-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹುಡುಗರ ಫ್ಯಾಷನ್‌ನಲ್ಲಿ ಇದೀಗ ನೆಕ್ ಚೈನ್‌ಗಳು (Mens Neck Chains Fashion) ರೀ ಎಂಟ್ರಿ ನೀಡಿವೆ. ನಾನಾ ಬಗೆಯ ಫಂಕಿ ಜಂಕ್ ನೆಕ್ ಚೈನ್‌ಗಳು ಕತ್ತನ್ನು ಆವರಿಸಿಕೊಂಡಿವೆ.
ಪೆಂಡೆಂಟ್ ನೆಕ್ ಚೈನ್ ಫ್ಯಾಷನ್
“ರೆಟ್ರೋ ಫ್ಯಾಷನ್‌ನಲ್ಲಿ ಭಾಗವಾಗಿದ್ದ ಮೆನ್ಸ್ ನೆಕ್ ಚೈನ್‌ಗಳು ಹೊಸ ರೂಪದೊಂದಿಗೆ ಹೊಸ ವಿನ್ಯಾಸದೊಂದಿಗೆ ಫಂಕಿ ಫ್ಯಾಷನ್ ಹೆಸರಲ್ಲಿ ಮರಳಿವೆ. ನೋಡಲು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ಚಿತ್ರ-ವಿಚಿತ್ರ ಡಿಸೈನ್ ಒಳಗೊಂಡಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಸೀಸನ್‌ನ ಜೆನ್ ಜಿ ಹುಡುಗರ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಹೊಂದುವಂತಹ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಆಯಾ ಹುಡುಗರ ಅಭಿಲಾಷೆಗೆ ತಕ್ಕಂತೆ ಹಾಗೂ ಅಭಿರುಚಿಗೆ ತಕ್ಕಂತೆ ಇವು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಇದಕ್ಕೆ ಪೂರಕ ಎಂಬಂತೆ, ಕೆಲವು ಕಸ್ಟಮೈಸ್ಡ್ ನೆಕ್ ಚೈನ್ ವಿತ್ ಪೆಂಡೆಂಟ್‌ಗಳು ಲಭ್ಯ. ಹಾಗಾಗಿ ಇವುಗಳ ಬೇಡಿಕೆ ಮೊದಲಿಗಿಂತ ದುಪಟ್ಟಾಗಿದೆ. ಔಟ್‌ಫಿಟ್‌ಗೆ ತಕ್ಕಂತೆ ಇವು ಕಂಡು ಬರುತ್ತಿವೆ” ಎನ್ನುತ್ತಾರೆ ಫಂಕಿ ಜ್ಯುವೆಲ್ ಸ್ಟೈಲಿಸ್ಟ್‌ಗಳು.
ಚಿತ್ರ-ವಿಚಿತ್ರ ನೆಕ್ ಚೈನ್ ಡಿಸೈನ್ಸ್
ಹುಡುಗರ ಲಿಸ್ಟ್‌ನಲ್ಲಿ ಅದರಲ್ಲೂ ಒಂದೇ ಗ್ರೂಪ್‌ನ ಹುಡುಗರ ಗುಂಪಿನಲ್ಲೂ ಒಂದೇ ಬಗೆಯ ನೆಕ್ ಚೈನ್ ನೀವು ನೋಡಿರಲು ಸಾಧ್ಯವಿಲ್ಲ! ಯಾಕೆಂದರೇ, ಒಂದೊಂದು ಬಗೆಯ ನಾನಾ ಚಿತ್ರ-ವಿಚಿತ್ರ ವಿನ್ಯಾಸದ ನೆಕ್‌ಚೈನ್‌ಗಳು ಕಾಣ ಸಿಗುತ್ತವೆ. ಉದಾಹರಣೆಗೆ, ಲಿಂಗ್ ಚೈನ್‌ಗೆ ದೊಡ್ಡ ಪೆಂಡೆಂಟ್‌ನದ್ದು ನಾನಾ ಡಿಸೈನ್ ಹಾಗೂ ಆಕಾರದಲ್ಲಿ ದೊರೆತರೇ, ಇನ್ನು ಕೆಲವು ವೈಲ್ಡ್ ಹಾಗೂ ವಿಯರ್ಡ್ ಲುಕ್‌ನ ಪೆಂಡೆಂಟ್ ಹೊಂದಿರುವಂತವು ಹುಡುಗರ ಕತ್ತಿನಲ್ಲಿ ನೇತಾಡುತ್ತಿರುತ್ತವೆ. ಮತ್ತೆ ಕೆಲವು, ಜೆಮೆಟ್ರಿಕಲ್ ವಿನ್ಯಾಸದವು, ಊಹೆಗೂ ಮೀರಿದ ಅಸ್ಸೆಮ್ಮಿಟ್ರಿಕಲ್ ಡಿಸೈನ್‌ನವು ಹುಡುಗರನ್ನು ತಗಲು ಹಾಕಿಕೊಂಡಿರುತ್ತವೆ. ಹಾಗಾಗಿ ಇಂದು ಒಂದೇ ಡಿಸೈನ್‌ನ ನೆಕ್‌ಚೈನ್ ಟ್ರೆಂಡಿಯಾಗಿವೆ ಎಂದು ಹೇಳಲು ಸಾಧ್ಯವಿಲ್ಲ. ಹುಡುಗರ ಭಿನ್ನ-ವಿಭಿನ್ನ ಸ್ಟೈಲಿಂಗ್‌ಗೆ ತಕ್ಕಂತೆ ಬದಲಾಗುತ್ತವೆ. ಅವೇ ಟ್ರೆಂಡ್‌ನಲ್ಲಿವೆ ಎನ್ನುತ್ತಾರೆ ಆಕ್ಸೆಸರೀಸ್ ಸ್ಟೈಲಿಸ್ಟ್‌ಗಳು.
ಮನಸ್ಥಿತಿ ಹೇಳುವ ನೆಕ್‌ಚೈನ್ಸ್ ವಿನ್ಯಾಸ
ಇನ್ನು ಹುಡುಗರ ಮನ ಸ್ಥಿತಿ ಹೇಳುವ ನೆಕ್‌ಚೈನ್ಸ್, ಧರಿಸುವ ಹುಡುಗರ ಅಭಿರುಚಿಯ ಧ್ಯೋತಕ ಎನ್ನುತ್ತಾರೆ ಆಕ್ಸೆಸರೀಸ್ ಡಿಸೈನರ್ಸ್. ಹೌದು, ಕೆಲವರು ಮೈಲ್ಡ್ ಲುಕ್ ಹಾಗೂ ಮೈಂಡನ್ನು ರಿಲಾಕ್ಸ್‌ಗೊಳಿಸುವ ಪೆಂಡೆಂಟ್‌ನ ನೆಕ್ ಚೈನ್ ಧರಿಸುತ್ತಾರೆ. ಇನ್ನು ಕೆಲವರು ಭಯ ಬೀಳಿಸುವಂತಹ ಹೆದರಿಕೆ ಹುಟ್ಟು ಹಾಕುವಂತಹ ಸ್ಕೆಲಿಟನ್, ದೆವ್ವ, ಭೂತದ ಮುಖ ಅಥವಾ ಮಾನ್‌ಸ್ಟರ್‌ನಂತಹ ಫೇಸ್ ಇರುವಂತಹ ಪೆಂಡೆಂಟ್‌ನ ನೆಕ್‌ಚೈನ್‌ಗಳನ್ನು ಆಯ್ಕೆ ಮಾಡುತ್ತಾರೆ. ಕಾಲೇಜು ಹುಡುಗರಂತೂ ಯೋಚಿಸದೇ ನಾನಾ ಬಗೆಯ ನೆಕ್‌ಚೈನ್ ಧರಿಸುವುದು ಹೆಚ್ಚಾಗಿದೆ. ಕೆಲವರಿಗಂತೂ ಅವುಗಳ ಅರ್ಥವೂ ತಿಳಿದಿರುವುದಿಲ್ಲ. ಇನ್ನು, ಇತ್ತೀಚೆಗೆ ಒಂದರ ಮೇಲೊಂದರಂತೆ ಚೈನ್ ಇರುವ ಲೇಯರ್ ಚೈನ್‌ಗಳು ಹುಡುಗರನ್ನು ಆಕರ್ಷಿಸಿವೆ. ಹುಡುಗಿಯರಿಗೆ ಸೀಮಿತವಾಗಿದ್ದ ಈ ಡಿಸೈನ್‌ಗಳು ಇದೀಗ ಹುಡುಗರನ್ನೂ ಸೆಳೆದಿವೆ. ಆದರೆ, ಒಂದಿಷ್ಟು ಡಿಸೈನ್ ಬದಲಾವಣೆಯೊಂದಿಗೆ ಇವು ಹುಡುಗರ ಕತ್ತನ್ನು ಆವರಿಸಿಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಧೀಮಂತ್.
ಸ್ಟೈಲಿಂಗ್‌ಗೆ ಸಾಥ್ ನೀಡುವ ಫಂಕಿ ನೆಕ್‌ಚೈನ್‌ಗಳಿವು
- ಜೀನ್ಸ್ ಪ್ಯಾಂಟ್, ಟೀ ಶರ್ಟ್ ಮೇಲೆ ಲಾಂಗ್ ಚೈನ್ ಹಾಗೂ ಸಿಂಪಲ್ ಬಿಗ್ ಪೆಂಡೆಂಟ್ ನೆಕ್‌ಚೈನ್ ಲುಕ್ ಬಿಂದಾಸ್ ಲುಕ್ ನೀಡುತ್ತದೆ.
- ಜಾಕೆಟ್ ಪ್ರಿಯರಿಗೆ ಇದೀಗ ಟ್ರೆಂಡ್ನಲ್ಲಿರುವ ಬ್ಲ್ಯಾಕ್, ವೈಟ್ ಮೆಟಲ್ನ ಲಿಂಕ್ ನೆಕ್‌ಚೈನ್‌ಗಳು ಬೆಸ್ಟ್.
- ಸಿಂಪಲ್ ಲುಕ್ ಬೇಕೆನ್ನುವವರಿಗೆ ಸಿಂಪಲ್ ತೆಳುವಾದ ನೆಕ್‌ಚೈನ್ ಸಾಕು.
- ವೈಲ್ಡ್ ಲುಕ್ ಇಷ್ಟ ಪಡುವವರಿಗೆ ಟೈಗರ್, ಲಯನ್, ಮಾನ್ಸ್ಟರ್ಮುಖದ ಪೆಂಡೆಂಟ್‌ನ ನೆಕ್‌ಚೈನ್ಸ್ ಬಂದಿವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Hairstyles: ಸೆಕೆಗಾಲದಲ್ಲಿ ಟ್ರೆಂಡಿಯಾದ 3 ಮಿಕ್ಸ್ ಮ್ಯಾಚ್ ಹೇರ್‌ಸ್ಟೈಲ್ಸ್!