Winter Sweater Fashion: ಚಳಿಗಾಲದಲ್ಲಿ ಹೀಗಿರಲಿ ವುಲ್ಲನ್‌ ಸ್ವೆಟರ್ಸ್‌ ಜೊತೆ ಔಟ್‌ಫಿಟ್ಸ್ ಸ್ಟೈಲಿಂಗ್‌! - Vistara News

ಫ್ಯಾಷನ್

Winter Sweater Fashion: ಚಳಿಗಾಲದಲ್ಲಿ ಹೀಗಿರಲಿ ವುಲ್ಲನ್‌ ಸ್ವೆಟರ್ಸ್‌ ಜೊತೆ ಔಟ್‌ಫಿಟ್ಸ್ ಸ್ಟೈಲಿಂಗ್‌!

ಚಳಿಗಾಲಕ್ಕೆ ವೈವಿಧ್ಯಮಯ ಕಲರ್‌ಫುಲ್‌ ವುಲ್ಲನ್‌ (winter Sweater fashion) ಸ್ವೆಟರ್‌ಗಳು ನಾನಾ ಬಗೆಯ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಲೇಯರ್‌ ಲುಕ್‌ಗೆ ಸಾಥ್‌ ನೀಡುವ ಇವನ್ನು ಹೇಗೆಲ್ಲಾ ಉಡುಪಿನೊಂದಿಗೆ ಸ್ಟೈಲಾಗಿ ಧರಿಸಿ ಫ್ಯಾಷೆನಬಲ್‌ ಆಗಿ ಕಾಣಿಸಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿದ್ದಾರೆ.

VISTARANEWS.COM


on

Winter Sweater FashionWinter Sweater Fashion
ಚಿತ್ರಕೃಪೆ: ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಎಂದಿನಂತೆ ಈ ಬಾರಿಯ ಚಳಿಗಾಲದಲ್ಲಿ ವೈವಿಧ್ಯಮಯ ಕಲರ್‌ಫುಲ್‌ ವುಲ್ಲನ್‌ ಸ್ವೆಟರ್‌ಗಳು (winter Sweater fashion) ನಾನಾ ಬಗೆಯ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಲೇಯರ್‌ ಲುಕ್‌ಗೆ ಸಾಥ್‌ ನೀಡುವ ಇವನ್ನು ಹೇಗೆಲ್ಲಾ ಉಡುಪಿನೊಂದಿಗೆ ಸ್ಟೈಲಾಗಿ ಧರಿಸಿ ಫ್ಯಾಷೆನಬಲ್‌ ಆಗಿಯೂ ಕಾಣಿಸಬಹುದು ಹಾಗೆನ್ನುತ್ತಾರೆ ಸ್ಟೈಲಿಸ್ಟ್‌ಗಳು. ಇದಕ್ಕಾಗಿ ಮಿಕ್ಸ್‌ ಮ್ಯಾಚ್‌ ಮಾಡುವುದು ಮುಖ್ಯ ಎಂದು ಒಂದಿಷ್ಟು ಟಿಪ್ಸ್ ನೀಡಿದ್ದಾರೆ. “ಚಳಿಗಾಲಕ್ಕೂ ವುಲ್ಲನ್‌ ಸ್ವೆಟರ್ಸ್‌ಗೂ ಎಲ್ಲಿಲ್ಲದ ಸಂಬಂಧ. ಬೆಚ್ಚನೆಯ ಸ್ವೆಟರ್‌ ಧರಿಸಿದ್ದರೇ ಸಾಕು, ಚಳಿಯನ್ನು ಹೊಡೆದೊಡಿಸಬಹುದು. ಅದರಲ್ಲೂ ಇಂದು ಫ್ಯಾಷನ್‌ಗೆ ತಕ್ಕಂತೆ ನಾನಾ ಬಗೆಯ ಕಲರ್‌ಫುಲ್‌ ವುಲ್ಲನ್‌ ಸ್ವೆಟರ್‌ಗಳು ಮಾರುಕಟ್ಟೆಯಲ್ಲಿ ಲಗ್ಗೆಯಿಟ್ಟಿವೆ. ಸೀದಾ-ಸದಾ ಡಿಸೈನ್‌ನಲ್ಲಿ, ಬಗೆಬಗೆಯ ನೆಕ್‌ಲೈನ್‌ಗಳಲ್ಲಿ, ವೈವಿಧ್ಯಮಯ ಸ್ಲೀವ್‌ಗಳಲ್ಲಿ, ಟ್ರಾಪಿಕಲ್‌, ಫ್ಲೋರಲ್‌ ಹಾಗೂ ಡಾರ್ಕ್‌-ಲೈಟ್‌ ಶೇಡ್ಸ್‌ನಲ್ಲಿ ಸ್ವೆಟರ್‌ಗಳು ಫ್ಯಾಷನ್‌ ಲೋಕದ ಬಾಗಿಲು ತಟ್ಟಿವೆ. ಇವುಗಳನ್ನು ಧರಿಸುವ ಔಟ್‌ಫಿಟ್‌ನೊಂದಿಗೆ ಮ್ಯಾಚ್‌ ಮಾಡಿದಲ್ಲಿ ಆಕರ್ಷಕವಾಗಿ ಕಾಣಬಹುದು” ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್‌.

A lightweight woolen sweater is a good choice

ಲೈಟ್‌ವೈಟ್‌ ವುಲ್ಲನ್‌ ಸ್ವೆಟರ್‌ ಆಯ್ಕೆ ಉತ್ತಮ

ಇದೀಗ ದೊರೆಯುತ್ತಿರುವ ಆರಾಮ ಎನಿಸುವ, ಯಾವುದೇ ಉಡುಪಿನ ಮೇಲೂ ಧರಿಸಬಹುದಾದ ಸಿಂಪಲ್‌ ಹಾಗೂ ಡಿಸೈನರಿ ನೆಕ್‌ಲೈನ್‌ ಇರುವ ಲೈಟ್‌ವೈಟ್‌ ವುಲ್ಲನ್‌ ಸ್ವೆಟರ್ಸ್ ಆಯ್ಕೆ ಮಾಡಿ. ಇವುಗಳಲ್ಲೂ ನಾನಾ ಬ್ರಾಂಡ್‌ನಲ್ಲಿ ಸಾಕಷ್ಟು ಡಿಸೈನ್‌ನವು ಲಭ್ಯ. ಬಟನ್‌ ಇರುವಂತವು ಫಾರ್ಮಲ್‌ ಉಡುಪು ಧರಿಸುವವರಿಗೆ ಮ್ಯಾಚ್‌ ಆಗುತ್ತವೆ.

ಯೂನಿಸೆಕ್ಸ್ ವುಲ್ಲನ್‌ ಪುಲ್‌ಓವರ್ಸ್‌

ಇನ್ನು ಯುವಕರು, ಯುವತಿಯರು ಹಾಗೂ ಮಕ್ಕಳಿಗಾಗಿ ಇದೀಗ ನಾನಾ ನೆಕ್‌ಲೈನ್‌ನ ಲೈಟ್‌ವೈಟ್‌ನ ವುಲ್ಲನ್‌ ಪುಲ್‌ಓವರ್ಸ್ ಕಾಲಿಟ್ಟಿವೆ. ಇದು ಕ್ಯಾಶುವಲ್‌ ಉಡುಪು ಧರಿಸುವವರಿಗೆ ಬೆಸ್ಟ್. ಇದು ನಯಾ ಜಮಾನದ ಟ್ರೆಂಡ್‌ಗೆ ಒಗ್ಗುವುದಲ್ಲದೇ, ಪುರುಷರು -ಸ್ರೀಯರಿಗೂ ಒಪ್ಪುತ್ತದೆ. ಯೂನಿಸೆಕ್ಸ್‌ ಡಿಸೈನ್‌ನಲ್ಲಿ ಜನಪ್ರಿಯಗೊಂಡಿವೆ. ಇನ್ನು. ರಾಯಲ್‌ ಬ್ಲ್ಯೂ, ಚಾಕೋಲೇಟ್‌, ಟಾಫಿ, ಮಜೆಂತಾ, ತಿಳಿ ಗುಲಾಬಿ, ತಿಳಿ ಹಳದಿ, ಕೆಂಪು, ನೀಲಿ, ಹಸಿರು, ರೇಡಿಯಂ, ಕೇಸರಿ ಬಣ್ಣದ ವುಲ್ಲನ್‌ ಪುಲ್‌ಒವರ್‌ಗಳು ಇಂದು ಟ್ರೆಂಡಿಯಾಗಿವೆ.

Unisex Woolen Pullovers

ಪ್ರಿಂಟೆಡ್‌ ಬಟನ್‌ ವುಲ್ಲನ್‌ ಸ್ವೆಟರ್ಸ್

ಇನ್ನು ಸೀರೆ ಉಡುವ ನಾರಿಯರು, ಸಲ್ವಾರ್‌ ಧರಿಸುವ ಹುಡುಗಿಯರಿಗೆ ಸೂಕ್ತವೆನಿಸುವ ಪ್ರಿಂಟೆಡ್‌ ಹಾಗೂ ರೆಗ್ಯುಲರ್‌ ಡಿಸೈನ್‌ನ ಲಾಂಗ್‌ ಪ್ರಿಂಟೆಡ್‌ ಸ್ವೆಟರ್‌ಗಳು ಬಂದಿವೆ. ಕಾಲೇಜಿಗೆ ಹೋಗುವ ಹುಡುಗಿಯರು, ಉದ್ಯೋಗಸ್ಥರು ಸೇರಿದಂತೆ ಎಲ್ಲಾವರ್ಗದ ಮಹಿಳೆಯರು ಉಡುಪಿಗೆ ಮ್ಯಾಚ್‌ ಆಗುವ ವಿನ್ಯಾಸದಲ್ಲಿ ದೊರೆಯುತ್ತಿವೆ. ಇವು ಧರಿಸಿದಾಗ ಆಕರ್ಷಕವಾಗಿ ಕಾಣುತ್ತವೆ.

ಲಾಂಗ್‌ ಕೋಟ್‌ ಶೈಲಿಯ ವುಲ್ಲನ್‌ ಸ್ವೆಟರ್ಸ್

ಇನ್ನು ಕೋಟ್‌ ಶೈಲಿಯಲ್ಲಿ ವುಲ್ಲನ್‌ ಸ್ವೆಟರ್‌ಗಳು ಬಿಡುಗಡೆಗೊಂಡಿದ್ದು, ಲೇಯರ್‌ ಲುಕ್‌ ಬಯಸುವ ಕಾರ್ಪೋರೇಟ್‌ ಕ್ಷೇತ್ರದ ಹುಡುಗಿಯರಿಗೆ ಇವು ಮ್ಯಾಚ್‌ ಆಗುತ್ತವೆ.

Care of woolen sweaters

ವುಲ್ಲನ್‌ ಸ್ವೆಟರ್ಸ್‌ ಕೇರ್‌

  • ಕಡಿಮೆ ಬೆಲೆಯ ಸ್ವೆಟರ್‌ಗಳು ಬಣ್ಣಗೆಡುತ್ತವೆ, ಪರಿಶೀಲಿಸಿ ಕೊಳ್ಳಿ.
  • ವುಲ್ಲನ್‌ ಸ್ವೆಟರ್‌ ಧರಿಸಿದಾಗ ಬ್ರಿಥಬಲ್‌ ಉಡುಪು ಧರಿಸಿ.
  • ಯಾವುದೇ ಕಾರಣಕ್ಕೂ ನೆನೆಹಾಕಿ ಒಗೆಯಬೇಡಿ.

    (ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Winter Kids Hoodie Fashion: ಇದ್ದರೆ ಹೀಗಿರಬೇಕು ಮಕ್ಕಳ ಚಳಿಗಾಲದ ಹೂಡಿ ಫ್ಯಾಷನ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Wardrobe Malfunction 2024: ಪಾಪ್‌ ಐಕಾನ್‌ ರಿಹಾನಾ ಡ್ರೆಸ್‌ ಎಡವಟ್ಟು! ಹೀಗಾಗದಂತೆ ಎಚ್ಚರ ವಹಿಸುವುದು ಹೇಗೆ?

ಪಾಪ್‌ ಐಕಾನ್‌ ರಿಹಾನಾ ವಾರ್ಡ್ರೋಬ್‌ ಮಲ್‌ಫಂಕ್ಷನ್‌ನಂತಾಗದಿರಲು (Wardrobe Malfunction 2024) ಎಚ್ಚರ ವಹಿಸುವುದು ಸುಲಭ. ಇದಕ್ಕಾಗಿ ಒಂದಿಷ್ಟು ಟಿಪ್ಟ್‌ಗಳನ್ನು ಪಾಲಿಸಬೇಕಷ್ಟೇ! ಆ ನಂತರ ಎದುರಾಗಬಹುದಾದ ಇಂತಹ ಮುಜುಗರದಿಂದ ಪಾರಾಗಬಹುದು ಎನ್ನುತ್ತಾರೆ ಫ್ಯಾಷನ್‌ ಸ್ಟೈಲಿಸ್ಟ್‌ಗಳು.

VISTARANEWS.COM


on

Wardrobe Malfunction
ಚಿತ್ರಗಳು: ಪಾಪ್‌ ಐಕಾನ್‌ ರಿಹಾನಾ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಾರ್ಡ್ರೋಬ್‌ ಮಾಲ್‌ಫಂಕ್ಷನ್‌ (Wardrobe Malfunction 2024) ಎಂಬುದು ದೊಡ್ಡ ದೊಡ್ಡ ಸ್ಟಾರ್‌ಗಳಿಗೂ ಹೊರತಾಗಿಲ್ಲ! ಇದಕ್ಕೆ ಉದಾಹರಣೆ ಎಂಬಂತೆ, ಅಂಬಾನಿ ಫ್ಯಾಮಿಲಿಯ ಪ್ರಿ ವೆಡ್ಡಿಂಗ್‌ ಸಮಾರಂಭದಲ್ಲಿ ಪಾಪ್‌ ಐಕಾನ್‌ ರಿಹಾನಾ ಸ್ಟೇಜ್‌ ಶೋ ನೀಡುವಾಗ ಇದ್ದಕ್ಕಿಂದ್ದಂತೆ, ಪರ್ಫಮಾನ್ಸ್ ಮಧ್ಯೆ ಆಕೆ ಧರಿಸಿದ್ದ ಫ್ಲೊರಸೆಂಟ್‌ ಗ್ರೀನ್ ಶೇಡ್‌ನ ತೆಳುವಾದ ಡಿಸೈನರ್‌ವೇರ್‌ ಕೈಗಳ ಕೆಳಗೆ ಹರಿದು ಹೋಗಿದ್ದು… ತಕ್ಷಣಕ್ಕೆ ಆಕೆಗೆ ಇದು ಗೊತ್ತಾಗದಿದ್ದರೂ, ಆಕೆಯ ಬಹುತೇಕ ಫೋಟೋಗಳಲ್ಲಿ ಇದು ದಾಖಲಾಗಿ ಉಳಿದು ಹೋಯಿತು. ಅರೆರೆ, ಸೆಲೆಬ್ರೆಟಿ ಡಿಸೈನರ್‌ಗಳು ಡಿಸೈನ್‌ ಮಾಡಿದ ದುಬಾರಿ ಡಿಸೈನರ್‌ವೇರ್‌ಗಳೂ ಹೀಗೆ ಇದ್ದಕ್ಕಿದ್ದಂತೆ ಹರಿದು ಹೋಗುತ್ತವೆಯೇ! ಇದ್ಯಾಕೆ ಹೀಗೆ! ಎಂಬ ಸಂಶಯ ಎಲ್ಲರಲ್ಲೂ ಮೂಡಬಹುದು. ಇಂತಹ ಸನ್ನಿವೇಶಗಳು ಸೃಷ್ಟಿಯಾಗದಂತೆ ಏನೆಲ್ಲಾ ಮಾಡಬಹುದು? ಆದಲ್ಲಿ, ಏನು ಮಾಡಬಹುದು ಎಂಬುದರ ಬಗ್ಗೆ ಫ್ಯಾಷನ್‌ ಎಕ್ಸ್‌ಫರ್ಟ್ ಕರೀಷ್ಮಾ ಇಲ್ಲಿ ಟಿಪ್ಸ್ ನೀಡಿದ್ದಾರೆ.

rihanna ambani wedding

ವಾರ್ಡ್ರೋಬ್‌ ಮಲ್‌ಫಂಕ್ಷನ್‌

ಅಂದಹಾಗೆ, ಸ್ಟೇಜ್‌ ಮೇಲೆ ಕಾರ್ಯಕ್ರಮ ನೀಡುವಾಗ, ಫ್ಯಾಷನ್‌ ಶೋಗಳಲ್ಲಿ ನಡೆಯುವಾಗ ಸ್ಟಾರ್‌ಗಳು ಇಂತಹ ಮುಜುಗರಕ್ಕೊಳಗೀಡಾಗಿರುವುದು ಇದು ಮೊದಲೇನಲ್ಲ! ಬಾಲಿವುಡ್‌ನ ಕಂಗನಾರಿಂದ ಹಿಡಿದು, ಸ್ಯಾಂಡಲ್‌ವುಡ್‌ನ ರಾಗಿಣಿಯೂ ಕೂಡ ಇದನ್ನು ಎದುರಿಸಿದ್ದಾರೆ. ಇನ್ನು, ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಪಾಪ್‌ ಐಕಾನ್‌ ರಿಹಾನಾಳ ಉಡುಪು ಪ್ರೋಗ್ರಾಂ ನಡುವೆ, ಇದ್ದಕ್ಕಿದ್ದಂತೆ ಹರಿದು ಹೋಗಿರುವುದು ಹೊಸತೇನಲ್ಲ! ಕಾರಣ ಇಷ್ಟೇ! ಕೆಲವು ಸೆಲೆಬ್ರೆಟಿಗಳು ಕಾರ್ಯಕ್ರಮಕ್ಕೆ ಕೆಲವೇ ಕ್ಷಣಗಳಿರುವಾಗ, ಟ್ರಯಲ್‌ ನೋಡದೇ, ಡೈರೆಕ್ಟ್ ಆಗಿ ಧರಿಸುವ ಡಿಸೈನರ್‌ವೇರ್‌ಗಳು ಹೀಗಾಗುತ್ತವೆ. ವಾರ್ಡ್ರೋಬ್‌ ಮಲ್‌ಫಂಕ್ಷನ್‌ಗೆ ಒಳಗಾಗುತ್ತವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು. ಇನ್ನು, ಸಾಮಾನ್ಯ ಯುವತಿಯರು ಬಹಳಷ್ಟು ಬಾರಿ, ಇಂತಹ ಸನ್ನಿವೇಶಗಳನ್ನು ಆಗಾಗ್ಗೆ ನಾನಾ ವಿಧದಲ್ಲಿ ಎದುರಿಸುತ್ತಿರುತ್ತಾರೆ. ಇದರಿಂದ ಪಾರಾಗಲು ಏನು ಮಾಡಬಹುದು? ಎಂಬುದರ ಬಗ್ಗೆ ಇಲ್ಲಿದೆ ಒಂದಿಷ್ಟು ಟಿಪ್ಸ್.

Rihanna wardrobe malfunction

ಕಾರ್ಯಕ್ರಮಗಳಿಗೆ ಧರಿಸುವ ಮುನ್ನ ಟ್ರಯಲ್‌ ಮಾಡಿ ನೋಡಿ

ಯಾವುದೇ ಡಿಸೈನರ್‌ವೇರ್‌ ಧರಿಸುವ ಮುನ್ನ, ಟ್ರಯಲ್‌ ಮಾಡಿ ನೋಡುವುದು ಅಗತ್ಯ. ಇಲ್ಲವಾದಲ್ಲಿ ಧರಿಸಿದ ನಂತರ ಟೈಟಾಗಿ ಹರಿದುಹೋಗಬಹುದು. ಹಾಗಾಗಿ ಉಡುಪಿನ ಬಗ್ಗೆ ಅತಿ ಹೆಚ್ಚು ಆತ್ಮವಿಶ್ವಾಸ ಬೇಡ.

ಡೆಲಿಕೇಟ್‌ ಡಿಸೈನರ್‌ವೇರ್‌ ಆಯ್ಕೆ

ಡೆಲಿಕೇಟ್‌ ಡಿಸೈನರ್‌ವೇರ್ಸ್ ಆಯ್ಕೆ ಮಾಡುವಾಗ, ನಿಮ್ಮ ಬಾಡಿ ಮಾಸ್‌ ಇಂಡೆಕ್ಸ್ಗೆ ಅದು ಹೊಂದುತ್ತದೆಯೇ ಎಂಬುದನ್ನು ಪರಿಶೀಲಿಸುವುದು ಮುಖ್ಯ.

Beware of transparent sheer fabric

ಪಾರದರ್ಶಕ ಶೀರ್‌ ಫ್ಯಾಬ್ರಿಕ್‌ ಬಗ್ಗೆ ಎಚ್ಚರ

ಪಾರದರ್ಶಕವಾಗಿರುವ ಔಟ್‌ಫಿಟ್‌ಗಳು ಅತಿ ಬೇಗ ಹರಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂತಹ ಔಟ್‌ಫಿಟ್‌ಗಳ ಫಿಟ್ಟಿಂಗ್‌ ಕೊಂಚ ಲೂಸಾಗಿದ್ದರೇ ಉತ್ತಮ.

ಉತ್ತಮ ಫ್ಯಾಬ್ರಿಕ್‌ಗೆ ಆದ್ಯತೆ

ಕಂಫರ್ಟಬಲ್‌ ಡಿಸೈನರ್‌ವೇರ್‌ಗೆ ಆದ್ಯತೆ ನೀಡಿ. ಲೆಬೆಲ್‌ ಹಾಗೂ ಬ್ರಾಂಡ್‌ ಹೆಸರಿಗಾಗಿ ಉಡುಪನ್ನು ಧರಿಸಬೇಡಿ. ಬದಲಿಗೆ ಗುಣಮಟ್ಟದ ಫ್ಯಾಬ್ರಿಕ್‌ಗೆ ಮಾನ್ಯತೆ ನೀಡಿ.

Beware of transparent sheer fabric

ಪಾರಾಗಲು ಹೀಗೆ ಮಾಡಿ

ನಿಮ್ಮ ಬಳಿ ಅಲ್ಟರ್‌ನೇಟಿವ್‌ ಔಟ್‌ಫಿಟ್‌, ಜಾಕೆಟ್‌ ಅಥವಾ ದುಪಟ್ಟಾ ಜೊತೆಗಿರಲಿ. ವಾರ್ಡ್ರೋಬ್‌ ಮಲ್‌ಫಂಕ್ಷನ್ ಆದರೂ ತಕ್ಷಣ ಬೆಚ್ಚಿ ಬೀಳದೇ, ಈಸಿಯಾಗಿ ಕ್ಯಾರಿ ಮಾಡಲು ಟ್ರೈ ಮಾಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Ambani Wedding Fashion: ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಪ್ರಿ ವೆಡ್ಡಿಂಗ್‌ನಲ್ಲಿ ಸೆಲೆಬ್ರೆಟಿಗಳ ಹೈ ಫ್ಯಾಷನ್‌ ಹೀಗಿತ್ತು!

Continue Reading

ಫ್ಯಾಷನ್

Ambani Wedding Fashion: ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಪ್ರಿ ವೆಡ್ಡಿಂಗ್‌ನಲ್ಲಿ ಸೆಲೆಬ್ರೆಟಿಗಳ ಹೈ ಫ್ಯಾಷನ್‌ ಹೀಗಿತ್ತು!

ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಪ್ರಿ ವೆಡ್ಡಿಂಗ್‌ನ (Ambani Wedding Fashion) ಇವನಿಂಗ್‌ ಇನ್‌ ಎವರ್‌ಲ್ಯಾಂಡ್‌ ಸಂಜೆ ಪಾರ್ಟಿಯಲ್ಲಿ ಸೆಲೆಬ್ರೆಟಿಗಳೆಲ್ಲರೂ ಕಾಕ್‌ಟೈಲ್‌ ಹೈ ಫ್ಯಾಷನ್‌ನಲ್ಲಿ ಕಂಗೊಳಿಸಿದರು. ಭಾಗವಹಿಸಿದ್ದವರ ಫ್ಯಾಷನ್‌ ಹೇಗಿತ್ತು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷೀಪ್ತ ವರದಿ.

VISTARANEWS.COM


on

Ambani Wedding Fashion
ಚಿತ್ರಗಳು : ಅಂಬಾನಿ ಫ್ಯಾಮಿಲಿಯ ಪ್ರಿ-ವೆಡ್ಡಿಂಗ್‌ ಕಾರ್ಯಕ್ರಮದಲ್ಲಿ ಸೆಲೆಬ್ರೆಟಿಗಳ ಫ್ಯಾಷನ್‌ ಕಲರವ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹಾಲಿವುಡ್‌ ಸಿನಿಮಾಗಳಲ್ಲಿ ಕಂಡು ಬರುವ ರಾಯಲ್‌ ಕಾಕ್‌ಟೇಲ್‌ ಹೈ ಫ್ಯಾಷನ್‌ ಪಾರ್ಟಿಯ (Ambani Wedding Fashion) ಸನ್ನಿವೇಶದಂತಿತ್ತು. ಭಾಗವಹಿಸಿದ್ದ, ಪ್ರತಿಯೊಬ್ಬರ ಫ್ಯಾಷನ್‌ ಕ್ಲಾಸಿಕ್‌-ರಾಯಲ್‌ ಲುಕ್‌ ನೀಡುವಂತಿದ್ದವು. ಸಿನಿಮಾ, ರಾಜಕೀಯ, ಸ್ಪೋಟ್ರ್ಸ್, ಉದ್ಯಮ ಸೇರಿದಂತೆ ನಾನಾ ಕ್ಷೇತ್ರಗಳ ಸೆಲೆಬ್ರೆಟಿಗಳೆಲ್ಲರೂ ಸಂಜೆ ಪಾರ್ಟಿಗೆ ಮ್ಯಾಚ್‌ ಆಗುವಂತಹ ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಂಡರೇ, ತಾರೆಯರಂತೂ ಮನಮೋಹಕ ಉಡುಪು ಹಾಗೂ ಶೈನಿಂಗ್‌ ಸೀರೆಗಳಲ್ಲಿ ಮಿನುಗಿದರು. ಇನ್ನು ಅಂಬಾನಿ ಫ್ಯಾಮಿಲಿಯ ಬಗ್ಗೆ ಹೇಳಬೇಕೆ! ಪ್ರತಿಯೊಬ್ಬರು ಟ್ರೆಂಡಿ ಕಾಕ್‌ಟೇಲ್‌ ಸ್ಪೆಷಲ್‌ ಪಾರ್ಟಿವೇರ್‌ಗಳಲ್ಲಿ ನಕ್ಷತ್ರಗಳಂತೆ ಮಿನುಗಿದರು. ಒಟ್ಟಾರೆ, ಜಾಮ್‌ನಗರ್‌ನಲ್ಲಿ ಸ್ವರ್ಗವೇ ಧರೆಗಳಿದು ಬಂದಂತಾಗಿತ್ತು. ಅಂದ ಹಾಗೆ, ಈ ಸುಂದರ ಚಿತ್ರಣ ನಿರ್ಮಾಣವಾಗಿದ್ದು ಎಲ್ಲಿ ಎಂದುಕೊಂಡಿರಾ! ನಿಮಗೆ ಗೊತ್ತಿರುವಂತೆ, ಅಂಬಾನಿ ಫ್ಯಾಮಿಲಿಯ ಅನಂತ್‌-ರಾಧಿಕಾ ಮರ್ಚೆಂಟ್‌ ಪ್ರಿ ವೆಡ್ಡಿಂಗ್‌ “ಇವನಿಂಗ್‌ ಇನ್‌ ಎವರ್‌ಲ್ಯಾಂಡ್‌” ಕಾಕ್‌ಟೈಲ್‌ ಪಾರ್ಟಿಯಲ್ಲಿ. ಈ ಹೈ ಫ್ಯಾಷನ್‌ ಪಾರ್ಟಿಯಲ್ಲಿ ವಾವ್ಹ್.. ಎನ್ನಿಸುವಷ್ಟರ ಮಟ್ಟಿಗೆ ಸೆಲೆಬ್ರೆಟಿಗಳೆಲ್ಲರೂ ಅತ್ಯಾಕರ್ಷಕವಾಗಿ ಕಾಣಿಸುತ್ತಿದ್ದರು.

Ananth Ambani-Radhika Merchant Pre Wedding

ಅಂಬಾನಿ ಫ್ಯಾಮಿಲಿಯ ರಾಯಲ್‌ ಫ್ಯಾಷನ್‌

ಅಂಬಾನಿ ಕುಟುಂಬದವರೆಲ್ಲರೂ ರಾಯಲ್‌ ಲುಕ್‌ ನೀಡುವ ಕ್ಲಾಸಿಕ್‌ ಹೈ ಫ್ಯಾಷನ್‌ಗೆ ಸೈ ಎಂದಿದ್ದರು. ನೀತಾ ಅಂಬಾನಿಯವರು, ಸ್ಯಾಟಿನ್‌ ಫ್ಯಾಬ್ರಿಕ್‌ನ ಡಾರ್ಕ್ ವೈನ್‌ ಕಲರ್‌ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡರೇ, ಮದುಮಗ ಅನಂತ್‌ ಡಾರ್ಕ್ ಬ್ಲ್ಯೂ ಸೂಟ್‌ಗೆ ಇನ್ನರ್‌ ವೈಟ್‌ ಕ್ರಿಸ್ಪ್‌ ಶರ್ಟ್ ಧರಿಸಿದ್ದರು. ರಾಧಿಕಾ ಮರ್ಚೆಂಟ್‌, ವರ್ಸೆಸ್ ಬ್ರಾಂಡ್‌ನ ಗ್ರ್ಯಾಂಡ್‌ ಲೇಸ್‌ ಡಿಸೈನ್‌ನ ಶಿಮ್ಮರ್‌ ಲುಕ್‌ ನೀಡುವ ಆಫ್‌ ಶೋಲ್ಡರ್‌ ಗೌನ್‌ನಲ್ಲಿ ಮಿಂಚಿದರು. ಇನ್ನು ಆಕಾಶ್‌ ಮತ್ತು ಶ್ಲೋಕಾ ರೆಡ್‌ ಶೇಡ್‌ ಕಾಂಬಿನೇಷನ್‌ನಲ್ಲಿ ಕಾಣಿಸಿಕೊಂಡರು.

Nita Ambani

ಸೆಲೆಬ್ರೆಟಿಗಳ ಹೈ ಫ್ಯಾಷನ್‌ ಸ್ಟೇಟ್‌ಮೆಂಟ್ಸ್

ಕಿಂಗ್‌ ಖಾನ್‌ ಬ್ಲ್ಯಾಕ್‌ ಸೂಟ್‌ನಲ್ಲಿ ಕಾಣಿಸಿಕೊಂಡರೇ, ಪತ್ನಿ ಗೌರಿ ಖಾನ್‌ ಶಿಮ್ಮರ್‌ ಡಿಸೈನರ್‌ವೇರ್‌ನಲ್ಲಿದ್ದರು. ಅಕ್ಷಯ್‌ ಕುಮಾರ್‌ ಕೂಡ ಬ್ಲಾಕ್‌ ಟುಕ್ಸೆಡ್‌ನಲ್ಲಿದ್ದರು. ನಟ ಅಜಯ್‌ದೇವಗನ್‌ ಶಿಮ್ಮರ್‌ ಶೆರ್ವಾನಿಯಲ್ಲಿದ್ದರು. ನಟಿ ದೀಪಿಕಾ ಪಡುಕೋಣೆ, ಬ್ಲ್ಯಾಕ್‌ ಸ್ಟ್ರಾಪ್‌ ಫ್ರಾಕ್‌ ಶೈಲಿಯ ಗೌನ್‌ನಲ್ಲಿ ಪತಿ ಹಾಗೂ ನಟ ರಣಬೀರ್‌ ಸಿಂಗ್‌ ವೈಟ್‌ ಸೂಟ್‌ನಲ್ಲಿ, ಸೈಫ್‌ ಅಲಿ ಖಾನ್‌ ಪಿನ್‌ಸ್ಟ್ರೈಪ್ಡ್ ಸೂಟ್‌-ಪರ್ಪಲ್‌ ಶೀರ್‌ ಸೀರೆಯಲ್ಲಿ ಕರೀನಾ, ಕ್ಲಾಸಿಯಾಗಿ ಜೊತೆ ಜೊತೆಯಾಗಿ ಕಾಣಿಸಿಕೊಂಡರು. ಎಂದಿನಂತೆ, ಡೀಪ್‌ ವೀ ನೆಕ್‌ ಬ್ಲ್ಯೂ ಗೌನ್‌ನಲ್ಲಿ ಅಲಿಯಾಭಟ್‌, ಹಾರ್ಟ್ ಶೇಪ್‌ನ ಸಿಲ್ವರ್‌ ಗೌನ್‌ನಂತಹ ವಿಚಿತ್ರ ಡಿಸೈನರ್‌ವೇರ್‌ನಲ್ಲಿ ನತಾಷಾ ಪೂನಾವಾಲ ವಾಕ್‌ ಮಾಡಿದರು. ನಟಿ ಜೆನಿಲಿಯಾ ಬ್ಲ್ಯಾಕ್‌ ಆಫ್‌ ಶೋಲ್ಡರ್ ಬ್ಲ್ಯಾಕ್‌ ಮ್ಯಾಕ್ಸಿಯಲ್ಲಿ, ಕಿಯಾರಾ ಫಿಶ್‌ಟೇಲ್‌ ಬ್ಲ್ಯಾಕ್‌ ಗೌನ್‌ನಲ್ಲಿ ಪೋಸ್‌ ನೀಡಿದರು. ನಟಿ ವಿದ್ಯಾ ಬಾಲನ್‌, ಬ್ರೌನ್‌ ಶೀರ್‌ ಸೀರೆಯಲ್ಲಿ ಕಾಣಿಸಿಕೊಂಡರು.

ಸ್ಪೋಟ್ರ್ಸ್ ತಾರೆಯರ ಡ್ರೆಸ್‌ಕೋಡ್‌

ಕ್ರಿಕೆಟ್‌ ತಾರೆ ಸಚಿನ್‌ ಬ್ಲ್ಯಾಕ್‌ ಸೂಟ್‌ನಲ್ಲಿದರೇ, ಪತ್ನಿ ಸೀರೆಯಲ್ಲಿದ್ದರು. ಎಂ.ಎಸ್‌ ಧೋನಿ ಬ್ಲ್ಯಾಕ್‌ ಟುಕ್ಸೆಡ್‌, ಪತ್ನಿ ಸಾಕ್ಷಿ ಶೀರ್‌ ಪಾರ್ಟಿವೇರ್‌ ಸೀರೆಯಲ್ಲಿ ಜೊತೆಯಾಗಿ ಕಾಣಿಸಿಕೊಂಡರು. ಇನ್ನು, ಫೇಸ್‌ಬುಕ್ ಸಂಸ್ಥಾಪಕರಾದ ಮಾಕ್ರ್ಸ್ ಹಾಗೂ ಪತ್ನಿ ಪ್ರಿಸಿಲ್ಲಾ ಬ್ಲ್ಯಾಕ್‌ ಶೇಡ್‌ ಮೇಲೆ ಗೋಲ್ಡನ್‌ ಡಿಸೈನ್‌ ಎಂಬಾಲಿಶ್‌ ಇರುವ ಡಿಸೈನರ್‌ವೇರ್‌ನಲ್ಲಿ ಮಾಧ್ಯಮದವರಿಗೆ ಪೋಸ್‌ ನೀಡಿದರು. ಇವರಷ್ಟೇ ಅಲ್ಲ, ಅಂತರಾಷ್ಟ್ರೀಯ ಮಟ್ಟದ ಸೆಲೆಬ್ರೆಟಿಗಳು, ತಮ್ಮದೇ ಆದ ರಾಯಲ್‌ ಲುಕ್‌ನಲ್ಲಿ ಕಾಣಿಸಿಕೊಂಡರು. ಫ್ಯಾಷನ್‌ ವಿಮರ್ಶಕರು ಹೇಳುವಂತೆ, ಒಟ್ಟಾರೆ, ಇದೊಂದು ಹೈ ಫ್ಯಾಷನ್‌ನ ಪಾರ್ಟಿಯಾಗಿತ್ತು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Doggie’s Summer Fashion: ಮುದ್ದಿನ ಶ್ವಾನಗಳಿಗೂ ಬಂತು ಫ್ಯಾಷೆನಬಲ್‌ ಸಮ್ಮರ್‌ ಕ್ಯಾಪ್ಸ್ & ಹ್ಯಾಟ್ಸ್

ನಿಮ್ಮ ಮನೆಯ ಮುದ್ದಿನ ಶ್ವಾನವನ್ನು ಫ್ಯಾಷನಬಲ್‌ (Doggie’s Summer Fashion) ಆಗಿಸಬಲ್ಲ ಸಮ್ಮರ್‌ ಕ್ಯಾಪ್‌ ಹಾಗೂ ಹ್ಯಾಟ್‌ಗಳು ಈಗಾಗಲೇ ಆನ್‌ಲೈನ್‌ ಶಾಪ್‌ಗಳಿಗೆ ಲಗ್ಗೆ ಇಟ್ಟಿವೆ. ಯಾವ್ಯಾವ ಬಗೆಯವು ಎಂಟ್ರಿ ನೀಡಿವೆ. ಯಾವ್ಯಾವ ಡಿಸೈನ್‌ನಲ್ಲಿ ಲಭ್ಯ ಎಂಬುದರ ಬಗ್ಗೆ ಡಾಗ್‌ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Doggie's Summer Fashion
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಿಮ್ಮ ಮನೆಯ ಮುದ್ದಿನ ಶ್ವಾನವನ್ನು ಫ್ಯಾಷನಬಲ್‌ ಆಗಿಸಬಲ್ಲ ಸಮ್ಮರ್‌ ಕ್ಯಾಪ್‌ಗಳು ಈಗಾಗಲೇ ಆನ್‌ಲೈನ್‌ ಶಾಪ್‌ಗಳಿಗೆ ಲಗ್ಗೆ ಇಟ್ಟಿವೆ. ನೋಡಲು ಕ್ಯೂಟ್‌ ಆಗಿ ಬಿಂಬಿಸಬಲ್ಲ ನಾನಾ ಡಿಸೈನ್‌ನವು ಡಾಗ್ಗಿ ಪ್ರಿಯರನ್ನು ಸೆಳೆದಿವೆ.

Variety of Hats & Caps Online

ಆನ್‌ಲೈನ್‌ನಲ್ಲಿ ವೈವಿಧ್ಯಮಯ ಹ್ಯಾಟ್ಸ್ & ಕ್ಯಾಪ್ಸ್

“ಮುದ್ದು ನಾಯಿಮರಿಗಳನ್ನು ಕ್ಯೂಟಾಗಿಸಬಲ್ಲ ನಾನಾ ಬಗೆಯ ಸಮ್ಮರ್‌ ಕ್ಯಾಪ್‌ ಹಾಗೂ ಹ್ಯಾಟ್ಸ್ ದೊರೆಯುತ್ತಿದ್ದು, ಒಂದಕ್ಕಿಂತ ಒಂದು ಆಕರ್ಷಕವಾಗಿವೆ. ಆನ್‌ಲೈನ್‌ ಶಾಪ್‌ಗಳಲ್ಲಿ ಲೆಕ್ಕವಿಲ್ಲದಷ್ಟು ಬಗೆಯವು ಸಿಗುತ್ತಿವೆ. ಆಯಾ ಬ್ರೀಡ್‌ಗೆ ತಕ್ಕಂತೆ ಹಾಕಬಹುದಾದ ಈ ಕ್ಯಾಪ್‌ಗಳು ಕೆಲವು ಹ್ಯಾಟ್‌ ರೂಪದಲ್ಲಿದ್ದರೇ, ಇನ್ನು ಕೆಲವು ಡಿಫರೆಂಟಾಗಿವೆ“ ಎನ್ನುತ್ತಾರೆ ಡಾಗ್‌ ಗ್ರೂಮರ್‌. ಅವರ ಪ್ರಕಾರ, ಆಯಾ ಜಾತಿಯ ನಾಯಿ ಮರಿಗಳಿಗೆ ಹೊಂದುವಂತೆ ಈ ಕ್ಯಾಪ್‌ಗಳನ್ನು ಖರೀದಿಸುವುದು ಉತ್ತಮ ಎನ್ನುತ್ತಾರೆ. ಶ್ವಾನಗಳ ತಲೆಭಾಗಕ್ಕೆ ನೀಟಾಗಿ ಕೂರುವಂತಹ ಕ್ಯಾಪ್‌ ಅಥವಾ ಹ್ಯಾಟ್‌ಗಳನ್ನು ಆಯ್ಕೆ ಮಾಡಬೇಕು. ಆಗಷ್ಟೇ ಇವು ನೋಡಲು ಚೆನ್ನಾಗಿ ಕಾಣುತ್ತವೆ ಎನ್ನುತ್ತಾರೆ.

Doggies summer caps on trend

ಟ್ರೆಂಡ್‌ನಲ್ಲಿರುವ ಡಾಗ್ಗೀಸ್‌ ಸಮ್ಮರ್‌ ಕ್ಯಾಪ್‌ಗಳು

ಪುಟ್ಟ ಪಮೇರಿಯನ್‌ ಡಾಗಿಯಿಂದ ಹಿಡಿದು ದೊಡ್ಡ ಹಸ್ಕಿಯಂತಹ ಶ್ವಾನಕ್ಕೂ ಹೊಂದುವಂತಹ ನಾನಾ ವಿನ್ಯಾಸದ ಕ್ಯಾಪ್‌ ಹಾಗೂ ಹ್ಯಾಟ್‌ಗಳು ಬಂದಿವೆ. ಡಾಗ್‌ ಬೇಸ್‌ಬಾಲ್‌ ಕ್ಯಾಪ್‌, ಕೂಲಿಂಗ್‌ ಡಾಗ್‌ ಹ್ಯಾಟ್‌, ಡಾಗ್‌ ಸನ್‌ ಹ್ಯಾಟ್‌, ಅಡ್ಜಸ್ಟಬಲ್‌ ಲೇಸ್‌ ಹ್ಯಾಟ್‌, ಪಪ್ಪಿ ಹಾಲಿಟೇ ಹ್ಯಾಟ್ಸ್, ಡಾಗ್‌ ಟ್ರಕ್ಕರ್‌ ಹ್ಯಾಟ್‌, ಸ್ಟ್ರಾ ಹ್ಯಾಟ್‌, ಟ್ರಕ್ಕರ್‌ ಹ್ಯಾಟ್‌, ಕ್ಯಾಮೋ ಬಕೆಟ್‌ ಹ್ಯಾಟ್‌ ಸೇರಿದಂತೆ ನಾನಾ ವಿನ್ಯಾಸದ ಕ್ಯಾಪ್‌ ಹಾಗೂ ಹ್ಯಾಟ್‌ಗಳು ಈ ಸೀಸನ್‌ಗೆ ಲಗ್ಗೆ ಇಟ್ಟಿವೆ. ಶ್ವಾನದ ಮಾಲೀಕರು ಕೂಡ ತಮ್ಮ ಮುದ್ದು ನಾಯಿಮರಿಯ ಮುಖ ಹಾಗೂ ತಲೆಗೆ ಹೊಂದುವಂತಹ ವಿನ್ಯಾಸದವನ್ನು ಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಡಾಗ್‌ ಗ್ರೂಮರ್‌.

ವಾಕಿಂಗ್‌ ಸಮಯಕ್ಕೆ ಸೂಕ್ತ

ವಾಕಿಂಗ್‌ ಕರೆದುಕೊಂಡು ಹೋಗುವಾಗ ಈ ಕ್ಯಾಪ್‌ ಅಥವಾ ಹ್ಯಾಟ್‌ಗಳನ್ನು ಹಾಕಿಕೊಂಡು ಕರೆದುಕೊಂಡು ಹೋಗಬಹುದು. ಇನ್ನು ಹಾಲಿಡೇ ಹಾಗೂ ಔಟಿಂಗ್‌ಗೆ ಕರೆದುಕೊಂಡು ಹೋದಾಗಲೂ ಕೂಡ ಈ ಹ್ಯಾಟ್‌ಗಳನ್ನು ಶ್ವಾನಕ್ಕೆ ಹಾಕಿ ಕರೆದುಕೊಂಡು ಹೋಗಬಹುದು ಎನ್ನುತ್ತಾರೆ ಶ್ವಾನವೊಂದರ ಮಾಲೀಕರು. ಅವರು ಈಗಾಗಲೇ ಸಾಕಷ್ಟು ಬಗೆಯ ಹ್ಯಾಟ್‌ಗಳನ್ನು ಖರೀದಿಸಿ, ಬಳಸುತ್ತಿದ್ದಾರಂತೆ.

Let the selection of dog's cap and hat be like this

ಶ್ವಾನದ ಕ್ಯಾಪ್‌ ಮತ್ತು ಹ್ಯಾಟ್‌ ಆಯ್ಕೆ ಹೀಗಿರಲಿ

  • ಶ್ವಾನದ ಆಕಾರಕ್ಕೆ ತಕ್ಕಂತೆ ಆಯ್ಕೆ ಮಾಡಿ.
  • ಕ್ಯೂಟಾಗಿರುವ ನಾಯಿಮರಿಗಳಿಗೆ ಕಲರ್‌ಫುಲ್‌ ಹ್ಯಾಟ್ಸ್ ಕೊಳ್ಳಿ.
  • ದೊಡ್ಡ ಸೈಜ್‌ನ ಶ್ವಾನಕ್ಕೆ ಕ್ಯಾಮೋ ಡಿಸೈನ್ನವು ಮ್ಯಾಚ್‌ ಆಗುತ್ತವೆ.
  • ಬಿಸಿಲ ಝಳಕ್ಕೆ ಕಣ್ಣಿನ ಸಂರಕ್ಷಣೆ ಮಾಡುವಂತವನ್ನು ಆಯ್ಕೆ ಮಾಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Shopping 2024: ಮಾಲ್‌ಗಳಲ್ಲಿ ಸಮ್ಮರ್‌ಗೂ ಮುನ್ನವೇ ಶುರುವಾಯ್ತು ಸೀಸನ್‌ ಶಾಪಿಂಗ್‌

Continue Reading

ಫ್ಯಾಷನ್

Summer Shopping 2024: ಮಾಲ್‌ಗಳಲ್ಲಿ ಸಮ್ಮರ್‌ಗೂ ಮುನ್ನವೇ ಶುರುವಾಯ್ತು ಸೀಸನ್‌ ಶಾಪಿಂಗ್‌

ಸಮ್ಮರ್‌ ಇನ್ನೂ ಶುರುವಾಗಿಲ್ಲ! ಈಗಾಗಲೇ ಮಾಲ್‌ಗಳಲ್ಲಿ ಸಮ್ಮರ್‌ ಶಾಪಿಂಗ್‌ (Summer Shopping 2024) ಶುರುವಾಗಿದೆ. ಸೀಸನ್‌ ಆರಂಭವಾಗುವ ಮುನ್ನವೇ ಈ ಸೀಸನ್‌ನ ಡ್ರೆಸ್‌ಗಳು, ಔಟ್‌ಫಿಟ್‌ಗಳು ಹಾಗೂ ಕೂಲ್‌ ಆಕ್ಸೆಸರೀಸ್‌ಗಳು ಲಗ್ಗೆ ಇಟ್ಟಿವೆ. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Summer Shopping 2024
ಚಿತ್ರಗಳು: ಮಿಂಚು
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್‌ ಸೀಸನ್‌ ಇನ್ನೂ ಶುರುವಾಗಿಲ್ಲ! ಈಗಾಗಲೇ ಸಮ್ಮರ್‌ ಶಾಪಿಂಗ್‌ (Summer Shopping 2024) ಶುರುವಾಗಿದೆ. 2024 ಸಮ್ಮರ್‌ ಸೀಸನ್‌ ಆರಂಭವಾಗುವ ಮುನ್ನವೇ ಔಟ್‌ಫಿಟ್‌ಗಳು ಲಗ್ಗೆ ಇಟ್ಟಿವೆ. ಅದರಲ್ಲೂ ಉದ್ಯಾನನಗರಿಯ ನಾನಾ ಮಾಲ್‌ಗಳು ನ್ಯೂ ಅರೈವಲ್‌ ಹೆಸರಲ್ಲಿ ಹಿರಿಯರು, ಉದ್ಯೋಗಸ್ಥರು, ಮಹಿಳೆಯರು, ಯುವಕ-ಯುವತಿಯರು, ಮಧ್ಯವಯಸ್ಕರು, ಮಕ್ಕಳು ಸೇರಿದಂತೆ ನಾನಾ ಕೆಟಗರಿಯಲ್ಲಿ ಬಗೆಬಗೆಯ ಸೀಸನ್ ಡಿಸೈನರ್‌ವೇರ್‌ಗಳನ್ನು ಬಿಡುಗಡೆಗೊಳಿಸಿವೆ. ಇನ್ನು ಬಿಸಿಲಿಗೆ ಧರಿಸಬಹುದಾದ ಹ್ಯಾಟ್‌, ಕ್ಯಾಪ್‌, ಸ್ಕಾರ್ಫ್‌ನಂತಹ ಆಕ್ಸೆಸರೀಸ್‌ಗಳನ್ನು ಅನಾವರಣಗೊಳಿಸಿವೆ. ಈ ಎಲ್ಲದರ ಕುರಿತಂತೆ ಇಲ್ಲಿದೆ ವರದಿ.

Warm designerwear moved to the side

ಸೈಡಿಗೆ ಸರಿದ ಬೆಚ್ಚಗಿನ ಡಿಸೈನರ್‌ವೇರ್ಸ್

ಯಾವುದೇ ಶಾಪಿಂಗ್‌ ಮಾಲ್‌ಗಳಲ್ಲಿ ಇಣುಕಿ ನೋಡಿ. ಬಿಸಿಲು ಕಾಲ ಮುಗಿಯುವ ಮುನ್ನವೇ, ಓವರ್‌ಕೋಟ್‌, ಶ್ರಗ್ಸ್‌ನಂತಹ ಮೇಲುಡುಗೆಯಂತಹ ಬೆಚ್ಚಗಿಡುವಂತಹ ಉಡುಪುಗಳು ಮಾಯವಾಗಿವೆ, ಇಲ್ಲವಾದಲ್ಲಿ, ಸೈಡಿಗೆ ಸರಿದಿವೆ. ಡಬ್ಬಲ್‌ ಲೇಯರ್‌ನ ಟಾಪ್‌ಗಳು, ಲೈನಿಂಗ್‌ ಇರುವಂತಹ ಔಟ್‌ಫಿಟ್‌ಗಳು, ದಪ್ಪನೆಯ ಫ್ಯಾಬ್ರಿಕ್‌ ಇರುವಂತಹ ಸೆಕೆಯಾಗುವಂತಹ ಉಡುಗೆಗಳು ಸೈಡ್‌ ಕಾಲಂಗೆ ಹೋಗಿವೆ. ಫುಲ್‌ ನೆಕ್‌, ಫುಲ್‌ ಸ್ಲೀವ್‌, ಹೈ ನೆಕ್‌, ಲಾಂಗ್‌ ಟಾಪ್‌, ಫುಲ್‌ ಕವರ್ಡ್ ಜಂಪ್‌ಸೂಟ್‌, ಲಾಂಗ್‌ ಸ್ಕಟ್ರ್ಸ್ನಂತಹ ಬೆಚ್ಚಗಿಡುವ ಡಿಸೈನರ್‌ವೇರ್‌ಗಳು ಕೂಡ ಮೈನ್‌ ಶೋಕೆಸ್‌ನಿಂದ ಒಳಗೆ ಸೇರಿವೆ. ಇದಕ್ಕೆ ಕಾರಣ, ಈಗಾಗಲೇ ಹವಾಮಾನದಲ್ಲಿ ಉಷ್ಣಾಂಶದಲ್ಲಿ ಏರಿಕೆಯಾಗಿರುವುದು ಹಾಗೂ ಚಳಿಮಾಯವಾಗಿರುವುದು. ಗಾಳಿ ಹೆಚ್ಚಗಿಯೇ ಇದ್ದರೂ ಸೆಕೆ ಆರಂಭವಾಗಿರುವುದು. ಹಾಗಾಗಿ ಧರಿಸುವ ಔಟ್‌ಫಿಟ್‌ಗಳಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಹಾಗಾಗಿ ಸಮ್ಮರ್‌ ಸೀಸನ್‌ ಬರುವ ಮುನ್ನವೇ ಮಾಲ್‌ಗಳಲ್ಲಿ ಗ್ರಾಹಕರ ಮನೋಭಿಲಾಷೆಗೆ ಹೊಂದುವಂತಹ ಸಮ್ಮರ್‌ ಸೀಸನ್‌ ಟ್ರೆಂಡಿ ಔಟ್‌ಫಿಟ್‌ಗಳು ಲಗ್ಗೆ ಇಟ್ಟಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Demand for breathable outfits

ಗಾಳಿಯಾಡುವ ಔಟ್‌ಫಿಟ್‌ಗಳಿಗೆ ಬೇಡಿಕೆ

ಯುವತಿಯರು ಸ್ಲೀವ್‌ಲೆಸ್‌, ನೆಟ್ಟೆಡ್‌, ಕಾಟನ್‌, ಲೆನಿನ್‌, ಶೀರ್‌ ಫ್ಯಾಬ್ರಿಕ್‌ನ ಡಿಸೈನರ್‌ವೇರ್‌ಗಳ ಚಾಯ್ಸ್‌ ಮಾಡತೊಡಗಿದ್ದರೆ, ಮೆನ್ಸ್ ಫ್ಯಾಷನ್‌ನಲ್ಲಿ ಕಾಟನ್‌ ಹಾಗೂ ಲೆನಿನ್‌, ರಾಯನ್‌ ಫ್ಯಾಬ್ರಿಕ್‌ನ ಶರ್ಟ್‌ಗಳು ಬೇಡಿಕೆ ಪಡೆದುಕೊಂಡಿವೆ ಎನ್ನುತ್ತಾರೆ ಶಾಪ್‌ವೊಂದರ ಮಾರಾಟಗಾರರು.

Cole Accessories

ಕೋಲ್‌ ಆಕ್ಸೆಸರೀಸ್‌

ಬಿಸಿಲ ಝಳಕ್ಕೆ ಬಳಸುವ ಕ್ಯಾಪ್‌, ಹ್ಯಾಟ್‌, ಹೆಡ್‌ಬ್ಯಾಂಡ್‌ ಶೈಲಿಯ ತೆಳುವಾದ ಸ್ಕಾರ್ಫ್‌ಗಳು ಈ ಸೀಸನ್‌ನಲ್ಲಿ ಎಂಟ್ರಿ ನೀಡಿವೆ.
ಒಟ್ಟಾರೆ, ಅಧಿಕೃತವಾಗಿ ಸೀಸನ್‌ ಆರಂಭಕ್ಕೂ ಮುನ್ನವೇ, ಮಾಲ್‌ಗಳಲ್ಲಿ ಸಮ್ಮರ್‌ ಔಟ್‌ಫಿಟ್‌ಗಳು ಆವರಿಸಿಕೊಂಡಿವೆ. ಇದಕ್ಕೆ ಪೂರಕ ಎಂಬಂತೆ ಶಾಪಿಂಗ್‌ ಮಾಡುವವರು ಹೆಚ್ಚಾಗಿದ್ದಾರೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Alia Cut Kurta Set Fashion: ಪಾಪ್ಯುಲರ್‌ ಆಯ್ತು, ಅಲಿಯಾ ಕಟ್‌ ಕುರ್ತಾ ಸೂಟ್‌ ಸೆಟ್!

Continue Reading
Advertisement
Yuva Movie song
ಕರ್ನಾಟಕ3 hours ago

Yuva Rajkumar: ಅಭಿಮಾನಿಗಳಿಂದ ʼಯುವʼ ಚಿತ್ರದ ಮೊದಲ ಸಾಂಗ್‌ ರಿಲೀಸ್‌; ಮಾಸ್ ಲುಕ್‌ನಲ್ಲಿ ಯುವ ರಾಜಕುಮಾರ್

Shashi Tharoor And Rajeev Chandrasekhar
ದೇಶ4 hours ago

ಬಿಜೆಪಿ ಪಟ್ಟಿ ಪ್ರಕಟ: ತಿರುವನಂತಪುರಂನಲ್ಲಿ ರಾಜೀವ್‌ ಚಂದ್ರಶೇಖರ್‌ Vs ಶಶಿ ತರೂರ್?‌

HIGH dose injection
ಕರ್ನಾಟಕ4 hours ago

ಕೃತಕ ಗರ್ಭಧಾರಣೆಗೆ ಹೈ ಡೋಸ್ ಇಂಜೆಕ್ಷನ್‌; ಖಾಸಗಿ ಆಸ್ಪತ್ರೆ ಎಡವಟ್ಟಿಗೆ ಕಣ್ಣು‌ ಕಳೆದುಕೊಂಡ ಮಹಿಳೆ!

Narendra Modi
ದೇಶ4 hours ago

Narendra Modi: ಬಿಜೆಪಿ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಚುನಾವಣೆಗೆ ಮೋದಿ ಸಂದೇಶ; ಏನದು?

Sophie Devine and Smriti Mandhana warm up ahead of their fourth game
ಕ್ರಿಕೆಟ್4 hours ago

WPL Points Table: ಹೀನಾಯ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಕುಸಿತ ಕಂಡ ಆರ್​ಸಿಬಿ

Pralhad Joshi
ಕರ್ನಾಟಕ5 hours ago

ಕುರುಬರಿಗೆ ಎಸ್‌ಟಿ ಮೀಸಲಾತಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ: ಪ್ರಲ್ಹಾದ್‌ ಜೋಶಿ ಭರವಸೆ

Nat Sciver-Brunt celebrates the dismissal of S Meghana
ಕ್ರೀಡೆ5 hours ago

WPL 2024: ಸತತ 2ನೇ ಸೋಲಿಗೆ ತುತ್ತಾದ ಆರ್​ಸಿಬಿ; ಮುಂಬೈಗೆ 7 ವಿಕೆಟ್​ ಗೆಲುವು

Banavasi Kadambotsava Minister Mankala Vaidya inspected the preparations
ಉತ್ತರ ಕನ್ನಡ5 hours ago

Uttara Kannada News: ಬನವಾಸಿ ಕದಂಬೋತ್ಸವ; ಪೂರ್ವ ಸಿದ್ಧತೆ ಪರಿಶೀಲಿಸಿದ ಸಚಿವ ಮಂಕಾಳ ವೈದ್ಯ

police 1
ಕರ್ನಾಟಕ6 hours ago

ಐಪಿಎಸ್ ಅಧಿಕಾರಿಯಾದ ಕ್ಯಾನ್ಸರ್‌ ಪೀಡಿತ ಬಾಲಕ; ಕನಸು ಈಡೇರಿಸಿ ಮಾನವೀಯತೆ ಮೆರೆದ ಪೊಲೀಸರು

Mukesh Ambani Cries
ದೇಶ6 hours ago

ಮದುವೆ ಪೂರ್ವ ಸಂಭ್ರಮದಲ್ಲಿ ಮಗನ ದುಃಖ ಕೇಳಿ ಗಳಗಳನೆ ಅತ್ತ ಮುಕೇಶ್‌ ಅಂಬಾನಿ!

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rameswaram cafe bomb blast case Accused caught on CCTV
ಬೆಂಗಳೂರು10 hours ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು14 hours ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು1 day ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು1 day ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ2 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ3 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ4 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ5 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

ಟ್ರೆಂಡಿಂಗ್‌