ಸಂದರ್ಶನ: ಶೀಲಾ ಸಿ. ಶೆಟ್ಟಿ
ಮಾನ್ಸೂನ್ ಸೀಸನ್‌ಗೆ ತಕ್ಕಂತೆ (Monsoon Fashion) ಬೆಂಗಳೂರಿನ ಸೂಪರ್ ಮಾಡೆಲ್ ಸಂತೋಷ್ ರೆಡ್ಡಿ ಲುಕ್ಸ್ ಬದಲಾಗಿದೆ. ಎಂದಿನಂತೆ ಯುವಕರನ್ನು ಆಕರ್ಷಿಸಿದೆ. ಸೀಸನ್ ಬದಲಾದರೇನಂತೆ! ಪುರುಷರೂ ಕೂಡ ತಮ್ಮದೇ ಆದ ಫ್ಯಾಷನ್ ಲುಕ್ಸ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂಬುದನ್ನು ಸಂತೋಷ್ ಅವರು ಪದೇ ಪದೇ ತಮ್ಮ ಸ್ಟೈಲ್ ಸ್ಟೇಟ್‌ಮೆಂಟ್‌ಗಳಿಂದಲೇ ಪ್ರೂವ್ ಮಾಡುತ್ತಲೇ ಇರುತ್ತಾರೆ.
ಸೂಪರ್ ಮಾಡೆಲ್ ಸಂತೋಷ್ ರೆಡ್ಡಿ ಯೂನಿಕ್ ಫ್ಯಾಷನ್
ಸಾಕಷ್ಟು ಫ್ಯಾಷನ್ ಶೋಗಳಲ್ಲಿ, ಸೂಪರ್ ಮಾಡೆಲ್ ಹಾಗೂ ಸೆಲೆಬ್ರೆಟಿ ಶೋ ಸ್ಟಾಪರ್ ಆಗಿ ಈಗಾಗಲೇ ಮಿಂಚಿ ಹೆಸರು ಮಾಡಿರುವ ಸಂತೋಷ್ ರೆಡ್ಡಿ, ನಟ ಉಪೇಂದ್ರರ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ನಟನೆಗೂ ಸೈ ಎಂದು ತೋರಿಸಿದ್ದಾರೆ. ತಮ್ಮದೇ ಆದ ಯೂನಿಕ್ ಹೇರ್‌ಸ್ಟೈಲ್‌ಗಳ ಮೂಲಕ ಐಡೆಂಟೆಟಿ ಗಳಿಸಿದ್ದಾರೆ.
ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ ಅವರು ತಮ್ಮ ಮಾನ್ಸೂನ್ ಫ್ಯಾಷನ್ ಕುರಿತಂತೆ ಹಂಚಿಕೊಳ್ಳುವುದರೊಂದಿಗೆ ಯುವಕರಿಗೆ ಒಂದಿಷ್ಟು ಸಿಂಪಲ್ ಟಿಪ್ಸ್ ಕೂಡ ನೀಡಿದ್ದಾರೆ. ಈ ಕುರಿತಂತೆ ಇಲ್ಲಿದೆ ವಿವರ.
ವಿಸ್ತಾರ ನ್ಯೂಸ್: ಫ್ಯಾಷನ್ ಲೋಕದಲ್ಲಿ ನಿಮ್ಮದೇ ಆದ ಛಾಪು ಮೂಡಿಸಿರುವ ನಿಮಗಿರುವ ಕನ್ನಡದ ಒಲವಿನ ಬಗ್ಗೆ ತಿಳಿಸಿ.
ಸಂತೋಷ್ ರೆಡ್ಡಿ: ಫ್ಯಾಷನ್ ಲೋಕದಲ್ಲಿ ಎಲ್ಲವೂ ಇಂಗ್ಲೀಷ್‌ಮಯ. ಅದೊಂದು ಕಮ್ಯೂನಿಕೇಷನ್ ಭಾಷೆ ಎಂಬುದನ್ನು ಮರೆಯಬಾರದು. ನಾವು ಕನ್ನಡ ಬಳಸಿದಾಗ ಇತರರು ಬಳಸುತ್ತಾರೆ. ನಾನು ಬಳಸುತ್ತೇನೆ. ಕನ್ನಡ ಮಾತನಾಡುವವರನ್ನು ಪ್ರೋತ್ಸಾಹಿಸುತ್ತೇನೆ.
ವಿಸ್ತಾರ ನ್ಯೂಸ್: ಮಾನ್ಸೂನ್ ಸೀಸನ್‌ಗೆ ತಕ್ಕಂತೆ ಬದಲಾದ ನಿಮ್ಮ ಫ್ಯಾಷನ್ ಬಗ್ಗೆ ಹೇಳಿ?
ಸಂತೋಷ್ ರೆಡ್ಡಿ: ಮಾಡೆಲ್‌ಗಳೆಂದಾಕ್ಷಣಾ ಜನರು ನಮ್ಮಿಂದ ಸದಾ ಹೊಸತನ್ನು ನಿರೀಕ್ಷಿಸುತ್ತಾರೆ. ಸಂದರ್ಭಕ್ಕೆ ತಕ್ಕಂತೆ ನಾನು ಬದಲಾಗುತ್ತೇನೆ. ಉದಾಹರಣೆಗೆ., ವರ್ಕೌಟ್, ಸೈಕ್ಲಿಂಗ್‌ಗೆ ಬ್ರಿಥೆಬಲ್ ಟೀ ಶರ್ಟ್-ಶಾರ್ಟ್ಸ್, ಔಟಿಂಗ್‌ಗೆ ಲೇಯರ್ ಲುಕ್, ಜಾಕೆಟ್ ಲುಕ್, ಪಾರ್ಟಿಗೆ ಬಿಂದಾಸ್ ಪಾಶ್ ಲುಕ್ ಹೀಗೆ ಮಾನ್ಸೂನ್‌ಗೆ ಮ್ಯಾಚ್ ಆಗುವಂತಹ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುತ್ತೇನೆ.
ವಿಸ್ತಾರ ನ್ಯೂಸ್: ಪುರುಷರು ಫ್ಯಾಷೆನಬಲ್ ಆಗಿರುವುದು ಅಗತ್ಯವೇ!
ಸಂತೋಷ್ ರೆಡ್ಡಿ: ಹೌದು. ಅವರವರ ವ್ಯಕ್ತಿತ್ವಕ್ಕೆ ತಕ್ಕಂತೆ ಹಾಗೂ ವಾತಾವರಣಕ್ಕೆ ಅನುಗುಣವಾಗಿ ಬದಲಾಗುವುದು ಇಂದಿನ ಅಗತ್ಯ. ಇಲ್ಲವಾದಲ್ಲಿ, ಜನರೇಷನ್‌ಗೆ ತಕ್ಕಂತೆ ಮುಂದುವರಿಯಲಾಗದು!
ವಿಸ್ತಾರ ನ್ಯೂಸ್: ಮಾನ್ಸೂನ್‌ನಲ್ಲಿ ಯುವಕರಿಗೆ ನೀವು ನೀಡುವ ಸಿಂಪಲ್ ಟಿಪ್ಸ್?
ಸಂತೋಷ್ ರೆಡ್ಡಿ: ಸೋಮಾರಿತನ ಬಿಟ್ಟು ಫಿಟ್ ಆಗಿರಲು ಬೆಳಗ್ಗೆ ವರ್ಕೌಟ್ ಮಾಡಿ. ಸೈಕ್ಲಿಂಗ್ ಮಾಡಿ. ಸೀಸನ್‌ಗೆ ಸೂಕ್ತವೆನಿಸುವ ಸಂದರ್ಭಕ್ಕೆ ತಕ್ಕ ಔಟ್‌ಫಿಟ್ ಧರಿಸಿ. ನಿಮ್ಮದೇ ಆದ ಸ್ಟೈಲ್ ಸ್ಟೇಟ್‌ಮೆಂಟ್ಸ್ ಅಳವಡಿಸಿಕೊಳ್ಳಿ. ಸದಾ ಚಟುವಟಿಕೆಯಿಂದಿರಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)