-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್ ಫ್ಯಾಷನ್ ಸೀಸನ್‌ಗೆ ಲಗ್ಗೆ ಇಟ್ಟಿದೆ. ಹೌದು. ಈ ಬಾರಿಯ ಮಳೆಗಾಲದ ಫ್ಯಾಷನ್ (Monsoon Fashion 2024) ಈಗಾಗಲೇ ಎಂಟ್ರಿ ನೀಡಿದ್ದು, ಮುಂದಿನ ಎರಡ್ಮೂರು ತಿಂಗಳವರೆಗೆ 2024ರ ಮಾನ್ಸೂನ್ ಫ್ಯಾಷನ್‌ನ ಕಾರುಬಾರು ನಡೆಯಲಿದೆ. ಈ ಜಡಿ ಮಳೆಗಾಲದಲ್ಲಿ ಟ್ರೆಂಡಿಯಾಗಲಿರುವ ಡಿಸೈನರ್‌ವೇರ್ಸ್, ವೆಸ್ಟರ್ನ್‌ವೇರ್, ಲೇಯರ್ ಲುಕ್, ಸೀಸನ್‌ವೇರ್ಸ್, ಕಲರ್ಸ್ ಥೀಮ್ ಎಲ್ಲವೂ ನಿಧಾನಗತಿಯಲ್ಲಿ ಟ್ರೆಂಡಿಯಾಗಲಿರುವ ಮುನ್ಸೂಚನೆಗಳು ಕಾಣಿಸುತ್ತಿವೆ. ಅಂದಹಾಗೆ, ಯಾವ್ಯಾವ ಶೇಡ್‌ಗಳು ಈ ಮಾನ್ಸೂನ್ ಫ್ಯಾಷನ್ ಡ್ರೆಸ್‌ಕೋಡ್‌ಗಳಲ್ಲಿ ರಾರಾಜಿಸಬಹುದು? ಯಾವ ಬಗೆಯ ವಿನ್ಯಾಸಗಳು ಟ್ರೆಂಡಿಯಾಗಬಹುದು? ಎಂಬುದೆಲ್ಲರ ಕುರಿತಾಗಿ ಫ್ಯಾಷನಿಸ್ಟ್‌ಗಳು ಇಲ್ಲಿ ಭವಿಷ್ಯ ನುಡಿದಿದ್ದಾರೆ. ಈ ಕುರಿತಂತೆ ಇಲ್ಲಿದೆ ಸಂಕ್ಷೀಪ್ತ ಡಿಟೇಲ್ಸ್.
ಮಾನ್ಸೂನ್ ಫ್ಯಾಷನ್‌ಗೆ ಎಂಟ್ರಿ
“ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಮಾನ್ಸೂನ್ ಸೀಸನ್‌ನಲ್ಲಿ, ಮಳೆಗಾಲಕ್ಕೆ ತಕ್ಕಂತಹ ಡ್ರೆಸ್‌ಕೋಡ್‌ಗಳ ಕಾನ್ಸೆಪ್ಟ್ ಬಿಡುಗಡೆಯಾಗಿದೆ. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಫ್ಯಾಷನಿಸ್ಟ್‌ಗಳು ಹಾಗೂ ಅಪರೆಲ್ ಇಂಡಸ್ಟ್ರೀಯ ತಜ್ಞರು ಈ ಸೀಸನ್‌ಗೆ ಬಿಡುಗಡೆಯಾಗುತ್ತಿರುವ ಉಡುಗೆ-ತೊಡುಗೆಗಳ ಸಂಕ್ಷೀಪ್ತ ವಿವರವನ್ನು ಬ್ಯೂಟಿ ಬ್ಲಾಗ್‌ಗಳಲ್ಲಿ ಹಾಗೂ ಫ್ಯಾಷನ್ ಸಂದರ್ಶನಗಳಲ್ಲಿ ಹಂಚಿಕೊಂಡಿದ್ದಾರೆ. ಅವರೆಲ್ಲರ ಪ್ರಕಾರ, ಎಂದಿನಂತೆ, ಭಾರತೀಯ ಫ್ಯಾಷನ್ ಪ್ರಿಯರಿಗೆ ಒಗ್ಗುವಂತ ಸ್ಟೈಲಿಶ್ ಡ್ರೆಸ್‌ಗಳು ಈ ಮಳೆಗಾಲಕ್ಕೆ ಎಂಟ್ರಿ ನೀಡಿವೆ” ಎನ್ನುತ್ತಾರೆ ಫ್ಯಾಷನಿಸ್ಟ್ ಧವನ್. ಇನ್ನು ಸ್ಟೈಲಿಸ್ಟ್ ರಾಮ್ ಪ್ರಕಾರ, ಮಾನ್ಸೂನ್ ಫ್ಯಾಷನ್ ಇದೀಗ ಗ್ಲಾಮರಸ್ ರಹಿತ ಎನ್ನುವ ಮಾತು ಸುಳ್ಳಾಗಿದೆ. ಈ ಡ್ರೆಸ್‌ಕೋಡ್‌ಗೂ ಗ್ಲಾಮರಸ್ ಟಚ್ ದೊರಕಿದೆ ಎನ್ನುತ್ತಾರೆ.
ಮಾನ್ಸೂನ್ ಫ್ಯಾಷನ್‌ನಲ್ಲಿ ಅಂತಹದ್ದೇನಿದೆ?
ಸಮ್ಮರ್ ಸ್ಪ್ರಿಂಗ್‌ಗೆ ಮಾತ್ರ ಸೀಮಿತವಾಗಿದ್ದ ಫ್ಲೋರಲ್ ಹಾಗೂ ಗಾರ್ಡನ್ ಪ್ರಿಂಟ್ಸ್ ಡ್ರೆಸ್‌ಗಳು ಈ ಸೀಸನ್‌ನಲ್ಲೂ ಮುಂದುವರೆಯಲಿವೆ. ಲಕ್ಷುರಿ ಜಂಪ್‌ಸೂಟ್‌ಗಳು, ಆಂಕೆಲ್ ಲೆಂಥ್ , ಹೈ ವೇಸ್ಟ್ ಪ್ಯಾಂಟ್ಸ್, ಶಾರ್ಟ್ ಸೂಟ್ಸ್, ಟ್ರಾಕ್ ಸ್ಟಾರ್ ಸ್ಟೈಲ್ ಡ್ರೆಸ್, ನೋ ಪ್ಯಾಂಟ್ಸ್ ಲುಕ್, ಬೋಹೋ, ಅಥ್ಲೆಟಿಕ್ ಲುಕ್, ಬಾಸ್ ಲೇಡಿ ಲುಕ್ಸ್, ಮ್ಯಾಕ್ಸಿ ಸ್ಕರ್ಟ್ಸ್, ವಾಟರ್‌ಪ್ರೂಫ್ ಬ್ರಿಥೆಬಲ್ ಗ್ಲಾಮರಸ್ ಡ್ರೆಸ್‌ಗಳು, ಲೇಯರ್ ಶೀರ್ ಡ್ರೆಸ್‌ಗಳು ಪ್ರಮುಖವಾಗಿ ಎಂಟ್ರಿ ನೀಡಿವೆ.
ಇದನ್ನೂ ಓದಿ: Twinning Fashion: ಪರ್ಫೆಕ್ಟ್ ಟ್ವಿನ್ನಿಂಗ್ ಫ್ಯಾಷನ್‌ಗೆ ಇಲ್ಲಿದೆ 5 ಐಡಿಯಾ!
ವಿನ್ಯಾಸಕ್ಕೆ ಒತ್ತು ನೀಡಿದ ಫ್ಯಾಷನ್
ಇನ್ನು, ರಫಲ್ಸ್, ವಿಂಟೇಜ್, ಕ್ರೊಚೆಟ್, ಪೊಂಚೋ ಡಿಸೈನ್‌ನ ಲೇಯರ್ ಲುಕ್ ಔಟ್‌ಫಿಟ್ಸ್, ಜಾಕೆಟ್ ಡ್ರೆಸ್, ಕೋಟ್ ಡ್ರೆಸ್‌ಗಳು ಡಿಫರೆಂಟ್ ಲುಕ್‌ನಲ್ಲಿ ಜೆನ್ ಜಿ ಹುಡುಗಿಯರಿಗೂ ಪ್ರಿಯವಾಗುವಂತಹ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ರಿಚ್ ರೆಡ್, ಮೆಟಾಲಿಕ್, ಗೋಲ್ಡನ್, ಯೆಲ್ಲೋ, ಸಿಲ್ವರ್, ಪರ್ಪಲ್, ಗ್ರೀನ್‌ನಂತಹ ಶೇಡ್‌ಗಳು ಮಳೆಗಾಲದ ಡ್ರೆಸ್‌ಗಳಲ್ಲಿ ಮೆಳೈಸಲಿವೆ ಎನ್ನುತ್ತಾರೆ ಫ್ಯಾಷನಿಸ್ಟ್ ರಿಂಕು ವರ್ಮಾ.
( ಲೇಖಕಿ ಫ್ಯಾಷನ್ ಪತ್ರಕರ್ತೆ )