Site icon Vistara News

Mens Stripe Shirt Fashion: ಮೆನ್ಸ್ ಕ್ಯಾಶುವಲ್‌ ಲುಕ್‌ಗೆ ರೀ ಎಂಟ್ರಿ ನೀಡಿದ ಸ್ಟ್ರೈಪ್ಡ್ ಶರ್ಟ್ಸ್

Mens Stripe Shirt Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮೆನ್ಸ್ ಫ್ಯಾಷನ್‌ನಲ್ಲಿ ಇದೀಗ ಮತ್ತೊಮ್ಮೆ ಸ್ಟ್ರೈಪ್ಡ್ ಶರ್ಟ್ಸ್ (Mens Stripe Shirt Fashion) ರೀ ಎಂಟ್ರಿ ನೀಡಿವೆ. ಈ ಹಿಂದೆ ಚಾಲ್ತಿಯಲ್ಲಿದ್ದ ಚಿಕ್ಕ ಸ್ಟ್ರೈಪ್ಸ್ ಶರ್ಟ್ಸ್, ಇದೀಗ ಸೈಡಿಗೆ ಸರಿದಿದ್ದು, ದೊಡ್ಡ ದೊಡ್ಡ ಸ್ಟ್ರೈಪ್ಸ್ ಶರ್ಟ್ಸ್ ಚಾಲ್ತಿಗೆ ಬಂದಿವೆ. ಅದರಲ್ಲೂ ಸ್ಲಿಮ್‌ ಫಿಟ್‌ ಹಾಗೂ ಲಾಂಗ್‌ ಸ್ಲೀವ್‌ನ ಈ ಶರ್ಟ್‌ಗಳು ಯುವಕರ ಸ್ಟೈಲ್‌ ಸ್ಟೇಟ್ಮೆಂಟ್‌ಗೆ ಸಾಥ್‌ ನೀಡುತ್ತಿವೆ.

ಮೆನ್ಸ್ ಕ್ಯಾಶುವಲ್‌ ಲುಕ್‌ಗೆ ಸ್ಟ್ರೈಪ್ಸ್ ಶರ್ಟ್ ಸಾಥ್

“ಮೆನ್ಸ್ ಫ್ಯಾಷನ್‌ನಲ್ಲಿ ಆಗಾಗ ನಾನಾ ಫ್ಯಾಬ್ರಿಕ್‌ನ ಹಾಗೂ ಶೇಡ್‌ನ ಶರ್ಟ್‌ಗಳು ಆಗಮಿಸುತ್ತಿರುತ್ತವೆ. ಅಲ್ಲದೇ, ಸೀಸನ್‌ಗೆ ತಕ್ಕಂತೆ ಬದಲಾಗುತ್ತಿರುತ್ತವೆ. ಇನ್ನು ಸ್ಟ್ರೈಪ್ಸ್ ಶರ್ಟ್ಸ್ ಮೊದಲಿನಿಂದಲೂ ಪುರುಷರ ಫ್ಯಾಷನ್‌ನಲ್ಲಿದ್ದು, ಉದ್ಯೋಗಸ್ಥರ ಲೈಫ್‌ಸ್ಟೈಲ್‌ನಲ್ಲಿ ಒಂದಾಗಿವೆ. ಕಚೇರಿಗೆ ತೆರಳುವ ಪುರುಷರ ಸಿಂಪಲ್‌ ಸ್ಟೈಲ್‌ ಸ್ಟೇಟ್‌ಮೆಂಟ್ಸ್‌ಗೆ ಇವು ಜೊತೆಯಾಗಿವೆ. ಇನ್ನು, ಫ್ಯಾಷೆನಬಲ್‌ ಯುವಕರ ವಿಷಯಕ್ಕೆ ಬಂದಲ್ಲಿ, ಈ ಶರ್ಟ್ಸ್ ಕೆಲಕಾಲ ಹುಡುಗರ ಫ್ಯಾಷನ್‌ನಿಂದ ದೂರವಿದ್ದವು. ಆದರೆ, ಇದೀಗ ಈ ಬಿಗ್‌ ಸ್ಟ್ರೈಪ್ಸ್ ಪ್ರಿಂಟ್ಸ್ ಯುವಕರಿಗೆ ಪ್ರಿಯವಾಗಿವೆ. ಇದಕ್ಕೆ ಕಾರಣ, ಕೊಂಚ ಬದಲಾದ ಲುಕ್‌ನಲ್ಲಿ ಹಾಗೂ ಕಾಂಬಿನೇಷನ್‌ನಲ್ಲಿ ಬಂದಿರುವುದು. ಕ್ಯಾಶುವಲ್‌ ಲುಕ್‌ಗೆ ಸಾಥ್‌ ನೀಡುತ್ತಿರುವುದು” ಎನ್ನುತ್ತಾರೆ ಮೆನ್ಸ್ ಸ್ಟೈಲಿಸ್ಟ್ ರಜತ್‌.

ಪಾಪ್ಯುಲರ್‌ ಆಗಿರುವ ಸ್ಟ್ರೈಪ್ಸ್ ಶರ್ಟ್ಸ್

ಈ ಸೀಸನ್‌ನಲ್ಲಿ ಅತಿ ಹೆಚ್ಚು ಪಾಪ್ಯುಲರ್‌ ಆಗಿರುವ ಸ್ಟ್ರೈಪ್ಸ್ ಶರ್ಟ್‌ಗಳೆಂದರೆ ಸ್ಲಿಮ್‌ ಫಿಟ್‌ ಶೈಲಿಯ ಲೆನಿನ್‌ ಹಾಗೂ ಕಾಟನ್‌ ಫ್ಯಾಬ್ರಿಕ್‌ನ ಬ್ಲ್ಯೂ & ವೈಟ್‌ ಕಾಂಬಿನೇಷನ್‌ನ ಶರ್ಟ್ಸ್ ಹಾಗೂ ಬ್ಲ್ಯಾಕ್‌ ಅಥವಾ ಗ್ರೇ ಶೇಡ್‌ನ ಶರ್ಟ್ಸ್. ಇನ್ನು, ಕೆಲವು ಪೀಚ್‌ ಹಾಗೂ ಪಿಸ್ತಾ ಶೇಡ್‌ನವು ಬಂದಿದ್ದು, ಒಂದಿಷ್ಟು ಹುಡುಗರಿಗೆ ಇಷ್ಟವಾಗಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

ವರ್ಟಿಕಲ್‌ ಸ್ಟ್ರೈಪ್ಸ್ ಫ್ಯಾಷನ್‌

ಹಾರಿಝಾಂಟಲ್‌ ಸ್ಟ್ರೈಪ್ಸ್ ಶರ್ಟ್ಸ್ ದಪ್ಪನಾಗಿ ಅಥವಾ ಪ್ಲಂಪಿಯಾಗಿ ಕಾಣಿಸುವಂತೆ ಮಾಡುತ್ತವೆ. ಹಾಗಾಗಿ ವರ್ಟಿಕಲ್‌ ಸ್ಟ್ರೈಪ್ಸ್‌ನ ಶರ್ಟ್ಸ್ ಪುರುಷರನ್ನು ಸ್ಲಿಮ್‌ ಆಗಿ ಕಾಣಿಸುವಂತೆ ಬಿಂಬಿಸುತ್ತವೆ. ಹಾಗಾಗಿ ಮೆನ್ಸ್ ಫ್ಯಾಷನ್‌ನಲ್ಲಿ ಇವು ಟ್ರೆಂಡಿಯಾಗಲು ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಮೆನ್ಸ್ ಫ್ಯಾಷನ್‌ ಡಿಸೈನರ್‌ ದಿಗಂತ್‌.

ಇದನ್ನೂ ಓದಿ: Students Fashion: ಕಾಲೇಜು ಹುಡುಗಿಯರ ಫ್ಯಾಷನ್‌ ಲಿಸ್ಟ್‌ಗೆ ಸೇರಿದ ಮಾರ್ಬಲ್‌ ಪ್ರಿಂಟೆಡ್‌ ಕ್ರಾಪ್‌ ಟಾಪ್ಸ್!

ಸ್ಟ್ರೈಪ್ಸ್ ಶರ್ಟ್ಸ್ ಮಿಕ್ಸ್ ಮ್ಯಾಚ್‌ ಮಾಡುವುದು ಹೀಗೆ

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Exit mobile version