Site icon Vistara News

Monsoon Nail Art: ನೇಲ್‌ ಆರ್ಟ್‌ಗೂ ಲಗ್ಗೆ ಇಟ್ಟ ಮಾನ್ಸೂನ್‌ ಚಿತ್ತಾರ!

Monsoon Nail art

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಇದೀಗ ನೇಲ್‌ ಆರ್ಟ್‌ಗೂ ಮಾನ್ಸೂನ್‌ ಚಿತ್ತಾರ ಲಗ್ಗೆ ಇಟ್ಟಿದೆ. ಮಳೆಗಾಲವನ್ನು ಬಿಂಬಿಸುವಂತಹ ನಾನಾ ಬಗೆಯ ಚಿತ್ತಾರಗಳು (Monsoon Nail Art) ಹುಡುಗಿಯರ ಉಗುರುಗಳ ಮೇಲೆ ರಾರಾಜಿಸುತ್ತಿವೆ. ಮಳೆ ಹನಿ, ಮೋಡದ ಹನಿ, ಬಗೆಬಗೆಯ ಛತ್ರಿಗಳ ಚಿತ್ರಗಳು ಸೇರಿದಂತೆ ನಾನಾ ಶೈಲಿಯ ಮಳೆ ಕಾನ್ಸೆಪ್ಟ್‌ವನ್ನೊಳಗೊಂಡ ಮಾನ್ಸೂನ್‌ ನೇಲ್‌ ಆರ್ಟ್ ಡಿಸೈನ್ಸ್‌ ಇದೀಗ ಫ್ಯಾಷನ್‌ ಪ್ರಿಯರನ್ನು ಸೆಳೆದಿವೆ.

ಮಾನ್ಸೂನ್‌ ಚಿತ್ತಾರದ ಟ್ರೆಂಡ್‌

ಪ್ರತಿವರ್ಷವೂ ಮಾನ್ಸೂನ್‌ ಚಿತ್ತಾರವನ್ನೊಳಗೊಂಡ ಥೀಮ್‌ ಅಥವಾ ಕಾನ್ಸೆಪ್ಟ್‌ ನೇಲ್‌ ಆರ್ಟ್‌ನಲ್ಲಿ ಸೇರುತ್ತದೆ. ಕೆಲವೊಮ್ಮೆ ಕಸ್ಟಮೈಸ್ಡ್‌ ನೇಲ್‌ ಆರ್ಟ್ ಕೂಡ ಮಾಡಲಾಗುತ್ತದೆ. ಅದರಲ್ಲೂ ಕಾಲೇಜು ಹುಡುಗಿಯರು ಅತಿ ಹೆಚ್ಚಾಗಿ ಥೀಮ್‌ ಹಾಗೂ ಸೀಸನ್‌ವೈಸ್‌ ನೇಲ್‌ ಆರ್ಟ್ ಬಯಸುತ್ತಾರೆ. ಅವರ ಆಯ್ಕೆಗೆ ತಕ್ಕಂತೆ ಡಿಸೈನ್‌ ಮಾಡಲಾಗುತ್ತದೆ ಎನ್ನುತ್ತಾರೆ ನೇಲ್‌ ಆರ್ಟ್ ಡಿಸೈನರ್‌ ಜಿನತ್‌. ಅವರ ಪ್ರಕಾರ, ಮಾನ್ಸೂನ್‌ ನೇಲ್‌ ಆರ್ಟ್ ಎಂದಾಕ್ಷಣಾ ಒಂದೇ ಬಗೆಯದ್ದಾಗಿರುವುದಿಲ್ಲ! ಮಳೆಗಾಲದ ಸಿಂಬಲ್‌ ಹೊಂದಿರುವಂತದ್ದು ಯಾವುದಾದರೂ ಆಗಿರಬಹುದು. ಉದಾಹರಣೆಗೆ., ಸಿಂಪಲ್‌ ಆಗಿ ಪೋಲ್ಕಾ ಡಾಟ್ಸ್‌ನಂತೆ ಕಾಣುವ ಮಳೆಹನಿಗಳ ನೇಲ್‌ ಆರ್ಟ್ ಅಥವಾ ಮೋಡದಿಂದ ಸುರಿಯುತ್ತಿರುವ ಹನಿಗಳು. ಹೀಗೆ ಅವರವರ ಕ್ರಿಯೇಟಿವಿಟಿಗೆ ತಕ್ಕಂತೆ ಇವು ಬದಲಾಗುತ್ತವೆ ಎನ್ನುತ್ತಾರೆ.

ಮನೆಯಲ್ಲೂ ಮಾನ್ಸೂನ್‌ ನೇಲ್‌ ಆರ್ಟ್ ಮಾಡಿ, ನೋಡಿ

ಹೆಚ್ಚು ಖರ್ಚಿಲ್ಲದೆ ಮನೆಯಲ್ಲೂ ನೀವೇ ನೇಲ್‌ ಆರ್ಟ್ ಮಾಡಿಕೊಳ್ಳಬಹುದು. ಆದರೆ ನಿಮಗೆ ಆದಲ್ಲಿ, ಒಂದು ಕೈಗಳ ಉಗುರುಗಳಿಗೆ ಚಿತ್ರಿಸಬಹುದು. ಮತ್ತೊಂದನ್ನು ಇತರರು ಚಿತ್ರಿಸಬೇಕಾಗುತ್ತದೆ. ಇದಕ್ಕಾಗಿ ನಿಮ್ಮ ಬಳಿ ನೇಲ್‌ ಆರ್ಟ್ ಕಿಟ್‌ ಇರುವುದು ಅಗತ್ಯ. ಇದಕ್ಕಾಗಿ ನಿಮ್ಮ ಬಳಿ ಕನಿಷ್ಠ ಪಕ್ಷ ಅಗತ್ಯವಿರುವ ಬಣ್ಣದ ನೇಲ್‌ ಪಾಲಿಶ್‌ಗಳು, ಕೋಟ್‌ ಪಾಲಿಶ್‌, ನಿಬ್‌ನಂತಿರುವ ಬ್ರಶ್ ಇರಬೇಕಾಗುತ್ತದೆ ಎನ್ನುತ್ತಾರೆ ನೇಲ್‌ ಡಿಸೈನರ್‌ ರಾಶಿ. ಈ ಬಗ್ಗೆ ಅವರು ಒಂದಿಷ್ಟು ಟಿಪ್ಸ್‌ ಕೂಡ ನೀಡಿದ್ದಾರೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Monsoon Fashion: ಮಾನ್ಸೂನ್‌ನಲ್ಲಿ ಟ್ರೆಂಡಿಯಾಗಿರುವ ಡೆನಿಮ್‌ ಪ್ಯಾಂಟ್‌ ಸೂಟ್‌ ಲೇಯರ್ಡ್ ಲುಕ್‌ ಟ್ರೈ ಮಾಡಿ ನೋಡಿ !

Exit mobile version