುತ್ತದೆ. ಯುವಕರು ಪಾರ್ಟಿಗೆ ಈ ರೀತಿಯೂ ಧರಿಸಬಹುದು ಎಂಬುದಕ್ಕೆ ಆರ್ರಿಯ ಕ್ರೇಝಿ ಈ ಪ್ಯಾಂಟ್‌ಸೂಟ್ ಉದಾಹರಣೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಒಟ್ಟಿನಲ್ಲಿ ಪ್ಯಾಂಟ್‌ಸೂಟ್‌ನ ಈ ಹೊಸ ಕ್ರೇಝಿ ರೂಪ ಫಂಕಿ ಫ್ಯಾಷನ್ ಲಿಸ್ಟ್‌ಗೆ ಸೇರಿದೆ ಎನ್ನಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Model Fashion Life: ವಿಂಟರ್‌ನಲ್ಲೂ ವಿಂಟೇಜ್ ಫ್ಯಾಷನ್‌ಗೆ ಮಾಡೆಲ್ ವಿಭಾ ಸಿಂಹ ಆದ್ಯತೆ