Site icon Vistara News

Mini Coins Jewel Fashion: ಹುಡುಗಿಯರನ್ನು ಸೆಳೆಯುತ್ತಿರುವ ಮಿನಿ ಕಾಯಿನ್ಸ್ ನೆಕ್ಲೇಸ್‌

Mini Coins Jewel Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಿನಿ ಕಾಯಿನ್ಸ್ ನೆಕ್ಲೇಸ್‌ಗಳು ಇಂದು ಫ್ಯಾಷನ್‌ ಜ್ಯುವೆಲರಿ ಲೋಕದಲ್ಲಿ (Mini Coins Jewel Fashion) ಟ್ರೆಂಡಿಯಾಗಿವೆ. ಹೌದು, ಪುಟ್ಟ ಪುಟ್ಟ ಕಾಯಿನ್‌ನಂತಿರುವ ಮಿನಿ ನಾಣ್ಯದ ರೂಪದಂತಿರುವ ಕಾಯಿನ್‌ ನೆಕ್‌ಚೈನ್‌ ಹಾಗೂ ಟೈನಿ ಕಾಯಿನ್‌ ನೆಕ್ಲೇಸ್‌ಗಳು ಇಂದು ಜೆನ್‌ ಜಿ ಹುಡುಗಿಯರನ್ನು ಆಕರ್ಷಿಸಿವೆ. ಬಂಗಾರದ ಹಾಗೂ ಬಂಗಾರೇತರ ಡಿಸೈನ್‌ಗಳಲ್ಲೂ ಬಿಡುಗಡೆಗೊಂಡಿದ್ದು, ಫ್ಯಾಷನ್‌ ಜ್ಯುವೆಲರಿ ಪ್ರಿಯ ಹುಡುಗಿಯರ ಕತ್ತನ್ನು ಸಿಂಗರಿಸಿವೆ.

ಸಿಂಪಲ್‌ ಲುಕ್‌ ನೀಡುವ ಜ್ಯುವೆಲರಿಗಳಿವು

“ಕೆಲವರು ಕಾಯಿನ್‌ ನೆಕ್ಲೇಸ್‌ ಎಂದಾಕ್ಷಣಾ ಕಾಸಿನ ಸರ ಎಂದು ಕೊಳ್ಳುತ್ತಾರೆ. ಇದು ಅವಲ್ಲ! ನೋಡಲು ನಾಣ್ಯದಂತೆಯೇ ಕಾಣಿಸುವ ಮಿನಿ ಕಾಯಿನ್‌ಗಳನ್ನು ಹೊಂದಿದ ನೆಕ್‌ಚೈನ್‌ ಹಾಗೂ ನೆಕ್ಲೇಸ್‌ಗಳಿವು. ಆರ್ಟಿಫಿಶಿಯಲ್‌ ಡಿಸೈನ್‌ನಿಂದಿಡಿದು ಬಂಗಾರದಲ್ಲೂ ಸದ್ಯ ಟ್ರೆಂಡ್‌ನಲ್ಲಿವೆ. ಸಿಂಪಲ್‌ ಡಿಸೈನ್‌ನಿಂದ ಎಲ್ಲರನ್ನೂ ಸೆಳೆಯುತ್ತಿವೆ” ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್‌ ಆಕರ್ಷ್ ಆರಾಧ್ಯ.

ಏನಿದು ಕಾಯಿನ್ಸ್ ನೆಕ್ಲೇಸ್‌?

ಅತಿ ಪುಟ್ಟದಾದ ನಾಣ್ಯಗಳು ಹಾಗೂ ಅದರಂತೆಯೇ ಕಾಣುವ ಡಿಸೈನ್‌ನ ಕಾಯಿನ್‌ಗಳು, ಚೈನ್‌ನೊಂದಿಗೆ ಸರಪಳಿಗಳಂತೆ ಜೋಡಿಸಲ್ಪಟ್ಟಿರುತ್ತವೆ. ಇವನ್ನು ಹೊಂದಿದ ಡಿಸೈನ್‌ಗೆ ಕಾಯಿನ್ಸ್ ನೆಕ್ಲೇಸ್‌ ಎನ್ನಲಾಗುತ್ತದೆ. ಇವನ್ನು ಟೈನಿ ಕಾಯಿನ್ಸ್ ನೆಕ್ಲೇಸ್‌ ಎಂದೂ ಕೂಡ ಕರೆಯಲಾಗುತ್ತದೆ. ಕೆಲವು ಒಂದೇ ಎಳೆಯಲ್ಲಿರುವಂತವು ಸಿಗುತ್ತವೆ. ಇನ್ನು ಕೆಲವು ಮೂರ್ನಾಲ್ಕು, ನಾಲ್ಕೈದು ಎಳೆಯ ಲೇಯರ್‌ ಲುಕ್‌ ನೀಡುವಂತಹ ಕಾಯಿನ್ಸ್ ನೆಕ್ಲೇಸ್‌ಗಳು ದೊರೆಯುತ್ತವೆ.

ಬಂಗಾರದಲ್ಲೂ ಕಾಯಿನ್ಸ್ ನೆಕ್ಲೇಸ್‌

ಬಂಗಾರದಲ್ಲೂ ಈ ಡಿಸೈನ್‌ನ ನಾನಾ ಬಗೆಯ ನೆಕ್ಲೇಸ್‌ಗಳು ದೊರೆಯಲಾರಂಭಿಸಿವೆ. ಲೇಯರ್‌ ಚೈನ್‌ಗೆ ಜೋಡಿಸಿದಂತಹ ಪುಟ್ಟ ಕಾಯಿನ್‌ಗಳಿರುವಂತವು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ. ಫ್ಯಾಷನ್‌ ಜ್ಯುವೆಲರಿ ಕೆಟಗರಿಯಲ್ಲಿ ಇವು ಟ್ರೆಂಡಿಯಾಗಿವೆ ಎನ್ನುತ್ತಾರೆ ಜ್ಯುವೆಲ್‌ ಶಾಪ್‌ವೊಂದರ ಮಾರಾಟಗಾರರು.

ಇದನ್ನೂ ಓದಿ: Yoga Fashion: ಯೋಗ ಕೋ-ಆರ್ಡ್ ಸೆಟ್‌ಗೆ ಸಿಕ್ತು ಗ್ಲಾಮರ್‌ ಟಚ್‌!

ಬ್ಲ್ಯಾಕ್‌-ವೈಟ್‌ ಮೆಟಲ್‌ ಕಾಯಿನ್ಸ್ ಜ್ಯುವೆಲ್ಸ್

ಅತಿ ಕಡಿಮೆ ಬೆಲೆಗೆ ದೊರೆಯುವ ನೆಕ್ಲೇಸ್‌ಗಳಿವು. ಹೆಚ್ಚು ಭಾರವಿಲ್ಲದ ಮಿನಿಮಲ್‌ ಡಿಸೈನ್‌ನ ಈ ಕಾಯಿನ್ ನೆಕ್‌ಚೈನ್‌ಗಳನ್ನು ಧರಿಸಿದಾಗ ಎಳೆಎಳೆಯಾಗಿ ಸುಂದರವಾಗಿ ಕಾಣಿಸುತ್ತವೆ. ಹಾಗಾಗಿ, ಜೆನ್‌ ಜಿ ಹುಡುಗಿಯರ ಸದ್ಯದ ಫ್ಯಾಷನ್‌ ಜ್ಯುವೆಲರಿ ಲಿಸ್ಟ್‌ನಲ್ಲಿ ಟಾಪ್‌ನಲ್ಲಿವೆ ಎನ್ನುತ್ತಾರೆ ಜ್ಯುವೆಲ್‌ ಸ್ಟೈಲಿಸ್ಟ್‌ಗಳು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Exit mobile version