Site icon Vistara News

Monsoon Fashion: ಮಾನ್ಸೂನ್‌ ಸೀಸನ್‌ಗೆ ರ‍್ಯಾಪರ್‌ ಇಶಾನಿಯ ಫ್ಯಾಷನ್‌ ಟಿಪ್ಸ್‌ ಹೀಗಿದೆ!

Monsoon Fashion

ಸಂದರ್ಶನ: ಶೀಲಾ ಸಿ. ಶೆಟ್ಟಿ
ಮಾನ್ಸೂನ್‌ ಸೀಸನ್‌ನಲ್ಲಿ (Monsoon Fashion) ರ‍್ಯಾಪರ್‌ ಇಶಾನಿಗೆ ಕೋ- ಆರ್ಡ್ ಸೆಟ್‌ ಔಟ್‌ಫಿಟ್ಸ್ ಮೇಲೆ ಲವ್‌ ಹೆಚ್ಚಾಗಿದೆ. ಹೌದು, ಬಿಗ್‌ ಬಾಸ್‌ ಸ್ಪರ್ಧಿ, ಕನ್ನಡ ರ‍್ಯಾಪರ್‌ ಇಶಾನಿ, ಕೋ -ಆರ್ಡ್ ಸೆಟ್‌ ಲವರ್‌. ಇದೀಗ ಈ ಸೀಸನ್‌ಗೆ ಹೊಂದುವಂತಹ ನೀಲಿ ವರ್ಣದ ಸ್ಪೋರ್ಟ್ಸ್ ಲುಕ್‌ ನೀಡುವ ಕೋ- ಆರ್ಡ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದು, ಮಳೆಗಾಲದಲ್ಲೂ ಕೂಲ್‌ ಲುಕ್‌ ನನ್ನ ಚಾಯ್ಸ್ ಎನ್ನುತ್ತಾರೆ.

ಇಶಾನಿ ಮ್ಯೂಸಿಕ್‌ ಲವ್‌

ಕನ್ನಡದ ರ‍್ಯಾಪರ್‌ ಇಶಾನಿ, ಬಿಗ್‌ ಬಾಸ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಇಲ್ಲಿನ ಜನತೆಗೆ ಹತ್ತಿರವಾದರು.ಅ ವರ ಆಂಗ್ಲ ಮಿಶ್ರಿತ ಕನ್ನಡ ಅವರನ್ನು ವಿಭಿನ್ನವಾಗಿಸಿದೆ. ಹೆಚ್ಚು ಸಮಯ ದುಬೈನಲ್ಲಿ ಕಳೆದಿದ್ದರೂ, ಇದೀಗ ಇಲ್ಲಿಯೇ ಬ್ಯುಸಿಯಾಗಿರುವ ಇಶಾನಿ, ಆಗಾಗ್ಗೆ ಕನ್ನಡ ರ‍್ಯಾಪ್‌ ಸಾಂಗ್‌ಗಳನ್ನು ಬಿಡುಗಡೆಗೊಳ್ಳಿಸುತ್ತಿರುತ್ತಾರೆ. ತಮ್ಮದೇ ಆದ ಅಭಿಮಾನಿ ವರ್ಗವನ್ನು ಗಳಿಸಿದ್ದಾರೆ. ವಿಸ್ತಾರನ್ಯೂಸ್‌ನೊಂದಿಗೆ ಮಾತನಾಡಿದ ಅವರು, ಬದಲಾಗುವ ಮಾನ್ಸೂನ್‌ ಸೀಸನ್‌ ಲುಕ್‌ ಬಗ್ಗೆ ತಿಳಿಸಿದರು. ತಾವು ಕೋ ಆರ್ಡ್ ಸೆಟ್‌ ಔಟ್‌ಫಿಟ್ಸ್ ಹೆಚ್ಚು ಇಷ್ಟಪಡುವುದಾಗಿ ಹೇಳಿದರು. ಅಲ್ಲದೇ, ಜೆನ್‌ ಜಿ ಹುಡುಗಿಯರಿಗೆ ಒಂದಿಷ್ಟು ಮಾನ್ಸೂನ್‌ ಲುಕ್‌ ಟಿಪ್ಸ್ ಕೂಡ ನೀಡಿದರು. ಈ ಕುರಿತಂತೆ ಇಲ್ಲಿದೆ ವಿವರ.

ವಿಸ್ತಾರ ನ್ಯೂಸ್‌: ಕನ್ನಡ ರ‍್ಯಾಪರ್‌ ಇಶಾನಿ ಎಂದಾಗ ಸಂತಸವಾಗುತ್ತದೆಯೋ ಅಥವಾ ಬಿಗ್‌ಬಾಸ್‌ ಸ್ಪರ್ಧಿ ಎಂದಾಗ ಖುಷಿಯಾಗುತ್ತದೆಯೋ ?

ಇಶಾನಿ: ಎರಡೂ ಹೇಳಿದಾಗಲೂ ಖುಷಿಯಾಗುತ್ತದೆ. ಕನ್ನಡದ ರ‍್ಯಾಪರ್‌ ಎಂದಾಗ ಸಾಧಿಸಿದ ಖುಷಿ. ಇನ್ನು, ಬಿಗ್‌ಬಾಸ್‌ ಸ್ಪರ್ಧಿ ಎಂದು ಗುರುತಿಸಿದಾಗ ಇನ್ನೊಂದು ವಿಧದ ಸಂತಸ.

ವಿಸ್ತಾರ ನ್ಯೂಸ್‌ : ನಿಮ್ಮ ಫ್ಯಾಷನ್‌ ಸ್ಟೇಟ್‌ಮೆಂಟ್‌ ಮಾನ್ಸೂನ್‌ಗೆ ಬದಲಾಗಿದೆಯೇ!

ಇಶಾನಿ: ಖಂಡಿತ. ಸೀಸನ್‌ಗೆ ತಕ್ಕಂತೆ ಬದಲಾಗುತ್ತದೆ. ಅಲ್ಲದೇ, ಆಗಾಗ್ಗೆ ನನಗಿಷ್ಟವಾದ ಕೋ ಆರ್ಡ್ ಸೆಟ್‌ಗಳಲ್ಲಿ ಕಾಣಿಸಿಕೊಳ್ಳುತ್ತೇನೆ. ಎಲ್ಲಾ ಬಗೆಯ ಲೇಯರ್‌ ಲುಕ್‌ ಕೂಡ ನನಗಿಷ್ಟ.

ವಿಸ್ತಾರ ನ್ಯೂಸ್‌: ನಿಮ್ಮ ಮಾನ್ಸೂನ್‌ ಸೀಸನ್‌ ಫ್ಯಾಷನ್‌ ಬಗ್ಗೆ ಹೇಳಿ?

ಇಶಾನಿ: ನನ್ನದು ಸದಾ ಬಿಂದಾಸ್‌ ಫ್ಯಾಷನ್‌! ಸೀಸನ್‌ಗೆ ತಕ್ಕಂತೆ ಎನ್ನುವುದಕ್ಕಿಂತಲೂ ಮಾರ್ಡನ್‌ ಲುಕ್‌ ನನಗಿಷ್ಟ. ಬೆಚ್ಚಗಿಡುವ ಜಾಕೆಟ್ಸ್, ವೈವಿಧ್ಯಮಯ ಕೋ -ಆರ್ಡ್ ಸೆಟ್‌ನಂತಹ ಔಟ್‌ಫಿಟ್‌ಗಳಲ್ಲಿ, ಲೇಯರಿಂಗ್‌ ಡ್ರೆಸ್‌ಗಳಲ್ಲೂ ಕಾಣಿಸಿಕೊಳ್ಳುತ್ತಿರುತ್ತೇನೆ.

ಇದನ್ನೂ ಓದಿ: ICW 2024: ಇಂಡಿಯಾ ಕೌಚರ್‌ ವೀಕ್‌ನಲ್ಲಿ ಸೆಲೆಬ್ರಿಟಿಗಳ ಕಲರವ!

ವಿಸ್ತಾರ ನ್ಯೂಸ್‌: ನಿಮ್ಮ ಸ್ಟೈಲಿಂಗ್‌ ಜೆನ್‌ ಜಿ ಹುಡುಗಿಯರನ್ನು ಆಕರ್ಷಿಸಿದೆ. ನೀವು ಅವರಿಗೆ ನೀಡುವ 5 ಟಿಪ್ಸ್ ಏನು?

  1. ನಿಮ್ಮ ಬಾಡಿಮಾಸ್‌ ಇಂಡೆಕ್ಸ್‌ಗೆ ತಕ್ಕಂತೆ ಔಟ್‌ಫಿಟ್‌ ಧರಿಸಿ.
  2. ಸೀಸನ್‌ಗೆ ನಿಮ್ಮ ಸ್ಟೈಲಿಂಗ್‌ ಮ್ಯಾಚ್‌ ಮಾಡಿ.
  3. ಮಾನ್ಸೂನ್‌ನಲ್ಲಿ ಲೇಯರ್‌ ಲುಕ್‌ಗೆ ಆದ್ಯತೆ ನೀಡಿ.
  4. ಬಿಂದಾಸ್‌ ಸ್ಟೈಲ್‌ಸ್ಟೇಟ್‌ಮೆಂಟ್‌ಗಾಗಿ ವೆಸ್ಟರ್ನ್‌ ವೇರ್ಸ್ ಧರಿಸಿ.
  5. ಟ್ರೆಂಡ್‌ಗೆ ತಕ್ಕಂತೆ ಬದಲಾಗುವ ಬದಲು,ನಿಮಗೇನು ಬೆಸ್ಟ್ ಎಂಬುದನ್ನು ಕಂಡುಕೊಳ್ಳಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Exit mobile version