ಚಿತ್ರಕೃಪೆ : ಪಿಕ್ಸೆಲ್
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಸೀಸನ್‌ನಲ್ಲಿ ಕಲರ್‌ಫುಲ್ ಡಂಗ್ರೀಸ್ ಸ್ಕಟ್ಟ್ರ್ಸ್ ಹಾಗೂ ಪ್ಯಾಂಟ್‌ಗಳು ಎಂಟ್ರಿ ನೀಡಿವೆ. ಸದ್ಯ ಹುಡುಗಿಯರ ಮಾನ್ಸೂನ್ ಫ್ಯಾಷನ್ ಲಿಸ್ಟ್‌ಗೆ ಸೇರಿರುವ ಇವು ವಾರ್ಡ್ರೋಬ್ ಲಿಸ್ಟ್‌ಗೆ ಸೇರಿವೆ. ನಾನಾ ಕಾಂಬಿನೇಷನ್‌ನ ಟೀ ಶರ್ಟ್ ಹಾಗೂ ಕ್ರಾಪ್ ಟಾಪ್‌ಗಳ ಜತೆ ಧರಿಸಬಹುದಾದ ಈ ಡ್ರೆಸ್ ಲೇಯರ್ಡ್ ಲುಕ್ ನೀಡುತ್ತದೆ.
ಡಂಗ್ರೀಸ್ ಪುರಾಣ
ಫ್ಯಾಷನ್ ಡಿಸೈನರ್ ವಿದ್ಯಾ ವಿವೇಕ್ ಹೇಳುವಂತೆ, ಮೊದಲೆಲ್ಲಾ ಒರಟಾದ ಬಣ್ಣ ಹಾಕದ ಕ್ಯಾಲಿಕೊ ಫ್ಯಾಬ್ರಿಕ್ಸ್‌ನಲ್ಲಿ ಇದು ಸಿದ್ಧವಾಗುತ್ತಿತ್ತಂತೆ. ಹಾಗಾಗಿ ಡಂಗ್ರೀಸ್ ಎನ್ನಲಾಗುತ್ತಿತ್ತು ಎನ್ನುತ್ತಾರೆ. ಆ ಫ್ಯಾಬ್ರಿಕ್‌ಗೆ ನೀಲಿ ಕಲರ್ ಡೈ ಮಾಡಲಾಗುತ್ತಿತ್ತು. ಹೆಚ್ಚು ಬಾಳಿಕೆ ಬರುತ್ತಿದ್ದ ಕಾರಣ, ಹಡಗಿನ ನೌಕರರು, ರಸ್ತೆ ಕಾಮಗಾರಿ ಮಾಡುವವರು, ಗಣಿಯಲ್ಲಿಕೆಲಸ ಮಾಡುತ್ತಿದ್ದವರಿಗೆ ಬಳಕೆ ಮಾಡಲು ಯೂನಿಫಾರ್ಮ್ ರೀತಿಯಲ್ಲಿ ನೀಡಲಾಗುತ್ತಿತ್ತು. ಕಾಲಕಳೆದಂತೆ ಫ್ಯಾಷನ್ ಡಿಸೈನರ್‌ಗಳು ಇದಕ್ಕೂ ಫ್ಯಾಷನ್ ಟಚ್ ನೀಡಿ, ಬಿಡುಗಡೆಗೊಳಿಸಿದರು. ಇದೀಗ ಇದು ಜನಪ್ರಿಯ ಫ್ಯಾಷನ್ ಉಡುಪಾಗಿದೆ ಎನ್ನುತ್ತಾರೆ ವಿದ್ಯಾ.
ಕಲರ್ ಡಂಗ್ರೀಸ್ ಫ್ಯಾಷನ್
ಇನ್ನು ಕಲರ್ ಡಂಗ್ರೀಸ್ ಫ್ಯಾಷನ್, ಇತ್ತೀಚಿನ ದಿನಗಳಲ್ಲಿ ಯಂಗ್‌ಸ್ಟರ್ಸ್ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಸೇರಿದೆ. ಸ್ಟ್ರೀಟ್ ಫ್ಯಾಷನ್‌ನಲ್ಲಿರುವ ಈ ಉಡುಪು ಔಟಿಂಗ್ ಹಾಗೂ ವೀಕೆಂಡ್ ಡ್ರೆಸ್‌ಕೋಡ್‌ಗೂ ಎಂಟ್ರಿ ನೀಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ, ವೈಬ್ರೆಂಟ್ ಕಲರ್‌ಗಳಲ್ಲಿ ಬಿಡುಗಡೆಗೊಂಡಿದೆ.
ಇದನ್ನೂ ಓದಿ: Milan Fashion Week: ಮಿಲಾನ್ ಮಿಡ್ ಯಿಯರ್ ಫ್ಯಾಷನ್ ವೀಕ್‌ನಲ್ಲಿ ಸ್ಟ್ರೀಟ್‌ವೇರ್‌ಗೆ ಆದ್ಯತೆ
ಡಂಗ್ರೀಸ್ ಸ್ಕರ್ಟ್-ಪ್ಯಾಂಟ್
ಡಂಗ್ರೀಸ್‌ಗಳಲ್ಲೂ ನಾನಾ ಪ್ಯಾಟರ್ನ್ ಕಾಣಬಹುದು. ಡಂಗ್ರೀಸ್ ಸ್ಕರ್ಟ್‌ನಲ್ಲಿ ನೀ ಲೆಂಥ್ ಹಾಗೂ ಮಿಡಿ ಶೈಲಿಯವು ಟ್ರೆಂಡ್‌ನಲ್ಲಿವೆ. ಇನ್ನು ಪ್ಯಾಂಟ್‌ನಲ್ಲಿ ಸ್ಟ್ರೇಟ್ ಕಟ್, ಪೆನ್ಸಿಲ್ ಕಟ್, ಟೈಟ್ಸ್ ಡಂಗ್ರೀಸ್ ಹಾಗೂ ತ್ರೀ ಫೋರ್ತ್ ಲೆಂತ್‌ನವು ಚಾಲ್ತಿಯಲ್ಲಿವೆ. ಇನ್ನು ಸಿಂಗಲ್ ಸ್ಟ್ರಾಪ್ ಡಂಗ್ರೀಸ್ ಹೈ ಫ್ಯಾಷನ್‌ನಲ್ಲಿದೆ.
ಡಂಗ್ರೀಸ್ ಮಿಕ್ಸ್ ಮ್ಯಾಚ್ ಹೇಗೆ?
- ಇದೀಗ ಕ್ರಾಪ್ ಟೀ ಶರ್ಟ್ ಹಾಗೂ ಟಾಪ್ ಡಂಗ್ರೀಸ್ಗೆ ಧರಿಸುವ ಟ್ರೆಂಡ್ ಇದೆ.
- ಡಂಗ್ರೀಸ್ ಸ್ಟ್ರೀಟ್ ಸ್ಟೈಲ್ನಲ್ಲಿ ಧರಿಸುವುದಾದಲ್ಲಿ ಆದಷ್ಟೂ ಮಿನಿಮಲ್ ಜ್ಯುವೆಲರಿ ಬಳಸಿ.
- ಫಂಕಿ ಲುಕ್ ಸಹ ಡಂಗ್ರೀಸ್ಗೆ ನೀಡಬಹುದು.
- ಹೇರ್ಸ್ಟೈಲ್ ಕೂಡ ಇಡೀ ಡಂಗ್ರೀಸ್ ಲುಕ್ ಬದಲಿಸಬಹುದು.
- ಆಫ್ ಶೂ ಪರ್ಫೆಕ್ಟ್ ಮ್ಯಾಚ್ ಆಗುತ್ತದೆ.
- ಡಂಗ್ರೀಸ್ಗೆ ಧರಿಸಡುವ ಟಾಪ್ಗಳು ಇಡೀ ಲುಕ್ ಚೇಂಜ್ ಮಾಡುತ್ತದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)