ಫ್ಯಾಷನ್
Monsoon Fashion: ಮಾನ್ಸೂನ್‌ನ ಉಲ್ಲಾಸ ಹೆಚ್ಚಿಸುವ ಬಣ್ಣ ಬಣ್ಣದ ಡಂಗ್ರೀಸ್
Monsoon Fashion: ಬಣ್ಣ ಬಣ್ಣದ ಡಂಗ್ರೀಸ್ ಸ್ಕರ್ಟ್ ಹಾಗೂ ಪ್ಯಾಂಟ್‌ಗಳು ಈ ಸೀಸನ್‌ನಲ್ಲಿ ಆಗಮಿಸಿದ್ದು, ಹುಡುಗಿಯರ ವಾರ್ಡ್‌ರೋಬ್ ಸೇರಿವೆ. ನಾನಾ ಕಾಂಬಿನೇಷನ್ನ ಟೀ ಶರ್ಟ್ ಹಾಗೂ ಕ್ರಾಪ್ ಟಾಪ್‌ಗಳ ಜೊತೆ ಧರಿಸಬಹುದಾದ ಈ ಡ್ರೆಸ್ಸನ್ನು ಹೇಗೆಲ್ಲಾ ಧರಿಸಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ವಿವರ ನೀಡಿದ್ದಾರೆ.
ಚಿತ್ರಕೃಪೆ : ಪಿಕ್ಸೆಲ್
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಸೀಸನ್‌ನಲ್ಲಿ ಕಲರ್‌ಫುಲ್ ಡಂಗ್ರೀಸ್ ಸ್ಕಟ್ಟ್ರ್ಸ್ ಹಾಗೂ ಪ್ಯಾಂಟ್‌ಗಳು ಎಂಟ್ರಿ ನೀಡಿವೆ. ಸದ್ಯ ಹುಡುಗಿಯರ ಮಾನ್ಸೂನ್ ಫ್ಯಾಷನ್ ಲಿಸ್ಟ್‌ಗೆ ಸೇರಿರುವ ಇವು ವಾರ್ಡ್ರೋಬ್ ಲಿಸ್ಟ್‌ಗೆ ಸೇರಿವೆ. ನಾನಾ ಕಾಂಬಿನೇಷನ್ನ ಟೀ ಶರ್ಟ್ ಹಾಗೂ ಕ್ರಾಪ್ ಟಾಪ್‌ಗಳ ಜತೆ ಧರಿಸಬಹುದಾದ ಈ ಡ್ರೆಸ್ ಲೇಯರ್ಡ್ ಲುಕ್ ನೀಡುತ್ತದೆ.
ಡಂಗ್ರೀಸ್ ಪುರಾಣ
ಫ್ಯಾಷನ್ ಡಿಸೈನರ್ ವಿದ್ಯಾ ವಿವೇಕ್ ಹೇಳುವಂತೆ, ಮೊದಲೆಲ್ಲಾ ಒರಟಾದ ಬಣ್ಣ ಹಾಕದ ಕ್ಯಾಲಿಕೊ ಫ್ಯಾಬ್ರಿಕ್ಸ್‌ನಲ್ಲಿ ಇದು ಸಿದ್ಧವಾಗುತ್ತಿತ್ತಂತೆ. ಹಾಗಾಗಿ ಡಂಗ್ರೀಸ್ ಎನ್ನಲಾಗುತ್ತಿತ್ತು ಎನ್ನುತ್ತಾರೆ. ಆ ಫ್ಯಾಬ್ರಿಕ್‌ಗೆ ನೀಲಿ ಕಲರ್ ಡೈ ಮಾಡಲಾಗುತ್ತಿತ್ತು. ಹೆಚ್ಚು ಬಾಳಿಕೆ ಬರುತ್ತಿದ್ದ ಕಾರಣ, ಹಡಗಿನ ನೌಕರರು, ರಸ್ತೆ ಕಾಮಗಾರಿ ಮಾಡುವವರು, ಗಣಿಯಲ್ಲಿಕೆಲಸ ಮಾಡುತ್ತಿದ್ದವರಿಗೆ ಬಳಕೆ ಮಾಡಲು ಯೂನಿಫಾರ್ಮ್ ರೀತಿಯಲ್ಲಿ ನೀಡಲಾಗುತ್ತಿತ್ತು. ಕಾಲಕಳೆದಂತೆ ಫ್ಯಾಷನ್ ಡಿಸೈನರ್‌ಗಳು ಇದಕ್ಕೂ ಫ್ಯಾಷನ್ ಟಚ್ ನೀಡಿ, ಬಿಡುಗಡೆಗೊಳಿಸಿದರು. ಇದೀಗ ಇದು ಜನಪ್ರಿಯ ಫ್ಯಾಷನ್ ಉಡುಪಾಗಿದೆ ಎನ್ನುತ್ತಾರೆ ವಿದ್ಯಾ.
ಕಲರ್ ಡಂಗ್ರೀಸ್ ಫ್ಯಾಷನ್
ಇನ್ನು ಕಲರ್ ಡಂಗ್ರೀಸ್ ಫ್ಯಾಷನ್, ಇತ್ತೀಚಿನ ದಿನಗಳಲ್ಲಿ ಯಂಗ್‌ಸ್ಟರ್ಸ್ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಸೇರಿದೆ. ಸ್ಟ್ರೀಟ್ ಫ್ಯಾಷನ್‌ನಲ್ಲಿರುವ ಈ ಉಡುಪು ಔಟಿಂಗ್ ಹಾಗೂ ವೀಕೆಂಡ್ ಡ್ರೆಸ್‌ಕೋಡ್‌ಗೂ ಎಂಟ್ರಿ ನೀಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ, ವೈಬ್ರೆಂಟ್ ಕಲರ್‌ಗಳಲ್ಲಿ ಬಿಡುಗಡೆಗೊಂಡಿದೆ.
ಇದನ್ನೂ ಓದಿ: Milan Fashion Week: ಮಿಲಾನ್ ಮಿಡ್ ಯಿಯರ್ ಫ್ಯಾಷನ್ ವೀಕ್‌ನಲ್ಲಿ ಸ್ಟ್ರೀಟ್‌ವೇರ್‌ಗೆ ಆದ್ಯತೆ
ಡಂಗ್ರೀಸ್ ಸ್ಕರ್ಟ್-ಪ್ಯಾಂಟ್
ಡಂಗ್ರೀಸ್‌ಗಳಲ್ಲೂ ನಾನಾ ಪ್ಯಾಟರ್ನ್ ಕಾಣಬಹುದು. ಡಂಗ್ರೀಸ್ ಸ್ಕರ್ಟ್‌ನಲ್ಲಿ ನೀ ಲೆಂಥ್ ಹಾಗೂ ಮಿಡಿ ಶೈಲಿಯವು ಟ್ರೆಂಡ್‌ನಲ್ಲಿವೆ. ಇನ್ನು ಪ್ಯಾಂಟ್‌ನಲ್ಲಿ ಸ್ಟ್ರೇಟ್ ಕಟ್, ಪೆನ್ಸಿಲ್ ಕಟ್, ಟೈಟ್ಸ್ ಡಂಗ್ರೀಸ್ ಹಾಗೂ ತ್ರೀ ಫೋರ್ತ್ ಲೆಂತ್‌ನವು ಚಾಲ್ತಿಯಲ್ಲಿವೆ. ಇನ್ನು ಸಿಂಗಲ್ ಸ್ಟ್ರಾಪ್ ಡಂಗ್ರೀಸ್ ಹೈ ಫ್ಯಾಷನ್‌ನಲ್ಲಿದೆ.
ಡಂಗ್ರೀಸ್ ಮಿಕ್ಸ್ ಮ್ಯಾಚ್ ಹೇಗೆ?
- ಇದೀಗ ಕ್ರಾಪ್ ಟೀ ಶರ್ಟ್ ಹಾಗೂ ಟಾಪ್ ಡಂಗ್ರೀಸ್‌ಗೆ ಧರಿಸುವ ಟ್ರೆಂಡ್ ಇದೆ.
- ಡಂಗ್ರೀಸ್ ಸ್ಟ್ರೀಟ್ ಸ್ಟೈಲ್‌ನಲ್ಲಿ ಧರಿಸುವುದಾದಲ್ಲಿ ಆದಷ್ಟೂ ಮಿನಿಮಲ್ ಜ್ಯುವೆಲರಿ ಬಳಸಿ.
- ಫಂಕಿ ಲುಕ್ ಸಹ ಡಂಗ್ರೀಸ್‌ಗೆ ನೀಡಬಹುದು.
- ಹೇರ್‌ಸ್ಟೈಲ್ ಕೂಡ ಇಡೀ ಡಂಗ್ರೀಸ್ ಲುಕ್ ಬದಲಿಸಬಹುದು.
- ಆಫ್ ಶೂ ಪರ್ಫೆಕ್ಟ್ ಮ್ಯಾಚ್ ಆಗುತ್ತದೆ.
- ಡಂಗ್ರೀಸ್‌ಗೆ ಧರಿಸಡುವ ಟಾಪ್‌ಗಳು ಇಡೀ ಲುಕ್ ಚೇಂಜ್ ಮಾಡುತ್ತದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಫ್ಯಾಷನ್
Nameplate Neck Chain Jewel Trend: ಜೆನ್ ಜಿ ಹುಡುಗಿಯರ ಕತ್ತಲ್ಲಿ ನೇತಾಡುವ ನೇಮ್‌ಪ್ಲೇಟ್ ನೆಕ್‌ಚೈನ್
Nameplate Neck Chain Jewel Trend: ನೇಮ್‌ಪ್ಲೇಟ್ ನೆಕ್‌ಚೈನ್‌ಗಳು ಇಂದು ಜೆನ್ ಜಿ ಹುಡುಗಿಯರ ನೆಚ್ಚಿನ ಜ್ಯುವೆಲರಿ ಲಿಸ್ಟ್‌ಗೆ ಸೇರಿದೆ. ಯಾವ್ಯಾವ ಬಗೆಯವು ಈ ಫ್ಯಾಷನ್ ಟ್ರೆಂಡ್‌ನಲ್ಲಿವೆ? ಮಿಕ್ಸ್ ಮ್ಯಾಚ್ ಮಾಡುವುದು ಹೇಗೆ? ಎಂಬುದರ ಬಗ್ಗೆ ಜ್ಯುವೆಲ್ ಡಿಸೈನರ್‌ಗಳು ಇಲ್ಲಿ ತಿಳಿಸಿದ್ದಾರೆ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜೆನ್ ಜಿ ಹುಡುಗಿಯರ ಕತ್ತಲ್ಲಿ ನೇಮ್‌ಪ್ಲೇಟ್ ನೆಕ್‌ಚೈನ್‌ಗಳು (Nameplate Neck Chain Jewel Trend) ನೇತಾಡುತ್ತಿವೆ. ಹೌದು. ಇಂದಿನ ಯುವತಿಯರ ಅಭಿರುಚಿ ಬಿಂಬಿಸುವ ನಾನಾ ಶೈಲಿಯ ನೇಮ್‌ಪ್ಲೇಟ್ ನೆಕ್‌ಚೈನ್‌ಗಳು ಇಂದು ಫ್ಯಾಷನ್ ಜ್ಯುವೆಲರಿ ಲೋಕದಲ್ಲಿ ಟ್ರೆಂಡಿಯಾಗಿವೆ. ಹೌದು. ಬಗೆಬಗೆಯ ವೈವಿಧ್ಯಮಯ ಡಿಸೈನ್‌ನ ಇಂಗ್ಲೀಶ್ ಪದ ಹಾಗೂ ಅಕ್ಷರಗಳಿರುವ ಈ ಚೈನ್‌ಗಳು ಇಂದು ಪಾಪ್ಯುಲರ್ ಆಗಿವೆ.
ಏನಿದು ನೇಮ್ ಪ್ಲೇಟ್ ನೆಕ್‌ಚೈನ್ ?
ಧರಿಸುವವರ ಹೆಸರಿರುವ ಪುಟ್ಟದಾದ ನೇಮ್ ಪ್ಲೇಟ್ ಇರುವಂತಹ ನೆಕ್‌ಚೈನ್‌ಗಳಿವು. ಕೆಲವೊಮ್ಮೆ ಕಿಂಗ್, ಕ್ವೀನ್ ಇಲ್ಲವೇ ಇನ್ಯಾವುದೇ ಉತ್ತಮ ಅರ್ಥ ನೀಡುವ ಹಾಗೂ ಪದಗಳಿರುವ ನೇಮ್‌ಪ್ಲೇಟ್ ಆದರೂ ಆಗಿರಬಹುದು. ಅಥವಾ ಒಂದೇ ಅಕ್ಷರದಲ್ಲಿ ಅರ್ಥವನ್ನು ಬಿಂಬಿಸುವಂತಹ ಆಕರ್ಷಕ ಅಕ್ಷರವಾಗಿದ್ದರೂ ಇರಬಹುದು. ಒಟ್ಟಿನಲ್ಲಿ, ಸಿಂಪಲ್ ಆಗಿ ಹೇಳಬೇಕೆಂದರೇ ನಾನಾ ಬಗೆಯ ಅರ್ಥಗಳನ್ನು ಬಿಂಬಿಸುವ ಇಲ್ಲವೇ ಅವರವರ ಹೆಸರುಗಳನ್ನು ಪೆಂಡೆಂಟ್ ಬದಲು ಆಕರ್ಷಕವಾಗಿ ಬಿಂಬಿಸುವ ನೇಮ್‌ಪ್ಲೇಟ್ ಇರುವಂತವೇ ಇವು ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಿತನ್ಯಾ ಶರ್ಮಾ. ಅವರ ಪ್ರಕಾರ, ಈ ಡಿಸೈನ್‌ನವು ಈ ಸೀಸನ್‌ನ ಫ್ಯಾಷನ್ ಜ್ಯುವೆಲರಿಗಳಲ್ಲಿ ಅತಿ ಹೆಚ್ಚು ಟ್ರೆಂಡ್‌ನಲ್ಲಿವೆಯಂತೆ.
ಫ್ಯಾಷನ್ ಜ್ಯುವೆಲರಿ ಲಿಸ್ಟ್‌ನಲ್ಲಿ ನೇಮ್ ಪ್ಲೆಟ್ ನೆಕ್‌ಚೈನ್
ವೈಟ್ ಮೆಟಲ್, ಪ್ಲಾಟಿನಂ ರಿಪ್ಲೀಕಾ ಚೈನ್, ಗೋಲ್ಡ್ ಪ್ಲೇಟೆಡ್, ಸಿಲ್ವರ್ ನೇಮ್ ಪ್ಲೇಟ್ ಚೈನ್‌ಗಳು ಇಂದು ಫ್ಯಾಷನ್ ಜ್ಯುವೆಲರಿ ಲಿಸ್ಟ್‌ನಲ್ಲಿವೆ. ಕೆಲವು ಸಿಂಗಲ್ ಲೇಯರ್ ಚೈನ್‌ನಲ್ಲಿ ದೊರಕಿದರೇ, ಇನ್ನು ಕೆಲವು ಸಾದಾ ಚೈನ್‌ನೊಂದಿಗೆ ಇರುವಂತಹ ಡಬ್ಬಲ್ ಹಾಗೂ ತ್ರಿಬ್ಬಲ್ ಲೇಯರ್‌ನಲ್ಲಿ ಲಭ್ಯ. ಮಿಕ್ಸ್ ಮ್ಯಾಚ್ ಡಿಸೈನ್‌ನಲ್ಲೂ ದೊರೆಯುತ್ತಿವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ಸ್.
ಇದನ್ನೂ ಓದಿ: Party Fashion: ಬಿಹೈವ್ ಹೈ ಪಾರ್ಟಿ ಫ್ಯಾಷನ್ ಶೋನಲ್ಲಿ ಬಾಲಿವುಡ್ ನಟಿ ನೇಹಾ ದುಪಿಯಾ
ಮಿಕ್ಸ್ ಮ್ಯಾಚ್ ಮಾಡುವುದು ಹೇಗೆ?
ಎಥ್ನಿಕ್ ಲುಕ್‌ಗಿಂತ ಹೆಚ್ಚಾಗಿ ವೆಸ್ಟೆರ್ನ್ ವೇರ್‌ಗಳಿಗೆ ಈ ನೇಮ್‌ಪ್ಲೇಟ್ ನೆಕ್‌ಚೈನ್‌ಗಳು ಮ್ಯಾಚ್ ಆಗುತ್ತವೆ. ಇವುಗಳಲ್ಲೆ ಕೊಂಚ ಲೇಯರ್ ಲುಕ್ ಇರುವಂತಹ ನೇಮ್‌ಪ್ಲೇಟ್ ನೆಕ್ಲೇಸ್‌ಗಳು ದೊರೆಯುತ್ತವೆ. ಅವು ಸೆಮಿ ಎಥ್ನಿಕ್ ಹಾಗೂ ಎಥ್ನಿಕ್ ವೇರ್‌ಗೆ ಮಿಕ್ಸ್ ಮ್ಯಾಚ್ ಮಾಡಬಹುದು. ಎಲ್ಲದಕ್ಕಿಂತ ಬಿಂದಾಸ್ ಸ್ಟೈಲ್ ಸ್ಟೇಟ್‌ಮೆಂಟ್ ಹುಡುಗಿಯರಿಗೆ ಇವು ಆಕರ್ಷಕವಾಗಿ ಕಾಣಿಸುತ್ತವೆ. ಅಂದಹಾಗೆ, ಬಂಗಾರದಲ್ಲಿ ಮಾಡಿಸುವುದಾದಲ್ಲಿ ತಮ್ಮದೇ ಹೆಸರನ್ನು ಹೊಂದಿರುವ ನೆಕ್‌ಚೈನ್‌ಗಳನ್ನು ಕಸ್ಟಮೈಸ್ ಮಾಡಿಸಬೇಕಾಗುತ್ತದೆ. ಇನ್ನುಳಿದಂತೆ ಜನರಲ್ ಹೆಸರಿರುವಂತವು ಮಾತ್ರ ದೊರೆಯುತ್ತವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಾಣಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಫ್ಯಾಷನ್
Beauty Trend: ಫಟಾ ಫಟ್ ಬ್ಯೂಟಿ ಆರೈಕೆಗಾಗಿ ಪಾಪ್ಯುಲರ್ ಆಯ್ತು ಇನ್‌ಸ್ಟಂಟ್ ಫೇಸ್‌ಶೀಟ್ ಮಾಸ್ಕ್ಸ್
Beauty Trend: ಮುಖದ ಅಂದವನ್ನು ಕಾಪಾಡುವ ಹಾಗೂ ವೃದ್ಧಿಸುವ ಫೇಸ್ ಶೀಟ್ ಮಾಸ್ಕ್ಗಳು ಇದೀಗ ಬ್ಯೂಟಿ ಟ್ರೆಂಡ್‌ನಲ್ಲಿದ್ದು, ಫಟಾಫಟ್ ಬ್ಯೂಟಿ ಆರೈಕೆಗೆ ಸಾಥ್ ನೀಡುತ್ತಿವೆ. ಇವುಗಳ ಆಯ್ಕೆ ಮಾಡುವುದು ಹೇಗೆ? ಎಂಬುದರ ಬಗ್ಗೆ ಬ್ಯೂಟಿ ಎಕ್ಸ್‌ಪಟ್ರ್ಸ್ ಇಲ್ಲಿ ತಿಳಿಸಿದ್ದಾರೆ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇನ್‌ಸ್ಟಂಟ್ ಫೇಸ್ ಶೀಟ್ ಮಾಸ್ಕ್ಗಳು ಇದೀಗ ಬ್ಯೂಟಿ ಲೋಕದಲ್ಲಿ ಹಂಗಾಮ ಎಬ್ಬಿಸಿವೆ. ಹೌದು. ಮುಖದ ಅಂದವನ್ನು ಕಾಪಾಡುವ ಹಾಗೂ ವೃದ್ಧಿಸುವ ನಾನಾ ಬಗೆಯ ಇನ್‌ಸ್ಟಂಟ್ ಫೇಸ್ ಶೀಟ್ ಮಾಸ್ಕ್‌ಗಳು ಮಹಿಳೆಯರ ಫಟಾಫಟ್ ಬ್ಯೂಟಿ ಆರೈಕೆಗೆ ಸಾಥ್ ನೀಡುತ್ತಿವೆ.
ಏನಿದು ಫೇಸ್ ಶೀಟ್ ಮಾಸ್ಕ್ ?
ಗಂಟೆಗಟ್ಟಲೇ ಬ್ಯೂಟಿ ಪಾರ್ಲರ್ ಹಾಗೂ ಸಲೂನ್‌ನಲ್ಲಿ ಕುಳಿತು ಬ್ಯೂಟಿ ಟ್ರೀಟ್‌ಮೆಂಟ್ ಅಥವಾ ಆರೈಕೆ ತೆಗೆದುಕೊಳ್ಳಲು ಸಾಧ್ಯವಿಲ್ಲದವರಿಗೆಂದೇ ಇನ್‌ಸ್ಟಂಟ್ ಫೇಸ್ ಶೀಟ್ ಮಾಸ್ಕ್‌ಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ನೋಡಲು ಒದ್ದೆಯಾದ ಟಿಶ್ಯೂ ಪೇಪರ್‌ನಂತಿರುವ ಈ ರೆಡಿಮೇಡ್ ಬ್ಯೂಟಿ ಟ್ರೀಟ್‌ಮೆಂಟ್ ಮಾಸ್ಕ್‌ಗಳು ಒಂದೊಂದು ಬಗೆಯ ಚರ್ಮಕ್ಕೂ ಹೊಂದುವಂತಹ ಆರೋಗ್ಯಕರ ಅಂಶಗಳನ್ನು ಹೊಂದಿವೆ. ಕವರ್ ಮೇಲೆಯೇ ವಿವರಗಳೊಂದಿಗೆ ಯಾರೆಲ್ಲಾ ಬಳಸಬಹುದು, ಎಂತಹ ಸ್ಕಿನ್‌ನವರು ಬಳಸಬಹುದು ? ಯಾವ್ಯಾವ ಸಮಯಕ್ಕೆ ಉಪಯೋಗಿಸಬಹುದು ಎಂಬುದರ ಸವಿವರ ಹೊಂದಿರುತ್ತವೆ. ಕೆಲವು ಬ್ರಾಂಡ್‌ಗಳಲ್ಲಿ ಒಂದು ಶೀಟ್ ಮಾಸ್ಕ್ ಇದ್ದರೇ, ಇನ್ನು ಕೆಲವಲ್ಲಿ ಒಂದಕ್ಕಿಂತ ಹೆಚ್ಚು ಇರುತ್ತವೆ. ಹಾಗೆಂದು ಇವು ಕಡಿಮೆ ಬೆಲೆಯೇನಲ್ಲ! ದುಬಾರಿ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪಟ್ರ್ಸ್.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ
ನಮ್ಮ ರಾಷ್ಟ್ರದಲ್ಲಿ ಮೊದ ಮೊದಲು ಈ ಫೇಸ್ ಸ್ಕಿನ್ ಶೀಟ್‌ಗಳು ಅಷ್ಟಾಗಿ ಬೇಡಿಕೆ ಪಡೆದುಕೊಂಡಿರಲಿಲ್ಲ. ಬರಬರುತ್ತ ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರಿಂದಾಗಿ ಇದು ಪ್ರಚಲಿತಕ್ಕೆ ಬಂತು. ಇದೀಗ ಎಲ್ಲಾ ಕ್ಷೇತ್ರದ ಉದ್ಯೋಗಸ್ಥ ಮಹಿಳೆಯರು ಹಾಗೂ ಯುವತಿಯರು ಇನ್‌ಸ್ಟಂಟ್ ಬ್ಯೂಟಿ ಟ್ರೀಟ್‌ಮೆಂಟ್ ಹಾಗೂ ಆರೈಕೆಗಾಗಿ ಇವನ್ನು ಬಳಸಲಾರಂಭಿಸಿದ್ದಾರೆ. ಕೆಲವು ಬ್ರ್ಯಾಂಡ್‌ಗಳಲ್ಲಿ ಒಂದು ಮಾಸ್ಕ್‌ಗೆ 50 ರೂ.ಗಳಿದ್ದರೇ, ಇನ್ನು ಕೆಲವು ಬ್ರ್ಯಾಂಡ್‌ಗಳಲ್ಲಿ 300-500 ರೂ. ಗಳವರೆಗಿನ ಮಾಸ್ಕ್‌ಗಳು ಲಭ್ಯ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪಟ್ರ್ಸ್. ಅವರ ಪ್ರಕಾರ, ಇಂದಿನ ಬ್ಯುಸಿ ಲೈಫ್‌ಸ್ಟೈಲ್‌ನಲ್ಲಿ ಕಾರ್ಯನಿರ್ವಹಿಸುವ ಪ್ರತಿ ಮಹಿಳೆಯು ಕಡಿಮೆ ಸಮಯದಲ್ಲಿ ಬ್ಯೂಟಿ ಆರೈಕೆ ಬಯಸುತ್ತಾರೆ. ಇದು ಇನ್‌ಸ್ಟಂಟ್ ಫೇಸ್ ಮಾಸ್ಕ್ ಶೀಟ್ ಬೇಡಿಕೆ ಹೆಚ್ಚಾಗಲು ಕಾರಣ ಎನ್ನುತ್ತಾರೆ.
ಇದನ್ನೂ ಓದಿ: Kids Dungrees Fashion: ಮುದ್ದು ಮಕ್ಕಳ ಫ್ಯಾಷನ್‌ನಲ್ಲಿ 3 ಶೈಲಿಯ ಕ್ಯೂಟ್ ಡಂಗ್ರೀಸ್
ಇನ್‌ಸ್ಟಂಟ್ ಫೇಸ್ ಮಾಸ್ಕ್ ಶೀಟ್ ಆಯ್ಕೆ ಹೇಗೆ?
- ನಿಮ್ಮ ಸ್ಕಿನ್‌ಟೋನ್‌ಗೆ ತಕ್ಕಂತೆ ಹೊಂದುವುದನ್ನು ಆರಿಸಿಕೊಳ್ಳಿ.
- ಪ್ರತಿ ಮಾಸ್ಕ್ ಕವರ್ ಮೇಲೆ ಅರ್ಥವಾಗುವಂತೆ ವಿವರ ನೀಡಲಾಗಿರುತ್ತದೆ . ಗಮನಿಸಿ.
- ಬೀದಿ ಬದಿಯಲ್ಲಿ ಯಾವುದೇ ಕಾರಣಕ್ಕೂ ಇವನ್ನು ಖರೀದಿಸಬೇಡಿ. ಕಳಪೆ ಗುಣಮಟ್ಟದ್ದಾಗಿರುತ್ತದೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಫ್ಯಾಷನ್
Party Fashion: ಬಿಹೈವ್ ಹೈ ಪಾರ್ಟಿ ಫ್ಯಾಷನ್ ಶೋನಲ್ಲಿ ಬಾಲಿವುಡ್ ನಟಿ ನೇಹಾ ದುಪಿಯಾ
Party Fashion: ಉದ್ಯಾನನಗರಿಯ ಚರ್ಚ್ ಸ್ಟ್ರೀಟ್‌ನಲ್ಲಿರುವ ಬಿಹೈವ್‌ನಲ್ಲಿ ನಡೆದ ಜೊರ್ಬಾ ಹೈ ಫ್ಯಾಷನ್ ಪಾರ್ಟಿ ಯಲ್ಲಿ ,ಆಕರ್ಷಕ ಫ್ಯಾಷನ್ ಶೋ ನಡೆಯಿತು. ಇವೆಲ್ಲದರ ಜೊತೆಗೆ ಬಾಲಿವುಡ್ ತಾರೆ ನೇಹಾ ದುಪಿಯಾ ಭಾಗವಹಿಸಿ, ಫ್ಯಾಷನ್ ಪ್ರಿಯರ ಜೋಷ್ ಏರಿಸಿದರು. ಈ ಬಗ್ಗೆ ಇಲ್ಲಿದೆ ವರದಿ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಿಹೈವ್ ಜೊರ್ಬಾ ಹೈ ಫ್ಯಾಷನ್ ಪಾರ್ಟಿ ಉದ್ಯಾನನಗರಿ ಫ್ಯಾಷನ್ ಪ್ರಿಯರ ಜೋಷ್ ಹೆಚ್ಚಿಸಿತ್ತು. ಹೌದು. ಚರ್ಚ್ ಸ್ಟ್ರೀಟ್‌ನಲ್ಲಿರುವ ಬಿಹೈವ್‌ನಲ್ಲಿ ನಡೆದ ಜೊರ್ಬಾ ಪೇಜ್ ತ್ರೀ ಫ್ಯಾಷನ್ ಪಾರ್ಟಿಯಲ್ಲಿ, ಫ್ಯಾಷನ್ ಶೋ ಜತೆಗೆ ಬೆಸ್ಟ್ ಡ್ರೆಸ್ಡ್ ಸ್ಪರ್ಧೆಯೂ ಕೂಡ ನಡೆಯಿತು. ಇವೆಲ್ಲದರ ನಡುವೆ ವಿಭಿನ್ನವಾದ ಕಾಸ್ಟ್ಯೂಮ್ಸ್ ಧರಿಸಿದ ಪ್ರೊಫೆಷನಲ್ ಮಾಡೆಲ್‌ಗಳು ಆಕರ್ಷಕ ಫ್ಯಾಷನ್ ವಾಕ್ ಮಾಡಿದರು. ಇವೆಲ್ಲದರ ನಡುವೆ ಆಗಮಿಸಿದ ಬಾಲಿವುಡ್ ತಾರೆ ನೇಹಾ ದುಪಿಯಾ ಫ್ಯಾಷನ್ ಪ್ರಿಯರ ಜೋಷ್ ಏರಿಸಿದರು.
ನಟಿ ನೇಹಾ ದುಪಿಯಾ ಫ್ಯಾಷನ್ ಜೋಷ್
ಹೈ ಫ್ಯಾಷನ್ ಶೋ ಹಾಗೂ ಪಾರ್ಟಿಯಲ್ಲಿ ಪಾಲ್ಗೊಂಡ ಬಾಲಿವುಡ್ ತಾರೆ ನೇಹಾ ದುಪಿಯಾ, ಕಾರ್ಯಕ್ರಮಕ್ಕೆ ಚಾಲನೆ ನೀಡುವುದರೊಂದಿಗೆ ಬಿಹೈವ್ ಪ್ರಿಮೀಯಮ್‌ನ ಸಿಇಒ ಶೇಷಗಿರಿ ರಾವ್ ಪಾಪ್ಲಿಕರ್ ಅವರೊಂದಿಗೆ ವನ್ ಟು ವನ್ ಇಂಟಾರಾಕ್ಟ್ ಮಾಡಿ ಪ್ರಶ್ನೆಗಳಿಗೆ ಉತ್ತರಿಸಿದರು.
“ಐ ಲವ್ ಬೆಂಗಳೂರು. ಕೇವಲ ಇದು ಫ್ಯಾಷನ್ ಸಿಟಿ ಮಾತ್ರವಲ್ಲ, ಜೊತೆಗೆ ಸದಾ ಲವಲವಿಕೆಯಿಂದಿರುವ ನಗರವಿದು. ಇಲ್ಲಿನ ಜನರ ಫ್ಯಾಷೆನಬಲ್ ಸೆನ್ಸ್ ಮೆಚ್ಚಬೇಕಾದ್ದು.ಇಲ್ಲಿ ಭಾಗವಹಿಸಿರುವ ಸ್ಪರ್ಧಿಗಳು ಕೂಡ ಸಖತ್ ಫ್ಯಾಷನ್ ಸೆನ್ಸ್ ಹೊಂದಿದ್ದಾರೆ” ಎಂದರು.
ನೇಹಾ ದುಪಿಯಾ ಮೆಚ್ಚುಗೆ
ಹೈ ಫ್ಯಾಷನ್ ಪಾರ್ಟಿಗಳು ಗ್ಲಾಮರ್ ಜೊತೆಗೆ ಕಂಪ್ಲೀಟ್ ವಿಭಿನ್ನ ಥೀಮ್ ಹೊಂದಿರುತ್ತವೆ. ಈ ಬಗ್ಗೆ ನಟಿ ನೇಹಾ ದುಪಿಯಾ ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. ಅಷ್ಟು ಮಾತ್ರವಲ್ಲದೇ, ಬೆಸ್ಟ್ ಡ್ರೆಸ್ಡ್ ಕಪಲ್ ಹಾಗೂ ಇನ್ನಿತರ ಫ್ಯಾಷನ್ ಕೆಟಗರಿಗಳಿಗೆ ಜ್ಯೂರಿಯಾಗಿ ಪಾಲ್ಗೊಂಡರು. ವಿಜೇತರಾದವರಿಗೆ ವಿಶ್ ಮಾಡಿ ಬಹುಮಾನಗಳನ್ನು ವಿತರಿಸಿದರು.
ಇದನ್ನೂ ಓದಿ: Kids Dungrees Fashion: ಮುದ್ದು ಮಕ್ಕಳ ಫ್ಯಾಷನ್‌ನಲ್ಲಿ 3 ಶೈಲಿಯ ಕ್ಯೂಟ್ ಡಂಗ್ರೀಸ್
ಸೆಲೆಬ್ರೆಟಿ ಡಿಸೈನರ್ ರಾಜೇಶ್ ಶೆಟ್ಟಿ ಕೊರಿಯಾಗ್ರಾಫಿ
ಹೈ ಫ್ಯಾಷನ್ ಎನ್ನಬಹುದಾದ ಈ ಫ್ಯಾಷನ್ ಪಾರ್ಟಿಯ ಶೋ ಕೊರಿಯಾಗ್ರಾಫಿಯನ್ನು ಸೆಲೆಬ್ರೆಟಿ ಶೋ ಡೈರೆಕ್ಟರ್ ರಾಜೇಶ್ ಶೆಟ್ಟಿ ವಹಿಸಿಕೊಂಡಿದ್ದರು. ಚಿತ್ರ-ವಿಚಿತ್ರ ಡಿಸೈನರ್‌ವೇರ್‌ಗಳನ್ನು ಧರಿಸಿದ ಪ್ರೊಫೆಷನಲ್ ಮಾಡೆಲ್‌ಗಳು ರ್ಯಾಂಪ್ ಮೇಲೆ ವಾಕ್ ಮಾಡಿ ನೋಡುಗರ ಮನ ಸೆಳೆದರು. ಜತೆಗೆ ಯುವ ಜನರನ್ನು ಹುಚ್ಚೆಬ್ಬಿಸಿದರು. ಈ ಫ್ಯಾಷನ್ ಪಾರ್ಟಿಯಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಪಿಯಾನೋ ಕಲಾವಿದರಾದ ಐರಿನಾ ಗಲ್ಕಿನಾ, ಭಾರತದ ನಂಬರ್ ವನ್ ಮಹಿಳಾ ಡಿಜೆ ರಿಂಕ್, ಫ್ಯಾಷನ್ ಡಿಸೈನರ್ ನಾಗ್ಸ್ ಭಾಗವಹಿಸಿದ್ದರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಫ್ಯಾಷನ್
Fashion Pageant news: ಸಾಮಾಜಿಕ ಕಳಕಳಿಗಾಗಿ ನಡೆದ ಗೋಲ್ಡನ್ ಫೇಸ್ ಆಫ್ ಸೌತ್ ಇಂಡಿಯಾ 2023 ಪೇಜೆಂಟ್ ಆಡಿಷನ್
Fashion Pageant news: ಸಾಮಾಜಿಕ ಕಳಕಳಿಯ ಉದ್ದೇಶವನ್ನಿಟ್ಟುಕೊಂಡು ಉದ್ಯಾನನಗರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ, ಗೋಲ್ಡನ್ ಫೇಸ್ ಆಫ್ ಸೌತ್ ಇಂಡಿಯಾ 2023 ರ ಆಡಿಷನ್‌ನಲ್ಲಿ ವಿವಾಹಿತ ಹಾಗೂ ಅವಿವಾಹಿತ ಮಾಡೆಲ್‌ಗಳು ಭಾಗವಹಿಸಿದ್ದರು. ಈ ಬಗ್ಗೆ ಇಲ್ಲಿದೆ ವರದಿ.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಾಮಾಜಿಕ ಕಳಕಳಿಯನ್ನು ಉದ್ದೇಶವಾಗಿರಿಸಿಕೊಂಡು ಉದ್ಯಾನನಗರಿಯಲ್ಲಿ (Fashion Pageant news) ಹಮ್ಮಿಕೊಂಡಿದ್ದ ಗೋಲ್ಡನ್ ಫೇಸ್ ಆಫ್ ಸೌತ್ ಇಂಡಿಯಾ 2023 ರ ಆಡಿಷನ್‌ನಲ್ಲಿ ಸುಮಾರು 50 ಕ್ಕೂ ಹೆಚ್ಚು ವಿವಾಹಿತ ಹಾಗೂ ಅವಿವಾಹಿತ ಮಾಡೆಲ್‌ಗಳು ಆತ್ಮಸ್ಥೈರ್ಯದಿಂದ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರು.
ಸಂಸ್ಥಾಪಕಿ ನಂದಿನಿ ನಾಗರಾಜ್ ಸಾಮಾಜಿಕ ಕಳಕಳಿ
ಆ್ಯಸಿಡ್ ದಾಳಿಗೆ ಒಳಗಾದ ಯುವತಿಯರಿಗೆ ಸ್ಕಿನ್ ಡೊನೇಷನ್ ಮಾಡಬಹುದೆಂಬ ಜಾಗೃತಿ ಮೂಡಿಸುವ ಸಾಮಾಜಿಕ ಕಳಕಳಿಯನ್ನು ಈ ಪೇಜೆಂಟ್ ಮೂಲಕ ವ್ಯಕ್ತಪಡಿಸಲಾಯಿತು. ಇದುವರೆಗೂ ನೇತ್ರದಾನ, ದೇಹದಾನ ಎಲ್ಲದರ ಬಗ್ಗೆ ಜನರಿಗೆ ಅರಿವಿದೆ. ಆದರೆ ಸಾಕಷ್ಟು ಜನರಿಗೆ ನಮ್ಮ ಚರ್ಮವನ್ನು ಕೂಡ ದಾನ ಮಾಡಬಹುದು ಎಂಬುದರ ಬಗ್ಗೆ ತಿಳಿದಿರಲಿಕ್ಕಿಲ್ಲ! ಈ ಬಗ್ಗೆ ಅರಿವು ಇಲ್ಲದಿರುವ ಕಾರಣ ಈ ಕುರಿತ ಯಾವುದೇ ಪ್ರಕ್ರಿಯೆಗಳಿಗೆ ಯಾರೂ ಮುಂದಾಗುವುದಿಲ್ಲ. ಹಾಗಾಗಿ ನಾವು ನಮ್ಮ ಪೇಜೆಂಟ್ ಮೂಲಕ ಚರ್ಮವನ್ನು ದಾನ ಮಾಡಬಹುದು. ಇದನ್ನು ಆ್ಯಸಿಡ್ ದಾಳಿಗೆ ಒಳಗಾದವರಿಗೆ ಬಳಸಿಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ತಿಳಿಸಿಕೊಡಲು ಪ್ರಯತ್ನಿಸುತ್ತಿದ್ದೇವೆ “ಎಂದು ಪೇಜೆಂಟ್‌ನ ಸಂಸ್ಥಾಪಕಿ ನಂದಿನಿ ನಾಗರಾಜ್ ತಿಳಿಸಿದರು.
ಪೇಜೆಂಟ್‌ನಲ್ಲಿ ಫ್ಯಾಷನ್ ಸೆಲೆಬ್ರೆಟಿಗಳು
ಪೇಜೆಂಟ್‌ನ ಅಡಿಷನ್‌ನಲ್ಲಿ ಸಂಸ್ಥಾಪಕರಾದ ಗೋಪಿನಾಥ್ ರವಿ, ಮ್ಯಾನೇಜಿಂಗ್ ಡೈರೆಕ್ಟರ್ ಸರವಣನ್ ಉಪಸ್ಥಿತರಿದ್ದರು. ಮಿಸೆಸ್ ಸೌತ್ ಇಂಡಿಯಾ (ಐಎಮ್‌ಪಿ)2022 ಸುಚಿತ್ರಾ ವೇಣುಗೋಪಾಲ್, ಮಿಸೆಸ್ ಇಂಡಿಯಾ ವಲ್ರ್ಡ್ 2022 ಜನನಿ ರಮೇಶ್, ಮಿಸೆಸ್ ಇಂಡಿಯಾ ಏಷಿಯಾ ಬಬಿತಾ ಪ್ರಕಾಶ್, ಮಿಸೆಸ್ ವಲ್ರ್ಡ್ ವೈಡ್ 2019 ಶ್ವೇತಾ ನಿರಂಜನ್, ಡಾ. ಶ್ರುತಿ ಸತ್ಯೇಂದ್ರ, ನಟಿ ಹಾಗೂ ಮಾಡೆಲ್ ಉಷಾ ಕಿರಣ್ ಜ್ಯೂರಿ ಟೀಮ್‌ನಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: Kids Dungrees Fashion: ಮುದ್ದು ಮಕ್ಕಳ ಫ್ಯಾಷನ್‌ನಲ್ಲಿ 3 ಶೈಲಿಯ ಕ್ಯೂಟ್ ಡಂಗ್ರೀಸ್
ಚೆನ್ನೈನಲ್ಲಿ ಗ್ರ್ಯಾಂಡ್ ಫಿನಾಲೆ
ಸದ್ಯಕ್ಕೆ ಉದ್ಯಾನನಗರಿಯಲ್ಲಿ ನಡೆದಿರುವ ಈ ಅಡಿಷನ್, ಮುಂದಿನ ದಿನಗಳಲ್ಲಿ ಕೊಚ್ಚಿ ಹಾಗೂ ಹೈದರಾಬಾದ್‌ನಲ್ಲೂ ಹಮ್ಮಿಕೊಳ್ಳಲಾಗಿದೆ. ಕೊನೆಯಲ್ಲಿ ಪೇಜೆಂಟ್‌ನ ಮುಖ್ಯಸ್ಥರಾದ ವಿಜಯ್ ಅವರ ಸಮ್ಮುಖದಲ್ಲಿ ಚೆನ್ನೈನಲ್ಲಿ ಫಿನಾಲೆ ನಡೆಯಲಿದೆ. ಇಲ್ಲಿ ವಿಜೇತರಾದವರು ರಾಷ್ಟ್ರಮಟ್ಟದಲ್ಲಿ ಬೆಂಗಳೂರಿನಲ್ಲಿ ನಡೆಯುವ ಪೇಜೆಂಟ್‌ನಲ್ಲಿ ಭಾಗವಹಿಸಲಿದ್ದಾರೆ. ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ದುಬೈ ಹಾಗೂ ಸಿಂಗಾಪೂರ್‌ನಲ್ಲಿ ಸ್ಪರ್ಧೆ ನಡೆಯುವ ಅಂದಾಜಿದೆ ಎಂದು ಸಂಸ್ಥಾಪಕಿ ನಂದಿನಿ ನಾಗರಾಜ್ ತಿಳಿಸಿದ್ದಾರೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
-
ವೈರಲ್ ನ್ಯೂಸ್5 hours ago
Viral Video : ಅಬ್ಬಾ ಏನು ಧೈರ್ಯ; ವೇಗವಾಗಿ ಚಲಿಸುತ್ತಿದ್ದ ಟ್ರಕ್ನ ಚಕ್ರದ ಪಕ್ಕದಲ್ಲಿಯೇ ಗಡದ್ದಾಗಿ ನಿದ್ದೆ ಹೊಡೆದ !
-
ಕರ್ನಾಟಕ10 hours ago
Suspicious death : ಮನೆಯಲ್ಲಿ ನೇತಾಡುತ್ತಿತ್ತು ಹೆಂಡ್ತಿ ಶವ; ಚಿತೆಯ ಫೋಟೊ ಹಾಕಿದ ಗಂಡ!
-
ದೇಶ15 hours ago
Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್ ಹಾಸನ್
-
South Cinema7 hours ago
Silk Smitha: ಸಿಲ್ಕ್ ಸ್ಮಿತಾ ಶವದ ಮೇಲೆ ಅತ್ಯಾಚಾರ ; ನಟಿಯ ಪುಣ್ಯತಿಥಿಯಂದು ಅಚ್ಚರಿಯ ಸತ್ಯ ಹೊರಬಿತ್ತು!
-
ಅಂಕಣ18 hours ago
ವಿಸ್ತಾರ ಅಂಕಣ: ಮಣ್ಣು ಬರೀ ಮಣ್ಣಲ್ಲ, ಅದು ನಮ್ಮ ಭಾವಕೋಶ, ನಾವು ಮಣ್ಣಿನ ಮಕ್ಕಳು!
-
ಬಾಲಿವುಡ್11 hours ago
Rashmika Mandanna: ಕತ್ತಿನಲ್ಲಿ ತಾಳಿ, ಕೆಂಪು ಬಾರ್ಡರ್ ಸೀರೆಯುಟ್ಟು ಫಸ್ಟ್ ಲುಕ್ನಲ್ಲೇ ನಾಚಿ ನೀರಾದ ರಶ್ಮಿಕಾ!
-
ಕ್ರಿಕೆಟ್11 hours ago
Varanasi Stadium: ವಾರಾಣಸಿ ಕ್ರಿಕೆಟ್ ಸ್ಟೇಡಿಯಂ ಶಿವಮಯ; ಹೀಗಿರಲಿದೆ ಇದರ ವೈಭವ, ವೈಶಿಷ್ಟ್ಯ
-
ಪ್ರಮುಖ ಸುದ್ದಿ4 hours ago
Sandalwood : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ; ಗೆದ್ದವರ ವಿವರ ಇಲ್ಲಿದೆ