-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಾರ್ಪೋರೇಟ್ ಕ್ಷೇತ್ರದ ಯುವತಿಯರ ಬ್ಲೇಜರ್ ಜಾಕೆಟ್ ಫ್ಯಾಷನ್ ಮಾನ್ಸೂನ್ ಸೀಸನ್‌ನಲ್ಲಿ (Monsoon Fashion) ಮತ್ತೆ ಮರಳಿದೆ. ಹೌದು, ಈ ಬಾರಿಯ ಮಾನ್ಸೂನ್‌ನಲ್ಲಿ ಕಾರ್ಪೋರೇಟ್ ಕ್ಷೇತ್ರದ ಯುವತಿಯರ ಫ್ಯಾಷನ್‌ನಲ್ಲಿ ನಾನಾ ಬಗೆಯ ಬ್ಲೇಝರ್ ಜಾಕೆಟ್‌ಗಳು, ನಯಾ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಂಡಿವೆ.
ಬ್ಲೇಜರ್ ಜಾಕೆಟ್‌ನ ಕ್ಲಾಸಿ ಲುಕ್
“ಅಂದಹಾಗೆ ಬ್ಲೇಜರ್ ಜಾಕೆಟ್ ಫ್ಯಾಷನ್ ಹೊಸತೇನಲ್ಲ! ಆದರೆ, ಇದು ಇದುವರೆಗೂ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ, ಇದೀಗ ಕಾರ್ಪೋರೇಟ್ ಕ್ಷೇತ್ರದ ಯುವತಿಯರನ್ನು ಮಾತ್ರವಲ್ಲ, ಇನ್ನಿತರೇ ಹುಡುಗಿಯರನ್ನು ಸೆಳೆದಿವೆ. ಇದಕ್ಕೆ ಕಾರಣ ಇವನ್ನು ಹೊಸ ಸ್ಟೈಲಿಂಗ್ ಮೂಲಕ ಧರಿಸಲಾರಂಭಿಸಿರುವುದು” ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಅವರ ಪ್ರಕಾರ, ಬ್ಲೇಜರ್ ಜಾಕೆಟ್‌ಗಳು, ಹೈ ಫ್ಯಾಷನ್‌ನಲ್ಲಿರುವಂತಹ ಕ್ಲಾಸಿ ಲುಕ್ ನೀಡುವ ಡ್ರೆಸ್‌ಕೋಡ್ ಎನ್ನುತ್ತಾರೆ.
ಮಳೆಗಾಲದಲ್ಲಿ ಬ್ಲೇಜರ್ ಜಾಕೆಟ್ ಪ್ರಭಾವ
ಮಳೆಗಾಲದಲ್ಲಿ ಬ್ಲೇಜರ್ ಜಾಕೆಟ್‌ಗಳು ಲೇಯರ್ ಲುಕ್ ನೀಡುತ್ತವೆ ಅಲ್ಲದೇ, ಕಾರ್ಪೋರೇಟ್ ಕ್ಷೇತ್ರದ ಯುವತಿಯರಿಗೆ ದಿನನಿತ್ಯದ ಮೀಟಿಂಗ್ ಹಾಗೂ ವರ್ಕ್‌ಶಾಪ್‌ಗಳಿಗೆ ಮ್ಯಾಚ್ ಆಗುತ್ತವೆ. ಅಲ್ಲದೇ, ಸದಾ ಎಸಿಯಲ್ಲಿ ಕುಳಿತು ಕೆಲಸ ಮಾಡುವವರಿಗೆ ಇವು ಬೆಚ್ಚಗಿಡುತ್ತವೆ ಕೂಡ. ಇನ್ನು, ಹೈ ಫ್ಯಾಷನ್ ಲಿಸ್ಟ್ನಲ್ಲಿರುವ, ಇವು ಹೈ ಕ್ಲಾಸ್ ಲುಕ್ ನೀಡುವುದರೊಂದಿಗೆ ಧರಿಸುವ ಯುವತಿಯರ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.
ಟ್ರೆಂಡಿಯಾಗಿರುವ ಬ್ಲೇಜರ್ ಜಾಕೆಟ್ಸ್
ವೂಲ್, ಚೆಕ್ಡ್, ಗಿಂಗ್ನಂ ಶೈಲಿಯ ಬ್ಲೇಜರ್ ಜಾಕೆಟ್‌ಗಳು ಈ ಜನರೇಷನ್ ಹುಡುಗಿಯರನ್ನು ಸೆಳೆದಿವೆ. ಅದರಲ್ಲೂ ಲೈಟ್‌ವೈಟ್ ಬ್ಲೇಜರ್ ಜಾಕೆಟ್‌ಗಳು ಅತಿ ಹೆಚ್ಚು ಮಾರಾಟವಾಗುತ್ತಿವೆ. ನೋಡಲು ವೆಸ್ಟರ್ನ್ ಲುಕ್ ನೀಡಿದರೂ ಆಕರ್ಷಕವಾಗಿ ಕಾಣಿಸುವ ಈ ಜಾಕೆಟ್ ಲುಕ್‌ನ ಬ್ಲೇಜರ್‌ಗಳು ಸದ್ಯ ಕಾರ್ಪೋರೇಟ್ ಕ್ಷೇತ್ರದ ಯುವತಿಯರ ಫ್ಯಾಷನ್‌ನ ಟಾಪ್ ಲಿಸ್ಟ್‌ನಲ್ಲಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಯುವತಿಯರ ಬ್ಲೇಜರ್ ಜಾಕೆಟ್ ಸ್ಟೈಲಿಂಗ್‌ಗೆ 5 ಟಿಪ್ಸ್
- ಜೀನ್ಸ್ ಪ್ಯಾಂಟ್ ಮೇಲೆ ಕ್ಯಾಶುವಲ್ ಲುಕ್ಗಾಗಿ ಧರಿಸಬಹುದು.
- ಕೊಂಚ ಮಾಡರ್ನ್ ಲುಕ್ ಬೇಕಿದ್ದಲ್ಲಿ, ಕ್ರಾಪ್ ಟಾಪ್ ಅಥವಾ ಕ್ರಾಪ್ ಬ್ಲೌಸ್ಗೂ ಧರಿಸಬಹುದು.
- ಸ್ಕರ್ಟ್ ಜೊತೆಗೂ ಮ್ಯಾಚ್ ಮಾಡಬಹುದು.
- ಬ್ಲೇಜರ್ ಜಾಕೆಟ್ ಧರಿಸಿದಾಗ ಆದಷ್ಟೂ ಶೂಗಳನ್ನು ಧರಿಸಲೇಬೇಕು.
- ಆಕ್ಸೆಸರೀಸ್ ಮಿನಿಮಲ್ ಆಗಿರಬೇಕು.
ಇದನ್ನೂ ಓದಿ: Monsoon fashion: ಶರ್ಟ್ ಸ್ಟೈಲ್ ಜಾಕೆಟ್ಸ್; ಇವು ಯುವಕರ ಮಳೆಗಾಲದ ಫ್ಯಾಷನ್ ಟ್ರೆಂಡ್
( ಲೇಖಕಿ : ಫ್ಯಾಷನ್ ಪತ್ರಕರ್ತೆ )