Site icon Vistara News

Monsoon Jacket Styling Tips: ಮಳೆಗಾಲದ ಜಾಕೆಟ್‌ನಲ್ಲೂ ಸ್ಟೈಲಿಶ್‌ ಆಗಿ ಕಾಣಿಸುವುದು ಹೇಗೆ?

Monsoon Jacket Styling Tips

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್‌ನಲ್ಲಿ ಜಾಕೆಟ್‌ (Monsoon Jacket Styling Tips) ಧರಿಸಿಯೂ ಸ್ಟೈಲಿಶ್‌ ಆಗಿ ಕಾಣಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹೌದು, ಮಳೆಗಾಲದಲ್ಲಿ ಹೊರಗೆ ಹೋಗುವಾಗ ಧರಿಸಿದ ಉಡುಪಿನ ಮೇಲೆ ಜಾಕೆಟ್‌ ಧರಿಸುವುದು ಸಾಮಾನ್ಯ. ಆದರೆ, ಪದೇ ಪದೇ ಒಂದೇ ಜಾಕೆಟ್‌ ಧರಿಸಿದರಂತೂ ಪ್ರತಿ ಬಾರಿಯೂ ಒಂದೇ ಲುಕ್‌ನಲ್ಲಿ ಕಾಣಿಸುವುದು ಗ್ಯಾರಂಟಿ. ಹಾಗೆಂದು, ಎಲ್ಲರ ಬಳಿಯಲ್ಲೂ ಒಂದೊಂದು ಉಡುಪಿಗೂ ಒಂದೊಂದು ಜಾಕೆಟ್‌ ಸಂಗ್ರಹವಿರುವುದಿಲ್ಲ. ಬದಲಿಗೆ ಒಂದೆರೆಡು ಜಾಕೆಟ್‌ಗಳಲ್ಲೇ ಇಡೀ ಮಾನ್ಸೂನ್‌ ಸೀಸನ್‌ ಕಳೆಯಬೇಕಾಗುತ್ತದೆ. ಅಂತಹವರೂ ಕೂಡ ಒಂದಿಷ್ಟು ಸ್ಟೈಲಿಂಗ್‌ ಟಿಪ್ಸ್ ಫಾಲೋ ಮಾಡಿದಲ್ಲಿ, ಜಾಕೆಟ್‌ ಧರಿಸಿದ ಮೇಲೂ ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳಬಹುದು. ಇದಕ್ಕಾಗಿ ಸ್ಟೈಲಿಂಗ್‌ ಮಾಡುವುದು ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್ ಕರಣ್‌ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

ಕಾಶ್ಯುವಲ್‌ ಉಡುಪಿಗೆ ಜಾಕೆಟ್‌

ವೆಸ್ಟರ್ನ್‌ ಹಾಗೂ ಯಾವುದೇ ಕ್ಯಾಶುವಲ್‌ ಉಡುಪಿನ ಮೇಲೆ ಜಾಕೆಟ್‌ ಧರಿಸುವಂತವರು ಆದಷ್ಟೂ ಕಂಟೆಂಪರರಿ ಡಿಸೈನ್‌ನ ಜಾಕೆಟ್‌ ಧರಿಸುವುದು ಉತ್ತಮ. ಅದರಲ್ಲೂ ಧರಿಸುವ ಉಡುಪಿಗೆ ಜಾಕೆಟ್‌ ಹೊಂದುವುದು ಮುಖ್ಯ.

ಮಿನಿಮಲ್‌ ಆಕ್ಸೆಸರೀಸ್‌ ಇರಲಿ

ಜಾಕೆಟ್‌ ಧರಿಸಿದಾಗ ಆದಷ್ಟೂ ಮಿನಿಮಲ್‌ ಆಕ್ಸೆಸರೀಸ್‌ ಧರಿಸುವುದು ಉತ್ತಮ. ಯಾಕೆಂದರೇ, ಮೆಸ್ಸಿಯಾಗಿ ಕಾಣಿಸಬಹುದು. ಹಾಗಾಗಿ ಆಕ್ಸೆಸರೀಸ್‌ ಧರಿಸದಿದ್ದರೂ ಓಕೆ.

ಎಥ್ನಿಕ್‌ ಡ್ರೆಸ್‌ಗೆ ಜಾಕೆಟ್‌

ಎಥ್ನಿಕ್‌ ಡ್ರೆಸ್‌ಗೆ ವೆಸ್ಟರ್ನ್ ಲುಕ್‌ ನೀಡುವ ಜಾಕೆಟ್‌ ಆಷ್ಟಾಗಿ ಹೊಂದದು. ಆದರೂ ಇಂಡೋ-ವೆಸ್ಟರ್ನ್ ಶೈಲಿಯಲ್ಲಿ ಮೇಕೋವರ್‌ ಮಾಡಿದಲ್ಲಿ ನೋಡಲು ಅಂದವಾಗಿ ಬಿಂಬಿಸಬಲ್ಲದು. ಇದಕ್ಕಾಗಿ ಧರಿಸುವ ಉಡುಪು ಪ್ರಿಂಟೆಡ್‌ನದ್ದಾಗಿದ್ದಲ್ಲಿ ಅದಕ್ಕೆ ಸಾದಾ ಸಾಲಿಡ್‌ ಶೇಡ್‌ನ ಜಾಕೆಟ್‌ ಧರಿಸುವುದು ಉತ್ತಮ. ಸಾದಾ ಡ್ರೆಸ್‌ಗೆ ಪ್ರಿಂಟೆಡ್‌ ಜಾಕೆಟ್‌ ಧರಿಸಬಹುದು.

ಫಂಕಿ ಲುಕ್‌ ಜಾಕೆಟ್‌ಗಾದಲ್ಲಿ

ಫಂಕಿ ಲುಕ್‌ ಇರುವಂತಹ ಜಾಕೆಟ್‌ಗಳನ್ನು ಧರಿಸುವುದಾದಲ್ಲಿ ಆದಷ್ಟೂ ವೆಸ್ಟರ್ನ್‌ ಲುಕ್‌ ಉಡುಪುಗಳನ್ನೇ ಮ್ಯಾಚ್‌ ಮಾಡಬೇಕಾಗುತ್ತದೆ. ಅದರಲ್ಲೂ ಸ್ಲಿಮ್‌ ಫಿಟ್‌ ಜಾಕೆಟ್‌ ಉತ್ತಮ.

ಜಾಕೆಟ್‌ ಸೀರೆ

ಸೀರೆಗೂ ಜಾಕೆಟ್ಟಾ ಎಂದುಕೊಂಡರೇ, ಹೌದು. ಹೀಗೂ ಧರಿಸಬಹುದು. ಆದರೆ, ಸೀರೆಯ ಬಣ್ಣಕ್ಕೆ ಹೊಂದುವಂತಹ ಜಾಕೆಟ್‌ ಇದ್ದರೇ ಉತ್ತಮ. ಪಲ್ಲುವನ್ನು ಜಾಕೆಟ್‌ ಮೇಲೆ ಡ್ರೆಪ್‌ ಮಾಡಿದಲ್ಲಿ ಜಾಕೆಟ್‌ ಸೀರೆಯಂತೆ ಕಾಣಿಸಬಲ್ಲದು.

ಇದನ್ನೂ ಓದಿ: Designer Hairpins Fashion: ಗ್ರ್ಯಾಂಡ್‌ ಲುಕ್‌ಗೆ ಸಾಥ್‌ ನೀಡುವ ಡಿಸೈನರ್‌ ಹೇರ್‌ಪಿನ್ಸ್

ಪಸರ್ನಾಲಿಟಿಗೆ ತಕ್ಕಂತಿರಲಿ

ಜಾಕೆಟ್‌ ಮಿಕ್ಸ್ ಮಾಡುವ ಕಾನ್ಸೆಪ್ಟ್ ಹೆಸರಲ್ಲಿ ಮನ ಬಂದಂತೆ ಧರಿಸಿದರೇ ಚೆನ್ನಾಗಿ ಕಾಣದು. ಸ್ಲಿಮ್‌ ಇರುವವರಿಗೆ ಜಾಕೆಟ್‌ ಸ್ಟೈಲಿಂಗ್‌ ಓಕೆ. ಆದರೆ, ಪ್ಲಂಪಿಯಾಗಿರುವವರು ಮಾತ್ರ, ಇತರೇ ಡ್ರೆಸ್‌ಗಳೊಂದಿಗೆ ಜಾಕೆಟ್‌ ಧರಿಸುವಾಗ ಆದಷ್ಟೂ ಲೈಟ್‌ವೈಟ್‌ ಜಾಕೆಟ್‌ ಅಥವಾ ಸ್ಲಿಮ್‌ ಫಿಟ್‌ಜಾಕೆಟ್‌ಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Exit mobile version