-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಲಿಮ್ ಫಿಟ್ ರಾಯಲ್ ಬ್ಲ್ಯೂ ಪ್ಯಾಂಟ್ ಸೂಟ್‌ಗಳು ಇದೀಗ ಮೆನ್ಸ್ ಫ್ಯಾಷನ್‌ನಲ್ಲಿ (Mens Fashion) ಟ್ರೆಂಡಿಯಾಗಿವೆ. ಬಾಲಿವುಡ್ ನಟ ಇಶಾನ್ ಕಟ್ಟರ್ ಈ ಸೂಟ್‌ನಲ್ಲಿ ಕಾಣಿಸಿಕೊಂಡ ನಂತರ ಡಿಸೈನರ್‌ಗಳು ಇದೇ ಶೇಡ್‌ನಲ್ಲಿ ನಾನಾ ಬಗೆಯ ಪ್ಯಾಂಟ್‌ಸೂಟ್‌ಗಳನ್ನು ಡಿಸೈನ್ ಮಾಡತೊಡಗಿದ್ದು, ಇದಕ್ಕೆ ಪೂರಕ ಎಂಬಂತೆ, ಕಾರ್ಪೋರೇಟ್ ಹುಡುಗರು ಇವುಗಳಲ್ಲಿ ಕಾಣಿಸಿಕೊಳ್ಳತೊಡಗಿದ್ದಾರೆ.
ಡೀಸೆಂಟ್ ಲುಕ್‌ಗೆ ಕಾರ್ಪೋರೇಟ್ ಹುಡುಗರ ಫಿದಾ
“ಪ್ಯಾಂಟ್ ಸೂಟ್ ಎಂದಾಕ್ಷಣ ಸಾಕಷ್ಟು ಹುಡುಗರು ಲೆಕ್ಕವಿಲ್ಲದಷ್ಟು ಬಗೆಯ ಕಲರ್ ಹಾಗೂ ಡಿಸೈನ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಕೆಲವರಂತೂ ಎದ್ದು ಕಾಣುವಂತಹ ವೈಬ್ರೆಂಟ್ ಶೇಡ್‌ಗಳಲ್ಲಿ ಹೈಲೈಟಾಗುತ್ತಾರೆ. ಇನ್ನು ಕೆಲವರು ಇದಕ್ಕೆ ನಾನಾ ಪ್ರಯೋಗಗಳನ್ನು ಮಾಡುತ್ತಾರೆ. ಇಲ್ಲವೇ, ತಮ್ಮದೇ ಆದ ಡಿಸೈನ್ ಮಾಡಿಸಿ, ಫ್ಯಾಷನ್ ಇನಫ್ಲೂಯೆನ್ಸರ್ ಓರ್ರಿಯಂತೆ ಸುದ್ದಿಯಾಗುತ್ತಾರೆ. ಆದರೆ, ಡಿಸೆಂಟ್ ಕಾರ್ಪೋರೇಟ್ ಹುಡುಗರಿಗೆ ಮಾತ್ರ ಆಕರ್ಷಕ ಸಿಂಪಲ್ ಪ್ಯಾಂಟ್‌ಸೂಟ್‌ಗಳ ಮೇಲೆ ಪ್ರೀತಿ. ಇದೇ ಸಮಯದಲ್ಲಿ ನಟ ಇಶಾನ್ ಕಟ್ಟರ್ ಧರಿಸಿದ ಡಾರ್ಕ್ ರಾಯಲ್ ಬ್ಲ್ಯೂ ಪ್ಯಾಂಟ್‌ಸೂಟ್ ಟ್ರೆಂಡಿಯಾಗಿದೆ. ಪರಿಣಾಮ, ಈ ಔಟ್‌ಫಿಟ್ ಬೇಡಿಕೆ ಹೆಚ್ಚಿಸಿಕೊಂಡಿದೆ” ಎನ್ನುತ್ತಾರೆ ಡಿಸೈನರ್ಸ್.
ಡೀಪ್ ರಾಯಲ್ ಬ್ಲ್ಯೂ ಶೇಡ್ ಪ್ಯಾಂಟ್ ಸೂಟ್‌ಗೆ ಬೇಡಿಕೆ
ಪಾಸ್ಟೆಲ್ ಶೇಡ್‌ನವು ಹುಡುಗಿಯರ ಕೆಟಗರಿಯಲ್ಲಿ ಪಾಪುಲರ್ ಆಗಿದ್ದರೇ, ಹುಡುಗರ ಕೆಟಗರಿಯಲ್ಲಿ ಡಾರ್ಕ್ ಶೇಡ್‌ನವು ಪಾಪುಲರ್ ಆಗಿವೆ. ಬ್ಲ್ಯಾಕ್ ಕಲರ್ ಮಿಡಲ್ ಏಜ್ ಚಾಯ್ಸ್ ಎಂಬಂತಾಗಿದ್ದು, ಹಾಗಾಗಿ ಯಂಗ್ ಲುಕ್ ಬಯಸುವವರು ಹಾಗೂ ಟ್ರೆಂಡಿ ಲುಕ್ ಬಯಸುವವರು ಇದೀಗ ಡೀಪ್ ರಾಯಲ್ ಬ್ಲ್ಯೂ ಶೇಡ್ ಪ್ಯಾಂಟ್ ಸೂಟ್‌ಗೆ ಮನಸೋತಿದ್ದಾರೆ.
ಡೀಪ್ ಶೇಡ್ ಪ್ಯಾಂಟ್‌ಸೂಟ್ ಟಿಪ್ಸ್
- ಡಾರ್ಕ್ ಸ್ಕಿನ್ ಟೋನ್ನವರಿಗೆ ನಾಟ್ ಓಕೆ.
- ಈ ಸೂಟ್ ಧರಿಸಿದಾಗ ಹೆಚ್ಚು ಆಕ್ಸೆಸರೀಸ್ ಧರಿಸಕೂಡದು.
- ಡೀಸೆಂಟ್ ಹೇರ್ಸ್ಟೈಲ್ ಮ್ಯಾಚ್ ಆಗುತ್ತದೆ.
- ಸೂಟಿನೊಳಗೆ ಧರಿಸುವ ಇನ್ನರ್ ಹೊಂದಬೇಕು.
- ಸ್ಲಿಮ್‌ಫಿಟ್ ನಿಮ್ಮ ಬಾಡಿ ಮಾಸ್ ಇಂಡೆಕ್ಸ್ಗೆ ಹೊಂದುವುದು ಅಗತ್ಯ.
- ಶೂ ಅಥವಾ ಸ್ನೀಕರ್ ಧರಿಸಿ.
- ಬ್ರೋಚರ್ ಕೋಟ್ ಮೇಲೆ ಧರಿಸಿದಲ್ಲಿ ಹೈಲೈಟಾಗುವುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Fashion: ಏನಿದು ನಟಿ ಶ್ರೀ ಲೀಲಾ ಧರಿಸಿ ಮಿಂಚಿದ್ದ ಘರಾರ ಡ್ರೆಸ್?