ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಣ್ಣ ಬಣ್ಣದ ಮಲ್ಟಿ ಶೇಡ್‌ನ ಸಿಕ್ವೀನ್ ಸೀರೆಗಳು (Saree fashion) ಪಾರ್ಟಿ ಸೀರೆ ಫ್ಯಾಷನ್‌ಗೆ ಲಗ್ಗೆ ಇಟ್ಟಿವೆ. ಪಾರ್ಟಿ ಪ್ರಿಯ ಮಹಿಳೆಯರನ್ನು ಸವಾರಿ ಮಾಡತೊಡಗಿವೆ. “ನೋಡಲು ಆಕರ್ಷಕ ಕಲರ್‌ಗಳಲ್ಲಿ ಈ ಮಲ್ಟಿ ಸೀರೆಗಳು ಎಂಟ್ರಿ ನೀಡಿದ್ದು, ಮನಮೋಹಕ ಸಿಕ್ವೀನ್ಸ್ ಪ್ರಿಂಟ್ಸ್ ಹಾಗೂ ವಿನ್ಯಾಸದಲ್ಲಿ ದೊರಕುತ್ತಿವೆ. ಒಂದಕ್ಕಿಂತ ಒಂದು ಸೀರೆಗಳು ವಿಭಿನ್ನ ಲುಕ್‌ನಲ್ಲಿ ಬಂದಿವೆ. ಸದ್ಯಕ್ಕೆ ಡಿಸೈನರ್ ಸೀರೆಗಳ ಟಾಪ್ ಲಿಸ್ಟ್‌ನಲ್ಲಿರುವ ಈ ಸೀರೆಗಳು ಸೆಲೆಬ್ರೆಟಿಗಳ ಡಿಸೈನರ್‌ಗಳ ಕೈಗಳಲ್ಲಿ ತಯಾರಾಗುತ್ತಿವೆ. ಹಾಗಾಗಿ ಸದ್ಯ ಬೆಲೆ ಕೂಡ ದುಬಾರಿಯಾಗಿದೆ. ಇದೀಗ ಟ್ರೆಂಡಿಯಾದ ಮೇಲೆ ಲೋಕಲ್ ಬ್ರಾಂಡ್‌ಗಳು ಕೂಡ ತಮ್ಮದೇ ಆದ ಮಲ್ಟಿ ಸಿಕ್ವೀನ್ಸ್ ಡಿಸೈನ್ ಬಿಡುಗಡೆಗೊಳಿಸಿವೆ” ಎನ್ನುತ್ತಾರೆ ಡಿಸೈನರ್ ಧೀರಜ್ ವರ್ಮಾ. ಅವರ ಪ್ರಕಾರ, ಇನ್ನು ಕೆಲವೇ ದಿನಗಳಲ್ಲಿ ರಿಪ್ಲಿಕಾ ಮಲ್ಟಿ ಶೇಡ್ ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಡುವುದು ಗ್ಯಾರಂಟಿ ಎನ್ನುತ್ತಾರೆ.
ಪಾರ್ಟಿವೇರ್ ಸೀರೆಗಳಿವು
ಇನ್ನು, ಫ್ಯಾಷನಿಸ್ಟ್ ರಾಘವ್ ಹೇಳುವಂತೆ, ಇದುವರೆಗೂ ಸಿಂಗಲ್ ಹಾಗೂ ಡಬ್ಬಲ್ ಶೇಡ್‌ಗಳಲ್ಲಿ ಮಾತ್ರ ದೊರಕುತ್ತಿದ್ದಈ ಶೈನಿಂಗ್ ಸಿಕ್ವೀನ್ಸ್ ಸೀರೆಗಳು ಇದೀಗ ಒಂದಕ್ಕಿಂತ ಹೆಚ್ಚು ವರ್ಣದಲ್ಲಿ ಹಾಗೂ ವಿನ್ಯಾಸದಲ್ಲಿ ಮಲ್ಟಿ ಶೇಡ್‌ಗಳಲ್ಲಿ ದೊರೆಯುತ್ತಿವೆ. ಹೆಚ್ಚಾಗಿ ಪಾರ್ಟಿವೇರ್ ಸೀರೆ ಪ್ರಿಯರನ್ನು ಆಕರ್ಷಿಸುತ್ತಿವೆ ಎನ್ನುತ್ತಾರೆ.
ಟ್ರೆಂಡ್ ಸೆಟ್ ಮಾಡಿದ ಕರೀಷ್ಮಾ ಕಪೂರ್
ಅಂದಹಾಗೆ, ಈ ಸೀರೆ ಟ್ರೆಂಡಿಯಾಗಲು ಕಾರಣ ಯಾರು? ಎಂದುಕೊಂಡಿದ್ದೀರಾ? ಫಿಲ್ಮ್‌ಫೇರ್ ಆವಾರ್ಡ್ ಸಮಾರಂಭದಲ್ಲಿ ಬಾಲಿವುಡ್ ನಟಿ ಧರಿಸಿದ ಮೇಲೆ ಎನ್ನುತ್ತಾರೆ ಸ್ಟೈಲಿಸ್ಟ್ ಗಳು. ಅಂದಹಾಗೆ, ಸೆಲೆಬ್ರೆಟಿ ಡಿಸೈನರ್ ಸಭ್ಯಸಾಚಿ ಅವರ ಡಿಸೈನ್‌ನಲ್ಲಿ ಮೂಡಿ ಬಂದ ಈ ಸೀರೆಯನ್ನು ಕರೀಷ್ಮಾ ಕಫೂರ್ ಧರಿಸಿ ಫೋಟೋ ಪೋಸ್ ನೀಡಿದ್ದರು. ತದನಂತರ ಈ ಶೈಲಿಯ ಸೀರೆಗಳು ಮಾನಿನಿಯರನ್ನು ಆಕರ್ಷಿಸಿವೆ ಎನ್ನುತ್ತಾರೆ ಡಿಸೈನರ್ಸ್.
ಈ ಹಿಂದೆಯೂ ಈ ಬಗೆಯ ಸೀರೆಗಳು ಸೀರೆ ಲೋಕದಲ್ಲಿ ಇದ್ದವಾದರೂ ಹೆಚ್ಚು ಜನಪ್ರಿಯಗೊಂಡಿರಲಿಲ್ಲ. ಸ್ಟಾರ್ ನಟಿಯೊಬ್ಬರು ಧರಿಸಿದ ನಂತರ ಟ್ರೆಂಡಿಯಾಗಿವೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಮಲ್ಟಿ ಶೇಡ್ ಸಿಕ್ವೀನ್ಸ್ ಸೀರೆ ಆಯ್ಕೆ ಹೇಗೆ?
- ಆನ್ಲೈನ್ನಲ್ಲಿ ಸಾಕಷ್ಟು ಬಗೆಯವು ಲಭ್ಯ.
- ಟ್ರೆಂಡಿ ಕಲರ್ ಚೂಸ್ ಮಾಡುವುದು ಉತ್ತಮ.
- ಆದಷ್ಟೂ ಸ್ಕಿನ್ಟೋನ್ಗೆ ಮ್ಯಾಚ್ ಆಗುವ ಸೀರೆ ಆಯ್ಕೆ ಮಾಡಿ.
- ವೈವಿಧ್ಯಮಯ ಬಾರ್ಡರ್ ಇರುವಂತವು ದೊರೆಯುತ್ತವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Saree Blouse Fashion: ಚಳಿಗಾಲದಲ್ಲಿ ಟ್ರೆಂಡಿಯಾದ 3 ಶೈಲಿಯ ಫುಲ್ ಸ್ಲೀವ್ ಬ್ಲೌಸ್!