-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಿಸ್/ಮಿಸೆಸ್ ಇಂಡಿಯಾ ಕರ್ನಾಟಕ (Ms/Mrs india Karnataka Audition) ಕೀರೀಟ ತಮ್ಮದಾಗಿಸಿಕೊಳ್ಳಲು ಯುವತಿಯರು ಹಾಗೂ ಮಹಿಳೆಯರು ಮುಂದಾಗಿದ್ದಾರೆ. ಹೌದು, ಫ್ಯಾಷನ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಕನಸು ಹೊಂದಿದ ಮಹಿಳೆಯರು ಇಂದು ಮಿಸ್ ಮತ್ತು ಮಿಸೆಸ್ ಇಂಡಿಯಾ ಕರ್ನಾಟಕ 8ನೇ ಆವೃತ್ತಿಯ ಆಡಿಷನ್‌ನಲ್ಲಿ ಸಂತಸದಿಂದ ಪಾಲ್ಗೊಂಡರು. ಉದ್ಯಾನನಗರಿಯ ಟುಲಿಪ್ ಇನ್ ಹೋಟೆಲ್‌ನಲ್ಲಿ ಬೆಳಗ್ಗೆಯಿಂದಲೇ ಆರಂಭಗೊಂಡ ಆಡಿಷನ್‌ನಲ್ಲಿ ನಾನಾ ವರ್ಗದ, ವಯಸ್ಸಿನ ಮಹಿಳೆಯರು ಅತ್ಯುತ್ಸಾಹದಿಂದ ಭಾಗವಹಿಸಿದರು.
ಪ್ರತಿಭಾ ಸಂಶಿಮಠ್ ನೇತೃತ್ವ
ಈ ಪೇಜೆಂಟ್ ಆಡಿಷನ್‌ನ ನೇತೃತ್ವವನ್ನು ಪೇಜೆಂಟ್‌ನ ಕರ್ನಾಟಕ ಡೈರೆಕ್ಟರ್ ಪ್ರತಿಭಾ ಸಂಶಿಮಠ್ ವಹಿಸಿದ್ದರು. ನಿರೂಪಣೆಯೊಂದಿಗೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಮಹಿಳೆಯರಿಗೆ ಪ್ರೋತ್ಸಾಹ
ಪಾಲ್ಗೊಂಡ ಮಹಿಳೆಯರನ್ನು ಪ್ರೋತ್ಸಾಹಿಸುತ್ತಾ, ಅವರ ಕ್ಷೇತ್ರ ಹಾಗೂ ಇತರೇ ವಿಷಯಗಳನ್ನು ಪ್ರಸ್ತಾಪಿಸುತ್ತಾ , ಎಲ್ಲರನ್ನೂ ಪರಿಚಯಿಸಿದರು. ರಾಜ್ಯದ ನಾನಾ ಕಡೆಯಿಂದ ಬಂದಂತಹ ಸ್ಪರ್ಧಾಳುಗಳಿಗೆ ಹುರಿದುಂಬಿಸಿದರು. ಒಬ್ಬೊಬ್ಬರಿಗೂ ಮುಂಬರುವ ಪೇಜೆಂಟ್‌ನ ಬಗ್ಗೆ ಸವಿವರವಾಗಿ ವಿವರಿಸಿದರು.
ಮಿಸ್ ಇಂಡಿಯಾ ಕರ್ನಾಟಕ ಟೈಟಲ್‌ಗೂ ನಡೆದ ಆಡಿಷನ್
ಹೊಸದಾಗಿ ಸೇರಿಸಲಾಗಿರುವ ಮಿಸ್ ಇಂಡಿಯಾ ಕರ್ನಾಟಕ ಟೈಟಲ್ ಅನ್ನು ಇದೇ ಮಿಸೆಸ್ ಪೇಜೆಂಟ್‌ನಲ್ಲಿ ಸೇರಿಸಲಾಗಿದ್ದು, 16 ವರ್ಷ ಪೂರ್ಣಗೊಳಿಸಿರುವ ಅವಿವಾಹಿತರಿಗೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಪ್ರತಿಭಾ ಸಂಶಿಮಠ್ ವಿವರಿಸಿದರು.
ನಾನಾ ವಯೋಮಾನದವರ ಪಾಲ್ಗೊಳ್ಳುವಿಕೆ
ಇನ್ನು, ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಮಿಸೆಸ್ ಇಂಡಿಯಾ ಕರ್ನಾಟಕ ಪೇಜೆಂಟ್‌ನಲ್ಲಿ ಭಾಗವಹಿಸಲು ಇಚ್ಛಿಸುವ ನಾನಾ ವಯೋಮಾನದವರಿಗೆ ಪ್ರತ್ಯೇಕ ಗುಂಪುಗಳನ್ನು ರೂಪಿಸಲಾಗಿತ್ತು. 22-40 ರೊಳಗಿನ ವಯೋಮಾನದವರು, 41-60 ಹಾಗೂ 60ರ ಮೇಲ್ಪಟ್ಟವರು ಈ ಅಡಿಷನ್‌ನಲ್ಲಿ ಪಾಲ್ಗೊಂಡಿದ್ದರು.
ಅಡಿಷನ್‌ನಲ್ಲಿ ಭಾಗವಹಿಸಿದ ಸೆಲೆಬ್ರೆಟಿಗಳು
ಈ ಆಡಿಷನ್‌ನಲ್ಲಿ, ಮಿಸ್ ಕೆನಡಾ ಸೌತ್ ಏಷಿಯಾ 2019 & ಮಿಸ್ ಇಂಡಿಯಾ ಗ್ಲೋಬಲ್ 2019 ಪೂರ್ಣಿಮಾ ರಮೇಶ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಇವರೊಂದಿಗೆ ಬಿಗ್ ಬಾಸ್ ಸ್ಪರ್ಧಿ ಅವಿನಾಶ್ ಶೆಟ್ಟಿ, ಆಕ್ಸೀಸ್ ಬ್ಯಾಂಕ್‌ನ ಉಪಾಧ್ಯಕ್ಷೆ ಅನಿತಾ ಹರೀಶ್ ಹಾಗೂ ಪೇಜ್ ತ್ರೀ ಸೆಲೆಬ್ರೆಟಿ ಸತೀಶ್ ಕಡಾಬಮ್ ಅವರು ಕೂಡ ಪಾಲ್ಗೊಂಡಿದ್ದರು.
ಇದನ್ನೂ ಓದಿ: Twinning Fashion: ಪರ್ಫೆಕ್ಟ್ ಟ್ವಿನ್ನಿಂಗ್ ಫ್ಯಾಷನ್‌ಗೆ ಇಲ್ಲಿದೆ 5 ಐಡಿಯಾ!
ಆನ್‌ಲೈನ್ ಮಾಹಿತಿ
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ ಸೈಟ್ ಮೂಲಕ ಮಾಹಿತಿ ಪಡೆದುಕೊಳ್ಳಬಹುದು. www.mrsindiakarnataka.com ಹಾಗೂ ವಾಟ್ಸಪ್ ಸಂಖ್ಯೆ: 9886761457
( ಲೇಖಕಿ ಫ್ಯಾಷನ್ ಪತ್ರಕರ್ತೆ )