ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಿಸ್ ಯೂನಿವರ್ಸ್ 2023 ಪೇಜೆಂಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಮಿಸ್ ದಿವಾ ಯೂನಿವರ್ಸ್ ಶ್ವೇತಾ ಶಾರದಾ (Ms Diva universe Shwetha Sharda) ಅವರಿಗೆ ಫ್ಯಾಷನ್ ಲೋಕ ತುಂಬು ಹೃದಯದಿಂದ ಹಾರೈಸಿದೆ.
ಸ್ಯಾನ್ ಸಾಲ್ವಡಾರ್ನಲ್ಲಿನ ಜೋಸ್ ಅಡೋಲ್ಫ್ವ್ ಪಿನೆಡಾ ಅರೇನಾದಲ್ಲಿ ಇಂದು ರಾತ್ರಿ(ಭಾರತೀಯ ಕಾಲಮಾನದ ಪ್ರಕಾರ ನಾಳೆ ಬೆಳಗ್ಗೆ) ನಡೆಯಲಿರುವ 72ನೇ ಮಿಸ್ ಯೂನಿವರ್ಸ್ ಪೇಜೆಂಟ್‌ನಲ್ಲಿ 82 ರಾಷ್ಟ್ರಗಳಿಂದ ಆಗಮಿಸಿರುವ ಸ್ಪರ್ಧಿಗಳೊಂದಿಗೆ ನಮ್ಮ ರಾಷ್ಟ್ರದ ಪ್ರತಿನಿಧಿಯಾಗಿ 23 ವರ್ಷದ ಶ್ವೇತಾ ಶಾರದಾ ಸ್ಪರ್ಧಿಸುತ್ತಿದ್ದು, ಇದಕ್ಕಾಗಿ ಹಲವು ತಿಂಗಳಿನಿಂದಲೇ ತಯಾರಿ ನಡೆಸಿದ್ದರು.
ಯಾರಿವರು ಶ್ವೇತಾ ಶಾರದಾ?
ಮೂಲತಃ ಚಂಡೀಗಡದವರಾದ ಶ್ವೇತಾ ಅವರ ತಾಯಿ ಸಿಂಗಲ್ ಪೇರೆಂಟ್. 16ನೇ ವಯಸ್ಸಿಗೆ ಮುಂಬೈಗೆ ಶಿಫ್ಟ್ ಆದ ನಂತರ, ಓಪನ್ ಯೂನಿವರ್ಸಿಟಿಯಲ್ಲಿ ಡಿಗ್ರಿ ಪಡೆದಿದ್ದಾರೆ. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್, ಝಲಕ್ ದಿಕ್ಲಾಜಾ ಸೇರಿದಂತೆ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಜತೆಗೆ ಬಾಲಿವುಡ್‌ನ ಖ್ಯಾತನಾಮರೊಂದಿಗೆ ಕೊರಿಯೋಗ್ರಾಫರ್ ಆಗಿಯೂ ಹೆಸರು ಮಾಡಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ನಡೆದ ಮಿಸ್ ದಿವಾ 2023 ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗುವುದರೊಂದಿಗೆ ಮಿಸ್ ಬಾಡಿ ಬ್ಯೂಟಿಫುಲ್, ಮಿಸ್ ಟ್ಯಾಲೆಂಟೆಡ್, ಟಾಪ್ 5 ಮಿಸ್ ಫೋಟೋಜೆನಿಕ್, ಟಾಪ್ 6 ಮಿಸ್ ರ್‍ಯಾಂಪ್ ವಾಕ್ ಟೈಟಲ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮ್ಯೂಸಿಕ್ ವಿಡಿಯೋದಲ್ಲಿ ಶ್ವೇತಾ
ನಟ ಹಾಗೂ ಡಾನ್ಸರ್ ಶಂತನು ಮಹೇಶ್ವರಿ ಅವರೊಂದಿಗೆ ಮಸ್ತ್ ಅಂಖೇ ಎಂಬ ಮ್ಯೂಸಿಕ್ ವಿಡಿಯೊದಲ್ಲೂ ಶ್ವೇತಾ ಕಾಣಿಸಿಕೊಂಡಿದ್ದಾರೆ.
ಫ್ಯಾಷನ್ ಲೋಕದ ಹಾರೈಕೆ
ʼʼಪ್ರತಿ ಬಾರಿಯೂ ನಮ್ಮ ರಾಷ್ಟ್ರದಿಂದ ಸ್ಪರ್ಧಿಸುವ ಸ್ಪರ್ಧಿಗಳು ಟ್ಯಾಲೆಂಟೆಡ್ ಇರುತ್ತಾರೆ. ಈ ಬಾರಿ ಶ್ವೇತಾ ಮಲ್ಟಿ ಟ್ಯಾಲೆಂಟೆಡ್, ಆಕೆ ಗೆದ್ದು ಬರಲಿʼʼ ಎಂದಿದ್ದಾರೆ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ. ಇನ್ನು ಫ್ಯಾಷನ್ ವಿಮರ್ಶಕಿ ವಿದ್ಯಾ ವಿವೇಕ್, ʼʼಶ್ವೇತಾ ಲೈಫ್ ಒಂದು ಸ್ಫೂರ್ತಿದಾಯಕವಾಗಿದೆ. ಆಕೆ ಕಿರೀಟ ಮುಡಿಗೇರಿಸಿಕೊಳ್ಳಲು ಸೂಕ್ತ ಸ್ಪರ್ಧಿʼʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸೂಪರ್ ಮಾಡೆಲ್ ಸಂತೋಷ್ ರೆಡ್ಡಿ, ʼʼಶ್ವೇತಾ ಮಿಸ್ ಯೂನಿವರ್ಸ್ ಟೈಟಲ್‌ಗೆ ಅಗತ್ಯವಿರುವ ಎಲ್ಲ ಗುಣಗಳನ್ನು ಹೊಂದಿದ್ದಾರೆ. ಇದಕ್ಕಿಂತ ಇನ್ನೇನು ಬೇಕು?ʼʼ ಎಂದಿದ್ದಾರೆ. ಮಾಡೆಲ್ ದೀಪ್ತಿ, ನೇಹಾ ಹಾಗೂ ವಿನಯ್ ಕೂಡ ಹಾಗೆಯೇ ಹೇಳಿದ್ದಾರೆ. ಭಾರತವನ್ನು ಪ್ರತಿನಿಧಿಸುತ್ತಿರುವ ಶ್ವೇತಾ ಗೆದ್ದು ಬಾ ಎಂದಿದ್ದಾರೆ ಮಿಸೆಸ್ ಇಂಡಿಯಾ ಡೈರೆಕ್ಟರ್ ಪ್ರತಿಭಾ ಸೌಂಶಿಮಠ್. ಶ್ವೇತಾ ಆಲ್ ದ ಬೆಸ್ಟ್ ಎಂದಿದ್ದಾರೆ ಮಿಸ್ ಐಕನ್ ಡೈರೆಕ್ಟರ್ ಎಮ್. ಶಂಕರ್.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Winter Sweater Fashion: ಚಳಿಗಾಲದಲ್ಲಿ ಹೀಗಿರಲಿ ವುಲ್ಲನ್ ಸ್ವೆಟರ್ಸ್ ಜೊತೆ ಔಟ್‌ಫಿಟ್ಸ್ ಸ್ಟೈಲಿಂಗ್!