-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಳೆಗಾಲಕ್ಕೂ ಟ್ರೆಂಚ್ ಕೋಟ್ (Monsoon trench coat fashion) ಫ್ಯಾಷನ್ ಎಂಟ್ರಿ ನೀಡಿದೆ. ಹೌದು, ಕೇವಲ ಚಳಿಗಾಲದಲ್ಲಿ ಟ್ರೆಂಡಿಯಾಗುತ್ತಿದ್ದ, ಟ್ರೆಂಚ್ ಕೋಟ್‌ಗಳು ಇದೀಗ ಮಾನ್ಸೂನ್ ಸೀಸನ್‌ಗೂ ಕಾಲಿಟ್ಟಿದ್ದು, ಸೆಲೆಬ್ರೆಟಿಗಳನ್ನು ಮಾತ್ರವಲ್ಲ, ಸಾಮಾನ್ಯ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಇದಕ್ಕೆ ಪೂರಕ ಎಂಬಂತೆ, ಕಿಂಗ್ ಖಾನ್ ಮಗಳು ಹಾಗೂ ನಟಿ ಸುಹಾನಾ ಖಾನ್ ಟ್ರೆಂಚ್ ಕೋಟ್ ಧರಿಸಿದ್ದು, ಈ ಫ್ಯಾಷನ್ ಜೆನ್ ಜಿ ಹುಡುಗಿಯರನ್ನು ಸೆಳೆದಿದೆ. ಮಾನ್ಸೂನ್‌ನಲ್ಲೂ ಟ್ರೆಂಚ್ ಕೋಟ್ ಕ್ಲಾಸಿಯಾಗಿ ಕಾಣಿಸುತ್ತದೆ ಎಂಬುದನ್ನು ಪ್ರೂವ್ ಮಾಡಿದೆ.
ಟ್ರೆಂಚ್‌ಕೋಟ್ ವೆರೈಟಿ ವಿನ್ಯಾಸ
ಟ್ರೆಂಚ್ ಕೋಟ್‌ಗಳು ನೋಡಲು ಒಂದೇ ಬಗೆಯದ್ದಾಗಿ ಕಾಣುತ್ತವಾದರೂ ಸ್ಟಿಚ್ಚಿಂಗ್ ನಾನಾ ಶೈಲಿಯಲ್ಲಿರುತ್ತವೆ. ಸ್ಲೀಕ್ ಲುಕ್, ಫಾರ್ಮಲ್ ಬ್ಲೇಜರ್ ಸ್ಟೈಲ್‌ನಲ್ಲೂದೊರಕುತ್ತವೆ. ಮೊದಲೆಲ್ಲಾ ಹಿಲ್ ಸ್ಟೇಷನ್‌ಗಳಲ್ಲಿ ಮಾತ್ರ ಇವುಗಳ ಬಳಕೆ ಹೆಚ್ಚಾಗಿತ್ತು. ಬರಬರುತ್ತಾ ಸಿನಿಮಾ ತಾರೆಯರ ವಾರ್ಡ್‌ರೋಬ್ ಸೇರಿದ ನಂತರ ಸಾಮಾನ್ಯ ಹುಡುಗಿಯರ ಮನಸ್ಸನ್ನು ಗೆಲ್ಲತೊಡಗಿದವು. ಸ್ವೆಟರ್ ಹಾಗೂ ಜಾಕೆಟ್ ಧರಿಸುವಂತೆ, ಟ್ರೆಂಚ್ ಕೋಟ್‌ಗಳನ್ನು ಧರಿಸುವುದು ಹೆಚ್ಚಾಯಿತು ಎನ್ನುತ್ತಾರೆ ಜಿಯಾ.
ಕ್ಲಾಸಿಕ್ ಲುಕ್ ಗ್ಯಾರಂಟಿ
ಅಂದಹಾಗೆ, ವೆಸ್ಟರ್ನ್ ಲುಕ್ ನೀಡುವಲ್ಲಿಈ ಟ್ರೆಂಚ್ ಕೋಟ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ. ಡಿಸೈನರ್ ಋತು ಹೇಳುವಂತೆ, ಇದೀಗ ಇಂಡೋ – ವೆಸ್ಟರ್ನ್ ಸ್ಟೈಲ್‌ನಲ್ಲೂ ಈ ಕೋಟ್‌ಗಳನ್ನು ಬಳಸುವುದು ಹೆಚ್ಚಾಗತೊಡಗಿದೆ. ಹಾಗಾಗಿ ಫಾರ್ಮಲ್ , ಎಥ್ನಿಕ್ ಡ್ರೆಸ್ ಧರಿಸುವ ಮಾನಿನಿಯರಿಗೂ ಪ್ರಿಯವಾಗತೊಡಗಿವೆ ಎನ್ನುತ್ತಾರೆ ಅವರು.
ಇದನ್ನೂ ಓದಿ: Ms/Mrs india Karnataka Audition: ಮಿಸ್&ಮಿಸೆಸ್ ಇಂಡಿಯಾ ಕರ್ನಾಟಕ 8ನೇ ಆವೃತ್ತಿಗೆ ಆಡಿಷನ್
ಹೀಗಿರಲಿ ಟ್ರೆಂಚ್ ಕೋಟ್ ಸ್ಟೈಲಿಂಗ್
- ಟ್ರೆಂಚ್ ಕೋಟ್ ಬೆಚ್ಚಗಿಡುವುದರಿಂದ ಧರಿಸುವವರು ಸಿಂಪಲ್ ಇನ್ನರ್ ಡ್ರೆಸ್ ಧರಿಸುವುದು ಬೆಸ್ಟ್.
- ಉದ್ದಗಿರುವವರಿಗೆ ಯಾವುದೇ ಬಗೆಯ ಟ್ರೆಂಚ್ ಕೋಟ್ ಆದರೂ ಸೂಟ್ ಆಗುತ್ತವೆ.
- ಪ್ಲಂಪಿಯಾಗಿರುವವರು ಆದಷ್ಟು ಡಿಸೈನರ್ ಕೋಟ್ ಧರಿಸುವುದು ಉತ್ತಮ.
- ವಿಂಟೆಂಜ್ ಹಾಗೂ ರಾಯಲ್ ಕಲರ್ಗಳ ಟ್ರೆಂಚ್ ಕೋಟ್‌ಗಳು ರಾಯಲ್ ಲುಕ್ ನೀಡುತ್ತವೆ.
- ಪ್ರಿಂಟೆಡ್ ಕೋಟ್‌ಗಳು ಟ್ರೆಂಡ್ನಲ್ಲಿಲ್ಲ.
- ಫಿಟ್ಟಿಂಗ್ ಇದ್ದರೇ ಮಾತ್ರ ಚೆನ್ನಾಗಿ ಕಾಣಿಸುತ್ತವೆ.
- ( ಲೇಖಕಿ ಫ್ಯಾಷನ್ ಪತ್ರಕರ್ತೆ )