-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೋಡಲು ಶರ್ಟ್ (Monsoon fashion) ಧರಿಸಿರುವಂತೆ ಕಾಣುವ ನಾನಾ ಬಗೆಯ ಬೆಚ್ಚಗಿಡುವ ಶರ್ಟ್ ಸ್ಟೈಲ್ ಜಾಕೆಟ್‌ಗಳು ಮೆನ್ಸ್ ಮಾನ್ಸೂನ್ ಫ್ಯಾಷನ್‌ಗೆ ಕಾಲಿಟ್ಟಿವೆ. ಹೌದು. ಮಳೆಗಾಲವೆಂದಾಕ್ಷಣ ನಾನಾ ಬಗೆಯ ಜಾಕೆಟ್‌ಗಳು ವಾರ್ಡ್ರೋಬ್‌ನಿಂದ ಹೊರಬರುವುದು ಮಾತ್ರವಲ್ಲ, ಮಾರುಕಟ್ಟೆಯಲ್ಲೂ ಬಿಡುಗಡೆಗೊಳ್ಳುತ್ತವೆ. ಅವುಗಳಲ್ಲಿ, ಇದೀಗ ಮೆನ್ಸ್ ಲೇಯರ್ ಸ್ಟೈಲಿಂಗ್‌ನಲ್ಲಿ ಶರ್ಟ್ ಸ್ಟೈಲ್ ಜಾಕೆಟ್‌ಗಳು ಹೆಚ್ಚು ಚಾಲ್ತಿಯಲ್ಲಿವೆ. ಕೆಲವಂತೂ ಟೂ ಇನ್ ವನ್ ಸ್ಟೈಲಿಂಗ್‌ನಲ್ಲಿ ಧರಿಸುವಂತಹ ರಿವರ್ಸಿಬಲ್ ಡಿಸೈನ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಕುರಿತಂತೆ ಮೆನ್ಸ್ ಸ್ಟೈಲಿಸ್ಟ್ ಜಿಶಾನ್ ಇಲ್ಲಿ ವಿವರಿಸಿದ್ದಾರೆ.
ಟ್ರೆಂಡ್‌ನಲ್ಲಿರುವ ಶರ್ಟ್ ಸ್ಟೈಲ್ ಜಾಕೆಟ್ಸ್
ಈ ಮೊದಲು ಚಳಿಗಾಲದಲ್ಲಿ ಬಿಡುಗಡೆಯಾಗುತ್ತಿದ್ದ ಟ್ವೀಡ್ ಜಾಕೆಟ್ಸ್, ವೂಲ್ ಜಾಕೆಟ್ಸ್, ಚೆಕ್ರ್ಡ್ ಜಾಕೆಟ್, ನಿಟ್ ಜಾಕೆಟ್‌ಗಳು ಇದೀಗ ಹೊಸ ರೂಪದೊಂದಿಗೆ ಮಳೆಗಾಲದಲ್ಲೂ ಎಂಟ್ರಿ ನೀಡಿವೆ. ತಕ್ಷಣಕ್ಕೆ ನೋಡಲು ಇವು ಶರ್ಟ್ ಡಿಸೈನ್‌ನಂತೆ ಕಾಣಿಸುತ್ತವೆ ನಿಜ, ಆದರೆ ಇವು ಜಾಕೆಟ್‌ಗಳು. ಧರಿಸಿದಾಗ ಶರ್ಟ್‌ನಂತೆ ಧರಿಸಬಹುದು. ಬೇಡವಾದಲ್ಲಿ ಬಟನ್ ಬಿಚ್ಚಿ ಜಾಕೆಟ್‌ನಂತೆ ಹಾಕಿಕೊಳ್ಳಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಮಳೆಗಾಲದಲ್ಲಿ ಇವು ಮಳೆಯಿಂದ ರಕ್ಷಣೆ ನೀಡದಿದ್ದರೂ, ಚಳಿ-ಗಾಳಿಯಿಂದ ಕಾಪಾಡುತ್ತವೆ. ನೋಡಲು ಆಕರ್ಷಕವಾಗಿ ಕಾಣಿಸುತ್ತವೆ. ಆದರೆ, ಇವುಗಳ ಫ್ಯಾಬ್ರಿಕ್ ಕೊಂಚ ಭಾರವಾಗಿರುವುದರಿಂದ ಮಳೆಗೆ ಧರಿಸುವುದು ಸೂಕ್ತವಲ್ಲ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು. ಅವರ ಪ್ರಕಾರ, ಶರ್ಟ್ ಸ್ಟೈಲ್ ಜಾಕೆಟ್‌ಗಳು ಕೇವಲ ಔಟ್‌ಲುಕ್‌ಗೆ ಮಾತ್ರ ಸಾಥ್ ನೀಡುತ್ತವೆ ಹೊರತು, ಮಳೆಗಲ್ಲ! ಎನ್ನುತ್ತಾರೆ.
ಯುವಕರ ಸ್ಟೈಲಿಂಗ್‌ನಲ್ಲಿ ಶರ್ಟ್ ಸ್ಟೈಲ್ ಜಾಕೆಟ್ಸ್
ಕಾಲೇಜು ಯುವಕರ ಸ್ಟೈಲಿಂಗ್‌ನಲ್ಲಿ ಇವು ಸೇರಿಕೊಂಡಿವೆ. ಒಂದು ಜಾಕೆಟ್ ಮೂರ್ನಾಲ್ಕು ವಿಧದಲ್ಲಿ ಧರಿಸಬಹುದು. ಇದನ್ನು ಈ ಜನರೇಷನ್‌ನ ಹುಡುಗರು ಪಾಲಿಸುತ್ತಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ ಜಿಶಾನ್.
ಇದನ್ನೂ ಓದಿ: Contact Lens Awareness: ಶೋಕಿಗಾಗಿ ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರೇ ಎಚ್ಚರ! ಈ 5 ಸಂಗತಿ ಗಮನದಲ್ಲಿರಲಿ
ಶರ್ಟ್ ಶೈಲಿಯ ಜಾಕೆಟ್ ಸ್ಟೈಲಿಂಗ್ ಟಿಪ್ಸ್
- ಜೀನ್ಸ್ ಪ್ಯಾಂಟ್ ಮೇಲೆ ಜಾಕೆಟ್‌ನಂತೆ ಧರಿಸಬಹುದು.
- ಫಾರ್ಮಲ್ ಪ್ಯಾಂಟ್ ಮೇಲೆ ಶರ್ಟ್ ನಂತೆ ಧರಿಸಬಹುದು. ಆದರೆ ಫಿಟ್ಟಿಂಗ್ ಇರಬೇಕು.
- ಓವರ್ಸೈಝ್ ಜಾಕೆಟ್‌ಗಳು ಟ್ರೆಂಡಿಯಾಗಿರುವುದರಿಂದ ಟೀನೇಜ್ ಹುಡುಗರು ಮಿಕ್ಸ್ ಮ್ಯಾಚ್ ಸ್ಟೈಲಿಂಗ್ ಮಾಡುತ್ತಿದ್ದಾರೆ.
- ಆಕ್ಸೆಸರೀಸ್ ಧರಿಸುವುದು ಬೇಕಾಗಿಲ್ಲ!
- ಜಾಕೆಟ್ಗೆ ಸಿಂಪಲ್ ಸ್ಣಿಕರ್ ಮ್ಯಾಚ್ ಮಾಡಿದರೇ ಸಾಕು.
(ಲೇಖಕಿ ಫ್ಯಾಷನ್ ಪತ್ರಕರ್ತೆ)